Dhananjaya: ಡಾಲಿ ಪಿಕ್ಚರ್ಸ್ಸ್​ನಲ್ಲಿ ಹೊಸಬರಿಗೆ ಸಿಗಲಿದೆ ಅವಕಾಶ; ಹುಟ್ಟುಹಬ್ಬದಂದು ಧನಂಜಯ್ ಮಹತ್ವದ ಘೋಷಣೆ

ಧನಂಜಯ್ ಅವರು ‘ಡಾಲಿ ಪಿಕ್ಚರ್ಸ್​’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಮೂಲಕ ಅವರು ನಿರ್ಮಾಪಕರಾಗ್ತಿದ್ದಾರೆ. ಅವರ ನಿರ್ಮಾಣದ ‘ಬಡವ ರಾಸ್ಕಲ್’ ಸಿನಿಮಾ ಯಶಸ್ಸು ಕಂಡಿತು.

ಡಾಲಿ ಧನಂಜಯ್

ಡಾಲಿ ಧನಂಜಯ್

  • Share this:
ಹುಟ್ಟುಹಬ್ಬದ ದಿನ ಡಾಲಿ ಧನಂಜಯ್ (Dhananjaya) ಅವರು ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಇಷ್ಟು ದಿನ ನಟರಾಗಿದ್ದ ಡಾಲಿ ಧನಂಜಯ್​, ಬಡವ ರಾಸ್ಕಲ್​ ಚಿತ್ರದ ಮೂಲಕ ಇನ ಪ್ರೊಡ್ಯೂಸರ್​ ಧನು ಆಗ್ತಿದ್ದಾರೆ.  ಧನಂಜಯ್ ಅವರು ‘ಡಾಲಿ ಪಿಕ್ಚರ್ಸ್​’ (Dolly Pictures) ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಮೂಲಕ ಅವರು ನಿರ್ಮಾಪಕರಾಗ್ತಿದ್ದಾರೆ. ಅವರ ನಿರ್ಮಾಣದ ‘ಬಡವ ರಾಸ್ಕಲ್’ ಸಿನಿಮಾ ಯಶಸ್ಸು ಕಂಡಿತು. ಇದರಿಂದ ಧನಂಜಯ್ ಒಳ್ಳೆಯ ಲಾಭ ಕಂಡಿದ್ದಾರೆ. ಒಂದು ಸಿನಿಮಾ ಗೆದ್ದ ನಂತರ ಲಾಭ ಆಯಿತು ಎಂದು ಅವರು ಸುಮ್ಮನೆ ಕೂತಿಲ್ಲ. ಈ ಹಣವನ್ನು ಸಿನಿಮಾ ನಿರ್ಮಾಣಕ್ಕೆ ಬಳಕೆ ಮಾಡಲು ಧನಂಜಯ್ ಅವರು ನಿರ್ಧರಿಸಿದ್ದಾರೆ. ಜತೆಗೆ ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಬರ್ತ್​ಡೇ ಪ್ರಯುಕ್ತ ಈ ಬಗ್ಗೆ ಘೋಷಣೆ ಮಾಡಲಾಗಿದೆ.

‘ಡಾಲಿ ಪಿಕ್ಚರ್ಸ್ ಎಂಬ ನಿರ್ಮಾಣ ಸಂಸ್ಥೆ

‘ಡಾಲಿ ಪಿಕ್ಚರ್ಸ್ ಎಂಬ ಕನಸೊಂದನ್ನು ಹುಟ್ಟುಹಾಕಿದ ಈ ಸಂಸ್ಥೆಯ ನಿರ್ಮಾತೃ ಧನಂಜಯ್ ಅವರ ಹುಟ್ಟುಹುಬ್ಬದ ಪ್ರಯುಕ್ತ ನಮ್ಮಿಂದ ಹೀಗೊಂದು ಘೋಷಣೆ. ಅವರು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಒಂದು ಹಿಡಿಯಷ್ಟು ಆಸೆ ಮತ್ತು ಬೆಟ್ಟದಷ್ಟು ಪ್ರತಿಭೆ ಕಟ್ಟಿಕೊಂಡು ಗಾಂಧಿನಗರಕ್ಕೆ ಕಾಲಿಟ್ಟರು. ಒಂದೇ ಒಂದು ಪಾತ್ರ ದಕ್ಕಿಸಿಕೊಳ್ಳಲು ಬಹಳಷ್ಟು ಕಸರತ್ತು ಪಡಬೇಕಾದ ಕಾಲವಿತ್ತು. ಅನೇಕ ಅಡಚಣೆಗಳನ್ನು ದಾಟಿ ಸಾಗಿದ ಅವರ ಪಯಣ ಕರುನಾಡಿಗೆ ತಿಳಿಯದ ಕಥೆಯೇನಲ್ಲ. ಅವರ ಅಷ್ಟೂ ಪ್ರಯತ್ನಕ್ಕೆ ಸಾರ್ಥಕತೆ ದೊರೆತಿದ್ದು ‘ಡಾಲಿ’ ಪಾತ್ರಕ್ಕೆ ಸಿಕ್ಕಿದ ಜನಮನ್ನಣೆ ಹಾಗೂ, ‘ನಟರಾಕ್ಷಸ’ ಎಂಬ ಬಿರುದಿನಲ್ಲಿ’ ಎಂದು ಪತ್ರ ಬರೆದಿದ್ದಾರೆ.

ಹೊಸ ಪ್ರತಿಭೆಗಳಿಗೆ ಅವಕಾಶ

‘ಹೊಸಬರ ಆರಂಭದ ಕಲ್ಲುಮುಳ್ಳಿನ ದಾರಿಯನ್ನು ಹೇಗೆ ಸುಲಭವಾಗಿಸಬಹುದೆಂದು ಸ್ವತಃ ಆ ದಾರಿಯಲ್ಲಿ ನಡೆದುಬಂದಿರುವ ‘ಡಾಲಿ’ ಧನಂಜಯ್ ಅವರ ಆಲೋಚನೆಯೇ ಈ ಘೋಷಣೆಗೆ ಹಿನ್ನೆಲೆ. ಇನ್ನು ಮುಂದೆ ಪ್ರತಿ ವರ್ಷ ಡಾಲಿ ಪಿಕ್ಚರ್ಸ್​ ವತಿಯಿಂದ ಕನಿಷ್ಠ ಎರಡು ಸಿನಿಮಾಗಳನ್ನಾದರೂ ನಿರ್ಮಾಣ ಮಾಡುವುದಾಗಿ ಹಾಗೂ ಇದರಲ್ಲಿ ಮುಖ್ಯವಾಗಿ ಒಂದು ಸಿನಿಮಾವನ್ನು ಕೇವಲ ಹೊಸ ಪ್ರತಿಭೆಗಳಿಗೆ ಮೀಸಲಿಡುವುದಾಗಿ ಈ ಮೂಲಕ ಘೋಷಿಸುತ್ತಿದ್ದೇವೆ. ನಮ್ಮನ್ನು ಇಷ್ಟು ವರ್ಷ ಕೈ ಹಿಡಿದು ನಡೆಸಿದ ಹಾಗೆ ಇನ್ನು ಮುಂದೆ ಕೂಡ ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮ ಪ್ರೀತಿ ವಿಶ್ವಾಸ ಹಾರೈಕೆ ಇರಲಿ ಎಂದು ಬಯಸುತ್ತೇವೆ’ ಎಂದು ಪತ್ರ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Top Heroes: ದಾಖಲೆ ಬರೆದ ರಾಕಿಂಗ್ ಸ್ಟಾರ್! ಭಾರತದ ಟಾಪ್​ ಹೀರೋಗಳ ಪಟ್ಟಿಯಲ್ಲಿ ಯಶ್​ಗೆ ಎಷ್ಟನೇ ಸ್ಥಾನ?

ಕೆಆರ್‌ಜಿ ಬ್ಯಾನರ್‌ನಲ್ಲಿ ಉತ್ತರಕಾಂಡ
 ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಉತ್ತರಕಾಂಡ ಸಿನಿಮಾ ನಿರ್ಮಾಣವಾಗಲಿದೆ. ಕಳೆದ ವರ್ಷವೇ ಈ ಸಿನಿಮಾ ಘೋಷಣೆ ಆಗಿತ್ತು. ಆದರೆ ಯಾರು ಹೀರೊ ಆಗಿ ನಟಿಸ್ತಾರೆ ಅನ್ನುವುದು ಪಕ್ಕಾ ಆಗಿರಲಿಲ್ಲ. ಡಾಲಿ ಬರ್ತ್‌ಡೇಗೆ ಸಿನಿಮಾ ಘೋಷಿಸಿ ಕೆಆರ್‌ಜಿ ಬ್ಯಾನರ್ ಸರ್‌ಪ್ರೈಸ್‌ ಕೊಟ್ಟಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಉತ್ತರದ ದರೋಡೆಕೋರರ ಕಥೆ ಇದಾಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಸಿನಿಮಾ ಶೂಟಿಂಗ್ ಶುರುವಾಗಬೇಕಿತ್ತು. ಧನಂಜಯ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಕೆಆರ್‌ಜಿ ಸಂಸ್ಥೆಯ 'ಹೊಯ್ಸಳ' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಹಾಗಾಗಿ ಉತ್ತರಕಾಂಡ ಸಿನಿಮಾ ತಡವಾಗುತ್ತಿದೆ.


ಕೆಆರ್‌ಜಿ ಕಾಂಬಿನೇಷನ್‌ನಲ್ಲಿ ಇದು 2ನೇ ಚಿತ್ರ

ಧನಂಜಯ್‌, ರೋಹಿತ್ ಪದಕಿ ಹಾಗೂ ಕೆಆರ್‌ಜಿ ಕಾಂಬಿನೇಷನ್‌ನಲ್ಲಿ ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾ ಸಕ್ಸಸ್ ಕಂಡಿತ್ತು.  ರತ್ನನ್ ಪ್ರಪಂಚ ಚಿತ್ರವನ್ನು ಓಟಿಟಿಯಲ್ಲಿ ನೋಡಿದವರೆಲ್ಲಾ ಸಿನಿಮಾ ಕುರಿತು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ರು. ಡಾಲಿಯನ್ನು ಮಾಸ್​ ಲುಕ್​ನಲ್ಲಿ ನೋಡಿದ ​ ಪ್ರೇಕ್ಷಕರಿಗೆ, ಮಿಡಲ್ ಕ್ಲಾಸ್​ ಯುವಕನ ಪಾತ್ರದಲ್ಲೂ ಧನಂಜಯ್ ಇಷ್ಟವಾದ್ರು. ವಿಮರ್ಶಕರು ಸಹ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ರು.
Published by:Pavana HS
First published: