Nandamuri Balakrishna: ಟಾಲಿವುಡ್‌ ಲೆಜೆಂಡ್‌ ನಂದಮೂರಿ ಬಾಲಕೃಷ್ಣ ಅವರ ಮುಂದಿನ ಸಿನಿಮಾದ ಬಗ್ಗೆ ಕಂಪ್ಲೀಟ್ ಡೀಟೈಲ್ಸ್

ಟಾಲಿವುಡ್‌ನಲ್ಲಿ ಅತ್ಯಂತ ಫೇಮಸ್‌ ನಟ ಆಗಿರುವ ನಂದಮೂರಿ ಬಾಲಕೃಷ್ಣ ಅವರ ನಟನೆಗೆ ಫೀದಾ ಆಗದ ಅಭಿಮಾನಿಗಳೆ ಇಲ್ಲ. ಈಗ ಅವರು ಹೊಸ ಸಿನಿಮಾದ ಬಗ್ಗೆ ಘೋಷಣೆ ಮಾಡಿದ್ದಾರೆ. ಆ ಸಿನಿಮಾ ಯಾವುದು? ಸಿನಿಮಾದ ನಿರ್ದೆಶಕರು ಯಾರು? ಎಂಬ ಸಂಪೂರ್ಣ ಮಾಹಿತಿ ನಾವು ನಿಮಗೆ ಈ ಲೇಖನದಲ್ಲಿ ನೀಡಲು ಇಷ್ಟಪಡುತ್ತೇವೆ. ಹಾಗಿದ್ರೆ ಬನ್ನಿ ಮತ್ತೆ ಯಾಕೆ ತಡ. ಮತ್ತಷ್ಟು ತಿಳಿಯಲು ಮುಂದೆ ಓದಿ.

ನಂದಮುರಿ ಬಾಲಕೃಷ್ಣ

ನಂದಮುರಿ ಬಾಲಕೃಷ್ಣ

  • Share this:
ಟಾಲಿವುಡ್‌ನಲ್ಲಿ (Tollywood) ಅತ್ಯಂತ ಫೇಮಸ್‌ ನಟರಾದ ನಂದಮೂರಿ ಬಾಲಕೃಷ್ಣ (Nandamuri BalaKrishna) ಅವರ ನಟನೆಗೆ ಫೀದಾ ಆಗದ ಅಭಿಮಾನಿಗಳಿಲ್ಲ. ಈಗ ಅವರು ಹೊಸ ಸಿನಿಮಾದ (New Movie) ಬಗ್ಗೆ ಘೋಷಣೆ ಮಾಡಿದ್ದಾರೆ. ಆ ಸಿನಿಮಾ (Cinema) ಯಾವುದು? ಆ ಸಿನಿಮಾದ ನಿರ್ದೆಶಕರು ಯಾರು? ಎಂಬ ಸಂಪೂರ್ಣ ಮಾಹಿತಿ ನಾವು ನಿಮಗೆ ಈ ಲೇಖನದಲ್ಲಿ ನೀಡಲಿದ್ದೇವೆ. ಹಾಗಿದ್ರೆ ಬನ್ನಿ ಮತ್ತೇಕೆ ತಡ. ಮತ್ತಷ್ಟು ತಿಳಿಯಲು ಮುಂದೆ ಓದಿ. ಈಗ ಟಾಲಿವುಡ್‌ನ ಲೆಜೆಂಡರಿ ನಟ ಎಂದೆ ಪ್ರಖ್ಯಾತಿ ಪಡೆದ ನಂದಮೂರಿ ಬಾಲಕೃಷ್ಣ ಅವರು ಗೋಪಿಚಂದ್ ಮಲಿನೇನಿ (Gopichand Malineni) ಅವರ ಆಕ್ಷನ್ ಎಂಟರ್‌ಟೈನರ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಮುಂದಿನ ಸಿನೆಮಾದ ಬಗ್ಗೆ ಏನಂದ್ರು ನಂದಮೂರಿ ಬಾಲಕೃಷ್ಣ
ಈ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿ ಆಗಿದ್ದಾರೆ. ಇದರ ಹಿನ್ನೆಲೆಯಾಗಿ ನಟ ನಂದಮೂರಿ ಬಾಲಕೃಷ್ಣ ಅವರು “ರಕ್ಷಾ ಬಂಧನದ ಸುದಿನದ ಸಂದರ್ಭದಲ್ಲಿ, ಯಶಸ್ವಿ ನಿರ್ದೇಶಕ ಅನಿಲ್ ರವಿಪುಡಿ ಅವರ ಜೊತೆ ಮುಂದಿನ ಚಿತ್ರವನ್ನು ಘೋಷಿಸಿದ್ದೇನೆ. ಚಲನಚಿತ್ರ ನಿರ್ಮಾಪಕರು ಹೊಸ ಸಿನಿಮಾದ ಮೋಷನ್‌ ಪೋಸ್ಟರ್ ಅನ್ನು ರೀಲಿಸ್‌ ಮಾಡಿದರು. ತೆಲುಗು ಸಿನಿಮಾದ ಅಪ್ರತಿಮ ನಟನೊಂದಿಗೆ ಕೆಲಸ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ ಎಂದು ಎಲ್ಲರೂ ಹೇಳುತ್ತಿರುವುದು ನನಗೆ ಮತ್ತಷ್ಟು ಸಂತೋಷವನ್ನು ತಂದಿದೆ” ಎಂದು ಹೇಳಿದರು.

ಅನಿಲ್ ರವಿಪುಡಿ, ಎಸ್.ಎಸ್ ಥಮನ್ ಮತ್ತು ತಯಾರಕರು ತಮ್ಮ ಟ್ವಿಟ್ಟರ್ ಪೇಜ್‍ಗಳಲ್ಲಿ ಮೋಷನ್ ಪೋಸ್ಟರ್ ಅನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ ಮತ್ತು ನಂದಕುಮಾರ್‌ ಬಾಲಮುರಳಿಕೃಷ್ಣ ಅವರ ಎಲ್ಲಾ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿದ್ದಾರೆ.

ಇದನ್ನೂ ಓದಿ: Naga Chaitanya: ಈ ನಟ ಸಿಕ್ಕಾಪಟ್ಟೆ ಪೋಲಿಯಂತೆ; ಹುಡ್ಗಿ ಜೊತೆ ರೊಮ್ಯಾನ್ಸ್ ಮಾಡಿ ಸಿಕ್ಕಿಬಿದ್ದಿದ್ದರಂತೆ ನಾಗ ಚೈತನ್ಯ

ಹಿಂದೆಂದೂ ಕಾಣದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಬಾಲಯ್ಯ
ಹೊಸ ಸಿನಿಮಾದ ವಿಡಿಯೋವನ್ನು ಹಂಚಿಕೊಳ್ಳುವುದರ ಜೊತೆಗೆ, "ನಮ್ಮ ನಟ ಸಿಂಹ ನಾದ #NandamuriBalakrishna ಅವರನ್ನು ಹಿಂದೆಂದೂ ಕಾಣದ ಪಾತ್ರದಲ್ಲಿ ಅವರನ್ನು ಚಿತ್ರಿಸಲು ನನಗೆ ಆನಂದವಾಗುತ್ತಿದೆ. ಇವರು ನಮ್ಮ ಜೊತೆ ಸಿನಿಮಾ ಮಾಡಲು ಒಪ್ಪಿಕೊಂಡಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ನಾವು ಅವರಿಗೆ ಯಾವಾಗಲೂ ಕೃತಜ್ಞರಾಗಿರುತ್ತೆವೆ ಮತ್ತು ಸೂಪರ್ ಥ್ರಿಲ್ಡ್ ಸಂಗೀತ ಮನೋರಂಜನೆ ಈ ಸಿನಿಮಾದಲ್ಲಿ ಇರುವುದು ಮತ್ತೊಂದು ವಿಶೇಷ ಆಗಿದೆ. ಪ್ರಿಯ ಸಹೋದರ @MusicThaman & @ShineScreens ಈ ಅದ್ಭುತ ಸಂಗೀತ ಪ್ರಯತ್ನಕ್ಕಾಗಿ ಅನಂತ ಕೋಟಿ ಧನ್ಯವಾದಗಳು. #NBK108 @sahugarapati7 @harish_peddi ಎಂಬ ಈ ಹೆಸರುಗಳ ಟ್ವೀಟ್‌ ಖಾತೆಗೆ ಟ್ಯಾಗ್‌ ಮಾಡಲಾಗಿದೆ.

NBK 108 
ಮೋಷನ್ ಪೋಸ್ಟರ್‌ ಅನ್ನು ನಂದಮೂರಿ ಬಾಲಕೃಷ್ಣ, ಅನಿಲ್ ರವಿಪುಡಿ ಮತ್ತು ಎಸ್.ಎಸ್. ಥಮನ್ ಈ ಮೂವರ ಟ್ವೀಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ಈಗ ಈ ಸಿನಿಮಾಕ್ಕೆ ತಾತ್ಕಾಲಿಕವಾಗಿ NBK 108 ಎಂದು ಹೆಸರಿಸಲಾಗಿದ್ದು ಈ ಸಿನಿಮಾವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪತಿ ಮತ್ತು ಹರೀಶ್ ಪೆದ್ದಿ ನಿರ್ಮಿಸುತ್ತಿದ್ದಾರೆ. ಈ ಪ್ರಾಜೆಕ್ಟ್‌ನ ಇತರ ವಿವರಗಳು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Prabhas: ಫ್ಯಾಮಿಲಿ ಫಂಕ್ಷನ್​ನಲ್ಲಿ ಪ್ರಭಾಸ್ ಸಿಂಪಲ್ ಲುಕ್; ‘ಡಾರ್ಲಿಂಗ್’ ಸ್ಟೈಲ್​ಗೆ ಫ್ಯಾನ್ಸ್ ಫಿದಾಎಸ್.ಎಸ್ .ಥಮನ್ ಅವರು ಕೂಡ ಈ ಸಿನಿಮಾದ ಪೋಸ್ಟರ್ ಅನ್ನು ರಿಲೀಸ್‌ ಮಾಡಿದರು. ತಯಾರಕರು ಸಹ ಅದೇ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ ಮತ್ತು Nbk ನೊಂದಿಗೆ ಕೆಲಸ ಮಾಡುವುದು ನಮಗೆ ಅತ್ಯಂತ ಸಂತೋಷವಾಗಿದೆ… " #NBK108 ಎಂಬ ಶೀರ್ಷಿಕೆಯು ನಂದಮೂರಿ ಕೃಷ್ಣ ಅವರ ಉಗ್ರ ರೂಪವನ್ನು 𝐋𝐈𝐎𝐍 #Nandamuribalakrishna #NandamuriBalaKrishna & ಬ್ಲಾಕ್‌ಬ್ಲಸ್ಟರ್‌ ಸಿನಿಮಾ ಹಿಟ್‌ ಮಷಿನ್‌ @AnilRavipudi @sahugarapati7 @harish_peddi @MusicThaman ಅವರಿಗೆ ಟ್ಯಾಗ್‌ ಮಾಡಿ, ಅದ್ಭುತ ಈ ಸಿನಿಮಾ" ಎಂದು ಶೀರ್ಷಿಕೆ ನೀಡಿ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ.

NBK 108 ಸಿನಿಮಾದ ಕುರಿತು ಒಂದಿಷ್ಟು ಮಾತು:
NBK 108 ಸಿನಿಮಾದ ಕುರಿತು ಹೇಳುವುದಾದರೆ, ಮಲ್ಟಿ ಟ್ಯಾಲೆಂಟ್ ಶ್ರುತಿ ಹಾಸನ್, ಈ ಆಕ್ಷನ್ ಎಂಟರ್‌ಟೈನರ್‌ನ ನಾಯಕಿಯಾಗಿದ್ದು, ಕನ್ನಡ ನಟ ದುನಿಯಾ ವಿಜಯ್ ಅವರ ಪ್ರತಿಸ್ಪರ್ಧಿ (ಖಳ) ನಟರಾಗಿದ್ದಾರೆ. ಎಸ್.ಎಸ್. ಥಮನ್ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದು, ನವೀನ್ ನೂಲಿ ಸಂಕಲನ ಮಾಡುತ್ತಿದ್ದಾರೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ ಬರೆಯುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್‌ನೆನಿ ಮತ್ತು ರವಿಶಂಕರ್ ನಿರ್ಮಿಸುತ್ತಿದ್ದಾರೆ.
Published by:Ashwini Prabhu
First published: