Kangana Ranaut: ಡೆಂಗ್ಯೂದಿಂದ ಬಳಲುತ್ತಿದ್ರೂ ಕೆಲಸ ಮಾಡೋದನ್ನ ಮಾತ್ರ ನಿಲ್ಲಿಸಿಲ್ಲವಂತೆ ಕಂಗನಾ

ನಟಿ ಕಂಗನಾ ತನ್ನ ಕೆಲಸದ ವಿಷಯಕ್ಕೆ ಬಂದಾಗ ಅಷ್ಟೇ ಗಂಭೀರವಾದ ವ್ಯಕ್ತಿತ್ವವನ್ನು ಹೊಂದಿರುವಾಕೆ ಅಂತ ಹೇಳಬಹುದು ನೋಡಿ. ಇವರನ್ನು ತುಂಬಾ ಹತ್ತಿರದಿಂದ ಬಲ್ಲವರು, ನಟಿ ತುಂಬಾನೇ ನೇರವಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಹೇಳುತ್ತಾರೆ. ಇತ್ತೀಚೆಗೆ ಇವರು 'ಎಮರ್ಜೆನ್ಸಿ' ಚಿತ್ರದ ಫಸ್ಟ್ ಲುಕ್ ನಿಂದ ಎಲ್ಲರ ಮನಗೆದ್ದದ್ದು ನಮಗೆಲ್ಲಾ ಗೊತ್ತೇ ಇದೆ.

ಕಂಗನಾ

ಕಂಗನಾ

  • Share this:
ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಬಾಲಿವುಡ್ ನಟ (Bollywood Actor) ಮತ್ತು ನಟಿಯರ (Actress) ಸಾಲಿನಲ್ಲಿ ನಟಿ ಕಂಗನಾ ರಣಾವತ್ ( Kangana  Ranaut) ಅವರ ಹೆಸರು ಮೇಲಿನ ಸಾಲಿನಲ್ಲಿ ಬರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು..ಕಂಗನಾ ಅವರು ಚಿಕ್ಕ ಚಿಕ್ಕ ಮಾತಿಗೆ ಸ್ವಲ್ಪವೂ ತಡ ಮಾಡದೆ ಪ್ರತಿಕ್ರಿಯಿಸುವುದಾಗಲಿ, ವಿವಾದಾತ್ಮಕ ಹೇಳಿಕೆಗಳನ್ನು (controversial statement) ನೀಡುವ ಮೂಲಕ ಮತ್ತು ತನಗಿಷ್ಟವಿಲ್ಲದ ಸಂಗತಿಗಳು ಹಾಗೂ ವ್ಯಕ್ತಿಗಳ ಮೇಲೆ ಬಹಿರಂಗವಾಗಿ ನೇರ ಆಪಾದನೆಗಳನ್ನು ಮಾಡುವ ಮೂಲಕ ಸದಾ ವಿವಾದಗಳಲ್ಲಿ ಸಿಲುಕಿ ಹಾಕಿಕೊಳ್ಳುತ್ತಲೇ ಇರುತ್ತಾರೆ ಎಂಬುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ.

ಆದರೆ ಈ ನಟಿ ತನ್ನ ಕೆಲಸದ ವಿಷಯಕ್ಕೆ ಬಂದಾಗ ಅಷ್ಟೇ ಗಂಭೀರವಾದ ವ್ಯಕ್ತಿತ್ವವನ್ನು ಹೊಂದಿರುವಾಕೆ ಅಂತ ಹೇಳಬಹುದು ನೋಡಿ. ಇವರನ್ನು ತುಂಬಾ ಹತ್ತಿರದಿಂದ ಬಲ್ಲವರು, ನಟಿ ತುಂಬಾನೇ ನೇರವಾದ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಹೇಳುತ್ತಾರೆ. ಇತ್ತೀಚೆಗೆ ಇವರು 'ಎಮರ್ಜೆನ್ಸಿ' ಚಿತ್ರದ ಫಸ್ಟ್ ಲುಕ್ ನಿಂದ ಎಲ್ಲರ ಮನಗೆದ್ದದ್ದು ನಮಗೆಲ್ಲಾ ಗೊತ್ತೇ ಇದೆ.

ಅನಾರೋಗ್ಯದ ಹೊರತಾಗಿಯೂ ಕೆಲಸದಲ್ಲಿ ನಿರತರಾದ ನಟಿ 
ಈಗ ನಟಿ ಕಂಗನಾ ರಣಾವತ್ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಅವರ ಆರೋಗ್ಯದ ಬಗ್ಗೆ ವಿಷಯವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದರು. ಅನಾರೋಗ್ಯದ ಹೊರತಾಗಿಯೂ, ನಟಿ ಕಂಗನಾ ಅವರು ತಮ್ಮ ಚಿತ್ರದಲ್ಲಿ ಕೆಲಸ ಮಾಡುವುದನ್ನು ಮಾತ್ರ ನಿಲ್ಲಿಸಲಿಲ್ಲ ನೋಡಿ.

ಇದನ್ನೂ ಓದಿ:  Harnaaz Sandhu: ಮೊದಲ ಸಿನಿಮಾದಲ್ಲೇ ವಿಶ್ವ ಸುಂದರಿಗೆ ಎದುರಾಯ್ತು ಸಂಕಷ್ಟ! ಹರ್ನಾಜ್ ಕೌರ್ ಸಂಧು ವಿರುದ್ಧ ಮೊಕದ್ದಮೆ

ನಟಿ ಕಂಗನಾಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ ಎಂದು ಅವರ ತಂಡ ಬಹಿರಂಗಪಡಿಸಿದೆ, ಆದರೆ ಅವರು ಇನ್ನೂ 'ಎಮರ್ಜೆನ್ಸಿ' ಚಿತ್ರದ ಚಿತ್ರೀಕರಣದ ಸೆಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಟಿಯ ತಂಡದವರು ಅವರನ್ನು 'ಸ್ಫೂರ್ತಿ' ಎಂದು ಕರೆದರು.

ಚಿತ್ರ ತಂಡದವರಿಗೆ ಇವರೇ ಸ್ಫೂರ್ತಿಯಂತೆ 
ಕಂಗನಾ ಅವರ ತಂಡವು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ "ನೀವು ಡೆಂಗ್ಯೂ ನಿಂದ ಬಳಲುತ್ತಿದ್ದು, ಬಿಳಿ ರಕ್ತದ ಕಣಗಳ ಸಂಖ್ಯೆ ಆತಂಕಕಾರಿಯಾಗಿ ಕಡಿಮೆಯಾಗಿವೆ ಮತ್ತು ಹೆಚ್ಚಿನ ಜ್ವರದಿಂದ ಬಳಲುತ್ತಿರುವಾಗ ಮತ್ತು ಇನ್ನೂ ನೀವು ಕೆಲಸ ಮಾಡುತ್ತಿದ್ದೀರಿ, ಇದು ಉತ್ಸಾಹವಲ್ಲ, ಇದು ನಿಮ್ಮ ಕೆಲಸದ ಬಗ್ಗೆ ನಿಮಗಿರುವ ಹುಚ್ಚುತನವಾಗಿದೆ... ಕಂಗನಾ ಅವರು ನಿಜಕ್ಕೂ ನಮಗೆ ಒಂದು ಸ್ಫೂರ್ತಿಯಾಗಿದ್ದಾರೆ” ಎಂದು ಬರೆದಿದ್ದಾರೆ.

ನಟಿ ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದನ್ನು ಮರು ಪೋಸ್ಟ್ ಮಾಡಿದ್ದಾರೆ ಮತ್ತು "ಥ್ಯಾಂಕ್ಯೂ ಟೀಮ್ ಅಂತ ಹೇಳಿದ ನಟಿ ಕಂಗನಾ ಅವರು ದೇಹವು ಅನಾರೋಗ್ಯಕ್ಕೆ ಒಳಗಾಗಿದೆ, ಆದರೆ ಆತ್ಮವಲ್ಲ... ನಿಮ್ಮೆಲ್ಲಾ ದಯಾಪರ ಮಾತುಗಳಿಗೆ ತುಂಬಾನೇ ಧನ್ಯವಾದಗಳು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ
ಏತನ್ಮಧ್ಯೆ, ಕಂಗನಾ ತಮ್ಮ ಎರಡನೇ ಚಿತ್ರದ ನಿರ್ದೇಶನದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ತುಂಬಾನೇ ವಿಭಿನ್ನವಾಗಿ ಕಾಣುತ್ತಿದ್ದು, ಇವರ ಚಿತ್ರದಲ್ಲಿನ ಫರ್ಸ್ಟ್ ಲುಕ್ ಇಂಟರ್ನೆಟ್ ನಲ್ಲಿ ಒಂದು ದೊಡ್ಡ ಹವಾವನ್ನೇ ಸೃಷ್ಟಿ ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ: Urvashi Rautela: ನೆಟ್ಟಗೆ ಬ್ಯಾಟ್ ಬಾಲ್ ಜೊತೆ ಆಟವಾಡು, ಖ್ಯಾತ ಕ್ರಿಕೆಟಿಗನಿಗೆ ಬಾಲಿವುಡ್ ನಟಿ ಶಾಕಿಂಗ್​ ಕಾಮೆಂಟ್

ಕಂಗನಾ ಅವರ ಪ್ರಕಾರ, 'ಎಮರ್ಜೆನ್ಸಿ' ಚಿತ್ರವು ಇಂದಿರಾ ಗಾಂಧಿ ಅವರ ಜೀವನಚರಿತ್ರೆಯಲ್ಲ. ಈ ಚಿತ್ರವು ಪ್ರಸ್ತುತ ಭಾರತದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಪೀಳಿಗೆಗೆ ಸಹಾಯ ಮಾಡುವ ರಾಜಕೀಯ ಕಥೆಯೊಂದನ್ನು ಹೊಂದಿದೆ ಎಂದು ಅವರು ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದರು.

ನಟಿ ಖ್ಯಾತ ಹಾಲಿವುಡ್ ಪ್ರಾಸ್ಥೆಟಿಕ್ ಮೇಕಪ್ ಕಲಾವಿದ ಡೇವಿಡ್ ಮಾಲಿನೋವ್ಸ್ಕಿ ಅವರನ್ನು 'ಎಮರ್ಜೆನ್ಸಿ' ಚಿತ್ರಕ್ಕಾಗಿ ನೇಮಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಮತ್ತು ಇನ್ನೊಬ್ಬ ಯುವ ನಟ ಶ್ರೇಯಸ್ ತಲ್ಪಾಡೆ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಕಂಗನಾ 'ತೇಜಸ್' ಮತ್ತು 'ಮಣಿಕರ್ಣಿಕಾ' ದ ಮುಂದುವರಿದ ಭಾಗವನ್ನು ಸಹ ಮಾಡಲಿದ್ದಾರೆ.
Published by:Ashwini Prabhu
First published: