ಪುಸ್ತಕದ ಮೇಲೆ ನಿಂತು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಖ್ಯಾತ ನಟಿ!

ಸೆಲೆನಾ ಗೋಮ್ಸ್

ಸೆಲೆನಾ ಗೋಮ್ಸ್

ಈ ಹಿಂದೆ ನಟಿ ಸೆಲೆನಾ ಅಮೆರಿಕ ಸಂಗೀತ ಅವಾರ್ಡ್​ ಕಾರ್ಯಕ್ರಮದಲ್ಲಿ ಭಾಗವಹಿಸಿ ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ತಲೆ ತಿರುಗಿ ಬಿದ್ದು ಸುದ್ದಿಯಾಗಿದ್ದರು. ಇದೀಗ ಪುಸ್ತಕದ ಮೇಲೆ ನಿಂತು ಫೋಟೋಶೂಟ್​ ಮಾಡಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ

  • Share this:

    ಅಮೆರಿಕದ ಖ್ಯಾತ ಗಾಯಕಿ, ನಟಿ ಸೆಲೆನಾ ಗೋಮ್ಸ್​ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ಮಾಡಿಸಿಕೊಂಡ ಫೋಟೋಶೂಟ್​ನಿಂದಾಗಿ ನಟಿ ಸೆಲೆನಾ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

    27ರ ಹರೆಯದ ನಟಿ ಸೆಲೆನಾ ಗೋಮ್ಸ್​ ಇತ್ತೀಚೆಗೆ ಕ್ರೀಡಾ ಪರಿಕರ ತಯಾರಕ ಪೂಮಾ ಜಾಹಿರಾತುವೊಂದಕ್ಕೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಷೂ ಧರಿಸಿ ಪುಸ್ತಕದ ಮೇಲೆ ನಿಂತು ಫೋಸ್​ ಕೊಟ್ಟಿದ್ದಾರೆ. ಈ ಫೋಟೋ ಟ್ವಿಟ್ಟರ್​ನಲ್ಲಿ ಹರಿದಾಡುತ್ತಿದ್ದಂತೆ, ನೆಟ್ಟಿಗರು ಸೆಲೆನಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಭಾತರದಲ್ಲಿ ಪುಸ್ತಕವನ್ನು ಸರಸ್ವತಿ ಎಂದು ಪೂಜಿಸುತ್ತಾರೆ. ಪುಸ್ತಕವನ್ನು ಜ್ಞಾನದ ಭಂಡಾರವೆಂದು ಕರೆಯುತ್ತಾರೆ. ಅದರ ಮೇಲೆ ನಿಲ್ಲುವುದು ಭಾರತೀಯರಿಗೆ ಸರಿ ಕಾಣಿಸುತ್ತಿಲ್ಲ ಎಂದು ನೆಟ್ಟಿಗೆರ ಕಾಮೆಂಟ್​ ಬರೆದಿದ್ದಾರೆ.

     











    ಇನ್ನು ಕೆಲವರು ‘ನೀವು ಪುಸ್ತಕದ ಮೇಲೆ ನಿಂತಿರುವುದು ಭಾರತೀಯರಿಗೆ ತಪ್ಪಾಗಿ ಕಾಣುತ್ತಿದೆ. ಹಾಗಾಗೀ ಇದನ್ನು ವಿರೋಧಿಸುತ್ತಿದ್ದೇವೆ. ಸರಸ್ವತಿಯ ಮೇಲೆ ನಿಂತಿದ್ದಾರೆ ಎಂದು ಕಮೆಂಟ್​ ಬರೆದಿದ್ದಾರೆ.

    ಈ ಹಿಂದೆ ನಟಿ ಸೆಲೆನಾ ಅಮೆರಿಕ ಸಂಗೀತ ಅವಾರ್ಡ್​ ಕಾರ್ಯಕ್ರಮದಲ್ಲಿ ಭಾಗವಹಿಸಿ ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ತಲೆ ತಿರುಗಿ ಬಿದ್ದು ಸುದ್ದಿಯಾಗಿದ್ದರು. ಇದೀಗ ಪುಸ್ತಕದ ಮೇಲೆ ನಿಂತು ಫೋಟೋಶೂಟ್​ ಮಾಡಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಇದನ್ನೂ ಓದಿ: ನಾಳೆಯಿಂದ ಏರ್​​ಟೆಲ್​-ವೊಡಾಫೋನ್​ ಟೆಲಿಕಾಂ ಸಂಸ್ಥೆಗಳ ಕರೆ-ಡೇಟಾ ಪ್ಲಾನ್ ದುಬಾರಿಯಾಗಲಿದೆ!

    ಇದನ್ನೂ ಓದಿ: ನಿನ್ನೆ ಮುಷ್ತಾಕ್ ಟ್ರೋಫಿ ಗೆಲ್ಲಿಸಿ ಇಂದು ಹಸೆಮಣೆ ಏರಿದ ಮನೀಶ್ ಪಾಂಡೆ; ಖ್ಯಾತ ನಟಿಯ ಜೊತೆ ಕರ್ನಾಟಕ ಕ್ಯಾಪ್ಟನ್ ವಿವಾಹ

     

    First published: