ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಸಾವನ್ನಪ್ಪಿ ಹಲವು ವರ್ಷಗಳೇ ಕಳೆದ್ರು, ಅಭಿಮಾನಿಗಳ ಮನದಲ್ಲಿ ಜೀವಂತವಾಗಿದ್ದಾರೆ. ನಟನೆಯಿಂದಷ್ಟೇ ಅಲ್ಲ ಸಮಾಜ ಸೇವೆಯಲ್ಲೂ ಕೊಡುಗೈ ದಾನಿ ಎನಿಸಿಕೊಂಡಿದ್ದ ಅಪ್ಪುವನ್ನು (Appu) ಅಭಿಮಾನಿಗಳು (Fans) ದೇವರಂತೆ ಪೂಜೆ ಮಾಡ್ತಿದ್ದಾರೆ. ಪುನೀತ್ ಹಾಗೂ ಡಾ ರಾಜ್ ಕುಮಾರ್ ಫ್ಯಾಮಿಲಿ (Raj Kumar Family) ಬಗ್ಗೆ ಅಪಾರ ಅಭಿಮಾನ ಹೊಂದಿರುವ ಫ್ಯಾನ್ಸ್ ಇದೀಗ ಪುನೀತ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದವರ ವಿರುದ್ಧ ಕಿಡಿಕಾರಿದ್ದಾರೆ.
ಪೊಲೀಸ್ ಕಮೀಷನರ್ ಕಚೇರಿಗೆ ದೂರು
ಪುನೀತ್ ರಾಜ್ ಕುಮಾರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ ಪುನೀತ್ ಅಭಿಮಾನಿಗಳು ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದಾರೆ. ಪ್ರವೀಣ್ ಎಂಬ ಯುವಕನ ವಿರುದ್ಧ ದೂರು ದಾಖಲಾಗಿದೆ.
ಪ್ರವೀಣ್ ಎಂಬಾತನ ವಿರುದ್ಧ ದೂರು
ಪ್ರವೀಣ್ ಎಂಬಾತ ಫೇಸ್ ಬುಕ್ ನಲ್ಲಿ ಫೇಕ್ ಐಡಿ ಕ್ರಿಯೆಟ್ ಮಾಡಿ ಅವಾಚ್ಯ ಶಬ್ದಗಳಿಂದ ಪುನೀತ್ ರನ್ನ ನಿಂದಿಸಿ ವಿಡಿಯೋ ಶೇರ್ ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೇ ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ. ಈತನ ವಿರುದ್ಧ ಕ್ರಮಕೈಗೊಳ್ಳಿ ಎಂದು ಚೇತನ್ ಲೋಕೇಶ್ ಅವರು ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದಾರೆ.
ಪುನೀತ್ ಕೆರೆಹಳ್ಳಿಗೆ ಧರ್ಮದೇಟು
ಡಾ.ರಾಜ್ಕುಮಾರ್ (Dr. Rajkumar) ಫ್ಯಾಮಿಲಿಯನ್ನು ಸ್ಯಾಂಡಲ್ವುಡ್ನ (Sandalwood) ದೊಡ್ಮನೆ ಎಂದೇ ಕರೆಯುತ್ತಾರೆ. ರಾಜ್ ಫ್ಯಾಮಿಲಿ ಅಪಾರ ಅಭಿಮಾನಿ (Fans) ಬಳಗವನ್ನು ಹೊಂದಿದೆ. ಇತ್ತೀಚಿಗಷ್ಟೇ ನಟ ಸಾರ್ವಭೌಮ ಡಾ. ರಾಜ್ಕುಮಾರ್ ಫ್ಯಾಮಿಲಿ (Rajkumar Family) ಬಗ್ಗೆ ಕೆಟ್ಟದಾಗಿ ಮಾತಾಡಿದ್ದ ಆರೋಪದ ಮೇರೆಗೆ ಪುನೀತ್ ಕೆರೆಹಳ್ಳಿಗೆ (Puneeth Kerehalli) ಕನ್ನಡಪರ ಹೋರಾಟಗಾರರು ಧರ್ಮದೇಟು ನೀಡಿದ್ದರು. ಹಲ್ಲೆ ಮಾಡಿದ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಘಟನೆ ನಡೆದಿದ್ದು, ರಾಜ್ ಕುಮಾರ್ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತನಾಡಿದ್ದೀಯಾ? ನೀನು ಕ್ಷಮೆ ಕೇಳಬೇಕು ಎಂದು ಕನ್ನಡಪರ ಹೋರಾಟಗಾರರ ತಂಡ ಗಲಾಟೆ ಮಾಡಿದ್ರು. ಅಷ್ಟೇ ಅಲ್ಲದೇ ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಕೂಡ ಮೊಬೈಲ್ನಲ್ಲಿ ಸೆರೆಯಾಗಿತ್ತು
ಸ್ಥಳಕ್ಕೆ ಪೊಲೀಸ್ ಭೇಟಿ, ಪರಿಶೀಲನೆ
ಶಿವಕುಮಾರ್ ನಾಯ್ಕ್ ಬಣ ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆಗೂ ಮುನ್ನ ಪುನೀತ್ ಕೆರೆಹಳ್ಳಿಗೆ ಕರೆ ಮಾಡಿ ಕ್ಷಮೆ ಕೇಳುವಂತೆ ಹೇಳಲಾಗಿತ್ತು. ಆದರೆ, ಈ ವೇಳೆ ಪುನೀತ್ ನಾನು ಕ್ಷಮೆ ಕೇಳೋದಿಲ್ಲ ಎಂದಿದ್ದಾರೆ. ನಾನು ಚಾಮರಾಜಪೇಟೆಯಲ್ಲೇ ಇದ್ದೇನೆ, ಬರೋದಾದ್ರೆ ಬನ್ನಿ ಎಂದು ಅವಾಜ್ ಹಾಕಿದ್ದಾರೆ. ಕೆಲ ಹೊತ್ತಲ್ಲೇ ಬಂದ ಗುಂಪು ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ನಡೆಸಿತ್ತು. ಹಲ್ಲೆ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆಗೆ ಖಂಡನೆ
ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆಗೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಮಾಡದ ತಪ್ಪಿಗೆ ಪುನೀತ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಪುನೀತ್ ಕೆರೆಹಳ್ಳಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪುನೀತ್ ಕೆರೆಹಳ್ಳಿ ಡಾ.ರಾಜ್ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೋ ಇದ್ದರೆ ನೀಡಿ ಎಂದು ಸವಾಲು ಹಾಕಿದ್ದರು. ರಾಜ್ ಕುಟುಂಬದ ಹೆಸರು ದುರ್ಬಳಕೆ ಮಾಡಿಕೊಂಡು ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ