Leena Maria Paul | 200 ಕೋಟಿ ಸುಲಿಗೆ ಪ್ರಕರಣ; ಮದ್ರಾಸ್​ ಕೆಫೆ ನಟಿಯನ್ನು ಬಂಧಿಸಿದ ಪೊಲೀಸರು!

ಲೀನಾ ಮರಿಯಾ ಪೌಲ್

ಲೀನಾ ಮರಿಯಾ ಪೌಲ್

Leena Maria Paul: ಹಿರಿಯ ಅಧಿಕಾರಿ ಈ ಬಗ್ಗೆ ಮಾತನಾಡಿದ್ದು, ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರನ್ನು ಮೋಸಗೊಳಿಸಲು ಪತ್ನಿ ಮರೀನಾ ಅವರು ಚಂದ್ರಶೇಖರ್‌ಗೆ ಸಹಾಯ ಮಾಡಿದ್ದಾರೆ. ಈ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಮುಂದೆ ಓದಿ ...
  • Share this:

Leena Maria Paul Arrest: ಮಾಲಿವುಡ್​ ನಟಿ, ಬಂಧಿತ ಸುಕೇಶ್​​ ಚಂದ್ರಶೇಖರ್ (Sukesh Chandrasekhar)​ ಅವರ ಪತ್ನಿ ಲೀನಾ ಮರಿಯಾ ಪೌಲ್​ ಅವರನ್ನು ಸುಲಿಗೆ ಪ್ರಕರಣದಲ್ಲಿ ಸಹಾಯ ಮಾಡಿದ ಆರೋಪದಡಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. 21 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುಕೇಶ್​ಗೆ 200 ಕೋಟಿ ರೂ ಸುಲಿಗೆ ಮಾಡಲು ಸಹಾಯ ಮಾಡಿದಕ್ಕಾಗಿ ದೆಹಲಿಯ ಆರ್ಥಿಕ ವಿಭಾಗದ (EOW) ಭಾನುವಾರದಂದು ಲೀನಾ ಅವರನ್ನು ಬಂಧಿಸಿದ್ದಾರೆ.


ಪೊಲೀಸರು ಆರೋಪಿಗಳ ವಿರುದ್ಧ ಕಠಿಣ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ (Maharashtra Control of Organised Crime) ಕಾಯ್ದೆಯನ್ನು ಜಾರಿಗೊಳಿಸಿದ್ದಾರೆ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ತಿಳಿದುಬಂದಿದೆ.


ಹಿರಿಯ ಅಧಿಕಾರಿ ಈ ಬಗ್ಗೆ ಮಾತನಾಡಿದ್ದು, ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ (AditiSingh) ಅವರನ್ನು ಮೋಸಗೊಳಿಸಲು ಪತ್ನಿ ಮರೀನಾ ಅವರು  ಚಂದ್ರಶೇಖರ್‌ಗೆ ಸಹಾಯ ಮಾಡಿದ್ದಾರೆ. ಈ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.


ಇದನ್ನು ಓದಿ -Viral Video: ಬಿಕಿನಿ ತೊಟ್ಟು ಫ್ಲೈಟ್ ಹತ್ತೋಕೆ ಬಂದ ಮಹಿಳೆ, ಬಟ್ಟೆ ಕಡಿಮೆಯಾದ್ರೂ ಮಾಸ್ಕ್ ತಪ್ಪದೇ ಧರಿಸಿದ್ಲು!


ಅದಿತಿ ಸಿಂಗ್​ ಅವರು ಕಳೆದ ವರ್ಷ ಜೂನ್‌ ತಿಂಗಳಿನಲ್ಲಿ ದೂರೊಂದನ್ನು ನೀಡಿದ್ದರು. ದೂರಿನಲ್ಲಿ ಲೀನಾ ಮರಿಯಾ ಪೌಲ್ ಅವರು ಜೈಲಿನಲ್ಲಿರುವ ಪತಿಗೆ ಜಾಂಈನು ನೀಡಲು ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಯಾಗಿಗೆ ಸಂಪರ್ಕ ಹೊಂದಿದ್ದರು ಎಂದು ಉಲ್ಲೇಖಿಸಿದ್ದರು.ಅದಿತಿ ಸಿಂಗ್ ಪೊಲೀಸರಿಗೆ ನೀಡಿದ ದೂರಿನ ಅನ್ವಯ ನಂತರ ಆಗಸ್ಟ್ 7 ರಂದು ಎಫ್ಐಆರ್ ದಾಖಲಾಗಿದೆ.


ಲೀನಾ ಮರಿಯಾ ಪೌಲ್


2019ರಲ್ಲಿ ರೆಲಿಗೇರ್ ಫಿನ್‌ವೆಸ್ಟ್ ಲಿಮಿಟೆಡ್ (ಆರ್‌ಎಫ್‌ಎಲ್) ನಲ್ಲಿ ಹಣದ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಿಂದರ್ ಸಿಂಗ್ ಅವರನ್ನು ಬಂಧಿಸಲಾಯಿತು. ಚುನಾವಣಾ ಆಯೋಗದ ಲಂಚ ಪ್ರಕರಣ ಸೇರಿದಂತೆ 21 ಪ್ರಕರಣಗಳಲ್ಲಿ ಆರೋಪಿಯಾಗಿರುವ ಚಂದ್ರಶೇಖರ್ ಅವರನ್ನು ಆಗಸ್ಟ್‌ನಲ್ಲಿ ಬಂಧಿಸಲಾಯಿತು.


ಇದನ್ನು ಓದಿ - Sunday Holiday: ವಾರದ ರಜೆ ಭಾನುವಾರನೇ ಯಾಕೆ ಇದೆ? ಇದಕ್ಕೂ ಒಂದು ಸಖತ್ ಕಾರಣ ಇದೆ ನೋಡಿ!


ಘಟನೆಗೆ ಸಂಬಂಧಿಸಿದಂತೆ  ಚಂದ್ರಶೇಖರ್ ಅವರನ್ನು ದೆಹಲಿಯ ರೋಹಿಣಿ ಜೈಲಿನಲ್ಲಿರಿಸಿದ್ದರು.  ಚಂದ್ರಶೇಖರ್‌ನ ಸಹಾಯರು ಆತನಿಗೆ ಸಹಾಯ ಮಾಡಲೆಂದು ಜೈಲಿನ ಹೊರಗಿನಿಂದ ಕಾರ್ಯಾಚರಣೆ ನಡೆಸಿದ್ದರು ಅವರನ್ನು ಪೊಲೀಸರು ಬಂಧಿಸಿದ್ದರು.


ಇದೀಗ ಸುಕೇಶ್​​ ಚಂದ್ರಶೇಖರ್​ ಪತ್ನಿ, ಮದ್ರಾಸ್​ ಕೆಫೆ ಸಿನಿಮಾದ ನಟಿ ಲೀನಾ ಲೀನಾ ಮರಿಯಾ ಪೌಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

top videos
    First published: