Singer Death: ಸಂಗೀತ ಲೋಕಕ್ಕೆ ಮತ್ತೊಂದು ಆಘಾತ, 22ನೇ ವಯಸ್ಸಿಗೆ ಕೊನೆಯುಸಿರೆಳೆದ ಯುವ ಗಾಯಕ!

ಕಳೆದ ವಾರವಷ್ಟೇ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ದುಷ್ಕರ್ಮಿಗಳು ಗುಂಡು ಹೊಡೆದು ಹತ್ಯೆ ಮಾಡಿದ್ದರು. ಅದಾದ ಬಳಿಕ ಕೇರಳದಲ್ಲಿ ಖ್ಯಾತ ಗಾಯಕ ಎಡವ ಬಶೀರ್ ಹಾಡುತ್ತಿರುವಾಗಲೇ ವೇದಿಕೆ ಮೇಲೆ ಕುಸಿದು, ಕೊನೆಯುಸಿರೆಳೆದಿದ್ದರು. ಮೊನ್ನೆ ಮೊನ್ನೆ ಕೋಲ್ಕತ್ತಾ ಕಾರ್ಯಕ್ರಮದಲ್ಲಿ ಹಾಡುತ್ತಾ ರಂಜಿಸುತ್ತಿದ್ದ ಬಾಲಿವುಡ್ ಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನತ್ ಅಲಿಯಾಸ್ ಕೆಕೆ ಹೃದಯಾಘಾತಕ್ಕೆ ಬಲಿಯಾಗಿದ್ದರು. ಇದೀಗ ಮತ್ತೋರ್ವ ಯುವ ಗಾಯಕ ಪ್ರಾಣ ಕಳೆದುಕೊಂಡಿದ್ದಾರೆ.

ಯುವ ಗಾಯಕ ಸಾಗರ್ ನಿಧನ

ಯುವ ಗಾಯಕ ಸಾಗರ್ ನಿಧನ

  • Share this:
ನವದೆಹಲಿ: ಸಂಗೀತ ಲೋಕಕ್ಕೆ (Musical world) ಮತ್ತೊಂದು ಆಘಾತ ಎದುರಾಗಿದೆ. ಕಳೆದ ವಾರವಷ್ಟೇ ಪಂಜಾಬಿ ಗಾಯಕ (Punjab Singer) ಸಿಧು ಮೂಸೆವಾಲಾ (Sidhu Moose Wala) ಅವರನ್ನು ದುಷ್ಕರ್ಮಿಗಳು ಗುಂಡು (Gun) ಹೊಡೆದು ಹತ್ಯೆ (Murder) ಮಾಡಿದ್ದರು. ಅದಾದ ಬಳಿಕ ಕೇರಳದಲ್ಲಿ (Kerala) ಖ್ಯಾತ ಗಾಯಕ ಎಡವ ಬಶೀರ್ (Edava Basheer) ಹಾಡುತ್ತಿರುವಾಗಲೇ ವೇದಿಕೆ ಮೇಲೆ ಕುಸಿದು, ಕೊನೆಯುಸಿರೆಳೆದಿದ್ದರು. ಮೊನ್ನೆ ಮೊನ್ನೆ ಕೋಲ್ಕತ್ತಾ (Kolkata) ಕಾರ್ಯಕ್ರಮದಲ್ಲಿ ಹಾಡುತ್ತಾ ರಂಜಿಸುತ್ತಿದ್ದ ಬಾಲಿವುಡ್ (Bollywood) ಖ್ಯಾತ ಗಾಯಕ ಕೃಷ್ಣ ಕುಮಾರ್ ಕುನ್ನತ್ ಅಲಿಯಾಸ್ ಕೆಕೆ (KK) ಹೃದಯಾಘಾತಕ್ಕೆ ಬಲಿಯಾಗಿದ್ದರು. ಇದೀಗ ಮತ್ತೋರ್ವ ಯುವ ಗಾಯಕ ಪ್ರಾಣ ಕಳೆದುಕೊಂಡಿದ್ದಾರೆ. ಹೌದು, ದೆಹಲಿಯ (Delhi) ಖ್ಯಾತ ಯುವ ಗಾಯಕ ಶೀಲ್ ಸಾಗರ್ (Sheil Sagar) ಎಂಬುವರು ನಿಧನರಾಗಿದ್ದಾರೆ. ಬರೀ 22ನೇ ವಯಸ್ಸಲ್ಲಿ ಸಾಗರ್ ಕೊನೆಯುಸಿರೆಳೆದಿದ್ದು ಅವರ ಕುಟುಂಬಕ್ಕಷ್ಟೇ ಅಲ್ಲ, ಇಡೀ ಸಂಗೀತ ಲೋಕಕ್ಕೆ ಆಘಾತವಾಗಿದೆ.

ಗಾಯಕ ಶೀಲ್ ಸಾಗರ್ ನಿಧನ

ದೆಹಲಿ ಮೂಲದ ಖ್ಯಾತ ಯುವ ಗಾಯಕ, ಸಂಗೀತ ಸಂಯೋಜಕ ಶೀಲ್ ಸಾಗರ್ ಅವರು 22 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಆದರೆ ಇಪ್ಪತ್ತೆರಡೇ ವರ್ಷಕ್ಕೆ ಕೊನೆಯುಸಿರೆಳೆಯಲು ಕಾರಣ ಏನು ಎನ್ನುದುವು ಇನ್ನುವರೆಗೂ ತಿಳಿದಿಲ್ಲ. ಆದರೆ ಅವರ ಸ್ನೇಹಿತರು, ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಂತಾಪ ಸೂಚಿಸಿದ್ದಾರೆ.

ಯಾರು ಈ ಶೀಲ್ ಸಾಗರ್?

ಶೀಲ್ ಸಾಗರ್ ಅವರು ಬಹು ವಾದ್ಯಗಳನ್ನು ನುಡಿಸುವಲ್ಲಿ ಪಳಗಿದ್ದರು. ಜೊತೆಗೆ ಗಾಯಕರಾಗಿಯೂ ಖ್ಯಾತರಾಗಿದ್ದರು. ಸಾಗರ್ ಅವರು ಪಿಯಾನೋ, ಗಿಟಾರ್ ಮತ್ತು ಸ್ಯಾಕ್ಸೋ ಫೋನ್ ನುಡಿಸಿದರು ಮತ್ತು ತಮ್ಮದೇ ಆದ ಸಂಯೋಜನೆಗಳಿಗೆ ಹಾಡುತ್ತಿದ್ದರು.

ಇದನ್ನೂ ಓದಿ: Singer KK Death: ಕೆಕೆ ಸಾವಿಗೆ ಹೃದಯಸ್ತಂಭನ ಕಾರಣನಾ ಅಥವಾ ಬೇರೆ ಸಮಸ್ಯೆಯಿತ್ತಾ?

40 ಸಾವಿರಕ್ಕೂ ಹೆಚ್ಚು ಸ್ಟ್ರೀಮ್

ಸಾಗರ್ ಅವರು ಇಂಡೀ ಸಂಗೀತದ ರಂಗದಲ್ಲಿ ತಮ್ಮ ಅಕೌಸ್ಟಿಕ್ ಚೊಚ್ಚಲ ಸಿಂಗಲ್ ಇಫ್ ಐ ಟ್ರೈಡ್ ಮೂಲಕ ಪ್ರಾಮುಖ್ಯತೆಯನ್ನು ಪಡೆದರು. ಇದು ಕಳೆದ ವರ್ಷ ಬಿಡುಗಡೆಯಾಯಿತು ಮತ್ತು Spotify ಪ್ಲಾಟ್‌ಫಾರ್ಮ್‌ನಲ್ಲಿ 40,000 ಕ್ಕೂ ಹೆಚ್ಚು ಸ್ಟ್ರೀಮ್‌ಗಳನ್ನು ಸಂಗ್ರಹಿಸಿತು.

ಸಾಗರ್ 2021 ರಲ್ಲಿ ಇನ್ನೂ ಮೂರು ಸಿಂಗಲ್ಸ್  ಅನ್ನು ಬಿಡುಗಡೆ ಮಾಡಿದರು, ಬಿಫೋರ್ ಇಟ್ ಗೋಸ್, ಸ್ಟಿಲ್ ಮತ್ತು ಮಿಸ್ಟರ್ ಮೊಬೈಲ್ ಮ್ಯಾನ್ - ಲೈವ್. ಜೊತೆಗೆ ಗುರುಗ್ರಾಮ್‌ನಲ್ಲಿರುವ ದಿ ಪಿಯಾನೋ ಮ್ಯಾನ್ ಜಾಝ್ ಕ್ಲಬ್‌ನಲ್ಲಿ ಅವರ ಪ್ರದರ್ಶನದ ಸಮಯದಲ್ಲಿ ಶ್ರೀ ಮೊಬೈಲ್ ಮ್ಯಾನ್ ಟ್ರ್ಯಾಕ್ ಅನ್ನು ಲೈವ್ ಆಗಿ ರೆಕಾರ್ಡ್ ಮಾಡಲಾಯಿತು.ಒಂದೇ ವಾರದಲ್ಲಿ ನಾಲ್ವರು ಗಾಯಕರ ದುರ್ಮರಣ

ಹೌದು, ಇದು ಸಂಗೀತ ಪ್ರೇಮಗಳಿಗೆ ನಿಜಕ್ಕೂ ಆಘಾತದ ಸುದ್ದಿ. ಒಂದೇ ವಾರದಲ್ಲಿ ನಾಲ್ವರು ಗಾಯಕರು ನಮ್ಮನ್ನು ಅಗಲಿದ್ದಾರೆ. ಮೇ 29ರಂದು 28 ವರ್ಷದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ದುಷ್ಕರ್ಮಿಗಳು ಗುಂಡು ಹೊಡೆದು ಹತ್ಯೆ ಮಾಡಿದ್ದರು. ಅದಾದ ಬಳಿಕ ಕೇರಳದಲ್ಲಿ ಖ್ಯಾತ ಗಾಯಕ ಎಡವ ಬಶೀರ್ ಹಾಡುತ್ತಿರುವಾಗಲೇ ವೇದಿಕೆ ಮೇಲೆ ಕುಸಿದು, ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ: Camille Vasquez: ವಿಶ್ವದ ಗಮನ ಸೆಳೆದ ಜಾನಿ ವಕೀಲೆ, ₹100 ಕೋಟಿ ಗೆದ್ದು ಕೊಟ್ಟ ಕ್ಯಾಮಿಲ್ಲೆ ಮೇಲೆ ಡೆಪ್​ಗೆ​​ ಲವ್ ಆಗಿದೆಯಾ?

ಮೊನ್ನೆ ಮೊನ್ನೆ ಅಂದರೆ ಮೇ 31ರಂದು ಕೋಲ್ಕತ್ತಾ ಕಾರ್ಯಕ್ರಮದಲ್ಲಿ ಹಾಡುತ್ತಾ ರಂಜಿಸುತ್ತಿದ್ದ ಬಾಲಿವುಡ್ ಖ್ಯಾತ ಗಾಯಕ, 53 ವರ್ಷದ ಕೃಷ್ಣ ಕುಮಾರ್ ಕುನ್ನತ್ ಅಲಿಯಾಸ್ ಕೆಕೆ ಹೃದಯಾಘಾತಕ್ಕೆ ಬಲಿಯಾಗಿದ್ದರು. ಇದೀಗ ಮತ್ತೋರ್ವ ಯುವ ಗಾಯಕ ಕೊನೆಯುಸಿರೆಳೆದಿದ್ದಾರೆ, ಅದೂ ಬರೀ 22ನೇ ವಯಸ್ಸಲ್ಲಿ ಎನ್ನುವುದು ದುರಂತ.
Published by:Annappa Achari
First published: