• Home
  • »
  • News
  • »
  • entertainment
  • »
  • Deepika Padukone: ಬ್ರಹ್ಮಾಸ್ತ್ರ ಒಟಿಟಿ ಪ್ರಚಾರಕ್ಕೆ ರಣಬೀರ್ ನಕಾರ, ದೀಪಿಕಾ ತಮಾಷೆ ಮಾಡಿದ್ದೇಕೆ?

Deepika Padukone: ಬ್ರಹ್ಮಾಸ್ತ್ರ ಒಟಿಟಿ ಪ್ರಚಾರಕ್ಕೆ ರಣಬೀರ್ ನಕಾರ, ದೀಪಿಕಾ ತಮಾಷೆ ಮಾಡಿದ್ದೇಕೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದೀಪಿಕಾ ಪಡುಕೋಣೆ ಮತ್ತು ಅವರ ಪತಿ ಮತ್ತು ನಟ ರಣವೀರ್ ಸಿಂಗ್ ಅವರು ಕಾಮೆಂಟ್ ವಿಭಾಗದಲ್ಲಿ ತಮಾಷೆಯ ಎಮೋಜಿಗಳನ್ನು ಹಾಕಿದ್ದಾರೆ.

  • Share this:

ಇತ್ತೀಚೆಗೆ ನಟಿ ಆಲಿಯಾ ಭಟ್ (Alia bhatt) ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ತಮ್ಮ ಪತಿ ರಣಬೀರ್ ಕಪೂರ್ (Ranbir Kapoor) ಅವರ ‘ಬ್ರಹ್ಮಾಸ್ತ್ರ’ (Brahmastra) ಚಿತ್ರದ ಪ್ರೋಮೋಷನ್ ವೀಡಿಯೋ ಅನೇಕ ಚಿತ್ರ ತಾರೆಯರಿಗೆ ಆರಂಭದಲ್ಲಿ ಬೆರಗುಗೊಳಿಸಿದರೆ, ಕೊನೆಯಲ್ಲಿ ಅದೊಂದು ರೀತಿಯ ತಮಾಷೆಯ ವೀಡಿಯೋ ಅಂತ ತಿಳಿದು ಬಿದ್ದು ಬಿದ್ದು ನಕ್ಕಿದ್ದಾರೆ (Laugh) ಅಂತ ಹೇಳಬಹುದು.ವೀಡಿಯೋದಲ್ಲಿ ನಟ ರಣಬೀರ್ ಕಪೂರ್ ಅವರು ತಮ್ಮ ಬ್ರಹ್ಮಾಸ್ತ್ರ ಚಿತ್ರದ ಪ್ರಚಾರಕ್ಕೆ (Publicity) ನಿರಾಕರಿಸುತ್ತಿರುವುದನ್ನು ನಾವು ಮೊದಲು ನೋಡಬಹುದು.


ನವೆಂಬರ್ 4 ರಂದು ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ನಲ್ಲಿ ಬ್ರಹ್ಮಾಸ್ತ್ರ ಚಿತ್ರದ ಪ್ರಥಮ ಪ್ರದರ್ಶನ ಕಂಡಿದೆ. ರಣಬೀರ್ ಪತ್ನಿ ಮತ್ತು ನಟಿ ಆಲಿಯಾ ಅವರು ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ಮೋಜಿನ ವೀಡಿಯೋವನ್ನು ಹಂಚಿಕೊಂಡಿದ್ದಾರೆ.


ತಮಾಷೆಯ ವೀಡಿಯೋಗೆ ದೀಪಿಕಾ-ರಣವೀರ್ ಹೇಗೆ ಪ್ರತಿಕ್ರಿಯಿಸಿದ್ದಾರೆ?


ಚಿತ್ರದ ಒಟಿಟಿ ಬಿಡುಗಡೆಗೆ ಮೊದಲು ರಣಬೀರ್ ಕಪೂರ್ ಬ್ರಹ್ಮಾಸ್ತ್ರವನ್ನು ಪ್ರಚಾರ ಮಾಡಲು ನಿರಾಕರಿಸಿದ ವೀಡಿಯೋ ನೋಡಿ ನಟಿ ದೀಪಿಕಾ ಪಡುಕೋಣೆ ಮತ್ತು ಅವರ ಪತಿ ಮತ್ತು ನಟ ರಣವೀರ್ ಸಿಂಗ್ ಅವರು ಕಾಮೆಂಟ್ ವಿಭಾಗದಲ್ಲಿ ತಮಾಷೆಯ ಎಮೋಜಿಗಳನ್ನು ಹಾಕಿದ್ದಾರೆ.


ಆಲಿಯಾ 'ಬ್ರಹ್ಮಾಸ್ತ್ರ ಪಾರ್ಟ್ ಒನ್ - ಶಿವ' ಪ್ರಚಾರ ಮಾಡುವ ಬಗ್ಗೆ ರಣಬೀರ್ ದೂರು ನೀಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಿಗ್ ಬಿ ಅಮಿತಾಭ್ ಬಚ್ಚನ್, ನಟಿ ಮೌನಿ ರಾಯ್ ಮತ್ತು ತೆಲುಗು ನಟ ನಾಗಾರ್ಜುನ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ.


ವೀಡಿಯೋದಲ್ಲಿ ಏನಿದೆ ಗೊತ್ತೇ?


ಈ ಕ್ಲಿಪ್ ನಲ್ಲಿ, ರಣಬೀರ್ ಸಿನೆಮಾ ಒಟಿಟಿ ಬಿಡುಗಡೆಗೆ ಮೊದಲು ಪ್ರೇಕ್ಷಕರನ್ನು ಆಕರ್ಷಿಸಲು ಅಯಾನ್ ಮುಖರ್ಜಿ ಹೊಸ ಹಂತದ ಪ್ರಚಾರವನ್ನು ಪ್ರಾರಂಭಿಸುವ ಬಗ್ಗೆ ಫೋನ್ ನಲ್ಲಿ ಬೇರೆಯವರೊಂದಿಗೆ ಮಾತನಾಡುವಾಗ ಅಷ್ಟೊಂದು ಸಂತೋಷವಾಗಿ ಕಾಣಲಿಲ್ಲ. ಶೀರ್ಷಿಕೆಯಲ್ಲಿ "ಕಠಿಣ ಸಂಗತಿಗಳು" ಎಂದು ಬರೆಯಲಾಗಿತ್ತು. ಅರ್ಜುನ್ ಕಪೂರ್, ಜೋಯಾ ಅಖ್ತರ್ ಮತ್ತು ಸೋನಿ ರಜ್ದಾನ್ ಅವರಂತಹ ಅನೇಕ ಸೆಲೆಬ್ರಿಟಿಗಳು ಈ ವೀಡಿಯೋಗೆ ಪ್ರತಿಕ್ರಿಯಿಸಿದ್ದಾರೆ.


ಈ ಕ್ಲಿಪ್ ನೋಡಿ ನಟ ರಣವೀರ್ ಅವರು ಕಾಮೆಂಟ್ ವಿಭಾಗದಲ್ಲಿ ನಗುವ ಎಮೋಜಿಗಳನ್ನು ಹಾಕಿದರೆ, ಹೆಂಡತಿ ಮತ್ತು ನಟಿ ದೀಪಿಕಾ ನಗುವ ಮುಖದ ಎಮೋಜಿಯನ್ನು ಹಾಕಿದ್ದಾರೆ.


ಇದನ್ನೂ ಓದಿ: ಗಂಧದಗುಡಿ ಅಪ್ಪು ಕೊನೆಯ ಚಿತ್ರ ಅಲ್ಲ: ಶಿವಣ್ಣನ ಮಾತಿನಿಂದ ಅಭಿಮಾನಿಗಳಲ್ಲಿ ಹರ್ಷ!


ಈ ವೀಡಿಯೋದಲ್ಲಿ, ಚಿತ್ರದಲ್ಲಿ ಆಲಿಯಾ ತನ್ನ ಪಾತ್ರದ ಹೆಸರು, ಶಿವ ಎಂದು ಎಷ್ಟು ಬಾರಿ ಹೇಳಿದರು ಮತ್ತು ವಿವಿಧ ಕಾರ್ಯಕ್ರಮಗಳು ಮತ್ತು ಸಂವಾದಗಳಲ್ಲಿ ಚಿತ್ರದ ಪ್ರಚಾರ ಮಾಡುವಾಗ ಕೇಸರಿಯಾ ಹಾಡನ್ನು ಹಾಡುತ್ತಾ ತನ್ನ ಧ್ವನಿಯನ್ನೇ ಕಳೆದುಕೊಂಡಳು ಎಂಬುದರ ಬಗ್ಗೆ ರಣಬೀರ್ ತಮಾಷೆ ಮಾಡಿದ್ದಾರೆ.


ಬ್ರಹ್ಮಾಸ್ತ್ರದ ಪ್ರಚಾರಕ್ಕಾಗಿ ತಾನು ಹೇಗೆ ಎದುರು ನೋಡುತ್ತಿಲ್ಲ ಎಂಬುದರ ಬಗ್ಗೆ ಮಾತನಾಡಿದ ರಣಬೀರ್, ಬಹುಶಃ ಬ್ರಹ್ಮಾಸ್ತ್ರದ ಹೊರಗೆ ನಟನಿಗೆ ಯಾವುದೇ ಜೀವನವಿಲ್ಲ ಎಂದು ಅಯಾನ್ ಭಾವಿಸಿರಬಹುದು ಎಂದು ವೀಡಿಯೋದಲ್ಲಿ ಹೇಳಿದರು.


ಆಲಿಯಾ ಗರ್ಭಿಣಿಯಾಗಿದ್ದಾಳೆ ಮತ್ತು ಅವರು ತಮ್ಮ ಮಗುವಿನ ಆಗಮನವನ್ನು ಎದುರು ನೋಡುತ್ತಿದ್ದಾರೆ ಮತ್ತು ಬ್ರಹ್ಮಾಸ್ತ್ರವನ್ನು ಮತ್ತೆ ಪ್ರಚಾರ ಮಾಡಲು ಹೇಗೆ ಆಗುತ್ತದೆ. ನಾನು ಶೀಘ್ರದಲ್ಲಿಯೇ ತಂದೆಯಾಗುತ್ತಿರುವುದಾಗಿ ರಣಬೀರ್ ಹೇಳಿದರು. ನಂತರ ವೀಡಿಯೋದಲ್ಲಿ, ರಣಬೀರ್ ಗೆ ಅಯಾನ್ ಅವರಿಂದ ಕರೆ ಬಂದ ನಂತರ, ಬ್ರಹ್ಮಾಸ್ತ್ರ ಚಿತ್ರವನ್ನು ಪ್ರಚಾರ ಮಾಡಲು ತಕ್ಷಣ ಒಪ್ಪಿಕೊಂಡರು.


ಇದನ್ನೂ ಓದಿ: ತಮ್ಮ ಊಟದ ತಟ್ಟೆಯನ್ನ ತಾವೇ ತೊಳೆಯುತ್ತಿದ್ದ ಅಪ್ಪು! ಇದು ಗಂಧದಗುಡಿಯ ಮಹಾನಾಯಕನ ಸರಳ ಜೀವನ


ಬ್ರಹ್ಮಾಸ್ತ್ರ ಭಾಗ 1 ಅಯಾನ್ ಮುಖರ್ಜಿಯವರ ಯೋಜಿತ ಟ್ರಯಾಲೋಜಿಯಲ್ಲಿ ಶಿವ ಎಂಬ ಚಾಪ್ಟರ್ ಮೊದಲನೆಯದ್ದು. ರಣವೀರ್ ಮತ್ತು ದೀಪಿಕಾ ಟ್ರಯಾಲಜಿಯ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಬಲವಾಗಿ ಹರಿದಾಡುತ್ತಿವೆ. ದೀಪಿಕಾ, ಶಾರುಖ್ ಖಾನ್ ಮತ್ತು ಡಿಂಪಲ್ ಕಪಾಡಿಯಾ ಅವರು ಮೊದಲ ಭಾಗದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು ಮತ್ತು ಇದು ವಿಶ್ವದಾದ್ಯಂತ 425 ಕೋಟಿ ರೂಪಾಯಿಯ ವ್ಯವಹಾರವನ್ನು ಮಾಡಿತ್ತು.

First published: