ಕತ್ರಿನಾ ಹುಟ್ಟುಹಬ್ಬಕ್ಕೆ ಭಾವಾನಾತ್ಮಕ ಪೋಸ್ಟ್ ಬರೆದ​ ಮಾಡಿದ ದೀಪಿಕಾ ಪಡುಕೋಣೆ!

news18
Updated:July 17, 2018, 7:37 PM IST
ಕತ್ರಿನಾ ಹುಟ್ಟುಹಬ್ಬಕ್ಕೆ ಭಾವಾನಾತ್ಮಕ ಪೋಸ್ಟ್ ಬರೆದ​ ಮಾಡಿದ ದೀಪಿಕಾ ಪಡುಕೋಣೆ!
news18
Updated: July 17, 2018, 7:37 PM IST
ನ್ಯೂಸ್​ 18 ಕನ್ನಡ

ಸ್ಟಾರ್ ಹಾಗೂ ಸೆಲೆಬ್ರಿಟಿಗಳ ಹುಟ್ಟುಹಬ್ಬ ಎಂದರೆ ಸಾಕು, ಅಭಿಮಾನಿಗಳಿಗೆ ಹಬ್ಬ. ಆದರೆ ಬಿ-ಟೌನ್​ನಲ್ಲಿ ಸಮಕಾಲೀನ ನಾಯಕಿಯರ ಹುಟ್ಟುಹಬ್ಬಕ್ಕೆ ಮತ್ತೊಬ್ಬ ನಾಯಕಿ ಹೃದಯಪೂರ್ವಕವಾಗಿ ಶುಭಾಷಯ ಕೋರುವುದು ನಿಜಕ್ಕೂ ಅಪರೂಪ. ಕಾರಣ ಅಲ್ಲಿ ಸಿನಿಮಾ ಹಾಗೂ ಪ್ರತಿಷ್ಠೆಯ ವಿಷಯದಿಂದಾಗಿ ನಾಯಕಿಯರ ನಡುವೆಯೇ ಕೋಳಿ ಜಗಳ ಸಾಮಾನ್ಯವಾಗಿ ಇರುತ್ತದೆ. ಹೀಗಿರುವಾಗ ಯಾರಾದರೂ ಸಹ ಕಲಾವಿದರ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದರೆ ಅದೇ ದೊಡ್ಡ ಸುದ್ದಿಯಾಗುತ್ತದೆ.

ಬಾಲಿವುಡ್ ಅಂಗಳದಲ್ಲಿ ನಿನ್ನೆಯಷ್ಟೆ (ಜು.16) ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಗ್ಲಾಮರ್ ಬ್ಯೂಟಿ ಕತ್ರಿನಾ ಕೈಫ್​.  ತನ್ನ ನಟನೆ ಮೂಲಕವೇ ಪ್ರೇಕ್ಷಕರ ಮನಸ್ಸು ಗೆದ್ದಿರೋ ಇವರು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಶುಭ ಸಂದರ್ಭದಲ್ಲಿ ನಟಿ ದೀಪಿಕಾ ಪಟುಕೋಣೆ ಕ್ಯಾಟ್​ಗೆ ಹುಟ್ಟುಹಬ್ಬದ ಅಂಗವಾಗಿ ಸಂತೋಷ ಹಾಗೂ ಆರೋಗ್ಯದಿಂದಿರುವಂತೆ ಹಾರ್ಟ್​ ಇಮೋಜಿಯೊಂದಿಗೆ ಶುಭಾಷಯದ ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಸಾಕಷ್ಟು ಸ್ಟಾರ್​ಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇವಲ ದೀಪಿಕಾ ಮಾತ್ರವಲ್ಲದೆ  ಅಲಿಯಾ ಭಟ್, ಸುಶಾಂತ್ ಸಿಂಗ್, ಸಲ್ಮಾನ್ ಖಾನ್, ಅಮೀರ್​ ಹಾಗೂ ಶಾರುಖ್​ ಸೇರದಂತೆ ಈಗಾಗಲೇ ಹಲವರು ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ಅವರಿಗೆ ಶುಭಾಷಯಗಳ ಮಹಾ ಪೂರವನ್ನೆ ಹರಿಸಿದ್ದಾರೆ, ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕನಸಿನ ರಾಣಿಗೆ ಶುಭಕೋರಿ ಸಂತಸ ಪಟ್ಟಿದ್ದಾರೆ. ಜತೆಗೆ ಕತ್ರಿನಾ ಅಭಿನಯಿಸುತ್ತಿರುವ 'ಝೀರೋ' ಮತ್ತು 'ಠಗ್ಸ್ ಆಫ್ ಹಿಂದೂಸ್ತಾನ್' ಚಿತ್ರ ತಂಡಗಳು ಕತ್ರಿನಾಗೆ ವಿಶೇಷವಾಗಿ ವಿಶ್ ಮಾಡಿವೆ.

 

 
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ