Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಬೇಕಂತೆ ಮೂರು ಮಕ್ಕಳು..!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ತಮಗೆ ಮೂವರು ಮಕ್ಕಳನ್ನು ಹೊಂದುವ ಆಸೆಯಿದೆ. ಹಾಗಾದಾಗ ಮಾತ್ರ ಕುಟುಂಬ ಸಂಪೂರ್ಣವಾಯಿತೆಂದು ಭಾವಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ದೀಪಿಕಾ ಪಡುಕೋಣೆ.

ದೀಪಿಕಾ ಪಡುಕೋಣೆ.

  • Share this:
ಬೆಂಗಳೂರು ಹುಡುಗಿ ದೀಪಿಕಾ ಪಡುಕೋಣೆ ಮಾಡೆಲಿಂಗ್​ ಮಾಡುತ್ತಲೇ ಬಣ್ಣದ ಜಗತ್ತಿಗೆ ಕಾಲಿಟ್ಟವರು. ಕನ್ನಡದಲ್ಲಿ ಉಪೇಂದ್ರ ಅವರೊಂದಿಗೆ ಐಶ್ವರ್ಯಾ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ನಾಯಕಿಯಾಗಿ ಪರಿಚಯವಾದವರು. ನಂತರ ಬಾಲಿವುಡ್​ನಲ್ಲಿ ಓಂ ಶಾಂತಿ ಓಂ ಸಿನಿಮಾದಲ್ಲಿ ಶಾರುಖ್​ ಖಾನ್​ಗೆ ನಾಯಕಿಯಾಗಿ ನಟಿಸುವ ಮೂಲಕ ಬಾಲಿವುಡ್​ ಸಿನಿಪ್ರಿಯರ ಮನ ಗೆದ್ದವರು. ರಣವೀರ್​ ಸಿಂಗ್​ ಅವರನ್ನು ಮದುವೆಯಾದ ನಂತರವೈ ಸಿನಿಮಾ ಬಗೆಗಿನ ಪ್ರೀತಿ ಕಡಿಮೆಯಾಗಿಲ್ಲ. ಸಿಮಾನಗಳ ಬಗೆಗಿನ ಬದ್ಧತೆ ದೀಪಿಕಾ ಅವರ ಯಶಸ್ಸಿಗೆ ಕಾರಣವಾಗಿದೆ. ಈಗ ಅಭಿನಯದ ಜೊತೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಮದುವೆಯಾದ ನಂತರವೂ ದೀಪಿಕಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿಗೆ ಮಕ್ಕಳೆಂದರೆ ತುಂಬಾ ಇಷ್ಟವಂತೆ. ಅಲ್ಲದೆ ತಮಗೆ ಎಷ್ಟು ಮಕ್ಕಳು ಬೇಕು ಎಂದು ಹೇಳುವ ಮೂಲಕ ತಾಯಿಯಾಗುವ ಬಗ್ಗೆ ಸುಳಿವು ನೀಡಿದ್ದಾರಾ ನೀಳ ಕಾಲಿನ ಸುಂದರಿ..! 

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ತಮಗೆ ಮೂವರು ಮಕ್ಕಳನ್ನು ಹೊಂದುವ ಆಸೆಯಿದೆ. ಹಾಗಾದಾಗ ಮಾತ್ರ ಕುಟುಂಬ ಸಂಪೂರ್ಣವಾಯಿತೆಂದು ಭಾವಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ದೀಪಿಕಾ ಪಡುಕೋಣೆ ತಮ್ಮ ವೃತ್ತಿ ಜೀವನದ ಕುರಿತು ಹೊಂದಿರುವ ಬದ್ಧತೆಯ ಬಗ್ಗೆ ಮಾತನಾಡುವುದಾದರೆ, ಅದರಲ್ಲಿ ಎರಡು ಮಾತಿಲ್ಲ. ಅದ್ಭುತ ನಟಿಯಾಗಿರುವ ದೀಪಿಕಾ, ಸಿನಿಮಾ ಪಯಣವನ್ನು ಮಾತ್ರವಲ್ಲ, ತಮ್ಮದೇ ಲಿವ್ ಲವ್ ಲಾಫ್ ಸಂಸ್ಥೆಯ ಮೂಲಕ ಮಾನಸಿಕ ಆರೋಗ್ಯದ ಕುರಿತ ಸಂಭಾಷಣೆಗಳ ಪ್ರಚಾರವನ್ನು ಕೂಡ ಮುಂದುವರೆಸಿದ್ದಾರೆ. ತಮ್ಮ ಮುಂದಿನ ಹತ್ತು ವರ್ಷಗಳ ಯೋಜನೆ ಏನು ಎಂಬುದನ್ನು ಅವರು 2013ರಲ್ಲಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

Happy Birthday Deepika Padukone, Deepika Padukone 35th Birthday, Deepika Instagram, Deepika Padukone Twitter, Deepika deleted her instagram posters, ದೀಪಿಕಾ ಪಡುಕೋಣೆ, ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನ ಪೋಸ್ಟ್​ ಡಿಲೀಟ್​ ಮಾಡಿದ ದೀಪಿಕಾ ಪಡುಕೋಣೆ, Deepika padukone deleted her Tweets, Deepika Padukone, Ranveer Singh, NCB, Sushant Singh Rajput case, Bollywood, Ranveer Singhs application from NCB, Deepika suffers from anxiety and gets panic attacks, Ranveer wants to stay with Deepika during interrogation, Bollywood, Mumbai, News 18, Network 18, ದೀಪಿಕಾ ಪಡುಕೋಣೆ, ರಣವೀರ್​ ಸಿಂಗ್​, ಮಾದಕ ವಸ್ತು ಪ್ರಕರಣ, ಬಾಲಿವುಡ್​, ಡ್ರಗ್ಸ್​ ಮಾಫಿಯಾದಲ್ಲಿ ದೀಪಿಕಾ ಪಡುಕೋಣೆ ಹೆಸರು
ದೀಪಿಕಾ ಪಡುಕೋಣೆ


ಸಿನಿಮಾ ವಿಮರ್ಶಕ ರಾಜೀವ್ ಮಸಂದ್ ಅವರಿಗೆ, 2013ರಲ್ಲಿ ನೀಡಿರುವ ಸಂದರ್ಶನವೊಂದರಲ್ಲಿ, ತಾನು ಸಿನಿಮಾ ನಟಿ ಆಗಿಲ್ಲದೆ ಇದ್ದಿದ್ದರೆ, ಏನಾಗಿರುತ್ತಿದ್ದೆ ಎಂಬುದು ತನಗೇ ತಿಳಿದಿಲ್ಲ, ಮಕ್ಕಳು ಎಂದರೆ ನನಗಿಷ್ಟ, ಹಾಗಾಗಿ ಬಹುಶ:, ಒಂದಷ್ಟು ಮಕ್ಕಳ ಜೊತೆ ಇರುತ್ತಿದ್ದೆ ಅನಿಸುತ್ತದೆ ಎಂದು ಹೇಳಿದ್ದರು. ಆ ಸಂದರ್ಶನದಲ್ಲಿ ದೀಪಿಕಾ, ತನ್ನ ಮುಂದಿನ ಕನಸುಗಳ ಬಗ್ಗೆ ಮಾತನಾಡುತ್ತಾ, ಬಹುಶ: ತಾನು ಮೂರು ಮಕ್ಕಳನ್ನು ಹೊಂದುವೆ, ಅವರನ್ನು ಕೂಡ ಶೂಟ್‍ಗೆ ಕರೆದುಕೊಂಡು ಹೋಗಲು ಸಾಧ್ಯವಾಗುವ ಮಟ್ಟಿಗೆ ಕೆಲಸ ಮಾಡುವೆ. ನನಗೆ ನನ್ನದೇ ಆದ ಪುಟ್ಟ ಸಂಸಾರವನ್ನು ಹೊಂದಬೇಕೆಂದು ತುಂಬಾ ಆಸೆಯಿದೆ. ಅದೇನೇ ಇದ್ದರೂ, ಇನ್ನು ಮುಂದೆಯೂ ಕೂಡ ಈಗ ಮಾಡುತ್ತಿರುವ ಕೆಲಸವನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದರು.

ಇದನ್ನೂ ಓದಿ: ಬಾಲಿವುಡ್​ ಸಿನಿಮಾದಲ್ಲಿ ಕನ್ನಡದ ನಟ ಜೆಕೆ: ಕ್ರಿಕೆಟರ್​ ಪಾತ್ರದಲ್ಲಿ ಕಾರ್ತಿಕ್​ ಜಯರಾಮ್

2018ರಲ್ಲಿ ದೀಪಿಕಾ, ಬಾಲಿವುಡ್‍ನ ಜನಪ್ರಿಯ ನಟ ರಣ್‍ವೀರ್ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳ ಮೂಲಕ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ರಣ್‍ವೀರ್ ಮತ್ತು ದೀಪಿಕಾ ಜೊತೆಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

Deepika Padukone shared her new year photo taken at Ranatambore ae, Ranveer Singh, Deepika Padukone, Ranveer Deepika wedding anniversary, bollywood, ranveer singh and deepika padukone shares unseen romantic photos on their second wedding anniversary ae, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್​, ಎರಡನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ದೀಪಿಕಾ-ರಣವೀರ್ ಸಿಂಗ್​, ಬಾಲಿವುಡ್​ ಸೆಲೆಬ್ರಿಟಿ ಜೋಡಿ, Deepika Padukone, Ranveer Singh, Deepika Ranveer, Deepika Ranthambore Trip, Deepika Ranthambore pics,, Bollywood, Deepika Padukone, Instagram, Instagram photos, Twitter, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್​, ಹೊಸ ವರ್ಷಾಚರಣೆ, ರಣತಂಬೋರ್​ನಲ್ಲಿ ದೀಪಿಕಾ, ಹೊಸ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ
ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ


ಮದುವೆಗೆ ಮುನ್ನ 2018ರಲ್ಲಿ, ಬ್ರಿಟಿಷ್ ಟ್ಯಾಬ್ಲ್ಯಾಡ್‌ ಈವ್‍ನಿಂಗ್ ಸ್ಟಾಂಡರ್ಡ್‍ಗೆ ನೀಡಿರುವ ಸಂದರ್ಶನದಲ್ಲಿ, ಸಂಬಂಧದ ವಿಷಯದ ಕುರಿತು ಹೇಳುವುದಾದರೆ ತನ್ನ ಹೆತ್ತವರ ಮದುವೆ ನನಗೆ ಸದಾ ಮಾದರಿಯಾಗಿರುತ್ತದೆ ಎಂದು ದೀಪಿಕಾ ಪಡುಕೋಣೆ ಹೇಳಿದ್ದರು. ತನ್ನ ತಂದೆ ತಾಯಿಗಳ ದಾಂಪತ್ಯ ಮತ್ತು ಅವರು ಕುಟುಂಬವನ್ನು ಇದುವರೆಗೆ ಮುನ್ನಡೆಸಿಕೊಂಡು ಬಂದಿರುವ ರೀತಿ ತನಗೆ ದಾಂಪತ್ಯ ಬದುಕಿಗೆ ಕಾಲಿಡಲು ಸ್ಫೂರ್ತಿ ನೀಡಿದೆ. ನನ್ನ ಪಾಲಿಗೆ ಅವರಿಬ್ಬರು ಸದಾ ಆದರ್ಶವಾಗಿಯೇ ಇರುತ್ತಾರೆ ಎಂದು ದೀಪಿಕಾ ತನ್ನ ಪೋಷಕರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಇದನ್ನೂ ಓದಿ: Pranitha Subhash: ಒಟಿಟಿಯಲ್ಲಿ ರಿಲೀಸ್ ಆಗಲಿದೆಯಂತೆ ಕನ್ನಡದ ನಟಿ ಪ್ರಣೀತಾ ಅಭಿನಯದ ಈ ಹೊಸ ಸಿನಿಮಾ..!

ಇದೀಗ ಮತ್ತೆ, ದೀಪಿಕಾ ಪಡುಕೋಣೆ ಮಕ್ಕಳ ಹೊಂದಬೇಕೆಂಬ ತನ್ನ ಬಯಕೆಯನ್ನು ಹೇಳಿಕೊಂಡಿದ್ದಾರೆ. ಅವರಿಗೆ ತನ್ನದೇ ಆದ ಪುಟ್ಟ ಸಂಸಾರವನ್ನು ಹೊಂದುವ ಆಸೆಯಿದೆಯಂತೆ. ಸದ್ಯದಲ್ಲಿಯೇ ಅವರು, ಶಕುನ್ ಬಾತ್ರಾ ಅವರ, ಸಿದ್ದಾಂತ್ ಚತುರ್ವೇದಿ ಮತ್ತು ಅನನ್ಯ ಪಾಂಡೆ ಅಭಿನಯದ, ಹೆಸರಿಡದ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ಶಾರುಕ್ ಖಾನ್ ಮತ್ತು ಜಾನ್ ಅಬ್ರಹಾಂ ನಟನೆಯ, ಯಶ್‍ರಾಜ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಪಠಾಣ್ ಸಿನಿಮಾದ ಚಿತ್ರೀಕರಣದಲ್ಲಿ ಕೂಡ ದೀಪಿಕಾ ತೊಡಗಿಕೊಂಡಿದ್ದಾರೆ.
Published by:Anitha E
First published: