Deepika Padukone: ಮಾಜಿ ಪ್ರಿಯಕರನ ಜತೆ ನಟಿಸಲ್ಲ ಎಂದ ದೀಪಿಕಾ ಪಡುಕೋಣೆ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ..!

Deepika Padukone: ರಣವೀರ್​ ಸಿಂಗ್​ ಅವರನ್ನು ವಿವಾಹವಾದ ನಂತರ ದೀಪಿಕಾ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಮುಂದುವರೆಸುವುದಾಗಿ ತಿಳಿಸಿದ್ದರು. ಅಂತೆಯೇ ಇತ್ತೀಚೆಗಷ್ಟೆ ತಮ್ಮ ಮಾಜಿ ಪ್ರಿಯಕರನೊಂದಿಗೆ ಹೊಸ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಈ ಕುರಿತಂತೆ ದೀಪಿಕಾ ಒಂದು ಶಾಕಿಂಗ್​ ಸುದ್ದಿ ಕೊಟ್ಟಿದ್ದಾರೆ. ಹೌದು, ದೀಪಿಕಾ ಮಾಜಿ ಪ್ರಿಯಕರ ರಣಬೀರ್​ ಕಪೂರ್​ ಜತೆ ಅಭಿನಯಿಸುತ್ತಿಲ್ಲವಂತೆ. ಇದಕ್ಕೆ ಕಾರಣವೂ ಇದೆ ಗೊತ್ತಾ..?  

Anitha E | news18
Updated:August 8, 2019, 1:06 PM IST
Deepika Padukone: ಮಾಜಿ ಪ್ರಿಯಕರನ ಜತೆ ನಟಿಸಲ್ಲ ಎಂದ ದೀಪಿಕಾ ಪಡುಕೋಣೆ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ..!
ರಣಬೀರ್​-ದೀಪಿಕಾ
  • News18
  • Last Updated: August 8, 2019, 1:06 PM IST
  • Share this:
ರಣಬೀರ್​ ಕಪೂರ್​ ಹಾಗೂ ದೀಪಿಕಾ ಅವರ ಲವ್​ ಸ್ಟೋರಿ, ಬ್ರೇಕಪ್​ ಎಲ್ಲವೂ ಗೊತ್ತಿರುವ ಸಂಗತಿ. ಆದರೆ ಇದನ್ನು ದೀಪಿಕಾ ಎಂದೂ ತಮ್ಮ ವೃತ್ತಿಯ ನಡುವೆ ತಂದಿರಲಿಲ್ಲ. ಬ್ರೇಕಪ್​ ಆದ ನಂತರವೂ ರಣಬೀರ್​ ಕಪೂರ್​ ಜತೆ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ ದೀಪಿಕಾ.

ರಣವೀರ್​ ಸಿಂಗ್​ ಅವರನ್ನು ವಿವಾಹವಾದ ನಂತರ ದೀಪಿಕಾ ಸಿನಿಮಾಗಳಲ್ಲಿ ಅಭಿನಯಿಸುವುದನ್ನು ಮುಂದುವರೆಸುವುದಾಗಿ ತಿಳಿಸಿದ್ದರು. ಅಂತೆಯೇ ಇತ್ತೀಚೆಗಷ್ಟೆ ತಮ್ಮ ಮಾಜಿ ಪ್ರಿಯಕರನೊಂದಿಗೆ ಹೊಸ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಈ ಕುರಿತಂತೆ ದೀಪಿಕಾ ಒಂದು ಶಾಕಿಂಗ್​ ಸುದ್ದಿ ಕೊಟ್ಟಿದ್ದಾರೆ.

deepika ranbir singh
ದೀಪಿಕಾ ಹಾಗೂ ರಣಬೀರ್​ ಸಿಂಗ್​


ಹೌದು, ದೀಪಿಕಾ ಮಾಜಿ ಪ್ರಿಯಕರ ರಣಬೀರ್​ ಕಪೂರ್​ ಜತೆ ಅಭಿನಯಿಸುತ್ತಿಲ್ಲವಂತೆ. ಇದಕ್ಕೆ ಕಾರಣವೂ ಇದೆ. ದೀಪಿಕಾ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವವ ಜತೆ ಸಿನಿಮಾ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Ranbeer singh and deepika and Luv Kumar
ದೀಪಿಕಾ ಪಡುಕೋಣೆ, ರಬೀರ್​ ಕಪೂರ್​ ಹಾಗೂ ವಲ್​ ಕುಮಾರ್​


ದೀಪಿಕಾ ಹೆಳಿಕೆಗೂ ರಣಬೀರ್​ ಕಪೂರ್​ಗೂ ಏನು ಸಂಬಂಧ ಅಂತೀರಾ... ಸಂಬಂಧ ಇದೆ. ರಣಬೀರ್​ ಹಾಗೂ ದೀಪಿಕಾ ಅಭಿನಯಿಸಬೇಕಿದ್ದ ಹೊಸ ಸಿನಿಮಾ ವಲ್​ ರಂಜನ್​ ಅವರದ್ದು. ಇವರ ಮೇಲೆ ಕಳೆದ ವರ್ಷ #MeToo ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ: Kurukshetra: ಮಧ್ಯರಾತ್ರಿಯಿಂದಲೇ ಆರಂಭವಾಗಲಿದೆ ಕುರುಕ್ಷೇತ್ರದ ದುರ್ಯೋಧನನ ಅಬ್ಬರ..!ಈ ಕಾರಣದಿಂದ ದೀಪಿಕಾ ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದ್ದಂತೆಯೇ ದೀಪಿಕಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ #NotMyDeepika ಎಂದು ಅಭಿಯಾನ ಆರಂಭಿಸಿ, ಅದು ಟ್ರೆಂಡ್​ ಆಗಿತ್ತು.

ಇದನ್ನೂ ಓದಿ: Priyanka Chopra: ಲಾಸ್​ ಎಂಜಲೀಸ್​ನಲ್ಲಿ ಪ್ರಿಯಾಂಕಾ - ನಿಕ್​ರ ಹೊಸ ಮನೆ: ಬಂಗಲೆಯ ಬೆಲೆ ಕೇಳಿದ್ರೆ ದಂಗಾಗುತ್ತೀರಾ​..!

ಈ ಕುರಿತಂತೆ ಇತ್ತೀಚೆಗೆ ದೀಪಿಕಾ ಅವರು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದು, ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವವರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲಿದೆ ರಣಬೀರ್​ ಜತೆ ಅಭಿನಯಿಸುತ್ತಿದ್ದ ಸಿನಿಮಾಗೆ ದೀಪಿಕಾ ನೋ ಎಂದಿದ್ದಾರೆ ಎಂದಾಯ್ತು.

Amy Jackson: ಅರೆನಗ್ನವಾಗಿ ಕ್ಯಾಮೆರಾಗೆ ಪೋಸ್​ ಕೊಟ್ಟ ಕಿಚ್ಚನ ನಾಯಕಿ..!

First published: August 8, 2019, 1:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading