Deepika Padukone: ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣಿಸಿದ ದೀಪಿಕಾ! ವಿಡಿಯೋ ವೈರಲ್

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

ಸೆಲೆಬ್ರಿಟಿಗಳು ಖಾಸಗಿ ವಿಮಾನದಲ್ಲಿ ಹಾರಾಡೋದನ್ನು ನೋಡಿರಬಹುದು. ಬ್ಯುಸಿನೆಸ್ ಕ್ಲಾಸ್​​ನಲ್ಲಿ ಸಾಮಾನ್ಯವಾಗಿ ಓಡಾಡುತ್ತಾರೆ. ಆದರೆ ನಟಿ ದೀಪಿಕಾ ಪಡುಕೋಣೆ ಎಕಾನಮಿ ಕ್ಲಾಸ್​ನಲ್ಲಿ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದರು.

  • News18 Kannada
  • 5-MIN READ
  • Last Updated :
  • Bangalore, India
  • Share this:

ದೀಪಿಕಾ ಪಡುಕೋಣೆ (Deepika Padukone) ಅವರು ಈಗ ಇಂಟರ್​​ನೆಟ್​ನಲ್ಲಿ ಟ್ರೆಂಡ್ ಆಗುತ್ತಿದ್ದಾರೆ. ಇದಕ್ಕೆ ಕಾರಣ ಪಠಾಣ್ (Pathaan) ಸಿನಿಮಾ ಅಲ್ಲ. ಆದರೆ ನಟಿಯ ವಿಡಿಯೋ ವೈರಲ್ (Video Viral) ಆಗಿದ್ದಷ್ಟೇ ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ (Social Media) ಟ್ರೆಂಡ್ ಆಗಿದ್ದಾರೆ. ನಟಿ ಇತ್ತೀಚೆಗೆ ಎಕಾನಮಿ ಕ್ಲಾಸ್​ನಲ್ಲಿ (Economy Class) ಪ್ರಯಾಣಿಸಿದ್ದಾರೆ. ನಟಿ ಸಾಧಾರಣ ವ್ಯಕ್ತಿಯಂತೆ ವಿಮಾನದಲ್ಲಿ (Flight) ಓಡಾಡುವುದು ಕಂಡುಬಂದಿದೆ. ಆರೆಂಜ್ ಕಲರ್ ಬಟ್ಟೆ ಧರಿಸಿದ್ದ ನಟಿ ಮ್ಯಾಚಿಂಗ್ ಗಾಗಲ್ಸ್ ಹಾಗೂ ಕ್ಯಾಪ್ ಧರಿಸಿದ್ದರು. ಸಹಪ್ರಯಾಣಿಕರು ಅಚ್ಚರಿಯಿಂದ ನಟಿಯನ್ನು (Actress) ನೋಡುತ್ತಿರುವುದು ಕಂಡುಬಂತು.


ಪ್ರಯಾಣಿಕರೊಬ್ಬರು ಹಾಯ್ ದೀಪಿಕಾ ಎಂದು ಕರೆಯುತ್ತಿದ್ದದ್ದು ಕೇಳಿಸಿದೆ. ಆದರೆ ನಟಿ ಇದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ದೀಪಿಕಾ ಅವರು ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣಿಸಿದ್ದನ್ನು ಅಭಿಮಾನಿಯೊಬ್ಬರು ವಿಡಿಯೋ ಮಾಡಿದ್ದಾರೆ. ಇತರ ಸ್ಟಾರ್ ನಟರೂ ಹೀಗೆ ಪ್ರಯಾಣಿಸಬೇಕೇ? ನೀವೇನು ಹೇಳ್ತೀರಿ ಎಂದು ಪ್ರಶ್ನಿಸಿದ್ದಾರೆ.ಸಿನಿಮಾ ಸೆಲೆಬ್ರಿಟಿ ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಕತ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಎಕಾನಮಿ ಕ್ಲಾಸ್​ನಲ್ಲಿ ಟ್ರಾವೆಲ್ ಮಾಡಿ ಅಚ್ಚರಿ ಮೂಡಿಸಿದ್ದರು.ಕಾರ್ತಿಕ್ ಆರ್ಯನ್ ಕೂಡಾ ಎಕಾನಮಿ ಕ್ಲಾಸ್ ಫ್ಲೈಟ್​ನಲ್ಲಿ ಪ್ರಯಾಣಿಸಿ ಸುದ್ದಿಯಾಗಿದ್ದರು. ನಟ ಸಹಪ್ರಯಾಣಿಕರಿಗೆ ಹಾಯ್ ಹೇಳಿ ಅವರೊಂದಿಗೆ ಸೆಲ್ಫಿಗೂ ಪೋಸ್ ಕೊಟ್ಟಿದ್ದರು.ದೀಪಿಕಾ ಪಡುಕೋಣೆ ಅವರು ಸದ್ಯ ಪಠಾಣ್ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಶಾರುಖ್ ಖಾನ್ ಹಾಗೂ ಜಾನ್ ಅಬ್ರಹಾಂ ಜೊತೆ ನಟಿಸಿದ ದೀಪಿಕಾ ಅವರ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ಈಗಾಗಲೇ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.


ಗೆಹರಾಯಿಯಾ ಕ್ಲಿಕ್ ಆಗಲಿಲ್ಲ


ಗೆಹರಾಯಿಯಾ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿದರೂ ಸಿನಿಮಾ ಅಷ್ಟು ಹಿಟ್ ಆಗಲಿಲ್ಲ. ಇದರಲ್ಲಿ ಅನನ್ಯಾ ಪಾಂಡೆ ಕೂಡಾ ನಟಿಸಿದ್ದರು. ಆದರೆ ಈ ಸಿನಿಮಾ ಫ್ಲಾಪ್ ಆಯಿತು. ಆದರೆ ಅದರ ನಂತರ ದೀಪಿಕಾ ಪಡುಕೋಣೆ ಶಾರುಖ್ ಜೊತೆ ತೆರೆ ಹಂಚಿಕೊಂಡು ಭರ್ಜರಿ ಹಿಟ್ ಕೊಟ್ಟರು. ಈ ಮೂಲಕ ಕಿಂಗ್ ಖಾನ್ ಜೊತೆ ತಮ್ಮ ಕಾಂಬಿನೇಷನ್ ಫೇಲ್ ಆಗಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Published by:Divya D
First published: