HOME » NEWS » Entertainment » DEEPIKA PADUKONE STEPS DOWN AS MAMI CHAIRPERSON CITING CURRENT SLATE OF WORK MAK

ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್‌ನ (ಮಾಮಿ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ದೀಪಿಕಾ ಪಡುಕೋಣೆ

ದೀಪಿಕಾ ಪ್ರಸ್ತುತ ಹೆಚ್ಚು ಪ್ರಾಜೆಕ್ಟ್‌ಗಳಲ್ಲಿ ಸಕ್ರಿಯರಾಗಿದ್ದಾರೆ.‌ ಶಕುನ್ ಬಾತ್ರಾ ಅವರ ಹೆಸರಿಡದ ಚಿತ್ರದಲ್ಲಿ, ಶಾರುಖ್ ಖಾನ್ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೃತಿಕ್ ರೋಷನ್, ಬಾಹುಬಲಿ ನಟ ಪ್ರಭಾಸ್ ಅವರೊಂದಿಗೆ ಮತ್ತೊಂದು ಚಿತ್ರದಲ್ಲೂ ಕೆಲಸ ಮಾಡಲಿದ್ದಾರೆ.

news18-kannada
Updated:April 12, 2021, 6:40 PM IST
ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್‌ನ (ಮಾಮಿ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ.
  • Share this:
ವೃತ್ತಿಪರ ಬದ್ಧತೆಗಳನ್ನು ಉಲ್ಲೇಖಿಸಿರುವ ದೀಪಿಕಾ ಪಡುಕೋಣೆ ಮಾಮಿ ಅಥವಾ ಮುಂಬೈ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ದೀಪಿಕಾ ಪಡುಕೋಣೆ 2019 ರಲ್ಲಿ ಮಾಮಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಆದರೆ, ಇದೀಗ ದಿಢೀರೆಂದು ಆ ಸ್ಥಾನದಿಂದ ಕೆಳಗಿಳಿದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಹಿತಿ ನೀಡಿರುವ ದೀಪಿಕಾ ಪಡುಕೋಣೆ, "ಮಾಮಿ ಮಂಡಳಿಯಲ್ಲಿರುವುದು ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದು ಬಹಳ ಉತ್ತಮ ಅನುಭವವಾಗಿದೆ. ಒಬ್ಬ ಕಲಾವಿದೆಯಾಗಿ, ಪ್ರಪಂಚದಾದ್ಯಂತದ ಸಿನೆಮಾ ಮತ್ತು ಪ್ರತಿಭೆಗಳನ್ನು ನನ್ನ ಎರಡನೇ ಮನೆಯಾದ ಮುಂಬೈಗೆ ಕರೆತರುವುದು ಉತ್ತೇಜನಕಾರಿ ವಿಷಯವಾಗಿತ್ತು. ಮಾಮಿಯೊಂದಿಗಿನ ಬಾಂಧವ್ಯವು ಜೀವಿತಾವಧಿಯಲ್ಲಿ ಉಳಿಯುತ್ತದೆ" ಎಂದು ಅಭಿಪ್ರಾಯಿಸಿದ್ದಾರೆ.

Deepika-PadukoneInstagram
ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಂ.


"ನನ್ನ ಪ್ರಸ್ತುತ ಕೆಲಸದ ಒತ್ತಡದಿಂದ, ಮಾಮಿಗೆ ಅಗತ್ಯವಿರುವ ಗಮನ ನೀಡಲು ನನಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಾನು ಈ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ" ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

ನಮ್ಮ ಒಂಟಿತನವನ್ನು ಕಡಿಮೆ ಮಾಡುವ ಶಕ್ತಿ ಸಿನೆಮಾಕ್ಕೆ ಇದೆ ಎಂದು ನಟಿ ದೀಪಿಕಾ ಹೇಳಿದ್ದಾರೆ. 2019 ರಲ್ಲಿ ಮಾಮಿ ಚಲನಚಿತ್ರೋತ್ಸವದ ಅಧ್ಯಕ್ಷೆಯಾಗಿ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Shreya Ghoshal: ವಿಭಿನ್ನವಾಗಿ ಬೇಬಿ ಶವರ್​ ಆಚರಿಸಿಕೊಂಡ ಗಾಯಕಿ ಶ್ರೇಯಾಗೆ ಬಹುಪರಾಕ್​​!

ದೀಪಿಕಾ ಪ್ರಸ್ತುತ ಹೆಚ್ಚು ಪ್ರಾಜೆಕ್ಟ್‌ಗಳಲ್ಲಿ ಸಕ್ರಿಯರಾಗಿದ್ದಾರೆ.‌ ಶಕುನ್ ಬಾತ್ರಾ ಅವರ ಹೆಸರಿಡದ ಚಿತ್ರದಲ್ಲಿ, ಶಾರುಖ್ ಖಾನ್ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೃತಿಕ್ ರೋಷನ್, ಬಾಹುಬಲಿ ನಟ ಪ್ರಭಾಸ್ ಅವರೊಂದಿಗೆ ಮತ್ತೊಂದು ಚಿತ್ರದಲ್ಲೂ ಕೆಲಸ ಮಾಡಲಿದ್ದಾರೆ.
Youtube Video
ಇದಲ್ಲದೆ ದೀಪಿಕಾ ಪಡುಕೋಣೆ ’ದಿ ಇಂಟರ್ನ್’ ಚಿತ್ರದ ಬಾಲಿವುಡ್ ರಿಮೇಕ್ ಸಹ ಹೊಂದಿದ್ದಾರೆ. ಇದರಲ್ಲಿ ಅಮಿತಾಬ್ ಬಚ್ಚನ್ ಎದುರು ಮತ್ತೊಮ್ಮೆ ನಟಿಸಲಿದ್ದಾರೆ. ಇವರಿಬ್ಬರು ಈ ಹಿಂದೆ ಪಿಕು ಚಿತ್ರದಲ್ಲಿ ಕೆಲಸ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದ ತಾನು ಮಾಮಿಗೆ ಸಮಯ ನೀಡಲಾಗುತ್ತಿಲ್ಲ ಎಂದು ರಾಜೀನಾಮೆ ನೀಡಿದ್ದಾರೆ.
Published by: MAshok Kumar
First published: April 12, 2021, 6:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories