1983ರಲ್ಲಿ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ (World Cup) ಗೆದ್ದ ಘಟನೆಯನ್ನು ಆಧರಿಸಿ ‘83’ (83 Movie) ಸಿನಿಮಾ ಸಿದ್ಧಗೊಂಡಿದೆ. ಅದನ್ನು ಕರ್ನಾಟಕದಲ್ಲಿ ಸುದೀಪ್ (Sudeep) ಪ್ರಸ್ತುತಪಡಿಸುತ್ತಿದ್ದಾರೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಹಲವು ತಿಂಗಳಿಂದ ಕಾಯುತ್ತಿದ್ದರು. ಮೊದಲ ಲಾಕ್ಡೌನ್ (Lockdown) ಶುರುವಾಗುವುದಕ್ಕೂ ಮುನ್ನವೇ ಈ ಸಿನಿಮಾ ರಿಲೀಸ್ಗೆ ಸಿದ್ಧವಾಗಿತ್ತು. ಆದರೆ ಲಾಕ್ಡೌನ್ ಜಾರಿಯಾದ ಬಳಿಕ ಬಿಡುಗಡೆ (Release) ದಿನಾಂಕ ಮುಂದೂಡಿಕೊಳ್ಳುವುದು ಅನಿವಾರ್ಯ ಆಗಿತ್ತು. ರಣವೀರ್ ಸಿಂಗ್ ನಟನೆಯ ಈ ಚಿತ್ರ ಈಗ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಡಿ.24ರಂದು ತೆರೆ ಕಾಣಲಿದೆ. ಈ ಹಿನ್ನೆಲೆ ಈ ಸಿನಿಮಾ ತಂಡ ಪ್ರಚಾರ (Promotion) ಕಾರ್ಯವನ್ನು ಶುರುಮಾಡಿಕೊಂಡಿದೆ. ಮೊನ್ನೆ ಚಿತ್ರತಂಡ ಬೆಂಗಳೂರಿನಲ್ಲಿ ಪ್ರಮೋಷನ್ಗೆ ಬಂದಿತ್ತು. ಈ ನಡುವೆ ಒಂದು ಅಚ್ಚರಿ ಸಂಗತಿ ನಡೆದಿದೆ. ಒಂದೇ ವೇದಿಕೆಯಲ್ಲಿ ಕಿಚ್ಚ ಸುದೀಪ್, ರಣವೀರ್ ಸಿಂಗ್, ಕಪಿಲ್ ದೇವ್ ಸೇರಿ ಘಟಾನುಘಟಿಗಟಿ ನಾಯಕರು ಇದ್ದರು. ಈ ವೇಳೆ ಕಾರ್ಯಕ್ರಮ ಮುಗಿದಮೇಲೆ ಕಿಚ್ಚನ ವೈಯಕ್ತಿಕ ಬಾಡಿಗಾರ್ಡ್ (Bodyguard) ಕಿರಣ್ ಜೊತೆ ದೀಪಿಕಾ ಪಡುಕೋಣೆ(Deepika Padukone) ವಿಡಿಯೋ ಕಾಲ್ (Video Cal) ಮಾಡಿ ಮಾತನಾಡಿದ್ದಾರೆ. ಅದೂ ಕನ್ನಡ (Kannada) ದಲ್ಲೇ ನಿಮ್ಮ ಹೆಸರು ಏನು ಎಂದು ಕೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಿಚ್ಚನ ಬಾಡಿಗಾರ್ಡ್ ಜೊತೆ ಕನ್ನಡದಲ್ಲೇ ಮಾತನಾಡಿದ ದೀಪಿಕಾ!
ಕಿಚ್ಚ ಸುದೀಪ್ ಅವರ ಬಾಡಿ ಗಾರ್ಡ್ ಕಿರಣ್ ಅವರಿಗೆ ದೀಪಿಕಾ ಪಡುಕೋಣೆ ಎಂದರೆ ಇಷ್ಟ. ಅದೇ ರೀತಿ ಅವರು ತಮ್ಮ ಕೈ ಮೇಲೆ ಅನೇಕ ಹೆಸರುಗಳ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದನ್ನು ಕಂಡು ರಣವೀರ್ ಸಿಂಗ್ ಅಚ್ಚರಿಪಟ್ಟರು. ಅಲ್ಲದೇ ದೀಪಿಕಾಗೆ ವಿಡಿಯೋ ಕಾಲ್ ಮಾಡಿ ಅವರ ಟ್ಯಾಟೂಗಳನ್ನು ತೋರಿಸಿದರು. ಈ ವೇಳೆ ದೀಪಿಕಾ ಪಡುಕೋಣೆ ಕನ್ನಡದಲ್ಲೇ ಅವರ ಕುಶಲೋಪರಿ ವಿಚಾರಿಸಿದ್ದಾರೆ. ‘ನಮಸ್ತೆ ಮೇಡಂ. ನನ್ನ ಹೆಸರು ಕಿಚ್ಚ ಕಿರಣ್ ಅಂತ ಸುದೀಪ್ ಅವರ ಪರ್ಸೆನಲ್ ಬಾಡಿಗಾರ್ಡ್ ಅಂತ ಕಿರಣ್ ಹೇಳಿದ್ದಾರೆ. ಇದಕ್ಕೆ ದೀಪಿಕಾ ಪಡುಕೋಣೆ ಕನ್ನಡದಲ್ಲೇ ಉತ್ತರಿಸಿದ್ದಾರೆ.
ಇದನ್ನು ಓದಿ : ಬೆಂಗಳೂರಿನಲ್ಲಿ `83’ ಜಬರ್ದಸ್ತ್ ಪ್ರಚಾರ : ದ್ರಾವಿಡ್ ಬಯೋಪಿಕ್ನಲ್ಲಿ ನಟಿಸ್ತಾರಾ ಕಿಚ್ಚ ಸುದೀಪ್?
ವಿಡಿಯೋ ಕಾಲ್ ವೇಳೆ ನಗುತ್ತಲೇ ಇದ್ದ ಕಿಚ್ಚ!
ವೈರಲ್ ಆಗಿರುವ ವಿಡಿಯೋದಲ್ಲಿ ಕಿಚ್ಚನ ಬಾಡಿಗಾರ್ಡ್ ತಮ್ಮ ಟ್ಯಾಟು ಅನ್ನು ದೀಪಿಕಾ ಅವರಿಗೆ ತೋರಿಸಿದ್ದಾರೆ. ರಣವೀರ್ ಸಿಂಗ್ ದೀಪಿಕಾ ಅವರಿಗೆ ಕಿಚ್ಚ ಅವರನ್ನು ತೋರಿಸಿದ್ದಾರೆ. ಕಿಚ್ಚ ಸುದೀಪ್ ಕೂಡ ದೀಪಿಕಾ ಅವರಿಗೆ ಹಾಯ್ ಹೇಳಿದ್ದಾರೆ. ಪಕ್ಕದಲದಲೇ ಇದ್ದ ಬಾಡಿಗಾರ್ಡ್ ಕಿರಣ್ ಕೂಡ ಮಾತನಾಡಲು ಮುಂದಾಗಿದ್ದಾರೆ. ಕನ್ನಡದಲ್ಲಿ ಮಾತನಾಡುವ ವೇಳೆ ಕಿಚ್ಚ ನಕ್ಕು ಪಕ್ಕಕ್ಕೆ ಬಂದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನು ಓದಿ : ಇದೊಂದು ಫೋಟೋಗಾಗಿ 36 ವರ್ಷ ಕಾದಿದ್ರಂತೆ ಸುದೀಪ್: ಕೊನೆಗೂ ನನಸಾಯ್ತು ಕಿಚ್ಚನ ಕನಸು!
ನಟಿ ರಶ್ಮಿಕಾಗೆ ಕ್ಲಾಸ್ ತೆಗೆದುಕೊಂಡ ಕನ್ನಡಿಗರು!
ಮೊನ್ನೆ ಬ್ರಹ್ಮಾಸ್ತ್ರ ಸಿನಿಮಾದ ಬಗ್ಗೆ ಆಲಿಯಾ ಭಟ್ ಕನ್ನಡದಲ್ಲೇ ಟ್ವೀಟ್ ಮಾಡಿದ್ದರು. ಅದನ್ನು ಕಂಡ ಕನ್ನಡಿಗರು ರಶ್ಮಿಕಾ ಮಂದಣ್ಣ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಇವರನ್ನು ನೋಡಿ ನೀವು ಕಲಿತುಕೊಳ್ಳಿ ಎಂದು ಹೇಳಿದ್ದರು. ಇದೀಗ ಮತ್ತೆ ದೀಪಿಕಾ ಪಡುಕೋಣೆ ಅವರ ಕನ್ನಡ ಪ್ರೇಮ ಕಂಡು ಕನ್ನಡಿಗರು ಫಿದಾ ಆಗಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡುತ್ತಾ, ನೋಡಿ ಬಾಲಿವುಡ್ ನಟಿಯರಿಗೆ ಕನ್ನಡ ಭಾಷೆ ಮೇಲೆ ಇರುವ ಗೌರವ ನಿಮಗೆ ಇಲ್ಲ ಎಂದು ರಶ್ಮಿಕಾ ಮಂದಣ್ಣ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ನೀವು ಕನ್ನಡದವರಾಗಿ ಕನ್ನಡ ಮಾತನಾಡಲು ಹಿಂಜರಿಯುತ್ತೀರಾ. ಹೀಗೆ ಮಾಡಿದರೆ, ನೀವು ಕನ್ನಡ ಸಿನಿಮಾಗಳಲ್ಲಿ ನಟಿಸಬೇಡಿ. ನಿಮ್ಮ ಸಿನಿಮಾಗಳನ್ನು ನಾವು ನೋಡಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ