ಅಮೀರ್​ ಖಾನ್​ ಮೇಲೆ ಆರೋಪ ಮಾಡಿದ ದೀಪಿಕಾ ಪಡುಕೋಣೆ..!

Deepika Padukone And Aamir Khan: ಲಾಕ್​ಡೌನ್​ನಲ್ಲಿ ದೀಪಿಕಾಗೆ ಒಂದು ವಿಷಯ ಇದ್ದಕ್ಕಿದಂತೆಯೇ ನೆನಪಾಗಿದೆ. ಅದೂ ಪರ್ಫೆಕ್ಷನಿಸ್ಟ್ ಅಮೀರ್​ ಖಾನ್​ ಅವರ ಬಗ್ಗೆ. ಅವರು ಸಾಮಾಜಿಕ ಜಾಲತಾಣದಲ್ಲಿ ಅಮೀರ್ ವಿರುದ್ಧ ಆರೋಪ ಮಾಡಿದ್ದಾರೆ.

Anitha E | news18-kannada
Updated:May 19, 2020, 8:11 PM IST
ಅಮೀರ್​ ಖಾನ್​ ಮೇಲೆ ಆರೋಪ ಮಾಡಿದ ದೀಪಿಕಾ ಪಡುಕೋಣೆ..!
ಅಮೀರ್ ಖಾನ್​ ಹಾಗೂ ದೀಪಿಕಾ ಪಡುಕೋಣೆ
  • Share this:
ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಲಾಕ್​ ಆಗಿರುವ ಅಭಿಮಾನಿಗಳನ್ನು ರಂಜಿಸೋಕೆ ದೀಪಿಕಾ ಹಾಗೂ ರಣವೀರ್​ ಸಿಂಗ್​ ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ಅದರಲ್ಲೂ ದೀಪಿಕಾ ಫಿಟ್ನೆಸ್​, ಹೆಲ್ತ್​ ಟಿಪ್ಸ್​, ಅಡುಗೆ ವಿಡಿಯೋ ಹೀಗೆ ಒಂದಿಲ್ಲೊಂದು ರೀತಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಆದರೆ ಲಾಕ್​ಡೌನ್​ನಲ್ಲಿ ದೀಪಿಕಾಗೆ ಒಂದು ವಿಷಯ ಇದ್ದಕ್ಕಿದಂತೆಯೇ ನೆನಪಾಗಿದೆ. ಅದೂ ಪರ್ಫೆಕ್ಷನಿಸ್ಟ್ ಅಮೀರ್​ ಖಾನ್​ ಅವರ ಬಗ್ಗೆ. ಅವರು ಸಾಮಾಜಿಕ ಜಾಲತಾಣದಲ್ಲಿ ಅಮೀರ್ ವಿರುದ್ಧ ಆರೋಪ ಮಾಡಿದ್ದಾರೆ.

ದೀಪಿಕಾ


ಹೌದು, ಲಾಕ್​ಡೌನ್​ನಲ್ಲಿ ತಮ್ಮ ಹಳೇ ಚಿತ್ರಗಳನ್ನು ಹಂಚಿಕೊಳ್ಳುತ್ತಿರುವ ದೀಪಿಕಾ, ಅಮೀರ್​ ಖಾನ್​ ಜೊತೆಗಿರುವ ಒಂದು ತುಂಬಾ ಹಳೇ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಆ ಫೋಟೋ ಜೊತೆಗೆ ಆಸಕ್ತಿಕರ ವಿಷಯವನ್ನೂ ಹಂಚಿಕೊಂಡಿದ್ದಾರೆ. 2000 ಜನವರಿ ಒಂದರಂದು ಅಮೀರ್ ಖಾನ್​ ದೀಪಿಕಾ ಮನೆಗೆ ಭೇಟಿ ನೀಡಿರುತ್ತಾರೆ. ಆಗ ದೀಪಿಕಾ ಅವರ ಕುಟುಂಬದೊಂದಿಗೂ ಒಂದು ಫೋಟೋ ಸಹ ತೆಗೆಸಿಕೊಂಡಿದ್ದಾರೆ. ಅದಕ್ಕೂ ಮುನ್ನ ದೀಪಿಕಾರ ಮನೆಯಲ್ಲಿ ಊಟ ಮಾಡಿದ್ದಾರೆ. ಆದರೆ ಆಗ ಮೊಸರನ್ನ ತಿಂದ ಅಮೀರ್ ಹೊಟ್ಟೆ ಹಸಿದು ಕುಳಿತಿದ್ದ ದೀಪಿಕಾಗೆ ಮಾತಿಗೂ ಸಹ ತಿನ್ನು ಬಾ ಎಂದು ಕರೆಯಲಿಲ್ಲವೆಂದು ಆರೋಪ ಮಾಡಿದ್ದಾರೆ. ಆಗ ಹೊಟ್ಟೆ ಹಸಿದಿದ್ದರೂ ಡಿಪ್ಪಿ ಸಹ ಕೇಳಲಿಲ್ಲವಂತೆ.

 


 
View this post on Instagram
 

Started young...🙈


A post shared by Deepika Padukone (@deepikapadukone) on


ಅಂದು ನಡೆದ ಘಟನೆಯನ್ನು ತಮಾಷೆಯಾಗಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ದೀಪಿಕಾ. ಲಾಕ್​ಡೌನ್​ನಲ್ಲಿ ದೀಪಿಕಾ ತಮ್ಮ ಹಳೇ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದು, ಸಾಕಷ್ಟು ಕ್ರೇಜಿ ಹಾಗೂ ಆಸಕ್ತಿಕ ಮಾಹಿತಿಯನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

OTT Release: ಒಟಿಟಿಯಲ್ಲಿ ರಿಲೀಸ್​ ಆಗಲಿದೆಯಾ ವಾಣಿ-ರಣಬೀರ್ ಕಪೂರ್​ ಅಭಿನಯದ ಶಂಶೇರ..?

First published: May 19, 2020, 8:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading