• Home
  • »
  • News
  • »
  • entertainment
  • »
  • Deepika Padukone: 15 ವರ್ಷಗಳ ನಿಗೂಢ ಪೋಸ್ಟ್‌ ಹಂಚಿಕೊಂಡ ದೀಪಿಕಾ! ಕಿಸ್ ಬೇಕು ಎಂದ ರಣವೀರ್

Deepika Padukone: 15 ವರ್ಷಗಳ ನಿಗೂಢ ಪೋಸ್ಟ್‌ ಹಂಚಿಕೊಂಡ ದೀಪಿಕಾ! ಕಿಸ್ ಬೇಕು ಎಂದ ರಣವೀರ್

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಪೋಸ್ಟ್ ಶೇರ್ ಮಾಡಿದ್ದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಏನಪ್ಪಾ ಇದು ಅಂತ ಯೋಚಿಸುತ್ತಿದ್ದಾರೆ. ಆದರೆ ರಣವೀರ್ ಮಾತ್ರ ಕಿಸ್ ಬೇಕು ಎಂದಿದ್ದಾರೆ.

  • Trending Desk
  • Last Updated :
  • Bangalore, India
  • Share this:

ಬಾಲಿವುಡ್‌ ನ (Bollywood) ಅತ್ಯಂತ ಬ್ಯೂಟಿಫುಲ್‌ ಹಾಗೂ ಯಶಸ್ವಿ ನಟಿಯರಲ್ಲಿ ದೀಪಿಕಾ ಪಡುಕೋಣೆ (Deepika padukone) ಒಬ್ಬರು. ಇಂಡಸ್ಟ್ರಿಗೆ ಬಂದು ದಶಕಗಳಾದರೂ ಇನ್ನೂ ತನ್ನ ಸೌಂದರ್ಯ ಹಾಗೂ ಅಮೋಘ ನಟನೆಯಿಂದ ಈಗಲೂ ಬಹು ಬೇಡಿಕೆಯಲ್ಲಿರುವ ನಟಿ ಈಕೆ. ಹಿಟ್‌ ಚಿತ್ರಗಳನ್ನು ಕೊಡುತ್ತಲೇ ಇರುವ ಡೀಪಿ ಸೋಷಿಯಲ್‌ ಮೀಡಿಯಾದಲ್ಲಿ (Social Media) ಸದಾ ಆಕ್ಟಿವ್.‌ ಇನ್ನೂ ಇತ್ತೀಚೆಗೆ ನಟಿ ದೀಪಿಕಾ ಹಂಚಿಕೊಂಡಿರುವ ಪೋಸ್ಟ್‌ ಒಂದು ಅಭಿಮಾನಿಗಳನ್ನು ಸಖತ್‌ ಕನ್‌ ಫ್ಯೂಸ್‌ ಮಾಡಿದೆ!


ದೀಪಿಕಾ, ಇತ್ತೀಚಿಗೆ ಇನ್‌ ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗೆ ತೆಗೆದುಕೊಂಡು ತಮ್ಮ ಕಲಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಬಾಲಿವುಡ್‌ನಲ್ಲಿ 15 ವರ್ಷಗಳ ಹಿಂದಿನ ರಹಸ್ಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನಟ ಹಾಗೂ ದೀಪಿಕಾ ಪತಿ ರಣವೀರ್‌ ಸಿಂಗ್‌ ಮಾಡಿರುವ ಕಾಮೆಂಟ್‌ ಇನ್ನಷ್ಟು ಆಶ್ಚರ್ಯ ಪಡುವಂತೆ ಮಾಡಿದೆ.
ಏನಿದು ಪೂರ್ವ?


ಅಂದಹಾಗೆ ನಟಿ ದೀಪಿಕಾ ಪಡುಕೋಣೆ "ಇದು ಪೂರ್ವಕ್ಕೆ ನೋಡುವ ಸಮಯ" ಎಂಬ ಚುಟುಕಾದ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದೆ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ #Staytuned ಎಂದು ಬರೆದಿದ್ದಾರೆ.
ಕಿಸ್ ಬೇಕು ಎಂದ ರಣವೀರ್


ದೀಪಿಕಾ ಅವರ ಈ ಪೋಸ್ಟ್ ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ. ಅವರಲ್ಲಿ ಒಬ್ಬರು, “ಇದು ನಿಮ್ಮ ಮುಂದಿನ ಮೂವಿ ಟೈಟಲ್ಲಾ ? ಎಂದು ಕೇಳಿದರೆ ಮತ್ತೊಬ್ಬರು, "ನಿಮ್ಮ ಜಾಗತಿಕ ಜೀವನಶೈಲಿ ಬ್ರ್ಯಾಂಡ್!? ಎಂದು ಕೇಳಿದ್ದಾರೆ. ಈ ಮಧ್ಯೆ ದೀಪಿಕಾರ ಈ ಪೋಸ್ಟ್‌ ಗೆ ರಣವೀರ್‌ ಸಿಂಗ್‌ ಕಾಮೆಂಟ್‌ ಮಾಡಿದ್ದು, "ಇದು ನನಗೆ ಕಿಸ್ ಕೊಡುವ ಸಮಯ" ಎಂದು ಬರೆದಿದ್ದಾರೆ.


ಇದನ್ನೂ ಓದಿ: Jacqueline Fernandez: ಜಾಮೀನು ಅರ್ಜಿ ವಿಚಾರಣೆ, ರಕ್ಕಮ್ಮನಿಗೆ ಬೇಲಾ? ಜೈಲಾ?


ಚಿತ್ರರಂಗದಲ್ಲಿ 15 ವರ್ಷಗಳ ಪ್ರಯಾಣದಲ್ಲಿ ದೀಪಿಕಾ ಅವರ ರಹಸ್ಯ ಪೋಸ್ಟ್ ಬಂದಿದೆ. ನಟ ಶಾರುಖ್ ಖಾನ್ ಜೊತೆ ಫರಾ ಖಾನ್ ನಿರ್ದೇಶನದ ಹಿಟ್ ಚಿತ್ರ ಓಂ ಶಾಂತಿ ಓಂನೊಂದಿಗೆ ಬಾಲಿವುಡ್ಡಿಗೆ ಪಾದಾರ್ಪಣೆ ಮಾಡಿದ ದೀಪಿಕಾ ಹಿಂತಿರುಗಿ ನೋಡಿದ್ದೇ ಇಲ್ಲ. ಆದ್ರೆ ವರದಿ ಪ್ರಕಾರ, ಅವರು ಇದನ್ನು ಒಂದು ಮೈಲಿಗಲ್ಲನ್ನಾಗಿ ಆಚರಿಸುವ ಬಗ್ಗೆ ಘೋಷಣೆ ಮಾಡಲಿದ್ದಾರೆ.


ಅಂದಹಾಗೆ, ಶಕುನ್ ಬಾತ್ರಾ ಅವರ 'ಗೆಹೆರಾಯಿಯ ನಲ್ಲಿ ದೀಪಿಕಾ ಕೊನೆಯದಾಗಿ ಕಾಣಿಸಿಕೊಂಡರು. ಈ ಚಿತ್ರ ಸಾಕಷ್ಟು ವಿಮರ್ಶೆಗೆ ಒಳಗಾಗಿದ್ದರೂ ಸಾಕಷ್ಟು ಗಳಿಕೆಯನ್ನೂ ಮಾಡಿತು. ಇದೀಗ ದೀಪಿಕಾ ತಮ್ಮ ಮುಂದಿನ ಚಿತ್ರ ಪಠಾಣ್‌ಗೆ ಸಜ್ಜಾಗಿದ್ದಾರೆ.


ಇದನ್ನೂ ಓದಿ: Amitabh Bachchan: ಅಪ್ಪು ಬಗ್ಗೆ ಅಮಿತಾಭ್ ಬಚ್ಚನ್ ಹೃದಯ ಸ್ಪರ್ಶಿ ಮಾತು,ಮನದುಂಬಿ ಧನ್ಯವಾದ ಅರ್ಪಿಸಿದ ಅಶ್ವಿನಿ ಪುನೀತ್ ರಾಜಕುಮಾರ್


ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ, ಆಕ್ಷನ್ ಚಿತ್ರವು ಶಾರುಖ್ ಖಾನ್‌ ಜೊತೆಗಿನ ಆಕೆಯ ಪುನರ್ಮಿಲನವನ್ನು ಸೂಚಿಸುತ್ತದೆ. ಚಿತ್ರದ ತಂಡವು ಇತ್ತೀಚೆಗೆ ಪವರ್-ಪ್ಯಾಕ್ಡ್ ಆಕ್ಷನ್ ಸೀಕ್ವೆನ್ಸ್‌ಗಳನ್ನು ಒಳಗೊಂಡಿರುವ ಟೀಸರ್ ಅನ್ನು ಅನಾವರಣಗೊಳಿಸಿದೆ. ಇದರಲ್ಲಿ ಜಾನ್ ಅಬ್ರಹಾಂ ಕೂಡ ಪ್ರತಿಸ್ಪರ್ಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್ ಮುಂದಿನ ವರ್ಷ ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.


ಪ್ರಭಾಸ್ ಜೊತೆ ಸಿನಿಮಾ


ಇದಲ್ಲದೇ ಪ್ರಭಾಸ್ ಮತ್ತು ಅಮಿತಾಭ್ ಬಚ್ಚನ್ ಜೊತೆಯೂ ದೀಪಿಕಾ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದು ಪ್ಯಾನ್-ಇಂಡಿಯಾ ಚಲನಚಿತ್ರವಾಗಿದ್ದು, ತಾತ್ಕಾಲಿಕವಾಗಿ ಪ್ರಾಜೆಕ್ಟ್ ಕೆ ಎಂದು ಹೆಸರಿಸಲಾಗಿದೆ. ಇದು ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಈ ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.


Bollywood actress Deepika Padukone has revealed she has only completed her education till 12th standard
ಸುಪ್ರಸಿದ್ಧ ನಟಿ ದೀಪಿಕಾ ಪಡುಕೋಣೆ ಓದಿದ್ದೆಷ್ಟು ಗೊತ್ತಾ?


ಇನ್ನು, ಸಿದ್ಧಾರ್ಥ್ ಆನಂದ್ ಅವರ ಇನ್ನೊಂದು ಚಿತ್ರ ಫೈಟರ್‌ನಲ್ಲಿ ಕೂಡ ದೀಪಿಕಾ ನಟಿಸಿದ್ದಾರೆ. ಇದು ಹೃತಿಕ್ ರೋಷನ್ ಜೊತೆಗಿನ ಅವರ ಮೊದಲ ಚಿತ್ರವಾಗಿದೆ. ಹೃತಿಕ್ ಇತ್ತೀಚೆಗೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. “25 ಜನವರಿ 2024- ಥಿಯೇಟರ್‌ಗಳಲ್ಲಿ ನಿಮ್ಮನ್ನು ನೋಡೋಣ! #Fighter" ಎಂದು ಬರೆದಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಅನಿಲ್ ಕಪೂರ್ ಕೂಡ ನಟಿಸಲಿದ್ದಾರೆ.‌

Published by:Divya D
First published: