P V Sindhu ಜೊತೆ Deepika Padukone ಬ್ಯಾಡ್ಮಿಂಟನ್ ಆಟ- ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ..

Deepika Padukone And PV Sindhu: ಇತ್ತೀಚೆಗೆ ದೀಪಿಕಾ ಹಂಚಿಕೊಂಡ ಇನ್ನೊಂದು ವೀಡಿಯೋದಲ್ಲಿ, ಸಿಂಧುಗೆ ತರಬೇತಿ ಪಡೆಯಲು ಪಾಲುದಾರರ ಅಗತ್ಯವಿತ್ತು , ನಾನು ಅವರ ಜೊತೆ ಕೈ ಜೋಡಿಸಿದೆ ಎಂದು ಅವರು ವಿವರಿಸಿದ್ದಾರೆ. ವೀಡಿಯೊದಲ್ಲಿ, ಸಿಂಧು ದೀಪಿಕಾ ಅವರ ಬ್ಯಾಡ್ಮಿಂಟನ್ ಕೌಶಲ್ಯಗಳನ್ನು ಶ್ಲಾಘಿಸುತ್ತಿದ್ದಾರೆ.

ಸಿಂಧೂ ಮತ್ತು ದೀಪಿಕಾ ಪಡುಕೋಣೆ ಆಡುತ್ತಿರುವುದು

ಸಿಂಧೂ ಮತ್ತು ದೀಪಿಕಾ ಪಡುಕೋಣೆ ಆಡುತ್ತಿರುವುದು

  • Share this:
ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ (Deepika padukone), ಎರಡು ಬಾರಿ ಒಲಂಪಿಕ್​ ಪದಕ ವಿಜೇತೆ ಪಿವಿ ಸಿಂಧು (PV sindu) ಜೊತೆ ಬ್ಯಾಡ್ಮಿಂಟನ್​ ಆಡುವ ಮೂಲಕ ಸಿಕ್ಕಾಪಟ್ಟೆ ಮಸ್ತಿ ಮಾಡಿದ್ದಾರೆ. ಈ ಕುರಿತು ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ವಿಶ್ವ ಚಾಂಪಿಯನ್ ಪಿವಿ ಸಿಂಧು ಜೊತೆಗಿನ ತಮ್ಮ ಬ್ಯಾಡ್ಮಿಂಟನ್ ಸೆಶನ್‌ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಇನ್ನು ಈ ಫೋಟೋಗಳು  ಸಿಂಧು ಅವರ  ಜೀವನ ಆಧಾರಿತ ಚಿತ್ರ ತಯಾರಾಗುತ್ತಿದೆಯಾ? ಅದರಲ್ಲಿ  ದೀಪಿಕಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆಯೇ ಎಂಬ ಕೂತುಹಲ ನೆಟ್ಟಿಗರಲ್ಲಿ ಹುಟ್ಟಿದೆ.

ದೀಪಿಕಾ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದು,  ಚಿತ್ರಗಳಲ್ಲಿ, ಇಬ್ಬರು ಒಳಾಂಗಣ ಅಂಗಣದಲ್ಲಿ ಬ್ಯಾಡ್ಮಿಂಟನ್‌ನ  ಆಟವನ್ನು ಆಡುತ್ತಿರುವುದು ಕಂಡುಬರುತ್ತದೆ. ನನ್ನ ಜೀವನದಲ್ಲಿ ಒಂದು ಸಾಮಾನ್ಯ ದಿನ ... @pvsindhu1 ನೊಂದಿಗೆ  ಎಂದು ದೀಪಿಕಾ ಫೋಟೋಗೆ ಶಿರ್ಷಿಕೆ ನೀಡಿದ್ದಾರೆ. ಇಬ್ಬರು ಬೆವರಿಳಿಸುವಂತೆ ಆಟವಾಡಿದ್ದು, ಈ ಆಟದಲ್ಲಿ ಯಾರಿಗೆ ಗೆಲುವು ಆಯಿತು ಎಂಬುದನ್ನು ಮಾತ್ರ ತಿಳಿಸಿಲ್ಲ. ಆದರೆ, ನಟಿ ದೀಪಿಕಾ ಈ ಆಟದಿಂದ ತಮ್ಮ ಮುಖದ ಕಾಂತಿ ಹೆಚ್ಚಿತು ಎಂದಿದ್ದಾರೆ.ತಮ್ಮ ಕ್ಯಾಲರಿ ಬರ್ನ್​ ಆಗಿ ಮುಖದಲ್ಲಿ ಬೆವರಿಳಿದಿದೆ. ಇದರಿಂದ ಮುಖದ ಕಾಂತಿ ಹೆಚ್ಚಿದೆ ಎಂದು ನಟಿ ದೀಪಿಕಾ ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪಿವಿ ಸಿಂಧು ಎಷ್ಟು ಕ್ಯಾಲರಿ ಬರ್ನ್​ ಆಯಿತು ಎಂದು ಅವರ ಕಾಲು ಎಳೆದು ಪ್ರತಿಕ್ರಿಯಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರ ಈ ಸಂಭಾಷಣೆ ಎಲ್ಲರ ಗಮನಸೆಳೆದಿತ್ತು

ಈ ಫೋಟೋಗೆ ಪ್ರಸ್ತುತ 1.9 ಮಿಲಿಯನ್ ಲೈಕ್‌ಗಳು ಬಂದಿವೆ. ದೀಪಿಕಾ ಅವರ ಪತಿ ಮತ್ತು ನಟ ರಣವೀರ್ ಸಿಂಗ್  ಕೂಡ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಅನೇಕ ನೆಟ್ಟಿಗರು ಈ ಫೋಟೋಗೆ ಲೈಕ್ ಮತ್ತು ಕಾಮೆಂಟ್ ಮಾಡಿದ್ದಾರೆ.

ಬಯೋಪಿಕ್ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಅನಿಸುತ್ತದೆ. ಇದರರ್ಥ ನಾನು ಹೇಳಿದ್ದು ಸರಿ, ನಾವು PV ಸಿಂಧು ಬಯೋಪಿಕ್  ಸಧ್ಯದಲ್ಲಿ ನೋಡುತ್ತೇವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದರು.  ಕೆಲ ನೆಟ್ಟಿಗರು ನಟಿ ದೀಪಿಕಾ ಮತ್ತು ಸಿಂಧು ಅವರನ್ನು ಹೊಗಳಿದ್ದಾರೆ. ಇನ್ನೊಬ್ಬರಂತೂ ಒಂದು ಫೋಟೋದಲ್ಲಿ 2 ಮೂರ್ತಿಗಳು ಎಂದು ಬರೆದಿದ್ದರೆ, ಮತ್ತೊಬ್ಬರು ಬಯೋಪಿಕ್ ಸಧ್ಯದಲ್ಲೇ ಬರಲಿದೆಯಾ ಎಂದು ಪ್ರಶ್ನಿಸಿದ್ದಾರೆ. ಇವೆಲ್ಲದರ ನಡುವೆ ದಿಪೀಕಾ ಸಿಂಧೂ ಅವರ ಬಯೋಪಿಕ್​ಗೆ ಸಿದ್ಧತೆ ಆರಂಭಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ತನ್ನದೇ ಆದ ಸ್ಟೈಲ್​ನಲ್ಲಿ London Summerಗೆ ಗುಡ್​ಬೈ ಹೇಳಿದ ಗ್ಲೋಬಲ್​ ಐಕಾನ್​ Priyanka Chopra

ಇತ್ತೀಚೆಗೆ ದೀಪಿಕಾ ಹಂಚಿಕೊಂಡ ಇನ್ನೊಂದು ವೀಡಿಯೋದಲ್ಲಿ, ಸಿಂಧುಗೆ ತರಬೇತಿ ಪಡೆಯಲು ಪಾಲುದಾರರ ಅಗತ್ಯವಿತ್ತು , ನಾನು ಅವರ ಜೊತೆ ಕೈ ಜೋಡಿಸಿದೆ ಎಂದು ಅವರು ವಿವರಿಸಿದ್ದಾರೆ. ವೀಡಿಯೊದಲ್ಲಿ, ಸಿಂಧು ದೀಪಿಕಾ ಅವರ ಬ್ಯಾಡ್ಮಿಂಟನ್ ಕೌಶಲ್ಯಗಳನ್ನು ಶ್ಲಾಘಿಸುತ್ತಿದ್ದಾರೆ. ಅವರು ಬ್ಯಾಡ್ಮಿಂಟನ್ ಆಡಿದ್ದರೆ, ಅವರು ಅಗ್ರ ಆಟಗಾರ್ತಿಯಾಗುತ್ತಿದ್ದರು ಎಂದು ಸಿಂಧು ದೀಪಿಕಾ ಬಗ್ಗೆ ಹೇಳಿದ್ದಾರೆ.  ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ದೀಪಿಕಾ ಮಾಜಿ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ. ಅನೇಕ ಸಂದರ್ಭದಲ್ಲಿ ಬ್ಯಾಟ್​ ಬೀಸುವ ಮೂಲಕ ಇದನ್ನು ಸಾಬೀತು ಮಾಡಿದ್ದಾರೆ.ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್​ ಪಡುಕೋಣೆ ಕೂಡ ಬ್ಯಾಡ್ಮಿಂಟನ್​ ಚಾಂಪಿಯನ್ ಆಗಿದ್ದರು.

ದೀಪಿಕಾ ತಮ್ಮ ರಣವೀರ್ ಸಿಂಗ್ ಅಭಿನಯದ '83 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ದಿ ಇಂಟರ್ನ್ ರೀಮೇಕ್, ಪ್ರಭಾಸ್  ಜೊತೆ  ಪ್ರಾಜೆಕ್ಟ್ ಕೆ, ಹೃತಿಕ್ ರೋಷನ್ ಜೊತೆ  ಫೈಟರ್, ಶಾರುಖ್ ಖಾನ್ ಜೊತೆ ಪಠಾಣ್ ಮತ್ತು ಅನನ್ಯ ಪಾಂಡೆ ಮತ್ತು ಸಿದ್ದಾಂತ್ ಚತುರ್ವೇದಿ ಜೊತೆ ಇನ್ನೂ ಹೆಸರಿಡದ ಶಕುನ್ ಬಾತ್ರಾ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಬ್ಯುಸಿಯಾಗಿದ್ದಾರೆ.
Published by:Sandhya M
First published: