ರಣವೀರ್​ ಸಿಂಗ್​ ಜೊತೆ ನಟಿಸಲು 'ನೋ' ಅಂದ್ರು ದೀಪಿಕಾ ಪಡುಕೋಣೆ!

‘ಪದ್ಮಾವತ್​’ ಚಿತ್ರ ತೆರೆಕಂಡ ನಂತರದಲ್ಲಿ ದೀಪಿಕಾ ಖ್ಯಾತಿ ಹೆಚ್ಚಿದೆ. ಹಾಗಾಗಿ ಕಥೆ ಆಯ್ಕೆಯಲ್ಲಿ ಅವರು ಹೆಚ್ಚು ಜಾಗೃತಿ ವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಸಿನಿಮಾ ಒಪ್ಪಿಕೊಂಡಿಲ್ಲ.

Rajesh Duggumane | news18
Updated:January 14, 2019, 11:13 AM IST
ರಣವೀರ್​ ಸಿಂಗ್​ ಜೊತೆ ನಟಿಸಲು 'ನೋ' ಅಂದ್ರು ದೀಪಿಕಾ ಪಡುಕೋಣೆ!
ರಣವೀರ್-ದೀಪಿಕಾ
Rajesh Duggumane | news18
Updated: January 14, 2019, 11:13 AM IST
ಮದುವೆಗೂ ಮೊದಲು ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ಮೂರು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮತ್ತೊಂದು ಅಚ್ಚರಿ ಎಂದರೆ, ಇವರ ಪ್ರೀತಿ ಹುಟ್ಟಿದ್ದು ಕೂಡ ಸಿನಿಮಾ ಸೆಟ್​ನಲ್ಲಿಯೇ. ಇಬ್ಬರೂ ಈಗ ವಿವಾಹವಾಗಿದ್ದಾರೆ. ಮದುವೆಯಾದ ನಂತರ ಈ ಜೋಡಿಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಆದರೆ, ರಣವೀರ್​ ಜೊತೆ ಅಭಿನಯಿಸಲು ಸಿಕ್ಕ ಅವಕಾಶವನ್ನು ದೀಪಿಕಾ ನಯವಾಗಿ ತಿರಸ್ಕರಿಸಿದ್ದಾರಂತೆ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ.

ಅರೆ, ದೀಪಿಕಾ ಈ ರೀತಿ ನಿರ್ಧಾರ ಕೈಗೊಂಡಿದ್ದೇಕೆ ಎನ್ನುವ ಪ್ರಶ್ನೆ ಮೂಡದೇ ಇರದು. ದೀಪಿಕಾ ಆಫರ್​ ತಿರಸ್ಕರಿಸಲು ಬಲವಾದ ಕಾರಣವಿದೆ. 1983ರ ಭಾರತ ಕ್ರಿಕೆಟ್​ ತಂಡ ವಿಶ್ವಕಪ್​ ಎತ್ತಿ ಹಿಡಿದಿತ್ತು. ಇದೇ ಕಥೆ ಆಧರಿಸಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಈ ಚಿತ್ರಕ್ಕೆ ‘83’ ಎಂದು ಶೀರ್ಷಿಕೆ ಇಡಲಾಗಿದ್ದು, ಸಿನಿಮಾದಲ್ಲಿ ರಣವೀರ್​ ಅಭಿನಯಿಸುತ್ತಿದ್ದಾರೆ. ಕಬೀರ್​ ಖಾನ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ: ಮೋಸಗಾರ ರಣಬೀರ್: ಕೊನೆಗೂ ಸತ್ಯ ಹೇಳಿದ ದೀಪಿಕಾ ಪಡುಕೋಣೆ !

ಅಂದಿನ ಕ್ಯಾಪ್ಟನ್​ ಆಗಿದ್ದ ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಅಭಿನಯಿಸುತ್ತಿದ್ದಾರೆ.  ಕಪಿಲ್​ ಹೆಂಡತಿಯ ಪಾತ್ರಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಅದನ್ನು ದೀಪಿಕಾ ನಿರ್ವಹಿಸಿದರೆ ಉತ್ತಮ ಎನ್ನುವ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ. ಈ ಮೂಲಕ ನಿಜ ಜೀವನದ ದಂಪತಿಯನ್ನು ತೆರೆಮೇಲೆ ಒಂದು ಮಾಡುವ ಯೋಜನೆ ಚಿತ್ರತಂಡದ್ದಾಗಿತ್ತು.

ಆದರೆ, ಕಪಿಲ್​ ದೇವ್​ ಹೆಂಡತಿ ಪಾತ್ರ ಚಿತ್ರದಲ್ಲಿ ಅಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುವುದಿಲ್ಲವಂತೆ. ಹಾಗಾಗಿ, ಕೆಲವೇ ದೃಶ್ಯಗಳಲ್ಲಿ ದೀಪಿಕಾ ಕಾಣಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಅವರು ಆಫರ್​ ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಪಾತ್ರ ಸಿಕ್ಕರೆ ರಣವೀರ್​ ಜೊತೆ ನಟಿಸುತ್ತೇನೆ ಎಂದಿದ್ದಾರಂತೆ.

‘ಪದ್ಮಾವತ್​’ ಚಿತ್ರ ತೆರೆಕಂಡ ನಂತರದಲ್ಲಿ ದೀಪಿಕಾ ಖ್ಯಾತಿ ಹೆಚ್ಚಿದೆ. ಹಾಗಾಗಿ ಕಥೆ ಆಯ್ಕೆಯಲ್ಲಿ ಅವರು ಹೆಚ್ಚು ಜಾಗೃತಿ ವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಯಾವುದೇ ಕಥೆ ಆಯ್ಕೆ ಮಾಡಿಕೊಂಡಿಲ್ಲ.

ಇದನ್ನೂ ಓದಿ: PHOTOS: ತವರೂರಿನಲ್ಲಿ ನಡೆದ ಆರತಕ್ಷತೆಯಲ್ಲಿ ಮಿಂಚಿದ ದೀಪಿಕಾ- ರಣವೀರ್​
Loading...

First published:January 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ