ದೀಪಿಕಾ ಪಡುಕೋಣೆ (Deepika Padukone) ಸಿನಿರಂಗದಲ್ಲಿರುವ ಯಶಸ್ವಿ ನಟಿಯಾಗಿ (Actress) ಹೆಸರುಮಾಡಿದ್ದಾರೆ. ಬಾಲಿವುಡ್ (Bollywood), ಹಾಲಿವುಡ್ (Hollywood) ಹಾಗೂ ಸ್ಯಾಂಡಲ್‌ವುಡ್‌ನಲ್ಲೂ ಮಿಂಚಿದವರು. ಅಂತೆಯೇ ದೊಡ್ಡ ದೊಡ್ಡ ನಟರೊಂದಿಗೆ ಮಿಂಚಿ ನಟನೆಯಲ್ಲಿ ಸೈ ಎನ್ನಿಸಿಕೊಂಡವರು. ಇತ್ತೀಚೆಗೆ ದೀಪಿಕಾ ಹಾಗೂ ಶಾರುಖ್ ಅಭಿನಯಿಸಿದ ಪಠಾಣ್ (Pathaan) ಹಲವಾರು ವಿವಾದಗಳನ್ನು ಸೃಷ್ಟಿಸಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ (Box Office) ಯಶಸ್ವಿ ಸಿನಿಮಾ (Cinema) ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಪಠಾಣ್ ಯಶಸ್ಸು ದೀಪಿಕಾರ ಸಿನಿ ಬದುಕಿಗೆ ಮತ್ತೊಂದು ಗರಿಮೆಯಾಗಿದೆ ಎಂದು ಹೇಳಿದರೂ ತಪ್ಪಿಲ್ಲ.
ದೀಪಿಕಾ ಹಾಗೂ ರಣ್‌ವೀರ್ ವೈವಾಹಿಕ ಜೀವನ ಹೇಗಿದೆ?
ಸಿನಿ ಜಗತ್ತಿನಂತೆ ತಮ್ಮ ವೈಯಕ್ತಿಕ ಬದುಕಿನಲ್ಲೂ ಖುಷಿಯಾಗಿರುವ ನಟಿ, ನಟ ರಣ್‌ವೀರ್ ಸಿಂಗ್‌ನೊಂದಿಗೆ ಸಂತಸಕರ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ದೀಪಿಕಾ ಪತಿ ರಣ್‌ವೀರ್ ಕೂಡ ಬಾಲಿವುಡ್‌ನ ಖ್ಯಾತ ನಟರಾಗಿದ್ದಾರೆ. ದೀಪಿಕಾ ಹಾಗೂ ರಣ್‌ವೀರ್ ಖ್ಯಾತ ಸೆಲೆಬ್ರಿಟಿ ದಂಪತಿಗಳಾಗಿದ್ದರೂ ಟ್ರೋಲ್‌ಗಳಿಗೂ ಆಹಾರವಾದವರು.
ಆದರೂ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಮೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ವಿವಾಹದ ನಂತರವೂ ಈ ಹಿಂದಿನಂತೆಯೇ ತಮ್ಮ ಸಿನಿ ಜೀವನವನ್ನು ನಡೆಸಿಕೊಂಡು ಹೋಗುತ್ತಿರುವ ದೀಪಿಕಾ ಹಾಗೂ ರಣ್‌ವೀರ್ ತಾವಿರುವುದೇ ಹೀಗೆ ಎಂದು ಯಾವುದೇ ಟ್ರೋಲ್‌ಗಳಿಗೂ ಉತ್ತರಿಸುತ್ತಿಲ್ಲ.
ದೀಪಿಕಾ ಪಡುಕೋಣೆಯ ತಂದೆ ಪ್ರಕಾಶ್ ಪಡುಕೋಣೆ ಹಾಗೂ ತಾಯಿ ಉಜ್ಜಲಾ ಪಡುಕೋಣೆ ಸೋದರ ಸಂಬಂಧಿಗಳು
ಇದೀಗ ದೀಪಿಕಾ ಪಡುಕೋಣೆಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿರುವುದು ಅವರ ಹಾಗೂ ರಣವೀರ್ ಜೀವನ ಅಥವಾ ಸಿನಿಮಾದ ಕುರಿತಾಗಿ ಅಲ್ಲ ಬದಲಿಗೆ ದೀಪಿಕಾ ತಂದೆ ಪ್ರಕಾಶ್ ಪಡುಕೋಣೆ ಹಾಗೂ ತಾಯಿ ಉಜ್ಜಲಾ ಕುರಿತಾಗಿದೆ.
ಒಂದೊಮ್ಮೆ ಪ್ರಕಾಶ್ ಅವರು ಸಂದರ್ಶನವೊಂದರಲ್ಲಿ ತಮ್ಮ ವಿವಾಹದ ಕುರಿತು ಮಾತನಾಡುತ್ತಾ ನಾನು ಹಾಗೂ ಉಜ್ಜಲಾ ಕಸಿನ್ಸ್ ಎಂಬುದನ್ನು ಬಹಿರಂಗಪಡಿಸಿದ್ದರು.
ಉಜ್ಜಲಾರನ್ನು ಅತಿಯಾಗಿ ಪ್ರೀತಿಸುತ್ತಿದ್ದ ಪ್ರಕಾಶ್
1980 ರಲ್ಲಿ ವಿಶ್ವದ ನಂಬರ್ 1 ಶ್ರೇಯಾಂಕಿತ ಆಟಗಾರ ಪ್ರಕಾಶ್ ಅವರು ಉಜ್ಜಲಾರನ್ನು ಅತಿಯಾಗಿ ಪ್ರೀತಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ನಾನು ನನ್ನ ಎರಡನೆಯ ಕಸಿನ್ ಉಜ್ಜಲಾರನ್ನು ವಿವಾಹವಾದೆ ಹಾಗೂ ಕೂಡಲೇ ಕೋಪರ್‌ಹೇಗನ್‌ಗೆ ಹೋದೆವು.
ಇದನ್ನೂ ಓದಿ: Kichcha Sudeepa: ಕಬ್ಜ ಸಿನಿಮಾ ನೋಡಿ ಕಿಚ್ಚ ಸುದೀಪ್ ಅಭಿಮಾನಿಗಳಿಂದ ಹೊಸ ಒತ್ತಾಯ! ಫ್ಯಾನ್ಸ್ ಪ್ಲೀಸ್ ಎಂದಿದ್ದೇಕೆ?
ಅಲ್ಲಿ ನಾನು ಉದ್ಯೋಗ ಗಿಟ್ಟಿಸಿಕೊಂಡೆ ಹಾಗೂ ಅಲ್ಲಿಯೇ ದೀಪಿಕಾ ಹುಟ್ಟುವವರೆಗೆ 1986 ರವರೆಗೆ ವಾಸಿಸಿದ್ದೆವು. ನಾನು 1989 ರಲ್ಲಿ ನಿವೃತ್ತನಾದೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ಸಖತ್ ಟ್ರೋಲ್‌ಗೆ ಒಳಗಾದ ದಂಪತಿಗಳು
ಈ ಸಂದರ್ಶನ ಇಂಟರ್ನೆಟ್‌ನಲ್ಲಿ ಪ್ರಸಾರಗೊಳ್ಳುತ್ತಿದ್ದಂತೆಯೇ ನೆಟ್ಟಿಗರು ಸಾಮಾಜಿಕ ತಾಣಗಳಲ್ಲಿ ದಂಪತಿಗಳನ್ನು ಟ್ರೋಲ್ ಮಾಡಲಾರಂಭಿಸಿದರು.
ಕೆಲವೊಂದು ಬಳಕೆದಾರರು ಗೇಮ್ ಆಫ್ ಥ್ರೋನ್ಸ್‌ನ ಪಾತ್ರಗಳಿಗೆ ಅವರನ್ನು ಹೋಲಿಸಿ ಕಾಮೆಂಟ್ ಮಾಡಿದ್ದಾರೆ. ಗೇಮ್ ಆಫ್ ಥ್ರೋನ್ಸ್‌ನಲ್ಲಿ ಬರುವ ತರ್ಗಾಯೆನ್ಸ್ ಪಾತ್ರವು, ರಕ್ತಸಂಬಂಧವನ್ನು ಉಳಿಸಿಕೊಳ್ಳುವುದಕ್ಕಾಗಿ ತನ್ನದೇ ಸ್ವಂತ ಸಹೋದರಿಯರನ್ನು ವಿವಾಹವಾಗುವ ಕಥಾಪಾತ್ರವಾಗಿದೆ.
ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡುತ್ತಿರುವ ನೆಟ್ಟಿಗರು
ಇನ್ನು ಕೆಲವು ನೆಟ್ಟಿಗರು ಪ್ರಕಾಶ್ ಹಾಗೂ ಉಜ್ಜಲಾ ಕುರಿತು ನಿರ್ಲಜ್ಜೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಇನ್ನು ಕೆಲವರು ದಂಪತಿಗಳ ಪರವಾಗಿ ಕೂಡ ಕಾಮೆಂಟ್ ಮಾಡಿದ್ದು, ಭಾರತದಲ್ಲಿ ಇದು ಹೇಗೆ ಸಾಮಾನ್ಯ ಪದ್ಧತಿಯಾಗಿದೆ ಎಂಬುದನ್ನು ವಿವರಿಸಿದ್ದಾರೆ.
ದಕ್ಷಿಣದ ಕಡೆಗಳಲ್ಲಿ ಇಂತಹ ಪದ್ಧತಿಗಳನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ ಎಂದು ತಿಳಿಸಿರುವ ನೆಟ್ಟಿಗರೊಬ್ಬರು ಕೆಲವೊಂದು ನಿಯಮಗಳಿವೆ ಎಂದು ತಿಳಿಸಿದ್ದಾರೆ.
ಒಂದೇ ಜಾತಿಯವರನ್ನು ವಿವಾಹವಾಗುತ್ತೇವೆ ಅಂದರೆ ದಕ್ಷಿಣ ಭಾರತದಲ್ಲಿ ಜಾತಿಗಳು ಸಣ್ಣದಾಗಿರುವುದರಿಂದ ನಾವು ನಮ್ಮದೇ ಅವಿಭಕ್ತ ಕುಟುಂಬದಿಂದ ವಿವಾಹವಾಗುತ್ತೇವೆ ಎಂದು ತಿಳಿಸಿದ್ದಾರೆ.
ಎಲ್ಲಾ ಸೋದರ ಸಂಬಂಧಿಗಳು ವಿವಾಹವಾಗುವಂತಿಲ್ಲ. ಬೇರೆ ಬೇರೆ ಕುಟುಂಬದ ಕಸಿನ್ಸ್ ವಿವಾಹವಾಗಬಹುದು. ಅಣ್ಣ-ತಂಗಿಯ ಮಕ್ಕಳು ವಿವಾಹ ಮಾಡಿಕೊಳ್ಳಬಹುದು ಆದರೆ ಇಬ್ಬರು ಸಹೋದರರ ಮಕ್ಕಳು ಹಾಗೂ ಇಬ್ಬರು ಸಹೋದರಿಯರ ಮಕ್ಕಳು ಪರಸ್ಪರ ವಿವಾಹವಾಗುವಂತಿಲ್ಲ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ