• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಸಾಮಾಜಿಕ ಜಾಲತಾಣದಲ್ಲಿ ನಿತ್ಯಾ ಮೆನನ್​ ಗುಟ್ಟು ರಟ್ಟು ಮಾಡಿದ ದೀಪಿಕಾ ಪಡುಕೋಣೆ..!​

ಸಾಮಾಜಿಕ ಜಾಲತಾಣದಲ್ಲಿ ನಿತ್ಯಾ ಮೆನನ್​ ಗುಟ್ಟು ರಟ್ಟು ಮಾಡಿದ ದೀಪಿಕಾ ಪಡುಕೋಣೆ..!​

ಬೆಂಗಳೂರಿನ ಹುಡುಗಿಯರಾದ ನಿತ್ಯಾ ಮೆನನ್​ ಹಾಗೂ ದೀಪಿಕಾ ಪಡುಕೋಣೆ

ಬೆಂಗಳೂರಿನ ಹುಡುಗಿಯರಾದ ನಿತ್ಯಾ ಮೆನನ್​ ಹಾಗೂ ದೀಪಿಕಾ ಪಡುಕೋಣೆ

Deepika Padukone Tweet: ಬೆಂಗಳೂರಿನ ಈ ಹುಡುಗಿ ದೀಪಿಕಾ ಪಡುಕೋಣೆ, ಸಿಲಿಕಾನ್​ ಸಿಟಿಯ ಮತ್ತೊಬ್ಬರು ನಟಿಯ ಬಗೆಗಿನ ಟಾಪ್​ ಸೀಕ್ರೆಟ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಳಿಸಿದ್ದಾರೆ. ಈ ರಹಸ್ಯ ಅವರಿಗೆ ಇತ್ತೀಚೆಗಷ್ಟೆ ತಿಳಿಯಿತಂತೆ.

  • Share this:

ನಟಿ ದೀಪಿಕಾ ಪಡುಕೋಣೆ ಬೆಂಗಳೂರಿನ ಹುಡುಗಿ ಅನ್ನೋ ವಿಷಯ ಗೊತ್ತೇ ಇದೆ. ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ, ಮಾಡೆಲಿಂಗ್​ ಅಂತ ಹೋದ ನಟಿ ಸ್ಯಾಂಡಲ್​ವುಡ್​ನಲ್ಲಿ ಉಪ್ಪಿ ಜತೆ 'ಐಶ್ವರ್ಯಾ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಂತರ ಬಾಲಿವುಡ್​ ಹಾಗೂ ಹಾಲಿವುಡ್​ನಲ್ಲಿ ಮಿಂಚಿದರು ಈ ನೀಳ ಕಾಲುಗಳ ಚೆಲುವೆ.

ಬೆಂಗಳೂರಿನ ಈ ಹುಡುಗಿ, ಸಿಲಿಕಾನ್​ ಸಿಟಿಯ ಮತ್ತೊಬ್ಬರು ನಟಿ ಬಗ್ಗೆ ಟಾಪ್​ ಸೀಕ್ರೆಟ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಳಿಸಿದ್ದಾರೆ. ಈ ರಹಸ್ಯ ಅವರಿಗೆ ಇತ್ತೀಚೆಗಷ್ಟೆ ತಿಳಿಯಿತಂತೆ.

Deepika Padukone Looks looks stunning in her new photo shoot
ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ


ಹೌದು, ತಮ್ಮ ನಟನೆ ಹಾಗೂ ಮಧುರವಾದ ಕಂಠದಿಂದಲೇ ಅಭಿಮಾನಿಗಳನ್ನು ಇಂಪ್ರೆಸ್​ ಮಾಡಿರುವ ನಟಿ ನಿತ್ಯಾ ಮೆನನ್​. ನಿತ್ಯಾ ಯಾವ ಸಂದರ್ಶನದಲ್ಲಾದರೂ ಬೆಂಗಳೂರು ನನ್ನ ಊರು, ನಾನು ಕನ್ನಡದವಳು ಎಂದು ಹೇಳಿಕೊಳ್ಳುವುದನ್ನು ಕೇಳಿದ್ದೇವೆ. ಇಂತಹ ನಟಿಯ ಬಗ್ಗೆ ಈಗ ದೀಪಿಕಾ ಟ್ವೀಟ್​ ಮಾಡಿದ್ದಾರೆ.


ದೀಪಿಕಾ ಪಡುಕೋಣೆ ಹಾಗೂ ನಿತ್ಯಾ ಮೆನನ್​ ಇಬ್ಬರೂ ಒಂದೇ ಊರಿನವರಾಗುವುದರೊಂದಿಗೆ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಕಾಲೇಜ್​ಮೇಟ್​ಅಂತೆ.

Nithya Menen looks gorgeous in her latest photo shoot
ಬಹುಭಾಷಾ ನಟಿ ನಿತ್ಯಾ ಮೆನನ್​


ಇದನ್ನೂ ಓದಿ: ಪ್ರಭಾಸ್​ಗೆ ಬಾಲಿವುಡ್​ನಿಂದ ಮತ್ತೊಂದು ಆಫರ್​: ಅರ್ಜುನ್​ ರೆಡ್ಡಿ ನಿರ್ದೇಶಕನ ಸಿನಿಮಾದಲ್ಲಿ ಯಂಗ್ ರೆಬೆಲ್​..!

ಹೌದು, ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ದೀಪಿಕಾ ಹಾಗೂ ನಿತ್ಯಾ ಮೆನನ್​ ಭೇಟಿಯಾಗಿದ್ದಾರೆ. ಆಗ ಇವರಿಬ್ಬರ ನಡುವೆ ಕುಶಲೋಪರಿ ವಿಚಾರಿಸುವ ಮಾತುಕತೆ ನಡೆದಿದ್ದು, ಆಗ ಈ ವಿಷಯವನ್ನು ನಿತ್ಯಾ ಖುದ್ದು ದೀಪಿಕಾಗೆ ತಿಳಸಿದ್ದಾರಂತೆ. ಹೀಗೆಂದು ದೀಪಿಕಾ ಟ್ವಿಟರ್​ನಲ್ಲಿ ತಮ್ಮ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಬರೆದುಕೊಂಡಿದ್ದಾರೆ.

Nitya Menen Once again sung Kannada Song and video went viral on social media
ನಿತ್ಯಾ ಮೆನನ್​


ನಿತ್ಯಾ ಮೆನನ್​ ಇತ್ತೀಚೆಗೆ ತೆರೆಕಂಡ 'ಮಿಷನ್​ ಮಂಗಲ್​' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ರಣವೀರ್​ ಸಿಂಗ್​ ಜತೆ '83' ಸಿನಿಮಾದಲ್ಲಿ ಅಭಿನಯಿಸಿರುವ ದೀಪಿಕಾ 'ಛಪಾಕ್​' ಚಿತ್ರದ ಪ್ರಚಾರದಲ್ಲಿ ವ್ಯಸ್ತವಾಗಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಅಂದರೆ ಜ.10ಕ್ಕೆ ತೆರೆಗಪ್ಪಳಿಸಲಿದೆ.

Karishma Tanna: ಕಡಲ ಕಿನಾರೆಯಲ್ಲಿ ಬಿಗ್​ ಬಾಸ್​ ಬಿಕಿನಿ ಬ್ಯೂಟಿ..!

top videos
    First published: