Deepika Padukone: ಗಂಡ ರಣವೀರ್ ಸಿಂಗ್​ ಜತೆ ಸಿನಿಮಾ ಮಾಡಲು ಒಲ್ಲೆ ಎಂದ ದೀಪಿಕಾ ಪಡುಕೋಣೆ..!

Ranveer Singh and Deepika Padukone: ರಣವೀರ್ ಹಾಗೂ ದೀಪಿಕಾ ಇಬ್ಬರು ಪದ್ಮಾವತ್​, ರಾಮ್​ಲೀಲಾ, ಬಾಜಿರಾವ್​ ಮಸ್ತಾನಿಯಂತಹ ಹಿಟ್​ ಸಿನಿಮಾಗಳನ್ನು ಕೊಟ್ಟ ಜೋಡಿ ಈಗ ಸಿನಿಮಾದಲ್ಲಿ ಒಟ್ಟಿಗೆ ನಟಿಸೋದಿಲ್ಲವಂತೆ. 

news18-kannada
Updated:December 3, 2019, 3:16 PM IST
Deepika Padukone: ಗಂಡ ರಣವೀರ್ ಸಿಂಗ್​ ಜತೆ ಸಿನಿಮಾ ಮಾಡಲು ಒಲ್ಲೆ ಎಂದ ದೀಪಿಕಾ ಪಡುಕೋಣೆ..!
ರಣವೀರ್ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ
  • Share this:
ರಣವೀರ್ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ವಿವಾಹಕ್ಕೆ ಮೊದಲು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಹಿಟ್​ ಜೋಡಿ ಎನಿಸಿಕೊಂಡಿದ್ದರು. ವಿವಾಹದ ನಂತರವೂ ದೀಪಿಕಾ ಹಾಗೂ ರಣವೀರ್​ '83' ಚಿತ್ರದಲ್ಲಿ ಒಟ್ಟಿಗೆ ತೆರೆ ಮೇಲೆ ಪತಿ-ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಿರುವಾಗಲೇ ದೀಪಿಕಾ ರಣವೀರ್ ಜತೆ ಸಿನಿಮಾ ಮಾಡುಲು ಒಲ್ಲೆ ಎಂದಿದ್ದಾರಂತೆ.

ರಣವೀರ್ ಹಾಗೂ ದೀಪಿಕಾ ಇಬ್ಬರು 'ಪದ್ಮಾವತ್​', 'ಗಲಿಯೋಂಕಿ ರಾಸ್​ಲೀಲಾ ರಾಮ್​ಲೀಲಾ', 'ಬಾಜಿರಾವ್​ ಮಸ್ತಾನಿ'ಯಂತಹ ಹಿಟ್​ ಸಿನಿಮಾಗಳನ್ನು ಕೊಟ್ಟ ಜೋಡಿ ಈಗ ಸಿನಿಮಾದಲ್ಲಿ ಒಟ್ಟಿಗೆ ನಟಿಸೋದಿಲ್ಲವಂತೆ.

Deepika and Ranveer Visited Amritsar Golden Temple here are the photos
ಮೊದಲ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ದೀಪಿಕಾ ಹಾಗೂ ರಣವೀರ್​ ನಿನ್ನೆ ಸಂಜೆಯೇ ಅಮೃತಸರದ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದಾರೆ.


ಹೌದು, ಈ ಜೋಡಿಯನ್ನು ತೆರೆ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಬಯಸುತ್ತಾರೆ. ಅಲ್ಲದೆ ನಿಜ ಜೀವನದಲ್ಲೂ ದಂಪತಿಯಾಗಿದ್ದರೂ ದೀಪಿಕಾ ರಣವೀರ್​ ಸಿಂಗ್​ ಜತೆ ಮೂರು ಸಿನಿಮಾಗಳಲ್ಲಿ ಅಭಿನಯಿಸಲು ಒಲ್ಲೆ ಎಂದಿದ್ದಾರಂತೆ.

ಇದನ್ನೂ ಓದಿ: Nitya Menen: ಮತ್ತೊಮ್ಮೆ ಕನ್ನಡದ ಹಾಡು ಹಾಡಿದ ನಟಿ ನಿತ್ಯಾ ಮೆನನ್: ಹಾಡಿನ ವಿಡಿಯೋ ವೈರಲ್​​..!

ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದೀಪಿಕಾ ಈ ವಿಷಯ ಬಹಿರಂಗಪಡಿಸಿದ್ದಾರೆ. ಅವರ ರಣವೀರ್ ಸಿಂಗ್ ಜತೆ​ ಮೂರು ಸಿನಿಮಾಗಳಲ್ಲಿ ಅಭಿನಯಿಸೋಕೆ ಒಲ್ಲೆ ಎಂದಿದ್ದರಂತೆ. ಅದಕ್ಕೆ ಕಾರಣ ಏನೆಂದೂ ಬಿಚ್ಚಿಟ್ಟಿದ್ದಾರೆ.

ರಣವೀರ್​ ಸಿಂಗ್ ಹಾಗೂ ದೀಪಿಕಾ ಪಡುಕೋಣೆ
ನಿಜ ಜೀವನದಲ್ಲಿ ಈ ಜೋಡಿಯ ನಡುವೆ ಇರುವ ಕಪಲ್​ ಕೆಮಿಸ್ಟ್ರಿಯನ್ನು ಪರದೆ ಮೇಲೆ ತೆರೆದಿಡಲು ಇಷ್ಟವಿಲ್ಲದ ಕಾರಣಕ್ಕೆ ದೀಪಿಕಾ, ರಣವೀರ್​ ಸಿಂಗ್ ಜತೆ ಮೂರು ಸಿನಿಮಾಗಳಲ್ಲಿ ಅಭಿನಯಿಸಲು ನೋ ಎಂದಿದ್ದಾರಂತೆ.


Bigg Boss: ಬಾತ್​ಟಬ್​ನಲ್ಲಿರುವ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಬಿಗ್​ ಬಾಸ್​ ಖ್ಯಾತಿಯ ಈ ನಟಿ..!


First published: December 3, 2019, 3:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading