Gehraiyaan: ಬೇರೊಬ್ಬನ ಜೊತೆ ರೊಮ್ಯಾನ್ಸ್​​ ಮಾಡೋಕೆ ರಣವೀರ್​ ಕೊಟ್ರಾ ಪರ್ಮಿಷನ್​? ಹಿಂಗ್​ ಪ್ರಶ್ನೆ ಕೇಳಿದವರಿಗೆ ಡಿಪ್ಪಿ ಖಡಕ್​ ರಿಪ್ಲೈ!

ತ್ತೀಚೆಗೆ ಸಂದರ್ಶನವೊಂದನ್ನು ನೀಡಿರುವ ದೀಪಿಕಾ ಪಡುಕೋಣೆ, ಗೆಹರಾಯಿಯಾಂ ಚಿತ್ರದ ಟ್ರೇಲರ್(Trailer) ಕುರಿತು ವ್ಯಕ್ತವಾಗುತ್ತಿರುವ ಮೂರ್ಖ ಪ್ರತಿಕ್ರಿಯೆಗಳು ಹಾಗೂ ಟ್ರೋಲ್(Troll) ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ, ಸಿದ್ಧಾರ್ಥ್

ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ, ಸಿದ್ಧಾರ್ಥ್

  • Share this:

ದೀಪಿಕಾ ಪಡುಕೋಣೆ(Deepika Padukone) ನಾಯಕಿಯಾಗಿ ನಟಿಸಿರುವ "ಗೆಹರಾಯಿಯಾಂ" (Gehraiyaan) ಚಿತ್ರ ಅಮೇಜಾನ್​ ಪ್ರೈಮ್(Amazon Prime)​ನಲ್ಲಿ ಬಿಡುಗಡೆಯಾಗಿದೆ. ಇತ್ತೀಚೆಗೆ ಸಂದರ್ಶನವೊಂದನ್ನು ನೀಡಿರುವ ದೀಪಿಕಾ ಪಡುಕೋಣೆ, ಗೆಹರಾಯಿಯಾಂ ಚಿತ್ರದ ಟ್ರೇಲರ್(Trailer) ಕುರಿತು ವ್ಯಕ್ತವಾಗುತ್ತಿರುವ ಮೂರ್ಖ ಪ್ರತಿಕ್ರಿಯೆಗಳು ಹಾಗೂ ಟ್ರೋಲ್(Troll) ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಟ್ರೇಲರ್‌ನಲ್ಲಿ ನಾಯಕಿ ದೀಪಿಕಾ ತನ್ನ ಸಹನಟನೊಂದಿಗೆ ಕೆಲವು ಉತ್ಕಟ ದೃಶ್ಯ(Intimate Scenes)ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಗಳನ್ನು ಹಲವಾರು ಟ್ರೋಲರ್‌ಗಳು ಟ್ರೋಲ್ ಮಾಡಿದ್ದು, ಈ ದೃಶ್ಯಗಳಲ್ಲಿ ನಟಿಸಲು ನಿಮ್ಮ ಪತಿ ರಣವೀರ್ ಸಿಂಗ್(Ranveer Singh) ಅನುಮತಿ ಪಡೆದಿದ್ದೀರಾ ಎಂದು ಕಾಲೆಳೆದಿದ್ದಾರೆ. ಇತ್ತೀಚೆಗೆ ಬಾಲಿವುಡ್ ಬಬಲ್ ನಡೆಸಿದ ಸಂದರ್ಶನದಲ್ಲಿ ಈ ಕುರಿತು ದೀಪಿಕಾ ಪಡುಕೋಣೆಯವರ ಪ್ರತಿಕ್ರಿಯೆಯನ್ನು ಕೇಳಿತ್ತು.


ಬೋಲ್ಡ್ ಪಾತ್ರದ ಬಗ್ಗೆ ದೀಪಿಕಾಗೆ ನೆಟ್ಟಿಗರ ಪ್ರಶ್ನೆ!

ಅದಕ್ಕೆ ಪ್ರತಿಯಾಗಿ, "ಇಂತಹ ಪ್ರತಿಕ್ರಿಯೆಗಳಿಗೆ ಪ್ರತಿಕ್ರಿಯೆ ನೀಡುವುದೂ ಮೂರ್ಖತನ‌. ನಾನು ಪ್ರತಿಕ್ರಿಯೆಗಳನ್ನು ಓದುವುದಿಲ್ಲ. ನನ್ನ ಪತಿ ಕೂಡಾ ಓದುವುದಿಲ್ಲ ಎಂಬ ಬಗ್ಗೆ ನನಗೆ ಖಾತ್ರಿಯಿದೆ." ಎಂದು ದೀಪಿಕಾ ಹೇಳಿಕೊಂಡಿದ್ದಾರೆ. "ನನಗೆ ಅಸಹ್ಯವಾಗುತ್ತಿದೆ. ಅಷ್ಟು ಮೂರ್ಖತನದ್ದಾಗಿದೆ" ಎಂದೂ ತಿಳಿಸಿದ್ದಾರೆ. ಇತ್ತೀಚಿಗೆ ರಣವೀರ್ ಸಿಂಗ್ ಚಿತ್ರವನ್ನು ವೀಕ್ಷಿಸಿದ್ದು, ನನ್ನ ಪಾತ್ರ ನಿರ್ವಹಣೆಯ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದರು ಎಂಬ ಮಾತನ್ನೂ ಹಂಚಿಕೊಂಡಿದ್ದಾರೆ.


ಇಲ್ಲಿಯವರೆಗೂ ಇಂಥ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ ಎಂದ ಡಿಪ್ಪಿ

ಇದಕ್ಕೂ ಮುನ್ನ ಇಂಡಿಯನ್ ಎಕ್ಸ್‌ಪ್ರೆಸ್‌ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದ ದೀಪಿಕಾ ಪಡುಕೋಣೆ, ಈ ಚಿತ್ರದ ಪಾತ್ರ ನಿರ್ವಹಣೆಯ ಮೇಲೆ ಪೀಕು ಅಥವಾ ತಮಾಷಾ ಪಾತ್ರ ನಿರ್ವಹಣೆಯ ನೆರಳಿದೆ. ಯಾಕೆಂದರೆ, ಪಾತ್ರವನ್ನು ಸೃಷ್ಟಿಸಿರುವ ರೀತಿ ಒಂದೇ ಬಗೆಯಲ್ಲಿದ್ದು, ನೈಜ ಮತ್ತು ಅನ್ವಯಕವಾಗಿದೆ. ಆದರೆ, ಪ್ರಾಮಾಣಿಕವಾಗಿ ಹೇಳುವುದಾದರೆ, ಈ ಪಾತ್ರಗಳಲ್ಲಿ ಸಾಮಾನ್ಯ ಎಳೆಯಿದ್ದು, ನೈಜತೆಗೆ ಎಷ್ಟು ಸಾಧ್ಯವೋ ಅಷ್ಟು ಹತ್ತಿರ ಇವೆ. ನಾನು ಈವರೆಗೆ ನಿರ್ವಹಿಸಿರುವ ಪಾತ್ರಗಳಲ್ಲಿ ಈ ಚಿತ್ರದ ಪಾತ್ರ ಅತ್ಯಂತ ಸಂಕೀರ್ಣವಾಗಿದ್ದು, ನಾನು ಈವರೆಗೆ ನಿರ್ವಹಿಸಿರುವ ಪಾತ್ರಗಳಿಗಿಂತ ಇದು ವಿಭಿನ್ನ ಮತ್ತು ಅತ್ಯಂತ ಸವಾಲಿನದಾಗಿತ್ತು ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ‘ಈ ಟೈಮಲ್ಲಿ ಹೊಟ್ಟೆ, ಸ್ತನಗಳು ದೊಡ್ಡದಾಗುತ್ತೆ’ ಬಾಡಿ ಶೇಮಿಂಗ್​​ಗೆ ಗರ್ಭಿಣಿ ಕಾಜಲ್‌ ಉತ್ತರ

ಸಂಬಂಧಗಳ ಕುರಿತ್ ಚಿತ್ರ 'ಗೆಹರಾಯಿಯಾಂ'

'ಗೆಹರಾಯಿಯಾಂ' ಸಂಕೀರ್ಣ ಸಂಬಂಧಗಳ ಕುರಿತ ಚಿತ್ರ. ಈ ಚಿತ್ರದಲ್ಲಿ ಪಾತ್ರ ನಿರ್ವಹಿಸುವುದು ಆಕೆಯ ಪಾಲಿಗೆ ಅನೂಭೂತಿಕರವಾಗಿದ್ದು, ಜನರನ್ನು ಹಾಗೂ ಅವರ ಬಿಕ್ಕಟ್ಟುಗಳನ್ನು ಸ್ವೀಕರಿಸುವಂತೆ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ದೀಪಿಕಾ, "ಯಾವುದೇ ನಿರ್ಧಾರಕ್ಕೊಳಗಾಗದೆ, ಹೆಚ್ಚು ಅನುಭೂತಿ, ಹೆಚ್ಚು ಸ್ವೀಕಾರ ಮಾಡುವ ಹಾದಿಯಲ್ಲಿದ್ದೇನೆ ಎಂದು ಅನಿಸುತ್ತಿದೆ. ಈ ಚಿತ್ರವು ನನ್ನೊಳಗಿನ ಭಾವನೆ ಹಾಗೂ ಭಾವುಕತೆಯನ್ನು ಮಾತ್ರ ಉದ್ದೀಪಿಸಿದೆ. ಇದರಿಂದ ಎಲ್ಲರಲ್ಲೂ ಅವರ ಕಣ್ಣುಗಳು ಹೇಳುವುದಕ್ಕಿಂತ ಅವರಲ್ಲಿ ಆಳವಾದ ಕತೆಯಿದೆ ಎಂದು ಅರ್ಥವಾಗಿದೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಈ ಸೂಪರ್​ ಸ್ಟಾರ್​ ಜೊತೆ ಸಿನಿಮಾ ಮಾಡೋ ಬಯಕೆಯಂತೆ ಆಲಿಯಾಗೆ.. ಅವ್ರ​ ಮನೇಲೂ ಅದನ್ನೇ ಕೇಳ್ತಾಇದ್ದರಂತೆ!

ಗೆಹರಾಯಿಯಾಂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ!

ಫೆ. 11ರಂದು ಗೆಹರಾಯಿಯಾಂ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ ಸಿದ್ಧಾರ್ಥ್ ಚತುರ್ವೇದಿ ಚಿತ್ರದ ನಾಯಕನಾಗಿ ನಟಿಸಿದ್ದರೆ, ದೀಪಿಕಾ ಪಡುಕೋಣೆ, ಅನನ್ಯಾ ಪಾಂಡೆ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಹಿರಿಯ ನಟ ನಾಸಿರುದ್ದೀನ್ ಶಾ, ಅನನ್ಯಾ ಆನಂದ್, ಧೈರ್ಯ ಕರ್ವ, ರಜತ್ ಕಪೂರ್, ಆಶಿಶ್ ಸಿಂಗ್ ಮತ್ತಿತರರು ನಟಿಸಿದ್ದಾರೆ. ಈ ಚಿತ್ರವನ್ನು ಹೀರು ಯಶ್ ಜೋಹರ್ ಹಾಗೂ ಕರಣ್ ಜೋಹರ್ ನಿರ್ಮಿಸಿದ್ದು, ಶಕುನ್ ಬಾತ್ರಾ ನಿರ್ದೇಶಿಸಿದ್ದಾರೆ. ಯಶ್ ಸಹಾಯ್ ಚಿತ್ರಕತೆ, ಕೌಶಲ್ ಶಾ ಛಾಯಾಗ್ರಹಣ, ನಿತೇಶ್ ಭಾಟಿಯಾ ಸಂಕಲನ ಚಿತ್ರಕ್ಕಿದೆ.


Published by:Vasudeva M
First published: