• Home
  • »
  • News
  • »
  • entertainment
  • »
  • Deepika Padukone: ಕ್ಯಾನ್​​ ಫಿಲ್ಮ್ ಫೆಸ್ಟಿವಲ್​ನ ಜ್ಯೂರಿಯಾಗಿ ಬಾಲಿವುಡ್​ ಬೆಡಗಿ - ದೀಪಿಕಾ ಡ್ರೆಸ್​ ನೋಡಿ ಅಭಿಮಾನಿಗಳು ಫಿದಾ

Deepika Padukone: ಕ್ಯಾನ್​​ ಫಿಲ್ಮ್ ಫೆಸ್ಟಿವಲ್​ನ ಜ್ಯೂರಿಯಾಗಿ ಬಾಲಿವುಡ್​ ಬೆಡಗಿ - ದೀಪಿಕಾ ಡ್ರೆಸ್​ ನೋಡಿ ಅಭಿಮಾನಿಗಳು ಫಿದಾ

ನಟಿ ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ

Cannes Festival: ವರದಿಗಳ ಪ್ರಕಾರ, 2017 ರಿಂದ ಕ್ಯಾನ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ರೆಗ್ಯುಲರ್ ಆಗಿರುವ ದೀಪಿಕಾ, ಈ ಬಾರಿ ಎಲ್ಲಾ ಹತ್ತು ದಿನಗಳ ಕಾಲ ಭಾಗವಹಿಸುವ ನಿರೀಕ್ಷೆಯಿದೆ.

  • Share this:

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಕ್ಯಾನ್​​ ಫಿಲ್ಮ್ ಫೆಸ್ಟಿವಲ್ ಜ್ಯೂರಿ ( Cannes Film Festival Jury ) 2022 ರ ಭಾಗವಾಗಿದ್ದು, ಫ್ರಾನ್ಸ್‌ನಲ್ಲಿ (France) ತಮ್ಮ ಸಹ ಜ್ಯೂರಿಗಳೊಂದಿಗೆ ಊಟ ಮಾಡಲು ಬಂದ ವೇಳೆ ಕಾಣಿಸಿಕೊಂಡಿದ್ದು, ಆ ಫೋಟೋ ಇದೀಗ ವೈರಲ್ ಆಗುತ್ತಿದೆ. ಕ್ಯಾನ್ ಚಲನಚಿತ್ರೋತ್ಸವದ 75 ನೇ ಆವೃತ್ತಿಯಲ್ಲಿ ಆರಂಭವಾಗಿದ್ದು, ಸಿನಿಮೋತ್ಸವಕ್ಕೂ ಮುನ್ನ ಜ್ಯುರಿಗಳಿಗಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ದೀಪಿಕಾ ಭಾಗಿಯಾಗಿದ್ದು, ಅವರು ಧರಿಸಿದ್ದ ಡ್ರೆಸ್ ಎಲ್ಲರ ಗಮನ ಸೆಳೆದಿದೆ.


ದೀಪಿಕಾ ಪಡುಕೋಟೆ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ನಲ್ಲಿ ಸಹ ತಮ್ಮ ಛಾಪು ಮೂಡಿಸಿದವರು. ಕನ್ನಡದ ಐಶ್ವರ್ಯ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ದೀಪಿಕಾ ಈಗ ಜಾಗತಿಕ ತಾರೆ.


ತಮ್ಮ ಅದ್ಬುತ ನಟನೆಯ ಮೂಲಕ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ದೀಪಿಕಾ ಪ್ರಪಂಚದ ಪ್ರತಿಷ್ಟಿತ ಅವಾರ್ಡ್ ಕ್ಯಾನ್ ಸಿನಿಮೋತ್ಸವದಲ್ಲಿ ಜ್ಯೂರಿಯಾಗಿ ಪಾಲ್ಗೊಂಡಿರುವುದು ನಿಜಕ್ಕೂ ಭಾರತೀಯರಿಗೆ ಹೆಮ್ಮೆಯ ವಿಚಾರ.


ದೀಪಿಕಾ ಹಲವಾರು ಬಾರಿ ಕ್ಯಾನ್​ ಸಿನಿಮೋತ್ಸವದಲ್ಲಿ ಭಾಗವಹಿಸಿಸುತ್ತಿದ್ದರು, ಆದರೆ ಮೊದಲ ಬಾರಿಗೆ ಜ್ಯೂರಿ ತಂಡದ ಸದ್ಯರಾಗಿದ್ದಾರೆ. ಇನ್ನು ಈ ಔತಣ ಕೂಟದಲ್ಲಿ ಭಾಗವಹಿಸಲು ಲೂಯಿ ವಿಟಾನ್ ಅವರ ಫಾಲ್ 2021 ಸಂಗ್ರಹದಿಂದ ದೀಪಿಕಾ ಸೀಕ್ವಿನ್ಡ್ ಡ್ರೆಸ್ ಆಯ್ಕೆ ಮಾಡಿಕೊಂಡಿದ್ದು. ಅದಕ್ಕೆ ಸರಿ ಹೊಂದುವ ಕಂದು ಬಣ್ಣದ ಎತ್ತರದ ಬೂಟುಗಳನ್ನು ಧರಿಸಿ ಬಹಳ ಸುಂದರವಾಗಿ ಕಾಣುತ್ತಿದ್ದರು. ಜೊತೆ ಇಳಿ ಬಿಟ್ಟ ಸುಂದರ ಕೂದಲು ಮತ್ತು ಮೇಕ್ಅಪ್ ಕೂಡ ಇಂದು ಪ್ಲಸ್ ಪಾಯಿಂಟ್ ಆಗಿತ್ತು.


ಅವರು ಕ್ಯಾನ್​ ಫಿಲ್ಮ್ ಫೆಸ್ಟಿವಲ್ ನಿರ್ದೇಶಕ ಥಿಯೆರಿ ಫ್ರೆಮಾಕ್ಸ್, US ಚಲನಚಿತ್ರ ನಿರ್ದೇಶಕ ಮತ್ತು ಅಧಿಕೃತ ಆಯ್ಕೆಯ ತೀರ್ಪುಗಾರ ಸದಸ್ಯರಾದ ಜೆಫ್ ನಿಕೋಲ್ಸ್, ಬ್ರಿಟಿಷ್ ನಟಿ ರೆಬೆಕಾ ಹಾಲ್ ಮತ್ತು ಇಟಾಲಿಯನ್ ನಟಿ ಜಾಸ್ಮಿನ್ ಟ್ರಿಂಕಾ ಜೊತೆ ಈ ಕೂಟದಲ್ಲಿ ಭಾಗವಹಿಸಿದ್ದು, ಸದ್ಯ ಸಾಮಾಜಿಕ ಜಾಲಾತಾಣದಲ್ಲಿ ಟ್ರೆಂಡ್ ಆಗುತ್ತಿದ್ದಾರೆ.


ಸಮಾರಂಭಕ್ಕಾಗಿ ಫ್ರಾನ್ಸ್‌ಗೆ ಬಂದಿಳಿದ ದೀಪಿಕಾ ತಮ್ಮ ಅಭಿಮಾನಿಗಳೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೀಕ್ ಪೀಕ್ ಅನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ದೀಪಿಕಾ ತಿನ್ನುವುದು ಅಥವಾ ಮಲಗುವುದನ್ನು ಆಯ್ಕೆ ಮಾಡಲು ಕಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಬಣ್ಣದ ಲೋಕಕ್ಕೆ ಕಿಂಗ್​ ಖಾನ್​ ಮಗಳು ಎಂಟ್ರಿ - ಚಿತ್ರದ ಫಸ್ಟ್​ ಲುಕ್​ ನೋಡಿ ಭಾವುಕರಾದ ಶಾರುಖ್​


ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರು 75 ನೇ ಆವೃತ್ತಿಯ ತೀರ್ಪುಗಾರರ ಅಧ್ಯಕ್ಷರಾಗಿದ್ದು, ಸಮಾರಂಬ ಇಂದು ಪ್ರಾರಂಭವಾಗಿದೆ. ಲಿಂಡನ್ ದಿ ಮೆಷರ್ ಆಫ್ ಎ ಮ್ಯಾನ್‌ ಚಿತ್ರಕ್ಕಾಗಿಕ್ಯಾನ್​ನಲ್ಲಿ 2015 ರ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದು, ಕಳೆದ ವರ್ಷದ ಪಾಮ್ ಡಿ'ಓರ್ ವಿಜೇತ 'ಟೈಟೇನ್' ಚಿತ್ರದಲ್ಲಿ ಸಹ ನಟಿಸಿದ್ದಾರೆ.


ದೀಪಿಕಾ ಅವರೊಂದಿಗೆ ತೀರ್ಪುಗಾರರ ಪ್ಯಾನೆಲ್‌ನಲ್ಲಿ ನಟಿ-ನಿರ್ದೇಶಕಿ ರೆಬೆಕಾ ಹಾಲ್, ನೂಮಿ ರಾಪೇಸ್ ಮತ್ತು ಇಟಾಲಿಯನ್ ನಟಿ-ನಿರ್ದೇಶಕಿ ಜಾಸ್ಮಿನ್ ಟ್ರಿಂಕಾ, ಜೊತೆಗೆ ನಿರ್ದೇಶಕರಾದ ಅಸ್ಗರ್ ಫರ್ಹಾದಿ, ಲಾಡ್ಜ್ ಲೈ, ಜೆಫ್ ನಿಕೋಲ್ಸ್ ಮತ್ತು ಜೋಕಿಮ್ ಟ್ರೈಯರ್ ಸಹ ಇದ್ದಾರೆ. ಮೇ 28 ರಂದು ಕ್ಯಾನ್​ನಲ್ಲಿ ನಡೆಯುವ ಸಮಾರಂಭದಲ್ಲಿ ತೀರ್ಪುಗಾರರು ಈ ವರ್ಷದ ಪಾಮ್ ಡಿ'ಓರ್ ಹಾನರ್ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತಾರೆ.


ಇದನ್ನೂ ಓದಿ:ಮುಗಿದೇ ಹೋಯ್ತು 'ಸಂಘರ್ಷ'ದ ಕಥೆ, 'ಸುವರ್ಣ' ಅವಕಾಶಕ್ಕೆ ಥ್ಯಾಂಕ್ಸ್ ಎಂದ ತೇಜಸ್ವಿನಿ ಶೇಖರ್


ವರದಿಗಳ ಪ್ರಕಾರ, 2017 ರಿಂದ ಕ್ಯಾನ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ರೆಗ್ಯುಲರ್ ಆಗಿರುವ ದೀಪಿಕಾ, ಈ ಬಾರಿ ಎಲ್ಲಾ ಹತ್ತು ದಿನಗಳ ಕಾಲ ಭಾಗವಹಿಸುವ ನಿರೀಕ್ಷೆಯಿದೆ.

Published by:Sandhya M
First published: