ರಣವೀರ್ ಸಿಂಗ್ (Ranveer Singh) ಹಾಗೂ ದೀಪಿಕಾ ಪಡುಕೋಣೆ (Deepika Padukone) ಬಾಲಿವುಡ್‌ನ ಕ್ಯೂಟ್ ಕಪಲ್ (Bollywood). ಅಲ್ಲದೇ ಜಗತ್ತಿನ ಪ್ರಭಾವಿ ಸೆಲೆಬ್ರಿಟಿಗಳು. ರಣವೀರ್ ಬಗ್ಗೆ ದೀಪಿಕಾ ಮಾತನಾಡಿದ್ದ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ. ಅದರಲ್ಲಿ ದೀಪಿಕಾ, ಅದ್ಭುತ ನಟನೆಯ ಜೊತೆಗೆ ಸಖತ್ ಸಿಂಪಲ್ ಎನಿಸುವ ಹಾಗೂ ಚಿತ್ರ ವಿಚಿತ್ರ ಕಾಸ್ಟ್ಯೂಮ್‌ಗಳಿಂದಲೇ ಹೆಸರುವಾಸಿಯಾಗಿರುವ ರಣವೀರ್ ಸಿಂಗ್ ಸ್ಟೈಲ್ ಬಗ್ಗೆ ಮಾತನಾಡಿದ್ದರು. “ಇವತ್ತು ಮನೆಗೆ ಹೋದ ಮೇಲೆ ಮತ್ತೆ ನನಗದನ್ನು ಧರಿಸಬೇಕಿದೆ” ಎಂದು ಹೇಳುತ್ತಾರೆ ಎಂದು ಗುಳಿಗೆನ್ನೆಯ ನಟಿ ದೀಪಿಕಾ ನಕ್ಕಿದ್ದರು.
ದೈನಿಕ್ ಭಾಸ್ಕರ್ ಕಾನ್‌ಕ್ಲೇವ್‌ನಲ್ಲಿ ಪತ್ರಕರ್ತೆ ಬರ್ಖಾ ದತ್ ಅವರೊಂದಿಗಿನ ಸಂದರ್ಶನದ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗಿದ್ದು, ಅದರಲ್ಲಿ ದೀಪಿಕಾ ರಣವೀರ್ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು.
ಅಂದಹಾಗೆ 2013 ರಲ್ಲಿ ರಾಮ್ ಲೀಲಾ ಸೆಟ್‌ನಲ್ಲಿ ಚಿಗುರೊಡೆದಿತ್ತು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪ್ರೀತಿ. ನಂತರ ಆರು ವರ್ಷಗಳ ಕಾಲ ಜೊತೆಗಿದ್ದ ಬಳಿಕ ಅಂತಿಮವಾಗಿ ನವೆಂಬರ್ 2018 ರಲ್ಲಿ ಇಟಲಿಯ ಸುಂದರವಾದ ಲೇಕ್ ಕೊಮೊದಲ್ಲಿ ಇಬ್ಬರೂ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಇದನ್ನೂ ಓದಿ: ಬಾಲಿವುಡ್ ನಟ ವರುಣ್ ಜೊತೆ ಪೋಸ್ ಕೊಡುವಾಗ ನಾಚಿಕೊಂಡ ಸಮಂತಾ!
“ಹಣ, ಯಶಸ್ಸು ನಮ್ಮ ಸಂಬಂಧಕ್ಕೆ ಎಂದೂ ಅಡ್ಡಿಯಾಗಲಿಲ್ಲ!”
ಆರಂಭದಿಂದಲೂ ನನ್ನ ಯಶಸ್ಸಿನ ವಿಷಯದಲ್ಲಿ ರಣವೀರ್ ಆರಾಮಾಗಿದ್ದರು. ತಾನು ದೊಡ್ಡ ತಾರೆ ಹಾಗೂ ನಾನು ಅವರಿಗಿಂತ ಹೆಚ್ಚು ಹಣವನ್ನು ಗಳಿಸುತ್ತೇನೆ ಎಂಬ ಅಂಶವನ್ನು ಅವರು ಗೌರವಿಸುತ್ತಿದ್ದರು. ಅವರ ಈ ಗುಣವನ್ನು ನೋಡಿಯೇ ತಾನು ಅವರನ್ನು ಮದುವೆಯಾದೆ. ಆದರೆ ಇಂದು, ರಣವೀರ್ ಗಳಿಸುತ್ತಿರುವ ಹಣ ಮತ್ತು ಅವರ ಯಶಸ್ಸು ಏಳು ವರ್ಷಗಳ ಹಿಂದೆ ಅವರು ಹೊಂದಿದ್ದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂಬುದಾಗಿ ದೀಪಿಕಾ ಹೇಳಿದ್ದರು.
ನಾನು ಇಂದು ಯಶಸ್ವಿ ವ್ಯಕ್ತಿಯಾಗಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಹೆಚ್ಚು ಕೆಲಸ ಮಾಡುತ್ತೇನೆ. ಕೆಲವೊಮ್ಮೆ ನನಗೆ ತುಂಬಾ ಕೆಲಸವಿದ್ದ ದಿನಗಳನ್ನು ನಾನು ಮನೆಗೇ ಬರುತ್ತಿರಲಿಲ್ಲ. ಇದರಿಂದಲೇ ನಾನು ಹೆಚ್ಚು ಹಣವನ್ನು ಸಂಪಾದಿಸುತ್ತಿದ್ದೆ. ಆದರೆ ಒಮ್ಮೆಯೂ ಅದು ನಮ್ಮ ಸಂಬಂಧಕ್ಕೆ ಅಡ್ಡಿಯಾಗಲಿಲ್ಲ ಎಂದು ದೀಪಿಕಾ ಹೇಳಿದ್ದಾರೆ.
“ಬೋಲ್ಡ್ ವ್ಯಕ್ತಿತ್ವದಿಂದಲೇ ಅವರು ಸ್ಟೈಲ್ ಐಕಾನ್ ಆಗಿದ್ದಾರೆ"
“ಬೋಲ್ಡ್ ಪ್ರಿಂಟ್‌ಗಳು, ರೋಮಾಂಚಕ ಬಣ್ಣಗಳು ಮತ್ತು ಅಸಾಂಪ್ರದಾಯಿಕ ಶೈಲಿಯ ಉಡುಪುಗಳನ್ನು ಧರಿಸಲು ರಣವೀರ್ ಎಂದಿಗೂ ಹೆದರುವುದಿಲ್ಲ. ಇದು ಅವರ ದಿಟ್ಟ ವ್ಯಕ್ತಿತ್ವದ ನಿಜವಾದ ಪ್ರತಿಬಿಂಬವಾಗಿದೆ. ಅವರ ಸ್ಟೈಲ್ ಯಾವಾಗಲೂ ಸಾಂಪ್ರದಾಯಿಕ ರೂಢಿಗಳಂತೆ ಇಲ್ಲ. ಅದು ವಿಭಿನ್ನವಾಗಿದೆ. ನಿಜವಾಗಿ ಹೇಳಬೇಕೆಂದರೆ ಯಾವುದೇ ಸ್ಟೈಲ್ ಹಾಗೂ ಫ್ಯಾಷನ್‌ಗೆ ಭಯಪಡದಿರುವ ಗುಣವೇ ಅವರನ್ನು ಸ್ಟೈಲ್ ಐಕಾನ್ ಹಾಗೂ ಉದ್ಯಮದಲ್ಲಿ ಟ್ರೆಂಡ್‌ಸೆಟರ್ ಆಗಿ ಮಾಡಿದೆ” ಎಂದು ದೀಪಿಕಾ ಹೇಳಿದ್ದರು.
View this post on Instagram
ಇನ್ನು, ಇತ್ತೀಚೆಗೆ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರ ದಾಂಪತ್ಯದಲ್ಲಿ ಬಿರುಕಿದೆ ಎಂಬ ಬಗ್ಗೆ ರೂಮರ್ಸ್ ಹರಡಿದ್ದವು. ಆದಾಗ್ಯೂ ಈ ಎಲ್ಲ ವದಂತಿಗಳನ್ನು ದೀಪಿಕಾ ಪರೋಕ್ಷವಾಗಿ ನಿರಾಕರಿಸಿದ್ದಾರೆ. ಮಾದ್ಯಮದ ಜೊತೆ ಮಾತನಾಡಿದ ಅವರು, “ನನ್ನ ಪತಿ ಸಂಗೀತೋತ್ಸವದಲ್ಲಿ ಒಂದು ವಾರ ಇದ್ದರು. ಅವರು ಮನೆಗೆ ಮರಳಿದ್ದಾರೆ. ನನ್ನ ಮುಖವನ್ನು ನೋಡಿ ಖುಷಿಯಾಗಿದ್ದಾರೆ” ಎಂಬುದಾಗಿ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ