Deepika Padukone: ಲೂಯಿ ವಿಟಾನ್​ಗೆ ಮೊದಲ ಭಾರತೀಯ ಬ್ರಾಂಡ್ ಅಂಬಾಸಿಡರ್, ದೀಪಿಕಾಗೆ ಬಂಪರ್

ಫ್ರೆಂಚ್ ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್ ಪ್ರಪಂಚದಾದ್ಯಂತ ತನ್ನ ಫ್ಯಾಶನೆಬಲ್ ಬ್ರ್ಯಾಂಡ್ ನಿಂದಲೇಪ್ರಸಿದ್ಧವಾಗಿದೆ. ಅತ್ಯಂತ ಲಕ್ಸುರಿ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಈ ಬ್ರ್ಯಾಂಡ್ ಬಟ್ಟೆ, ಬ್ಯಾಗ್, ಶೂ, ವಾಚ್ ಉತ್ಪನ್ನಗಳನ್ನು ಪರಿಚಯಿಸಿದೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

  • Share this:
ಫ್ರೆಂಚ್ ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್ (French luxury brand Louis Vuitton) ಪ್ರಪಂಚದಾದ್ಯಂತ ತನ್ನ ಫ್ಯಾಶನೆಬಲ್ ಬ್ರ್ಯಾಂಡ್ (Fashionable brand) ನಿಂದಲೇಪ್ರಸಿದ್ಧವಾಗಿದೆ. ಅತ್ಯಂತ ಲಕ್ಸುರಿ ಬ್ರ್ಯಾಂಡ್ (Luxury brand) ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಈ ಬ್ರ್ಯಾಂಡ್ ಬಟ್ಟೆ (Clothes), ಬ್ಯಾಗ್ (Bag), ಶೂ (Shoe), ವಾಚ್ (Watch) ಉತ್ಪನ್ನಗಳನ್ನು ಪರಿಚಯಿಸಿದೆ. ಅದರ ಲುಕ್, ಗುಣಮಟ್ಟದಿಂದಲೇ ಫ್ಯಾಶನ್ ಪ್ರಿಯರ ಮನಸ್ಸು ಗೆದ್ದಿರುವ ಲೂಯಿ ವಿಟಾನ್ಗೆ ಪ್ರಸ್ತುತ ಹೊಸ ಬ್ರ್ಯಾಂಡ್ ಅಂಬಾಸಿಡರ್ (Brand Ambassador) ನೇಮಕವಾಗಿದ್ದಾರೆ. ಇವರು ಲೂಯಿ ವಿಟಾನ್‌ನ ಮೊದಲ ಭಾರತೀಯ ಬ್ರಾಂಡ್ ಅಂಬಾಸಿಡರ್ ಆದ ಮೊದಲ ಸೆಲೆಬ್ರಿಟಿ ಕೂಡ ಹೌದು. ಹಾಗಾದರೆ ಯಾರು ಆ ಸೆಲೆಬ್ರಿಟಿ (Celebrity) ನೋಡೋಣ ಬನ್ನಿ.

ವಿಟಾನ್‌ನ ಮೊದಲ ಭಾರತೀಯ ಬ್ರಾಂಡ್ ಅಂಬಾಸಿಡರ್
ಫ್ರೆಂಚ್ ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ ಲೂಯಿ ವಿಟಾನ್‌ನ ಮೊದಲ ಭಾರತೀಯ ಬ್ರಾಂಡ್ ಅಂಬಾಸಿಡರ್ ಆದ ಮೊದಲ ಸೆಲೆಬ್ರಿಟಿ ಎಂಬ ಖ್ಯಾತಿಗೆ ನಟಿ ದೀಪಿಕಾ ಪಡುಕೋಣೆ ಪಾತ್ರರಾಗಿದ್ದಾರೆ. ಈ ಮೂಲಕ ಡಿಪ್ಪಿ ಅಭಿಮಾನಿಗಳು ಮತ್ತು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಬಾಲಿವುಡ್ ಪದ್ಮಾವತಿ ಈ ಸುದ್ದಿಯನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಮೇ ತಿಂಗಳ ವೋಗ್ಮ್ಯಾಗಜೀನ್ ನ ಕವರ್ ಸ್ಟಾರ್
ದೀಪಿಕಾ ಮೇ ತಿಂಗಳ ವೋಗ್ಮ್ಯಾಗಜೀನ್ ನ ಕವರ್ ಸ್ಟಾರ್ ಕೂಡ ಆಗಿದ್ದಾರೆ. ಆ ಫೋಟೋಶೂಟ್‌ನ ಚಿತ್ರವನ್ನು ದೀಪಿಕಾ ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಬ್ರ್ಯಾಂಡ್‌ನ ಕ್ಲಾಸಿ ಹ್ಯಾಂಡ್‌ಬ್ಯಾಗ್‌ನೊಂದಿಗೆ ಪೋಸ್ ನೀಡುತ್ತಿದ್ದಾರೆ. "ವೋಗ್ ಇಂಡಿಯಾದ ಮೇ ಕವರ್ ಸ್ಟಾರ್, #ದೀಪಿಕಾ ಪಡುಕೋಣೆ ಗೆಲುವಿನ ಹಾದಿಯಲ್ಲಿದ್ದಾರೆ. ಈ ನಟಿ ಮೊದಲು @LouisVuitton's ಪ್ರೀ-ಫಾಲ್ 2020 ಅಭಿಯಾನದಲ್ಲಿ ಕಾಣಿಸಿಕೊಂಡಿದ್ದು, ಬ್ರ್ಯಾಂಡ್‌ನೊಂದಿಗೆ ಅವರ ಸಹಯೋಗವನ್ನು ದೃಢಪಡಿಸಿದೆ.

ಇದನ್ನೂ ಓದಿ: Manvitha Kamath: ‘ಟಗರು ಪುಟ್ಟಿ’ಗೆ ಡಬಲ್ ಡಿಗ್ರಿ ಕಿರೀಟ; ಫೋಟೋಶೂಟ್​ನಲ್ಲಿ ಮಿಂಚಿದ ಮಾನ್ವಿತಾ

ಪಿಕು, ಪದ್ಮಾವತ್ ಮತ್ತು ಇತ್ತೀಚೆಗಷ್ಟೇ ಗೆಹ್ರೈಯಾನ್ ಸೇರಿದಂತೆ 30ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ದೀಪಿಕಾಳನ್ನು ಈ ವರ್ಷದ 75 ನೇ ಕ್ಯಾನ್ಸ್ ಚಲನಚಿತ್ರೋತ್ಸವದ ತೀರ್ಪುಗಾರರ ಸದಸ್ಯರಾಗಿ ಹೆಸರಿಸಲಾಗಿದೆ ಎಂದು ಕಂಪನಿ ಹೇಳಿದೆ. "ಪಡುಕೋಣೆ ಇಲ್ಲಿಯವರೆಗೆ ಭಾರತೀಯ ಚಿತ್ರರಂಗದ ಅತ್ಯಂತ ಪ್ರೀತಿಪಾತ್ರ ಮತ್ತು ಯಶಸ್ವಿ ನಟಿಯರಲ್ಲಿ ಒಬ್ಬರು ಮತ್ತು ಅವರ ಸಾಧನೆಗಳು ಅವರನ್ನು ಇತ್ತೀಚಿನ ದಿನಗಳಲ್ಲಿ ಐಕಾನ್ ಆಗಿ ಮಾಡಿದೆ" ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಪಡುಕೋಣೆ ಅವರು ಲೂಯಿ ವಿಟಾನ್ ಮನೆಯ ರಾಯಭಾರಿಯಾಗಿ ಸಹಿ ಮಾಡಿದ ಮೊದಲ ಭಾರತೀಯರಾಗಿದ್ದಾರೆ ಎಂದು ಸಹ ಹೇಳಿದೆ.

ಆಸ್ಕರ್ ವಿಜೇತ ರಾಯಭಾರಿಗಳ ಜೊತೆಗೆ ಕಾಣಿಸಿಕೊಂಡ ದೀಪಿಕಾ
ಕಂಪನಿಯ ಇತ್ತೀಚಿನ ಡೌಫೈನ್ ಲೆದರ್ ಸರಕುಗಳ ಪ್ರಚಾರದಲ್ಲಿ ಎಮ್ಮಾ ಸ್ಟೋನ್ ಮತ್ತು ಝೌ ಡೊಂಗ್ಯು ಅವರಂತಹ ಆಸ್ಕರ್ ವಿಜೇತ ರಾಯಭಾರಿಗಳ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಮತ್ತೊಂದು ಪೋಸ್ಟ್ನಲ್ಲಿ, ದೀಪಿಕಾ ಅವರು ಫೋಟೋಶೂಟ್‌ಗಾಗಿ ವಿಭಿನ್ನ ಪೋಸ್ ನೀಡುತ್ತಿರುವ ರೀಲ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಬಾಲಿವುಡ್‌ನಲ್ಲಿ ತನ್ನ ಆರಂಭಿಕ ಹೋರಾಟದ ಕುರಿತು ಮಾತನಾಡುವ ಸಂದರ್ಶನದ ಆಯ್ದ ಭಾಗವನ್ನು ಹಂಚಿಕೊಂಡಿದ್ದಾರೆ. "ಕ್ರೀಡಾ ಹಿನ್ನೆಲೆಯಿಂದ ಬಂದಿದ್ದ ನನಗೆ ಮತ್ತು ನನ್ನ ದಕ್ಷಿಣ ಭಾರತದ ಉಚ್ಚಾರಣೆಯು ಬಾಲಿವುಡ್‌ಗೆ ಎಂಟ್ರಿ ನೀಡಿದಾಗ ಸವಾಲಾಗಿತ್ತು, ಆರಂಭದಲ್ಲಿ ನನಗೆ ಇದು ಕಷ್ಟವಾಗಿತ್ತು " ಎಂದು ದೀಪಿಕಾ ಹೇಳಿದ್ದಾರೆ.

ಹಲವಾರು ಭಾರತೀಯ ನಟರು ಈ ಹಿಂದೆ ಐಷಾರಾಮಿ ಬ್ರಾಂಡ್‌ನಲ್ಲಿ ಕಾಣಿಸಿಕೊಂಡಿದ್ದರು . ನಟ ಶಾರುಖ್ ಖಾನ್ ಟ್ಯಾಗ್ ಹ್ಯೂರ್ ಅನ್ನು , ಸ್ವಿಸ್ ವಾಚ್ ಮೇಕರ್ ರಾಡೋ ಬ್ಲಗರಿಗಾಗಿ ನಟ ಹೃತಿಕ್ ರೋಷನ್ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ನೇಮಕಗೊಂಡಿದ್ದರು, ಆದರೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು ದೀಪಿಕಾ ಮಾತ್ರ.

ದೀಪಿಕಾ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಅಭಿಮಾನಿಗಳು
ಫ್ರೆಂಚ್ ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್ ಅಂಬಾಸಿಡರ್ ಆಗಿರುವ ದೀಪಿಕಾ ಬಗ್ಗೆ ಅಭಿಮಾನಿಗಳು ಭಾರಿ ಸಂತೋಷ ವ್ಯಕ್ತಪಡಿಸಿದ್ದಾರೆ. ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಅಭಿಮಾನಿಗಳು "ನಾನು ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಡಿಪಿ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಅಭಿಮಾನಿ ಅವಳನ್ನು "ರಾಣಿ" ಎಂದು ಶ್ಲಾಘಿಸಿದ್ದಾರೆ. ಮತ್ತೊಬ್ಬರು "ವಾಹ್ ನೀವು ಅದ್ಭುತವಾಗಿ ಕಾಣುತ್ತಿದ್ದೀರಿ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Niveditha Gowda: Mrs.India ಟ್ರೈನಿಂಗ್ ನಲ್ಲಿ ಕಿರುತೆರೆಯ ಗೊಂಬೆ ನಿವೇದಿತಾ ಗೌಡ

ಇನ್ನೂ ದೀಪಿಕಾ ಪಡುಕೋಣೆ ಹೃತಿಕ್ ರೋಷನ್ ಜೊತೆ ಫೈಟರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತು ಶಾರುಖ್ ಖಾನ್, ಜಾನ್ ಅಬ್ರಹಾಂ ಅವರೊಂದಿಗೆ ಪಠಾನ್‌ನಲ್ಲಿಯೂ ಅಭಿನಯಿಸಲಿದ್ದಾರೆ.
Published by:Ashwini Prabhu
First published: