Jayeshbhai Jordaar First Look: ಕೇವಲ 9 ವರ್ಷಗಳಲ್ಲಿ ರಣವೀರ್​ ಸಿಂಗ್​ ಎತ್ತಿದ ಅವತಾರಗಳೆಷ್ಟು ಗೊತ್ತಾ?

1993ರಲ್ಲಿ ಭಾರತ ಕ್ರಿಕೆಟ್​ ತಂಡ ಕಪಿಲ್​ ದೇವ್​ ನೇತೃತ್ವದಲ್ಲಿ ವಿಶ್ವಕಪ್​ ಗೆದ್ದಿತ್ತು. ಈ ಘಟನೆ ಈಗ 83 ಹೆಸರಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ರಣವೀರ್​ ಸಿಂಗ್​ ನಟಿಸುತ್ತಿದ್ದು, ಕಪಿಲ್​ ದೇವ್​ ರೀತಿಯೇ ಕಾಣುತ್ತಿದ್ದಾರೆ.

news18-kannada
Updated:December 4, 2019, 1:03 PM IST
Jayeshbhai Jordaar First Look: ಕೇವಲ 9 ವರ್ಷಗಳಲ್ಲಿ ರಣವೀರ್​ ಸಿಂಗ್​ ಎತ್ತಿದ ಅವತಾರಗಳೆಷ್ಟು ಗೊತ್ತಾ?
ರಣವೀರ್​ ಸಿಂಗ್​
  • Share this:
ಪ್ರತಿ ಸಿನಿಮಾದಿಂದ ಸಿನಿಮಾಕ್ಕೆ ಹೊಸ ಅವತಾರ ತಾಳುತ್ತಿದ್ದಾರೆ ಬಾಲಿವುಡ್ ​ನಟ ರಣವೀರ್​ ಸಿಂಗ್​. ಒಂದು ಚಿತ್ರದಲ್ಲಿ ಕಳ್ಳ, ಮತ್ತೊಂದು ಚಿತ್ರದಲ್ಲಿ ಪೊಲೀಸ್​, ಒಂದರಲ್ಲಿ ರಾಜ, ಮತ್ತೊಂದರಲ್ಲಿ ಕ್ರೀಡಾಪಟು. ಅಬ್ಬಬ್ಬಾ, ರಣವೀರ್​ ಸಿಂಗ್​ ಸಿನಿಮಾದಿಂದ ಸಿನಿಮಾಗೆ ತಾಳುತ್ತಿರುವ ಅವತಾರ ನೋಡಿ ಪ್ರೇಕ್ಷಕ ವರ್ಗ ನಿಜಕ್ಕೂ ಅಚ್ಚರಿಪಟ್ಟಿದೆ.

'ಬ್ಯಾಂಡ್​ ಭಜಾ ಭಾರತ್​' ಚಿತ್ರದಲ್ಲಿ ಪಕ್ಕಾ ಮಧ್ಯಮ ವರ್ಗದ ಹುಡುಗನಾಗಿ ಕಾಣಿಸಿಕೊಂಡಿದ್ದ ರಣವೀರ್​ 'ಗುಂಡೆ’ ಚಿತ್ರದಲ್ಲಿ ಕಳ್ಳನ ಅವತಾರ ತಾಳಿದ್ದರು. ‘ರಾಮ್​ ಲೀಲಾ’ದಲ್ಲಿ ಲವರ್​ ಬಾಯ್​ ಆಗಿ ಕಾಣಿಸಿಕೊಂಡಿದ್ದರು.  ‘ಭಾಜಿರಾವ್​​ ಮಸ್ತಾನಿ’ ಚಿತ್ರದಲ್ಲಿ ಪೇಶ್ವಾ ಭಾಜಿರಾವ್​, ‘ಪದ್ಮಾವತ್​’ನಲ್ಲಿ ಅಲ್ಲಾವುದ್ದೀನ್​ ಖಿಲ್ಜಿ, ‘ಸಿಂಬಾ’ದಲ್ಲಿ ಪೊಲೀಸ್​ ಹೀಗೆ ಪ್ರತಿ ಚಿತ್ರದಲ್ಲೂ ರಣವೀರ್​ ಸಿಂಗ್​ ಅವತಾರ ಬೇರೆ ಬೇರೆಯಾಗಿಯೇ ಇದೆ.

1993ರಲ್ಲಿ ಭಾರತ ಕ್ರಿಕೆಟ್​ ತಂಡ ಕಪಿಲ್​ ದೇವ್​ ನೇತೃತ್ವದಲ್ಲಿ ವಿಶ್ವಕಪ್​ ಗೆದ್ದಿತ್ತು. ಈ ಘಟನೆ ಈಗ '83' ಹೆಸರಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ರಣವೀರ್​ ಸಿಂಗ್​ ನಟಿಸುತ್ತಿದ್ದು, ಕಪಿಲ್​ ದೇವ್​ ರೀತಿಯೇ ಕಾಣುತ್ತಿದ್ದಾರೆ.

ಈಗ ರಣವೀರ್ ‘ಜಯೇಶ್​ಭಾಯ್​ ಜೋರ್ಡಾ’ ಹೆಸರಿನ ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದು, ಅವರ ಲುಕ್​ ನೋಡಿ ಅನೇಕರು ಫಿದಾ ಆಗಿದ್ದಾರೆ. ರಣವೀರ್​ ಸಿಂಗ್​ ಈ ಚಿತ್ರಕ್ಕಾಗಿ ಕೊಂಚ ತೂಕ ಇಳಿಸಿಕೊಂಡಿದ್ದಾರೆ. ಗುಜರಾತ್​ನ ಮಧ್ಯಮ ವರ್ಗದ ಕುಟುಂಬದ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ರಣವೀರ್​ ಸಿಂಗ್.

ನವ ನಿರ್ದೇಶಕ ದಿವ್ಯಾಂಗ್​ ಠಕ್ಕರ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಸಮಾಜದಲ್ಲಿ ಪುರುಷರು-ಮಹಿಳೆಯರು ಸಮಾನರು ಎನ್ನುವ ಭಾವನೆ ಇಟ್ಟುಕೊಂಡಿರುತ್ತಾನೆ ಜಯೇಶ್​ಭಾಯ್​. ಅಷ್ಟೇ ಅಲ್ಲ ಸದಾ ನೋವು ತಿಂದು ಈತ ಸದಾ ನಗುತ್ತಿರುತ್ತಾನಂತೆ. ಇದು ಸಿನಿಮಾದ ಒಂದೆಳೆ ಎಂಬುದು ದಿವ್ಯಾಂಗ್​ ಮಾತು.

ರಣವೀರ್​ ಸಿಂಗ್​ ಮುಟ್ಟಿದ್ದೆಲ್ಲವೂ ಚಿನ್ನ:

ರಣವೀರ್​ ಸಿಂಗ್​ ಇತ್ತೀಚೆಗೆ ಕಥೆ ಆಯ್ಕೆಯಲ್ಲಿ ತುಂಬಾ ಚೂಸಿ ಆಗಿದ್ದಾರೆ. 2015ರಿಂದ ‘ಭಾಜಿರಾವ್​ ಮಸ್ತಾನಿ’ ‘ಬೇಫಿಕ್ರೆ’, ‘ಪದ್ಮಾವತ್​’, ‘ಸಿಂಬಾ’, ‘ಗಲ್ಲಿ ಬಾಯ್​’ ಇಷ್ಟು ಸಿನಿಮಾಗಳ ಪೈಕಿ ‘ಬೇಫಿಕ್ರೆ’ ಹೊರತುಪಡಿಸಿ ಉಳಿದ ಎಲ್ಲ ಚಿತ್ರಗಳೂ ಹಿಟ್​ ಆಗಿವೆ. ಹೀಗಾಗಿ ಸಾಲು ಸಿನಿಮಾಗಳನ್ನು ಹಿಟ್ ನೀಡುತ್ತಿರುವ ಖ್ಯಾತಿ ರಣವೀರ್​ಗೆ ಇದೆ.
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ