ಕತಾರ್ನಲ್ಲಿ (Qata)ಫಿಫಾ ವಿಶ್ವಕಪ್ ಟ್ರೋಫಿಯನ್ನು(FIFA world cup trophy) ಅನಾವರಣಗೊಳಿಸಿದ ನಟಿ ದೀಪಿಕಾ ಪಡುಕೋಣೆಯನ್ನು (Deepika Padukone) ನಟ ರಣವೀರ್ ಸಿಂಗ್ (Ranveer Singh) ಡಿಫರೆಂಟ್ ಆಗಿ ಹೊಗಳಿದ್ದಾರೆ. ಅಲ್ಲದೇ ರಣ್ವೀರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ. ಮೊನ್ನೆಯಷ್ಟೇ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕತಾರ್ನ ಕ್ರೀಡಾಂಗಣದಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಿದರು. ಪಂದ್ಯಕ್ಕೂ ಮುನ್ನ ದೀಪಿಕಾ ಸ್ಪೇನ್ನ ಮಾಜಿ ಆಟಗಾರ ಇಕರ್ ಕ್ಯಾಸಿಲಾಸ್ ಜೊತೆಗೂಡಿ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದರು.
"ವರ್ಲ್ಡ್ ಕಪ್ ಟ್ರೋಫಿ ಕೆ ಸಾಥ್ ಮೇರಿ ಟ್ರೋಫಿ!"
ದೀಪಿಕಾ ಪಡುಕೋಣೆ ಟ್ರೋಫಿಯನ್ನು ಅನಾವರಣಗೊಳಿಸುವ ಫೋಟೋ ಹಂಚಿಕೊಂಡ ನಟ ರಣವೀರ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಹೆಮ್ಮೆಯ ಕ್ಷಣ ಇದಾಗಿದೆ. ದಟ್ಸ್ ಮೈ ಬೇಬಿ. ಆಕೆಯನ್ನು ನೋಡಿ, ವಿಶ್ವದ ಅತಿದೊಡ್ಡ ವೇದಿಕೆಯಲ್ಲಿ ಮಿಂಚುತ್ತಿದ್ದಾಳೆ ಎಂದು ಬರೆದುಕೊಂಡಿದ್ದಾರೆ. "ವಿಶ್ವಕಪ್ ಟ್ರೋಫಿ ಕೆ ಸಾಥ್ ಮೇರಿ ಟ್ರೋಫಿ (ವಿಶ್ವಕಪ್ ಟ್ರೋಫಿಯೊಂದಿಗೆ ನನ್ನ ಟ್ರೋಫಿ)" ಎಂದು ಅವರು ಹೆಮ್ಮೆಯಿಂದ ಹೇಳುವ ವೀಡಿಯೊವನ್ನು ಸಹ ರಣವೀರ್ ಹಂಚಿಕೊಂಡಿದ್ದಾರೆ.
View this post on Instagram
ದೀಪಿಕಾಗೆ "ಅಸ್ಲಿ ಟ್ರೋಫಿ" ಎಂದ ರಣವೀರ್!
ಟ್ರೋಫಿ ಅನಾವರಣಗೊಳಿಸಿದ ನಂತರ ದೀಪಿಕಾ ತಮ್ಮ ವಿಶೇಷ ಕಾಸ್ಟ್ಯೂಮ್ ಅನ್ನು ಬದಲಾಯಿಸಿದರು. ಬಳಿಕ ಅವರು ಪ್ರೇಕ್ಷಕರೊಂದಿಗೆ ಸೇರಿಕೊಂಡು ಪಂದ್ಯ ಎಂಜಾಯ್ ಮಾಡಿದ ಫೋಟೋಗಳನ್ನೂ ಕೂಡ ರಣವೀರ್ ಹಂಚಿಕೊಂಡಿದ್ದಾರೆ.
ಈ ಮಧ್ಯೆ ರಣವೀರ್ ಅವರು ದೀಪಿಕಾ ಜೊತೆಗಿನ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದು, ತಮ್ಮ ಪತ್ನಿಯನ್ನು "ಅಸ್ಲಿ ಟ್ರೋಫಿ (ನೈಜ ಟ್ರೋಫಿ)" ಎಂದು ಕರೆದಿದ್ದಾರೆ. ಅಲ್ಲದೇ ದೀಪಿಕಾರನ್ನು ಹಾಡಿ ಹೊಗಳಿ ಸಾಕಷ್ಟು ವೀಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಲ್ಲದೇ, “ಅಸ್ಲಿ ಟ್ರೋಫಿ ತೋ ಮೇರೆ ಹಾಥ್ ಮೇ ಹೈ (ನಿಜವಾದ ಟ್ರೋಫಿ ನನ್ನ ಬಳಿ ಇದೆ). ನಾವು ಫೈನಲ್ ಮ್ಯಾಚ್ ಒಟ್ಟಿಗೆ ವೀಕ್ಷಿಸಿದ್ದಕ್ಕಾಗಿ ತುಂಬಾ ಖುಷಿಯಾಗಿದೆ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ. ರೋಚಕ ಪಂದ್ಯವನ್ನು ವೀಕ್ಷಿಸಿದ ರಣವೀರ್, ಕೆಲವು ಚಿಕ್ಕ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅರ್ಜೆಂಟೀನಾ ಫೈನಲ್ ಪಂದ್ಯವನ್ನು ಗೆದ್ದಾಗ ದೀಪಿಕಾ ಅವರನ್ನು ಹಗ್ ಮಾಡಿ ಸಂಭ್ರಮಿಸಿದ ವವೀಡಿಯೋವನ್ನೂ ಅವರು ಅಪ್ ಲೋಡ್ ಮಾಡಿದ್ದಾರೆ. ಅಲ್ಲದೇ ಅದನ್ನು ಅವರು "ಐತಿಹಾಸಿಕ ಕ್ಷಣ" ಎಂದು ಕರೆದಿದ್ದಾರೆ.
ಇನ್ನೂ ಅರ್ಜೆಂಟೀನಾ ಗೆಲುವಿನ ಪೋಸ್ಟ್ ಅನ್ನು ಹಂಚಿಕೊಂಡ ರಣವೀರ್ ಸಿಂಗ್, “ನಾನು ಈಗ ನೋಡಿದ್ದೇನು? ಐತಿಹಾಸಿಕ... ಐಕಾನಿಕ್.... ಶುದ್ಧ ಮ್ಯಾಜಿಕ್. FIFA ವಿಶ್ವಕಪ್." ಎಂಬುದಾಗಿಯೂ ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ ರಣವೀರ್ ಸ್ಟೇಡಿಯಂನ ಸಾಕಷ್ಟು ಫೋಟೋಗಳು ಹಾಗೂ ವವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಇದುವರೆಗಿನ ಶ್ರೇಷ್ಠ ವಿಶ್ವಕಪ್ ಫೈನಲ್ ಮ್ಯಾಚ್ ಮತ್ತು ನಾನು ಕೂಡ ಅಲ್ಲಿಯೇ ಇದ್ದೆ ಎಂಬುದಾಗಿ ಬರೆದಿದ್ದಾರೆ. ಇದೇ ವೇಳೆ ಅವರು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಅವರನ್ನು ಭೇಟಿಯಾದರು. ಈ ವೀಡಿಯೋ ಕೂಡ ಹಂಚಿಕೊಂಡಿದ್ಣದಾರೆ.
ಅಂದಹಾಗೆ ರೋಹಿತ್ ಶೆಟ್ಟಿ ಅವರ ಕಾಮಿಡಿ ಚಿತ್ರ ಸರ್ಕಸ್ನಲ್ಲಿ ರಣವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಕರೆಂಟ್ ಲಗಾ ಸಾಂಗ್ ನಲ್ಲಿ ರಣವೀರ್ ಜೊತೆ ದೀಪಿಕಾ ಹೆಜ್ಜೆ ಹಾಕಿದ್ದಾರೆ. ಇದೇ ಡಿಸೆಂಬರ್ 23 ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ದೀಪಿಕಾ ಹಾಗೂ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಬರುವ ಜನವರಿ 25 ರಂದು ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ