Deepika Padukone: ಅಂತ್ಯಗೊಂಡ ಕ್ಯಾಟ್​ ಫೈಟ್: ಅನುಷ್ಕಾರ ಹೊಸ ಸ್ಟೈಲ್​ ಮೆಚ್ಚಿಕೊಂಡ ದೀಪಿಕಾ..!​

Anushka Sharma: ಬಾಯ್​ಫ್ರೆಂಡ್​ ಹಾಗೂ ಡೇಟಿಂಗ್ ವಿಷಯಕ್ಕೆ ಬಂದರೆ ಈ ಹಿಂದೆ ದೀಪಿಕಾ ರಣಬೀರ್​ ಕಪೂರ್​ ಅವರನ್ನು ಡೇಟ್​ ಮಾಡುವಾಗ ಕತ್ರಿನಾ ಕೈಫ್​ ಮಧ್ಯ ಬಂದ ಕಾರಣಕ್ಕೆ ಇವರಿಬ್ಬರ ನಡುವೆ ಕ್ಯಾಟ್ ಫೈಟ್​ ಆರಂಭವಾಗಿತ್ತು. ನಂತರ ಅನುಷ್ಕಾ ಹಾಗೂ ದೀಪಿಕಾ ನಡುವೆಯೂ ಶೀತಲ ಸಮರ ನಡೆಯುತ್ತಿತ್ತು ಎನ್ನಲಾಗುತ್ತಿತ್ತು. ಈಗ ಆ ಸಮರಕ್ಕೆ ತೆರೆ ಬಿದ್ದಿದೆ. 

Anitha E | news18-kannada
Updated:October 9, 2019, 12:59 PM IST
Deepika Padukone: ಅಂತ್ಯಗೊಂಡ ಕ್ಯಾಟ್​ ಫೈಟ್: ಅನುಷ್ಕಾರ ಹೊಸ ಸ್ಟೈಲ್​ ಮೆಚ್ಚಿಕೊಂಡ ದೀಪಿಕಾ..!​
ದೀಪಿಕಾ ಹಾಗೂ ಅನುಷ್ಕಾ ಶರ್ಮಾ
  • Share this:
ಬಾಲಿವುಡ್​ನಲ್ಲೂ ಕ್ಯಾಟ್​ ಫೈಟ್ ಸರ್ವೇ​ ಸಾಮಾನ್ಯ. ಬಿಪಾಶಾ, ಕರೀನಾ, ಪ್ರಿಯಾಂಕಾ, ಕಂಗನಾ ಇದಕ್ಕೆ ಹೊರತಾಗಿಲ್ಲ. ನಟಿಯರ ನಡುವೆ ಚಿಕ್ಕ ಪುಟ್ಟ ವಿಷಯಗಳಿಗೆ ಮನಸ್ತಾಪ ಆಗುತ್ತಲೇ ಇರುತ್ತದೆ.

ಇನ್ನು ಬಾಯ್​ಫ್ರೆಂಡ್​ ಹಾಗೂ ಡೇಟಿಂಗ್ ವಿಷಯಕ್ಕೆ ಬಂದರೆ ಈ ಹಿಂದೆ ದೀಪಿಕಾ ರಣಬೀರ್​ ಕಪೂರ್​ ಅವರನ್ನು ಡೇಟ್​ ಮಾಡುವಾಗ ಕತ್ರಿನಾ ಕೈಫ್​ ಮಧ್ಯ ಬಂದ ಕಾರಣಕ್ಕೆ ಇವರಿಬ್ಬರ ನಡುವೆ ಕ್ಯಾಟ್ ಫೈಟ್​ ಆರಂಭವಾಗಿತ್ತು. ನಂತರ ಅನುಷ್ಕಾ ಹಾಗೂ ದೀಪಿಕಾ ನಡುವೆಯೂ ಶೀತಲ ಸಮರ ನಡೆಯುತ್ತಿತ್ತು ಎನ್ನಲಾಗುತ್ತಿತ್ತು. ಈಗ ಆ ಸಮರಕ್ಕೆ ತೆರೆ ಬಿದ್ದಿದೆ.

  View this post on Instagram

 

A post shared by AnushkaSharma1588 (@anushkasharma) on


ಹೌದು, ಅನುಷ್ಕಾ ಶರ್ಮಾ ಈ ಹಿಂದೆ ರಣವೀರ್​ ಸಿಂಗ್​ ಜೊತೆ ಡೇಟಿಂಗ್​ ಮಾಡುತ್ತಿದ್ದು, ಈಗ ದೀಪಿಕಾರನ್ನು ವಿವಾಹವಾದರು. ಈ ಕಾರಣಕ್ಕೆ ಅನುಷ್ಕಾ ಹಾಗೂ ದೀಪಿಕಾರ ನಡುವೆ ಶೀತಲ ಸಮರ ಇತ್ತು ಎಂದು ಹೇಳಲಾಗುತ್ತಿತ್ತು. ಆದರೆ ಇದೇ ಕಾರಣಕ್ಕೆ ಈ ಹಿಂದೆ ಜಾಹೀರಾತೊಂದರಲ್ಲಿ ದೀಪಿಕಾ ಜತೆ ನಟಿಸೋಕೆ ಕೊಹ್ಲಿ ನಿರಾಕರಿಸಿದ್ದರು.

ಆದರೆ ಕಾಲ ಎಂಥಾ ಗಾಯವನ್ನಾದರೂ ವಾಸಿ ಮಾಡುತ್ತದೆ ಎನ್ನುವ ಮಾತಿನಂತೆ ಈಗ ದೀಪಿಕಾ ಹಾಗೂ ಅನುಷ್ಕಾ ನಡುವಿದ್ದ ಮನಸ್ತಾಪವನ್ನೂ ಕಡಿಮೆ ಮಾಡಿದೆ. ಅದಕ್ಕೆ ದೀಪಿಕಾ ಅನುಷ್ಕಾರ ಇನ್​ಸ್ಟಾಗ್ರಾಂ ಪೋಸ್ಟ್​ಗೆ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ದೀಪಿಕಾ ಜತೆ ಜಾಹೀರಾತಿನ ಶೂಟ್‍ಗೆ ನಿರಾಕರಿಸಿದ ಕೋಹ್ಲಿ: ಇದಕ್ಕೆ ಕಾರಣ ಪತ್ನಿ ಅನುಷ್ಕಾನಾ?

ಅನುಷ್ಕಾ ಇತ್ತೀಚೆಗೆ ನಡೆದ ಎಲೆ ಬ್ಯೂಟಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಬಿಳಿ ಬಣ್ಣದ ಹಾಫ್​ ಶೋಲ್ಡರ್​ ಹಾಗೂ ಸ್ಲಿಟ್​ ಇರುವ ಡ್ರೆಸ್​ ತೊಟ್ಟು ದೇವಕನ್ಯೆಯಂತೆ ಕಂಗೊಳಿಸಿದ್ದರು. ಈ ಚಿತ್ರವನ್ನು ಅನುಷ್ಕಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದರು. ಅದಕ್ಕೆ ಈಗ ದೀಪಿಕಾ ಹಾರ್ಟ್​ ಹಾಗೂ ಕಣ್ಣಿನ ಇಮೋಜಿ ಹಾಕಿ ಕಮೆಂಟ್​ ಮಾಡಿದ್ದಾರೆ. 
View this post on Instagram

 

A post shared by AnushkaSharma1588 (@anushkasharma) on


ಇನ್ನು ಅನುಷ್ಕಾರ ಈ ಸ್ಟೈಲ್​ಗೆ ಝರೀನ್​ ಖಾನ್​, ವಾಣಿ ಕಪೂರ್ ಹಾಗೂ ದಿಯಾ ಮಿರ್ಜಾ ಸಹ ಫಿದಾ ಆಗಿದ್ದಾರೆ. ಅನುಷ್ಕಾರ ಫೋಟೋಗೆ 15 ಲಕ್ಷ ಲೈಕ್ಸ್​ ಸಿಕ್ಕಿದೆ. ಇನ್ನು ಉಳಿದ ಚಿತ್ರಗಳಿಗೆ 11 ಲಕ್ಷ ಹಾಗೂ 8 ಲಕ್ಷ ಲೈಕ್ಸ್​ ಸಿಕ್ಕಿದೆ. ಅನುಷ್ಕಾ ಕಳೆದ ವರ್ಷ ತೆರೆಕಂಡ ಶಾರುಖ್​ ಅಭಿನಯದ 'ಝೀರೊ' ಸಿನಿಮಾದಲ್ಲಿ ಅಭಿನಯಿಸಿದ್ದರು.

 

Akanksha Singh: ಮಾಲ್ಡೀವ್ಸ್​ನಲ್ಲಿ ಮುತ್ತಿನ ಮಳೆ ಸುರಿಸುತ್ತಿದ್ದಾರೆ ಪೈಲ್ವಾನ್​ ಬೆಡಗಿ ಆಕಾಂಕ್ಷಾ ಸಿಂಗ್​..!


 
First published: October 9, 2019, 12:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading