ಕೊರೋನಾ ಲಾಕ್ಡೌನ್ನಿಂದಾಗಿ ಅನೇಕ ಸೆಲೆಬ್ರಿಟಿಗಳು ತಮ್ಮ ಮನೆಯಲ್ಲಿದ್ದಕೊಂಡು ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಬಿಡುವಿದ್ದಾಗ ವಿಡಿಯೋ ಕಾಲ್, ಇನ್ಸ್ಟಾಗ್ರಾನಲ್ಲಿ ಲೈವ್ ಬರುವ ಮೂಲಕ ಮಾತನಾಡುತ್ತಿರುತ್ತಾರೆ. ಅದರಂತೆ ಇತ್ತೀಚೆಗೆ ಬಾಲಿವುಡ್ ನಟರಾದ ಆಯುಷ್ಮಾನ್ ಖುರಾನಾ ಮತ್ತು ರಣ್ವೀರ್ ಸಿಂಗ್ ಲೈವ್ ಚಾಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಮಜವಾದ ಪ್ರಸಂಗವೊಂದು ನಡೆದಿದೆ.
ಆಯುಷ್ಮಾನ್ ಖುರಾನಾ ಮಧ್ಯಾಹ್ನದ ವೇಳೆ ರಣ್ವೀರ್ ಸಿಂಗ್ಗೆ ಕರೆ ಮಾಡಿದ್ದಾರೆ. ಈ ವೇಳೆ ರಣ್ವೀರ್ ನಿದ್ದೆ ಮಾಡುತ್ತಿದ್ದರು. ಕರೆ ಬರುವುದನ್ನು ಗಮನಿಸಿ ನಿದ್ದೆಯಿಂದ ಎದ್ದು ವಿಡಿಯೋ ಕಾಲ್ ರಿಸೀವ್ ಮಾಡಿದ್ದಾರೆ. ನಿದ್ದೆ ಮಾಡುತ್ತಿದ್ದೇನೆ ಲೈವ್ ಬೇಡ ಎಂದು ಆಯುಷ್ಮಾನ್ಗೆ ಹೇಳಿದ್ದಾರೆ. ಆದರೆ ಆಯುಷ್ಮಾನ್ ಮಾತನಾಡಿ ಎಂದು ಒತ್ತಾಯ ಮಾಡಿ ಮಾತನಾಡಿಸಿದ್ದಾರೆ.
Ranveer Singh joining Ayushmann Khurrana live on Instagram ♥️
_
He just woke up 🤣♥️ pic.twitter.com/OeHQQdSXeM
— RanveerSingh TBT | #83🏏♥️ (@RanveerSinghtbt) June 5, 2020
ಇಬ್ಬರು ಲೈವ್ನಲ್ಲಿ ಮಾತನಾಡುತ್ತಾ ಹರಟೆ ಹೊಡೆಯುತ್ತಾ ಜೋರಾಗಿ ನಕ್ಕಿದ್ದಾರೆ. ರಣ್ವೀರ್ ಏರುಧ್ವನಿಯಲ್ಲಿ ನಗುತ್ತಿದ್ದನ್ನು ಕೇಳಿ ಪತ್ನಿ ದೀಪಿಕಾ ಪಡುಕೋಣೆ ಎನೋ ಅಂದಿದ್ದಾರೆ. ಈ ವೇಳೆ ರಣ್ವೀರ್ ಕಾಲ್ ಕಟ್ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಆಯುಷ್ಮಾನ್ ಕೇಳಲು ಮುಂದಾದಾಗ ‘ಸುಮ್ಮಿರೋ ನಿನ್ನ ಅತ್ತಿಗೆ ಬೈತಿದ್ದಾಳೆ‘ ಎಂದು ನಕ್ಕು ಕಾಲ್ ಕಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ