ದೀಪಿಕಾ ಪಡುಕೋಣೆಗೆ ಸೀರೆ, ಅರಿಶಿನ-ಕುಂಕುಮ ಕೊಟ್ಟು ಸೆಟ್​ಗೆ ವೆಲ್​ಕಮ್​: ಫೋಟೋಗಳು ವೈರಲ್​!

ದೀಪಿಕಾ ಪಡುಕೋಣೆ(Deepika Padukone) ಅವರನ್ನು ಸೆಟ್​(Set)ಗೆ ಬರಮಾಡಿಕೊಳ್ಳುವುದಕ್ಕೂ ಮುಂಚೆ ಅವರು ನೀಡಿದ ಆಹ್ವಾನ ಕಂಡು ದೀಪಿಕಾ ಪಡುಕೋಣೆ ಫುಲ್​ ಖುಷಿಯಾಗಿದ್ದರಂತೆ.  ಪ್ರಭಾಸ್​(Prabhas) ನಟನೆಯ ಮುಂದಿನ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

  • Share this:
ಸಿನಿಮಾರಂಗದಲ್ಲಿ ಕಾಲ್​ಶೀಟ್​(Call Sheet) ತುಂಬಾನೆ ಮುಖ್ಯ. ಈಗಿನ ನಟ-ನಟಿಯರು ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸಿ ಟೈಂ ಮ್ಯಾನೇಜ್​(Manage)ಮಾಡಿಕೊಳ್ಳುತ್ತಾರೆ. ಚಿತ್ರ ಸೂಪರ್​​ ಹಿಟ್(Super Hit)​ ಆಗಬೇಕು ಅಂದರೆ ಚಿತ್ರತಂಡ ಒಂದು ಕುಟುಂಬದಂತೆ ಕೆಲಸ ಮಾಡಬೇಕು. ಹೀರೋ(Hero), ಹೀರೋಯಿನ್(Heroin)​ ಕೂಡ ನಿರ್ದೇಶಕರ ಮಾತನ್ನು ಕೇಳಿ ನಟಿಸಿಬೇಕು. ಹೊಸ ಸಿನಿಮಾ ಶೂಟಿಂಗ್​ ಅಂದ ಕೂಡಲೇ ನಟ- ನಟಿಯರುನ್ನು ಕ್ಯಾರಾವ್ಯಾನ್​ ಕಳಿಸಿ ಬರಮಾಡಿಕೊಳ್ಳಲಾಗುತ್ತೆ. ಆದರೆ ಇಲ್ಲೊಂದು ಚಿತ್ರತಂಡ ಮಾಡಿರುವ ಕೆಲಸ ನಿಜಕ್ಕೂ ಡಿಫ್ರೆಂಟ್​ ಆಗಿದೆ. ಅದು ದೀಪಿಕಾ ಪಡುಕೋಣೆ(Deepika Padukone) ಅವರನ್ನು ಸೆಟ್​(Set)ಗೆ ಬರಮಾಡಿಕೊಳ್ಳುವುದಕ್ಕೂ ಮುಂಚೆ ಅವರು ನೀಡಿದ ಆಹ್ವಾನ ಕಂಡು ದೀಪಿಕಾ ಪಡುಕೋಣೆ ಫುಲ್​ ಖುಷಿಯಾಗಿದ್ದರಂತೆ.  ಪ್ರಭಾಸ್​(Prabhas) ನಟನೆಯ ಮುಂದಿನ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಈ ಚಿತ್ರ ನಿರ್ದೇಶಕ ನಾಗ್​ ಅಶ್ವಿನ್​ ದೀಪಿಕಾ ಅವರನ್ನು ವೆಲ್​ಕಮ್(Welcome)​ ಮಾಡಿದ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಇದು ನೆಟ್ಟಿಗರ ಗಮನ ಸೆಳೆದಿದೆ. ಅಷ್ಟಕ್ಕೂ ಈ ಚಿತ್ರತಂಡ ದೀಪಿಕಾ ಪಡುಕೊಣೆಗೆ ಕೊಟ್ಟ ವಸ್ತುಗಳು ಏನು? ಯಾಕೆ ಈ ವಿಷಯ ಇಷ್ಟೊಂದು ಚರ್ಚೆಯಾಗುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..

ಸೀರೆ,ಅರಿಶಿನ-ಕುಂಕುಮ ಕೊಟ್ಟು ವೆಲ್​ಕಮ್​!

ಮಹಾನಟಿ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಮತ್ತು ಅವರ ತಂಡ ಶನಿವಾರ ದೀಪಿಕಾ ಪಡುಕೋಣೆಗೆ ಆತ್ಮೀಯ ಸ್ವಾಗತವನ್ನು ನೀಡಿದ್ದಾರೆ. ಸಾಂಪ್ರದಾಯಿಕ ಕಂಚಿಪಟ್ಟು ಸೀರೆ, ಕುಂಕುಮ, ಹಲ್ದಿ, ಬಳೆಗಳು ಮತ್ತು ಹೂವುಗಳನ್ನು ನೀಡಿ ದೀಪಿಕಾ ಪಡುಕೋಣೆ ಅವರನ್ನು ಸೆಟ್​ಗೆ ಬರಮಾಡಿಕೊಂಡಿದ್ದಾರೆ. ಫೋಟೋಗಳನ್ನು ದೀಪಿಕಾ ಪಡುಕೋಣೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​​ ಮಾಡಿಕೊಂಡಿದ್ದಾರೆ.  ಜೊತೆಗೆ ಚಿತ್ರತಂಡ ಒಂದು ಲೆಟರ್​ ಸಹ ಕೊಟ್ಟಿದ್ಯಂತೆ.  “ಜಾಗತಿಕವಾಗಿ ಹೃದಯಗಳನ್ನು ಆಳುತ್ತಿರುವ ದಕ್ಷಿಣದ ಮಗಳಿಗೆ. ರಾಷ್ಟ್ರದ ರಾಜಕುಮಾರಿಗೆ, ಮನೆಗೆ ಸ್ವಾಗತ  ಬನ್ನಿ, ಒಟ್ಟಾಗಿ ಜಗತ್ತನ್ನು ಗೆಲ್ಲೋಣ, ”ಎಂದು ಟಿಪ್ಪಣಿಯಲ್ಲಿ ಬರೆಯಲಾಗಿದೆ. ತಯಾರಕರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ನಾಗ್ ಅಶ್ವಿನ್ ಅವರ ಮುಂದಿನ ಚಿತ್ರಕ್ಕಾಗಿ "ಕ್ವೀನ್" ದೀಪಿಕಾ ಅವರನ್ನು ಸ್ವಾಗತಿಸಿದ್ದಾರೆ.

ಇದನ್ನು ಓದಿ : Jacqueline Fernandez: ವಂಚಕನಿಂದ 36 ಲಕ್ಷ ಮೌಲ್ಯದ ಬೆಕ್ಕು ಉಡುಗೊರೆ ಪಡೆದಿದ್ದ ಜಾಕ್ವೆಲಿನ್..!

ಒಂದೇ ಚಿತ್ರದಲ್ಲಿ ಪ್ರಭಾಸ್​, ಬಿಗ್​ ಬಿ, ದೀಪಿಕಾ

ಹೌದು ಇನ್ನೂ ಹೆಸರಿಡಿದ ಚಿತ್ರದಲ್ಲಿ ಮೂರು ದಿಗ್ಗಜರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್​ ಜೊತೆ ಮೊದಲ ಬಾರಿಗೆ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಇವರಿಬ್ಬರ ನಡುವೆ ಮುಖ್ಯ ಪಾತ್ರದಲ್ಲಿ ಬಿಗ್​ ಬಿ ಅಮಿತಾಭ್​ ಬಚ್ಚನ್​ ಕೂಡ ನಟಿಸುತ್ತಿದ್ದಾರೆ.  ಈ ವರ್ಷದ ಆರಂಭದಲ್ಲಿ, ಗುರು ಪೂರ್ಣಿಮೆಯಂದು, ಅಮಿತಾಬ್ ಬಚ್ಚನ್ ಬಹುನಿರೀಕ್ಷಿತ ಪ್ರಭಾಸ್-ನಟನ ಚಿತ್ರದ ಮುಹೂರ್ತಕ್ಕೆ ಕ್ಲ್ಯಾಪ್​ ಮಾಡಿದ್ದರು.

ಇದನ್ನು ಓದಿ : ಕಲರ್ಸ್​ ಕನ್ನಡ ಪಾಲಾದ ಅವತಾರ ಪುರುಷ & ಗರುಡ ಗಮನ ವೃಷಭ ವಾಹನ ಟಿವಿ ರೈಟ್ಸ್​!

ಎಂದೂ ಕಾಣಿಸಿರದ ಪಾತ್ರದಲ್ಲಿ ದೀಪಿಕಾ!

ಈ ಚಿತ್ರದ ಬಗ್ಗೆ ಮಾತನಾಡುವ ವೇಳೆ ನಿರ್ದೇಶಕ ನಾಗ್​ ಅಶ್ವಿನಿ ದೀಪಿಕಾ ಅವರ ಪಾತ್ರದ ಬಗ್ಗೆ ಯಾವುದೇ ಹಿಂಟ್​ ನೀಡಿಲ್ಲ. ಆದರೆ ನಾನು ಅವರ ಪಾತ್ರವನ್ನು ನೋಡಲು ತುಂಬ ಕಾಯುತ್ತಿದ್ದೇನೆ. ದೀಪಿಕಾ ಪಡುಕೋಣೆ ಹಿಂದೆಂದೂ ಕಾಣಿಸಿರದ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಇಷ್ಟನ್ನು ಮಾತ್ರ ಹೇಳಬಲ್ಲೆ ಎಂದು ಅವರು ಹೇಳಿದ್ದಾರೆ. ಅದರಲ್ಲೂ ಬಾಲಿವುಡ್​ ಸ್ಟಾರ್​ ನಟಿ ದೀಪಿಕಾ, ಸೌತ್​ ಸೂಪರ್​ ಸ್ಟಾರ್​ ಪ್ರಭಾಸ್​ ಇಬ್ಬರೂ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
Published by:Vasudeva M
First published: