2020ರಲ್ಲಿ ದೀಪಿಕಾ ಪಡುಕೋಣೆ ಸಾಕಷ್ಟು ಏಳುಬೀಳನ್ನು ಕಂಡರು. ಅವರ ನಿರ್ಮಾಣದ ಚಪಾಕ್ ಜನವರಿ 10ಕ್ಕೆ ತೆರೆ ಕಂಡಿತು. ಸಿನಿಮಾ ಆರಂಭಿಸಿದ್ದಾಗ ಪ್ರೇಕ್ಷಕರಿಗೆ ಇದ್ದ ನಿರೀಕ್ಷೆ ಚಿತ್ರ ಬಿಡುಗಡೆಯಾದಾಗ ಇರಲಿಲ್ಲ. ಮೇಘನಾ ಗುಲ್ಜಾರ್ ಬರೆದು ನಿರ್ದೇಶಿಸಿರುವ ಈ ಬಯೋಪಿಕ್ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆ ತರುವಲ್ಲಿ ವಿಫಲವಾಗಿತ್ತು. ಇದು ವರ್ಷದ ಆರಂಭದಲ್ಲೇ ದೀಪಿಕಾ ಅವರಿಗೆ ಬಿದ್ದ ಮೊದಲ ಏಟು. ಇನ್ನು ನಂತರ ಹಾಲಿವುಡ್ ಸಿನಿಮಾ ದ ಇಂಟರ್ನ್ ಅನ್ನು ಹಿಂದಿಗೆ ರಿಮೇಕ್ ಮಾಡಲು ಮುಂದಾದರು. ಈ ಚಿತ್ರದಲ್ಲಿನ ಪ್ರಮುಖ ಪಾತ್ರಕ್ಕೆ ರಿಷಿ ಕಪೂರ್ ಅವರನ್ನು ಒಪ್ಪಿಸಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಈ ಸಿನಿಮಾ ಪ್ರಕಟವಾಗದ ಕೆಲವೇ ಸಮಯದಲ್ಲಿ ರಿಷಿ ಕಪೂರ್ ಸಹ ಇಹ ಲೋಕ ತ್ಯಜಿಸಿದರು. ನಂತರ ಸುಶಾಂತ್ ಸಿಂಗ್ ಸಾವು. ಈ ಪ್ರಕರಣದಲ್ಲೂ ಸಹ ದೀಪಿಕಾ ಸಾಕಷ್ಟು ಟ್ರೋಲ್ ಆಗಿದ್ದರು. ಸುಶಾಂತ್ ಸಾವನ್ನಪ್ಪಿದಾಗ ಖಿನ್ನತೆ ಕುರಿತಾಗಿ ಟ್ವೀಟ್ ಮಾಡಿ, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.ನಂತರ ಗೋವಾದಲ್ಲಿ ಚಿತ್ರೀಕರಣದಲ್ಲಿದ್ದಾಗ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಬೇಕಾಯಿತು.
ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿ ಬಂದ ನಂತರ ಕೊಂಚ ಸಮಯ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರದ ನಟಿ, ಮೆಲ್ಲನೆ ಸಹಜ ಸ್ಥಿತಿಗೆ ಮರಳಿದ್ದರು. ಇತ್ತೀಚೆಗಷ್ಟೆ ಹೊಸ ವರ್ಷದ ಆಚರಣೆಗೆಂದು ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ರಣತಂಬೋರ್ಗೆ ಹೋಗಿದ್ದಾರೆ.
View this post on Instagram
ಹೌದು, ದೀಪಿಕಾ ಇದ್ದಕ್ಕಿದ್ದಂತೆ ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಡಿದ್ದ ಎಲ್ಲ ಟ್ವೀಟ್ ಹಾಗೂ ಪೋಸ್ಟ್ಗಳನ್ನು ಡಿಲೀಟ್ ಮಾಡಿದ್ದಾರೆ. ಈ ವಿಷಯವನ್ನು ಛಾಯಾಗ್ರಾಹಕರೊಬ್ಬರು ಹಂಚಿಕೊಂಡಿದ್ದು, ಅದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ದೀಪಿಕಾ ಅವರು ಡ್ರಗ್ಸ್ ಸೇವಿಸಿ ಡಿಲೀಟ್ ಮಾಡಿರಬೇಕು ಎಂದು ಕೆಲವರು ಕಮೆಂಟ್ ಮಾಡಿದರೆ, ಮಾದಕ ವಸ್ತು ಪ್ರಕರಣದಲ್ಲಿ ಏನೋ ಬೆಳವಣಿಗೆಯಾಗಿರಬೇಕು ಅದಕ್ಕೆ ಹೀಗೆ ಮಾಡಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನು ಕೆಲವರು ಹ್ಯಾಕ್ ಆಗಿರಬೇಕು ಎಂದರೆ, ಮತ್ತೆ ಕೆಲವರು ಭಯ ಇರಬೇಕು ಎನ್ನುತ್ತಿದ್ದಾರೆ.
ಆದರೆ ನಿಜಕ್ಕೂ ದೀಪಿಕಾ ಪಡುಕೋಣೆ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನೆಂದು ತಿಳಿದು ಬಂದಿಲ್ಲ. ದೀಪಿಕಾ ಹೊಸ ವರ್ಷದಲ್ಲಿ ಸಾಮಾಜಿಕ ಜಾಲತಾಣದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿರಬಹುದು ಎನ್ನುವ ಅನುಮಾನ ಸಹ ಕಾಡಲಾರಂಭಿಸಿದೆ. ಒಂದುವೇಳೆ ಹಾಗಾದರೆ, ಅವರು ಸಾಮಾಜಿಕ ಜಾಲತಾಣದಲ್ಲಿರುವ ಖಾತೆಯನ್ನೇ ಡಿಲೀಟ್ ಮಾಡಬೇಕಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ