Ranveer Singh ಬಗ್ಗೆ ಅಮಿತಾಭ್ ಬಚ್ಚನ್‌ ಬಳಿ ದೂರು ಹೇಳಿದ Deepika Padukone..!

ಬಾಲಿವುಡ್​ನ ಮೋಸ್ಟ್ ಹ್ಯಾಪನಿಂಗ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್​. ಈ ಜೋಡಿ ಹೊರಗಡೆ ಎಷ್ಟು ಕ್ರೇಜಿಯಾಗಿ ಕಾಣಿಸಿಕೊಳ್ಳುತ್ತಾರೋ ಅಷ್ಟೇ ರೊಮ್ಯಾಂಟಿಕ್​ ಆಗಿ ಇರುತ್ತಾರೆ. ಹೀಗಿದ್ದರೂ ನಟಿ ದೀಪಿಕಾ, ತನ್ನ ಪತಿ ರಣವೀರ್ ಸಿಂಗ್ ಬಗ್ಗೆ ಅಮಿತಾಭ್ ಬಚ್ಚನ್​ ಅವರ ಬಳಿ ದೂರಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ಅಮಿತಾಭ್ ಬಚ್ಚನ್​

ದೀಪಿಕಾ ಪಡುಕೋಣೆ ಹಾಗೂ ಅಮಿತಾಭ್ ಬಚ್ಚನ್​

  • Share this:
ಬಾಲಿವುಡ್‌ನ ಮೆಗಾಸ್ಟಾರ್ ಮತ್ತು ಬಿಗ್ ಬಿ ಎಂದೇ ಪ್ರಖ್ಯಾತರಾದ ಅಮಿತಾಭ್ ಬಚ್ಚನ್‌  (Amitabh Bachchan) ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿಯ (ಕೆಬಿಸಿ) 13ನೇ ಸೀಸನ್‌ನಲ್ಲಿ (Kaun Banega Crorepati 13) ಶುಕ್ರವಾರ ನಡೆದಂತಹ ಗಣೇಶ ಚತುರ್ಥಿಯ ವಿಶೇಷ ಸಂಚಿಕೆಯಲ್ಲಿ ಅತಿಥಿ ಸ್ಪರ್ಧಿಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೊಣೆ  (Deepika Padukone) ಆಗಮಿಸಿದ್ದು ಯಾರ ಬಗ್ಗೆ ದೂರು ಹೇಳಿದ್ದಾರೆ ನೋಡಿ. ದೀಪಿಕಾ ಜೊತೆ ಬಾಲಿವುಡ್ ನಿರ್ಮಾಪಕಿ ಮತ್ತು ನೃತ್ಯ ನಿರ್ದೇಶಕಿಯಾದ ಫರಾ ಖಾನ್  (Farah Khan) ಈ ವಿಶೇಷ ಸಂಚಿಕೆಗೆ ಬಂದು, ಕೆಬಿಸಿಯ ಹಾಟ್ ಸೀಟ್‌ನಲ್ಲಿ ಕುಳಿತು ಆಟವಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಂತಹ ವಿಷಯವೇ ಆಗಿದೆ. ದೀಪಿಕಾ ಅವರು ಈ ಶೋಗೆ ಬರುವಾಗ ಅಮಿತಾಭ್ ಮತ್ತು ಫರಾ ಅವರಿಬ್ಬರಿಗೂ ಉಡುಗೊರೆಯಾಗಿ ಗಣೇಶನ ವಿಗ್ರಹ ತೆಗೆದುಕೊಂಡು ಬಂದಿದ್ದರು.

ಪ್ರಶ್ನೆಗಳಿಗೆ ಉತ್ತರ ನೀಡುವ ನಡುವೆ ಸಿಕ್ಕ ಸಮಯವನ್ನು ಉಪಯೋಗಿಸಿಕೊಂಡ ದೀಪಿಕಾ,  ತನ್ನ ಪತಿ ರಣವೀರ್ ಸಿಂಗ್ ಬಗ್ಗೆ ಅಮಿತಾಭ್ ಬಚ್ಚನ್​ ಅವರ ಬಳಿ ದೂರು ನೀಡಿದರು. ಏನಪ್ಪಾ ಆ ದೂರು ಅಂತೀರಾ?

ಸುಮಾರು ಸ್ಪರ್ಧಿಗಳು ಕೆಬಿಸಿಗೆ ಬಂದಾಗ ಅನೇಕ ಮಹಿಳೆಯರು ತಮ್ಮ ಮನೆಯ ಸಮಸ್ಯೆಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಾರೆ. ನನಗೂ ಸಹ ನನ್ನ ಪತಿಯ ಬಗ್ಗೆ ಒಂದು ದೂರು ಇದೆ ಎಂದು ದೀಪಿಕಾ ಬಿಗ್ ಬಿ ಮುಂದೆ “ನನ್ನ ಪತಿ ರಣವೀರ್ ನನಗೆ ಬೆಳಗ್ಗಿನ ತಿಂಡಿ ಮಾಡಿಕೊಡುವುದಾಗಿ ತುಂಬಾ ದಿನಗಳ ಹಿಂದೆ ಹೇಳಿದ್ದರು. ಆದರೆ ಇವತ್ತಿನವರೆಗೂ ಮಾಡಿಕೊಡಲಿಲ್ಲ. ಯಾವಾಗಲೂ ಏನಾದರೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ” ಎಂದು ಹೇಳಿದರು.

ಇದನ್ನೂ ಓದಿ: Bigg Boss Kannada Season 8: ದಿವ್ಯಾ ಸುರೇಶ್​ ಮನೆಯಲ್ಲಿ ವಿಶೇಷ ಭೋಜನ ಸವಿದ ಮಂಜು ಪಾವಗಡ

ಫರಾ ಅವರು ಸಹ ಸಿಕ್ಕಿದ್ದೇ ಚಾನ್ಸ್ ಅಂತ ಬಚ್ಚನ್‌ರನ್ನು ಯಾವತ್ತಾದರೂ ನೀವು ನಿಮ್ಮ ಪತ್ನಿ ಜಯಾ ಬಚ್ಚನ್‌ಗಾಗಿ ಅಡುಗೆ ಮಾಡಿದ್ದೀರಾ ಎಂದು ಕೇಳಿಯೇ ಬಿಟ್ಟರು. ಹಿರಿಯ ನಟ "ನನಗೆ ಕೇವಲ ಮೊಟ್ಟೆಗಳನ್ನು ಬಾಯಿಲ್‌ ಮಾಡಲು ಬರುತ್ತದೆ" ಎಂದು ಹೇಳಿ ತಕ್ಷಣವೇ ರಣವೀರ್‌ಗೆ ಕರೆ ಮಾಡಿದರು. ಕರೆಯನ್ನು ಸ್ವೀಕರಿಸಿದ ರಣವೀರ್, ತಾನು ಅಮಿತಾಭ್‌ ಬಚ್ಚನ್‌ರೊಂದಿಗೆ ಮಾತನಾಡುತ್ತಿದ್ದೇನೆ ಎಂದು ಅರಿಯುತ್ತಿದ್ದಂತೆ, ನಟ ತುಂಬಾ ಉತ್ಸುಕರಾದರು. ಮೆಗಾ ಸ್ಟಾರ್ ಬಗ್ಗೆ ಪ್ರಶಂಸೆಗಳ ಸುರಿಮಳೆ ಸುರಿಸಿದರು.

ನಂತರ, ಬಿಗ್ ಬಿ ಅವರು ರಣವೀರ್‌... ದೀಪಿಕಾಗೆ ನೀಡಿದಂತಹ ಮಾತು ಇನ್ನೂ ಏಕೆ ಈಡೇರಿಸಿಲ್ಲ ಎಂದು ನೇರವಾಗಿ ಕೇಳಿಯೇ ಬಿಟ್ಟರು. ನಟ ರಣವೀರ್ ಸಿಂಗ್​, ದೀಪಿಕಾಗೆ ಹೇಳಿದ್ದಕ್ಕಿಂತ ಹೆಚ್ಚಿನ ಭರವಸೆಗಳನ್ನು ಈಡೇರಿಸಿದ್ದೇನೆ ಎಂದು ಹೇಳಿದರು. ಇದನ್ನು ಕೇಳಿದ ಪ್ರೇಕ್ಷಕರು ನಗೆಗಡಲಲ್ಲಿ ತೇಲಾಡಿದರು ಎಂದರೆ ತಪ್ಪಾಗಲಾರದು.

ಇದನ್ನೂಓದಿ: Raj Kundra-Shamita Shetty ಗೈರಿನಲ್ಲಿ ಮಕ್ಕಳ ಜತೆ ಗಣಪತಿ ಹಬ್ಬ ಆಚರಿಸಿದ Shilpa Shetty

ನಟ ರಣವೀರ್ ಮತ್ತೊಮ್ಮೆ ಆಮ್ಲೆಟ್ ಮಾಡಿ ದೀಪಿಕಾಗೆ ತಿನ್ನಿಸುತ್ತೇನೆ ಎಂದು ಭರವಸೆ ನೀಡಿದರು. ಈ ವಿಶೇಷ ಸಂಚಿಕೆಯಲ್ಲಿ ಗೆದ್ದಂತಹ 25 ಲಕ್ಷ ರೂಪಾಯಿಯನ್ನು ದೀಪಿಕಾ ಅವರ ‘ದಿ ಲೀವ್ ಲವ್ ಲಾಫ್ ಫೌಂಡೇಶನ್’ಗೆ ಮತ್ತು ಫರಾ ಅವರಜ ಅಯಾನ್ಶ್ ಮದನ್ ಚಿಕಿತ್ಸೆಗೆ ನೀಡಲಿದ್ದಾರೆ ಎಂದು ಹೇಳಿದರು.

ಅಮಿತಾಭ್ ಬಚ್ಚನ್, ಹಾಲಿವುಡ್ ಚಿತ್ರ ಇಂಟರ್ನ್‍ನ ಹಿಂದಿ ರಿಮೇಕ್‍ಗೆ ಸಹಿ ಹಾಕಿದ್ದಾರೆ. ದೀಪಿಕಾ ಪಡುಕೋಣೆ ಕೂಡ ಆ ಚಿತ್ರದಲ್ಲಿ ಬಿಗ್‍ ಬಿ ಜೊತೆ ನಟಿಸುತ್ತಿದ್ದಾರೆ. ಈ ಮೊದಲು ಆ ಚಿತ್ರದಲ್ಲಿ ದಿವಂಗತ ನಟ ರಿಷಿ ಕಪೂರ್ ಅವರು ನಟಿಸುವುದು ಎಂದು ನಿರ್ಧರಿಸಲಾಗಿತ್ತು. ಹಾಲಿವುಡ್​ ಚಿತ್ರದಲ್ಲಿ ರಾಬರ್ಟ್ ಡೆ ನಿರೋ ಮತ್ತು ಆ್ಯನ್ನೆ ಹಾಥವೆ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಅಮಿತಾಭ್ ಬಚ್ಚನ್ ಈ ಮೊದಲು ಪೀಕು ಮತ್ತು ಆರಕ್ಷಣ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಇನ್ನು ಈ ಸಿನಿಮಾವನ್ನು ದೀಪಿಕಾ ಪಡುಕೋಣೆ ಅವರೇ ನಿರ್ಮಿಸುತ್ತಿದ್ದಾರೆ.
Published by:Anitha E
First published: