ದೀಪಿಕಾ ಪಡುಕೋಣೆ (Deepika Padukone), ಬಾಲಿವುಡ್ನಲ್ಲಿ (Bollywood) ಸಾಲು ಸಾಲು ಹಿಟ್ ಸಿನೆಮಾಗಳ (Film) ಮೂಲಕ ಸೂಪರ್ ಸ್ಟಾರ್ ಆದವರು. ಅವರ ಒಂದೊಂದು ಸಿನೆಮಾಗಳು ಅವರಿಗೆ ಹೆಸರನ್ನು ತಂದುಕೊಟ್ಟಿದೆ. ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ನಲ್ಲಿ ಸಹ ದೀಪಿಕಾ ಫೇಮಸ್. ಸದ್ಯ ಅಲ್ಲಿನ ಪ್ರಸಿದ್ದ ಕ್ಯಾನ್ ಸಿನಿಮೋತ್ಸವ (Cannes Film Festival) ನಡೆಯುತ್ತಿದೆ. ಪ್ರತಿ ಬಾರಿಯೂ ರೆಡ್ ಕಾರ್ಪೆಟ್ ಮೇಲೆ ಮಿಂಚುವ ಡಿಂಪಿ ಈ ಬಾರಿ ಜ್ಯೂರಿ ಸಹ ಆಗಿದ್ದರು. ಆದರೆ ಈಗ ಅವರ ಒಂದು ಡ್ರೆಸ್ ಟ್ರೋಲ್ ಆಗುತ್ತಿದ್ದು, ನೆಟ್ಟಿಗರು ಕಿರಿಕ್ ಮಾಡಿದ್ದಾರೆ. ಕ್ಯಾನ್ ಸಿನಿಮೋತ್ಸವದಲ್ಲಿ ದೀಪಿಕಾ ದಿನವೂ ಬಗೆ ಬಗೆಯ ಬಟ್ಟೆಗಳನ್ನು ಧರಿಸಿ ಮ್ಯಾಜಿಕ್ ಮಾಡಿದ್ದಾರೆ. ಆದರೆ ಅವರ ಅದೊಂದು ಗೌನ್ ಮಾತ್ರ ಟ್ರೋಲ್ ಆಗಿದೆ.
ದೀಪಿಕಾ ಮೊದಲ ದಿನ ಸೀರೆ ಉಟ್ಟಿದ್ದರು. ಅದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಈಗ ಅವರು ಧರಿಸಿರುವ ಆರೆಂಜ್ ಗೌನ್ ಮಾತ್ರ ಸರಿಯಾಗಿ ಟ್ರೋಲ್ ಆಗುತ್ತಿದೆ. ದೀಪಿಕಾ ಹಾಕಿರುವ ಆರೆಂಜ್ ಡ್ರೆಸ್ ವಿಡಿಯೋಗಳು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಜನ ಸ್ಟ್ರಗಲ್ ಈಸ್ ರಿಯಲ್ ಎಂದು ಕಾಮಿಡಿ ಮಾಡಿದ್ದಾರೆ.
ಅವರು ಧರಿಸಿರುವ ಆರೆಂಜ್ ಗೌನ್ ಬಹಳ ದೊಡ್ಡದಿದ್ದು, ಹಿಂದೆ ಬಟ್ಟೆಯನ್ನು ಸುತ್ತಿಕೊಂಡಂತೆ ಕಾಣುತ್ತಿದೆ. ಅಲ್ಲದೇ, ಅದನ್ನು ನಿಭಾಯಿಸುವುದು ಸಹ ದೀಪಿಕಾಗೆ ಕಷ್ಟವಾಗುತ್ತಿತ್ತು. ಅವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವಾಗ ಹರಸಾಹಸ ಮಾಡಬೇಕಿತ್ತು. ಅಲ್ಲದೇ, ಪದೇ ಪದೇ ಎಲ್ಲಾವನ್ನು ಒಂದೆಡೆ ಎಳಿಯಬೇಕಿತ್ತು. ದೀಪಿಕಾ ಈ ರೀತಿ ಕಷ್ಟಪಡುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಫುಲ್ ಟ್ರೆಂಡ್ ಆಗಿದ್ದು, ನೆಟ್ಟಿಗರು ಸರಿಯಾಗಿ ಟ್ರೋಲ್ ಮಾಡಿದ್ದಾರೆ.
ಮಾದರಿಯಾಗುವ ಬಟ್ಟೆ ಹಾಕಿ ಎಂದ ನೆಟ್ಟಿಗರು
ಈ ರೀತಿಯ ಬಟ್ಟೆಯನ್ನು ಸುತ್ತಿಕೊಂಡು ಬರುವ ಬದಲು ಲಕ್ಷಣವಾದ ಬಟ್ಟೆಯನ್ನು ಹಾಕಿಕೊಂಡು ಬರಬಹುದಲ್ವಾ ಎಂದು ನೆಟ್ಟಿಗರು ದೀಪಿಕಾ ಅವರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ನೀವು ಭಾರತವನ್ನು ಪ್ರತಿನಿಧಿಸುತ್ತಿದ್ದೀರಿ, ಹಾಗಾಗಿ ನೋಡುಗರಿಗೆ ಮಾದರಿಯಾಗುವಂತಹ ಬಟ್ಟೆಗಳನ್ನು ಧರಿಸಿ ಎಂದು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಕರಣ್ ಜೋಹರ್ ಗ್ರ್ಯಾಂಡ್ ಬರ್ತ್ ಡೇ ಸಲೆಬ್ರೇಷನ್ - ಯಾರೆಲ್ಲಾ ಬಂದಿದ್ರು? ಪಾರ್ಟಿ ಫೋಟೋಸ್ ಇಲ್ಲಿವೆ
ನಟಿಯರಿಗೆ ಟ್ರೋಲ್ ಆಗುವುದು ಹೊಸದೇನಲ್ಲ. ಅದರಲ್ಲೂ ದೀಪಿಕಾ ಬಟ್ಟೆಯ ವಿಚಾರಕ್ಕೆ ಆಗಾಗ ಟ್ರೋಲ್ ಆಗುತ್ತಿರುತ್ತಾರೆ. ಇನ್ನು ಈ ಬಾರಿ ಅವರು ಕ್ಯಾನ್ ಉತ್ಸವದಲ್ಲಿ ಧರಿಸಿರುವ ಪ್ರತಿಯೊಂದು ಬಟ್ಟೆಗಳು ಸಹ ಸುದ್ದಿ ಮಾಡುತ್ತಿದ್ದು, ಕೆಲವೊಂದು ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ.
ಇನ್ನು ದೀಪಿಕಾ ಬಾಲಿವುಡ್ನಲ್ಲಿ ಮಾತ್ರವಲ್ಲದೇ ಹಾಲಿವುಡ್ನಲ್ಲಿ ಸಹ ಫೇಮಸ್. ದೀಪಿಕಾ ಹಲವಾರು ಬಾರಿ ಕ್ಯಾನ್ ಸಿನಿಮೋತ್ಸವದಲ್ಲಿ ಭಾಗವಹಿಸಿಸುತ್ತಿದ್ದರು, ಆದರೆ ಮೊದಲ ಬಾರಿಗೆ ಜ್ಯೂರಿ ತಂಡದ ಸದ್ಯರಾಗಿದ್ದಾರೆ. ತಮ್ಮ ಅದ್ಬುತ ನಟನೆಯ ಮೂಲಕ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ದೀಪಿಕಾ ಪ್ರಪಂಚದ ಪ್ರತಿಷ್ಟಿತ ಅವಾರ್ಡ್ ಕ್ಯಾನ್ ಸಿನಿಮೋತ್ಸವದಲ್ಲಿ ಜ್ಯೂರಿಯಾಗಿ ಪಾಲ್ಗೊಂಡಿರುವುದು ನಿಜಕ್ಕೂ ಭಾರತೀಯರಿಗೆ ಹೆಮ್ಮೆಯ ವಿಚಾರ.
ಇದನ್ನೂ ಓದಿ: ಕ್ಯಾನ್ ಸಿನಿಮೋತ್ಸವದಲ್ಲಿ ದೀಪಿಕಾ ಸ್ಟೈಲ್ಗೆ ಅಭಿಮಾನಿಗಳು ಫಿದಾ - ಪದ್ಮಾವತ್ ಬೆಡಗಿಯ ಲುಕ್ ನೀವೂ ನೋಡಿ
ಭಾರತದ ತಾರೆಯರೇ ಮಿಂಚಿಂಗ್
ಇನ್ನು ದೀಪಿಕಾ ಮಾತ್ರವಲ್ಲದೇ, ಸೌತ್ ಹಾಗೂ ನಾರ್ತ್ ಫಿಲ್ಮ್ ಇಂಡಸ್ಟ್ರಿಯ ಎಲ್ಲಾ ಸ್ಟಾರ್ಗಳೂ ಸಹ ಕ್ಯಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿಯೂ ನಟಿ ಮಣಿಯರಂತೂ ವಿಭಿನ್ನ ವಿಭಿನ್ನ ಉಡುಗೆಗಳ ಮೂಲಕ ರೆಡ್ ಕಾರ್ಪೇಟ್ ಮೇಲೆ ಮಿಂಚಿದ್ದಾರೆ. ತಮನ್ನಾಭಾಟಿಯಾ ಅವರು 75ನೇ ಕ್ಯಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮೊದಲ ಬಾರಿಗೆ ಭಾಗಿಯಾಗಿದ್ದು, ಇವರುಗಳಲ್ಲದೆ ಪೂಜಾ ಹೆಗ್ಡೆ, ಊರ್ವಶಿ ರೌಟೆಲಾ, ಸಹ ಕ್ಯಾನ್ ಫಿಲ್ಮ್ ಫೆಸ್ಟಿವಲ್ನ ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ