ಸಾಮಾನ್ಯವಾಗಿ ಸಿನಿ ತಾರೆಯರು ತಮ್ಮ ದುಬಾರಿ ಉಡುಪುಗಳನ್ನು ಆನ್ಲೈನ್ನಲ್ಲಿ ಹರಾಜು ಮಾಡುವುದು ತುಂಬಾ ಸಮಯದಿಂದ ನಡೆದುಕೊಂಡು ಬರುತ್ತಿದೆ. ಬಾಲಿವುಡ್, ಸ್ಯಾಂಡಲ್ವುಡ್ ಹೀಗೆ ಬೇರೆ ಭಾಷೆಗಳ ಸೆಲೆಬ್ರಿಟಿಗಳು ತಮ್ಮ ವಿನ್ಯಾಸಿತ ವಸ್ತ್ರಗಳನ್ನು ಆನ್ಲೈನ್ನಲ್ಲಿ ಹರಾಜಿಗಿಡುವ ಮೂಲಕ ಮಾರಾಟ ಮಾಡುತ್ತಾರೆ. ಇದಕ್ಕೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಸಿಗುತ್ತದೆ. ಹೀಗೆ ಆನ್ಲೈನ್ನಲ್ಲಿ ಹರಾಜಿಗಿಡುವ ಬಟ್ಟೆಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಒಂದೊಳ್ಳೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ. ಕೆಲವೊಮ್ಮೆ ಸಿನಿಮಾಗಳಲ್ಲಿ ನಟಿಯರು ಧರಿಸಿದ್ದ ವಸ್ತ್ರಗಳನ್ನು ವಿನ್ತಾಸ ಮಾಡಿದ ವಿನ್ಯಾಸಕರು ದುಬಾರಿ ಮೊತ್ತಕ್ಕೆ ಅವುಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡುತ್ತಾರೆ. ಆನ್ಲೈನ್ನಲ್ಲಿ ಕಿರುತೆರೆ ಹಾಗೂ ಬೆಳ್ಳಿತೆರೆಯ ಸೆಲೆಬ್ರಿಟಿಗಳು ವಿಶೇಷ ಸಂದರ್ಭಗಳಲ್ಲಿ ತೊಟ್ಟ ಬಟ್ಟೆ ಮಾರಾಟ ಮಾಡುವುದು ಈಗ ಸಾಮಾನ್ಯವಾಗಿ ಹೋಗಿದೆ. ಇವುಗಳನ್ನು ಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಾರೆ. ಇದಕ್ಕೆ ಬಾಲಿವುಡ್ ನಟಿ ದೀಪಿಕಾ ಸಹ ಹೊರತಾಗಿಲ್ಲ.
ಈ ಹಿಂದೆ ಬಾಲಿವುಡ್ ಮಾದಕ ವಸ್ತು ಪ್ರಕರಣದಲ್ಲಿ ಎನ್ಸಿಬಿ ವಿಚಾರಣೆ ಎದುರಿಸಿದ್ದಾಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ದೀಪಿಕಾ ಪಡುಕೋಣೆ ಟ್ರೋಲ್ ಆಗಿದ್ದರು. ನಂತರ ಈಗ ಮತ್ತೆ ದೀಪಿಕಾ ಮಾಡಿರುವ ಒಂದು ಕೆಲಸದಿಂದಾಗಿ ಚರ್ಚೆಯ ವಿಷಯವಾಗಿದ್ದಾರೆ. ಹೌದು, ದೀಪಿಕಾ ಪಡುಕೋಣೆ ಸಾವಿನ ಮನೆಯಲ್ಲಿ ಧರಿಸಿದ್ದ ಬಟ್ಟೆಗಳನ್ನು ಆನ್ಲೈನ್ನಲ್ಲಿ ಮಾರಾಟಕ್ಕಿದ್ದಾರಂತೆ.
![Actress, Bollywood, ನಟಿ, ಬಾಲಿವುಡ್, ದೀಪಿಕಾ ಪಡುಕೋಣೆ, entertainment, Deepika Padukone,Actress,Bollywood,ನಟಿ,ಬಾಲಿವುಡ್,ದೀಪಿಕಾ ಪಡುಕೋಣೆ, funeral Cloths, clothes auction, Deepika Padukone auctioned her cloths she wore for funerals ae]()
ಟ್ವೀಟ್ ಮಾಡಿರುವುದರ ಪ್ರತಿ
ಮಾಯಾ ಎಂಬವರು ತಮ್ಮ ಟ್ವಿಟರ್ ಖಾನೆಯಲ್ಲಿ ಈ ಕುರಿತಾಗಿ ಫೋಟೋ ಸಹಿತ ಮಾಹಿತಿ ನೀಡಿದ್ದಾರೆ. ದೀಪಿಕಾ ಪಡುಕೋಣೆ ಅವರು ಸೆಲೆಬ್ರಿಟಿಗಳ ಸಾವನ್ನಪ್ಪಿದಾಗ ಅವರ ಅಂತಿಮ ದರ್ಶನಕ್ಕೆ ಹೋಗಿದ್ದಾಗ ಧರಿಸಿದ್ದ ಡ್ರೆಸ್ಗಳನ್ನು ಆನ್ಲೈನ್ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ದೀಪಿಕಾ ಮಾಡಿದ್ದು ಎಷ್ಟು ಸರಿ ಎಂದು ಮಾಯಾ ಪ್ರಶ್ನಿಸಿದ್ದಾರೆ. ಅಲ್ಲದೆ ಇಂತಹ ಬಟ್ಟೆಗಳನ್ನು ಮಾರಲು ಇಡುವ ಬದಲು ಚಾರಿಟಿಗೆ ನೀಡಿದ್ದರೆ ಮೆಚ್ಚಿಕೊಳ್ಳಬಹುದಿತ್ತು ಎಂದಿದ್ದಾರೆ.
ಮಾಯಾ ಅವರು ಮಾಡಿರುವ ಟ್ವೀಟ್ಗೆ ದೀಪಿಕಾ ಪಡುಕೋಣೆ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದು, ಇದು ದಾನಕ್ಕಾಗಿ ಮಾಡುತ್ತಿರುವ ಮಾರಾಟ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಮಾಯಾ, ಸಾಮಾನ್ಯ ಬ್ರ್ಯಾಂಡ್ನ ಬಟ್ಟೆಗಳನ್ನು ಹೀಗೆ ಮಾರಾಟ ಮಾಡಲು ಸಾಧ್ಯವಿಲ್ಲ. 2,700 ಹಾಗೂ 8 ಸಾವಿರ ಮಾಲ್ಯದ ಹಳೇ ಬಟ್ಟೆಗಳನ್ನು ಬಟ್ಟೆಗಳನ್ನು ಯಾರಿಗಾದರೂ ದಾನವಾಗಿ ನೀಡಬಹುದಿತ್ತಲೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Prabhas- Radhe Shyam: ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಸಂಕ್ರಾಂತಿಗೆ ರಾಧೆ ಶ್ಯಾಮ್ ಆಟ ಶುರು..!
ದೀಪಿಕಾ ಪಡುಕೋಣೆ ಮಾರಾಟಕ್ಕಿಟ್ಟಿರುವ ಬಟ್ಟೆಗಳನ್ನು ನಟಿ ಜಿಯಾ ಖಾನ್ ಮರಣ ಹೊಂದಿದ್ದಾಗ ಅವರ ಅಂತಿಮ ದರ್ಶನಕ್ಕಾಗಿ ಹಾಗೂ ಪ್ರಿಯಾಂಕಾ ಚೋಪ್ರಾ ಅವರ ತಂದೆ ಅಗಲಿದಾಗ ನಡೆದಿದ್ದ ಪ್ರಾರ್ಥನೆಗೆ ಹೋದಾಗ ಧರಿಸಿದ್ದರಂತೆ. ಆಗ ದೀಪಿಕಾ ಧರಿಸಿದ್ದ ಫೋಟೋಗಳನ್ನೂ ಮಾಯಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯದಿಂದಾಗಿ ದೀಪಿಕಾ ಪಡುಕೋಣೆ ಈಗ ಟ್ರೋಲ್ ಆಗುತ್ತಿದ್ದಾರೆ.
ಇದನ್ನೂ ಓದಿ: Sonam Kapoor: ಸಹೋದರಿ ರಿಯಾ ಕಪೂರ್ ಮದುವೆಯಲ್ಲಿ ಕಣ್ಣೀರಿಟ್ಟ ಸೋನಮ್ ಕಪೂರ್..!
ದೀಪಿಕಾ ಪಡುಕೋಣೆ ಅವರು ಮಾನಸಿಕ ಅಸ್ವಸ್ಥರಿಗಾಗಿ ಸಹಾಯ ಮಾಡುವ ಉದ್ದೇಶದಿಂದ ಲಿವ್, ಲಾಫ್, ಲವ್ ಫೌಂಡೇಶನ್ ಅನ್ನು ನಡೆಸುತ್ತಿದ್ದಾರೆ. ಇದರ ಅಂಗವಾಗಿ ಆಗಾಗ ದೀಪಿಕಾ ತಮ್ಮ ಕ್ಲೋಸೆಟ್ಗಳಿಂದ ಬಟ್ಟೆಗಳನ್ನು ಮಾರಾಟ ಮಾಡುತ್ತಾರೆ. ನೆಟ್ಟಿಗರು ಈ ಬಟ್ಟೆಗಳನ್ನು ಕೊಳ್ಳಬಹುದಾಗಿದೆ. ಇದೇ ವೆಬ್ ಸೈಟ್ನಲ್ಲಿ ಮಂಗಳವಾರ ಎರಡು ಬಿಳಿ ಬಣ್ಣದ ಉಡುಪುಗಳನ್ನು ಮಾರಾಟಕ್ಕಿಟ್ಟು ಟ್ರೋಲ್ ಆಗಿದ್ದಾರೆ.
ಸ್ಯಾಂಡಲ್ವುಡ್ನಲ್ಲೂ ಸಹ 2017ರಲ್ಲಿ ನಾಯಕಿಯರೆಲ್ಲ ಸೇರಿ ತಮ್ಮ ಬಟ್ಟೆಗಳನ್ನು ಹರಾಜು ಮಾಡುವ ಮೂಲಕ 80 ಸಾವಿರ ಹಣ ಗಳಿಸಿದ್ದರು. ದಿ ವ್ಯಾನಿಟಿ ಟ್ರಂಕ್ ಸೇಲ್ ಹೆಸರಿನಲ್ಲಿ ನಡೆದಿದ್ದ ಹರಾಜು ಕೇವಲ ಒಂಧು ಗಂಟೆಯಲ್ಲೇ ಕೊನೆಗೊಂಡಿತ್ತು. ಇದರಿಂದ ಗಳಿಸಿದ್ದ ಹಣವನ್ನು ಸದರ್ಕಾರೇತರ ಸಂಸ್ಥೆಗಳಿಗೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ