Kartik-Deepika: ವಿಮಾನ ನಿಲ್ದಾಣದಲ್ಲಿ ಡಾನ್ಸ್​ ಮಾಡಿ ಟ್ರೋಲ್​ ಆದ ದೀಪಿಕಾ-ಕಾರ್ತಿಕ್​ ಆರ್ಯನ್​..!

Dheeme Dheeme Challenge: ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಮತ್ತು ನಟ ಕಾರ್ತಿಕ್ ಆರ್ಯನ್  ಇತ್ತೀಚೆಗಷ್ಟೆ ಭೇಟಿಯಾಗಿದ್ದು, ಅಲ್ಲಿ ಒಂದು ಸೀನ್​ ಕ್ರಿಯೇಟ್ ಮಾಡಿದ್ದಾರೆ. ಅವರು ಮಾಡಿದ ಕೆಲಸದಿಂದಾಗಿ ಅವರು ಟ್ರಾಲ್​ ಆಗುತ್ತಿದ್ದಾರೆ.

Anitha E | news18-kannada
Updated:December 3, 2019, 5:34 PM IST
Kartik-Deepika: ವಿಮಾನ ನಿಲ್ದಾಣದಲ್ಲಿ ಡಾನ್ಸ್​ ಮಾಡಿ ಟ್ರೋಲ್​ ಆದ ದೀಪಿಕಾ-ಕಾರ್ತಿಕ್​ ಆರ್ಯನ್​..!
ದೀಪಿಕಾ ಹಾಗೂ ಕಾರ್ತಿಕ್ ಆರ್ಯನ್​
  • Share this:
ಸಿನಿ ತಾರೆಯರು ತಮ್ಮ ಸಿನಿಮಾ ಪ್ರಚಾರವನ್ನು ಎಲ್ಲೆಂದರಲ್ಲಿ, ಸಮಯ ಸಂದರ್ಭ ನೋಡದೆ ಮಾಡೋಕೆ ಆರಂಭಿಸಿದ್ದಾರೆ. ಅವರು ಮಾಡುವ ಕೆಲವು ಕೆಲಸಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದೂ ಅವರು ಮರೆತು ಬಿಡುತ್ತಾರೆ. ಈಗ ನಟ ಕಾರ್ತಿಕ್​ ಆರ್ಯನ್​ ಹಾಗೂ ದೀಪಿಕಾ ಪಡುಕೋಣೆ ಮಾಡಿರುವ ಕೆಲಸಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.

ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಮತ್ತು ನಟ ಕಾರ್ತಿಕ್ ಆರ್ಯನ್  ಇತ್ತೀಚೆಗಷ್ಟೆ ಭೇಟಿಯಾಗಿದ್ದು, ಅಲ್ಲಿ ಒಂದು ಸೀನ್​ ಕ್ರಿಯೇಟ್ ಮಾಡಿದ್ದಾರೆ. ಅವರು ಮಾಡಿದ ಕೆಲಸದಿಂದಾಗಿ ಅವರು ಟ್ರಾಲ್​ ಆಗುತ್ತಿದ್ದಾರೆ.

ಕಾರ್ತಿಕ್​ ಆರ್ಯನ್​ ನಟಿಸಿರುವ 'ಪತಿ ಪತ್ನಿ ಔರ್​ ವೋ' ಸಿನಿಮಾದ 'ಧೀಮೆ ಧೀಮೆ...' hAwu ಸಿಕ್ಕಾಪಟ್ಟೆ ಫೇಮಸ್​ ಆಗುತ್ತಿದೆ. ಇದೇ ಹಾಡಿಗೆ ಹೆಜ್ಜೆ ಹಾಕುವುದನ್ನು ಕಾರ್ತಿಕ್​ ದೀಪಿಕಾಗೆ ಹೇಳಿಕೊಟ್ಟಿದ್ದಾರೆ. ಆದರೆ ಅವರ ಈ ಟ್ರೈನಿಂಗ್ ಸೆಷೆನ್​ ನಡೆದದ್ದು ವಿಮಾನ ನಿಲ್ದಾಣದಲ್ಲಿ. ಅದೂ ಸಹ ಕಾರುಗಳು ಬಂದು ನಿಂತು ಜನರು ಇಳಿಯುವ ಸ್ಥಳದಲ್ಲಿ.ಈ ಘಟನೆ ನಡೆದಿರುವುದು ಮುಂಬೈ ವಿಮಾನ ನಿಲ್ದಾಣದ ಹೊರಗೆ. ದೀಪಿಕಾರನ್ನು ಭೇಟಿಯಾದ ಕಾರ್ತಿಕ್, ಆ ಹಾಡಿನ ಸ್ಟೆಪ್ ಹೇಳಿಕೊಡಲು ಮುಂದಾಗುತ್ತಾರೆ. ಅದಕ್ಕೂ ಮೊದಲೇ ದೀಪಿಕಾ ಆ ಹಾಡಿನ ಸ್ಟೆಪ್​ ತನಗೆ ಎಷ್ಟೇ ಪ್ರಯತ್ನಿಸಿದರೂ ಬರುತ್ತಿಲ್ಲ ಎನ್ನುತ್ತಾರೆ. ಆಗ ಕಾರ್ತಿಕ್​ ದೀಪಿಕಾಗೆ ಹೇಳಿ ಕೊಡಲು ಹೋಗುತ್ತಾರೆ. ಅಲ್ಲೇ ಸುಮಾರು 20 ನಿಮಿಷಗಳ ಕಾಲ ದೀಪಿಕಾಗೆ 'ಧೀಮೆ ಧೀಮೆ...' ಸ್ಟೆಪ್ ಹೇಳಿಕೊಡುತ್ತಾರೆ ಕಾರ್ತಿಕ್.

ನೆಟ್ಟಿಗರು ಬರೆದಿರುವ ಕಮೆಂಟ್​ಗಳು


ಸದ್ಯ ಆ ವಿಡಿಯೋ ಟ್ರೋಲ್ ಆಗುತ್ತಿದ್ದು, ನಿಮಗೆ ಡ್ಯಾನ್ಸ್ ಮಾಡಲು ಸಾರ್ವಜನಿಕ ಸ್ಥಳವೇ ಬೇಕಿತ್ತಾ? ಜನರಿಗೆ ತೊಂದರೆ ಮಾಡೋದೇ ನಿಮ್ಮ ಕೆಲಸನಾ ಅಂತೆಲ್ಲ ನೆಟ್ಟಿಗರು ದೀಪಿಕಾ ಮತ್ತು ಕಾರ್ತಿಕ್ ಮೇಲೆ ಗರಂ ಆಗಿದ್ದಾರೆ.Bigg Boss: ಬಾತ್​ಟಬ್​ನಲ್ಲಿರುವ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಬಿಗ್​ ಬಾಸ್​ ಖ್ಯಾತಿಯ ಈ ನಟಿ..!

First published: December 3, 2019, 5:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading