Deepika Padukone: ಪಡುಕೋಣೆ ಕುಟುಂಬದ ಹೆಸರಿನಲ್ಲಿದೆ ಒಂದು ವೈಶಿಷ್ಟ್ಯ, ಏನು ಗೊತ್ತಾ?

Padukone Family: ಪದ್ಮಾವತ್ ನಟಿ ತನ್ನ ಕುಟುಂಬದೊಂದಿಗೆ ಅತ್ಯಂತ ಒಳ್ಳೆಯ ಸಂಬಂಧವನ್ನು ಹೊಂದಿದ್ದಾರೆ. ನೀವು ಯಾವುದೇ ಕಾರ್ಯಕ್ರಮ ಮತ್ತು ಸಂದರ್ಶನಗಳನ್ನು ಗಮನಿಸಿ ಕುಟುಂಬದ ವಿಚಾರ ಬಂದಾಗ  ಹೆಚ್ಚು ಪ್ರೀತಿಯಿಂದ ಮಾತನಾಡುತ್ತಾರೆ ಮತ್ತು ಸಂತೋಷದಿಂದ ಕೂಡ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ದೀಪಿಕಾ  ತನ್ನ
 ಕುಟುಂಬದೊಂದಿಗೆ

ದೀಪಿಕಾ ತನ್ನ ಕುಟುಂಬದೊಂದಿಗೆ

  • Share this:
ದೀಪಿಕಾ ಪಡುಕೋಣೆ(Deepika Padukone ) ಬಾಲಿವುಡ್‌ನ(Bollywood) ಈಗಿನ ಟಾಪ್ ನಟಿಯರಲ್ಲಿ ಒಬ್ಬರು.ಅವರದ್ದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.  ಒಂದು ದಶಕದ ಸುದೀರ್ಘ ವೃತ್ತಿಜೀವನದಲ್ಲಿ, ದೀಪಿಕಾ ಬೆಳ್ಳಿ ಪರದೆಯಲ್ಲಿ ಹಲವಾರು  ಅದ್ಭುತ ಪ್ರದರ್ಶನಗಳನ್ನು ನೀಡಿದ್ದಾರೆ, ಅದು ಆರ್ಥಿಕವಾಗಿ ಮತ್ತು ವಿಮರ್ಶಾತ್ಮಕವಾಗಿ  ಜನರಿಂದ ಮೆಚ್ಚುಗೆ ಪಡೆದಿದೆ. ಆದರೆ ಈ ಸಮಯದಲ್ಲಿ,  ದೀಪಿಕಾ ನಟನೆಯ ಬಗ್ಗೆ ಮಾತನಾಡುತ್ತಿಲ್ಲ.  ದೀಪಿಕಾ ಮತ್ತು ಅವರ ಕುಟುಂಬದ ಬಗ್ಗೆ .

ಪದ್ಮಾವತ್ ನಟಿ ತನ್ನ ಕುಟುಂಬದೊಂದಿಗೆ ಅತ್ಯಂತ ಒಳ್ಳೆಯ ಸಂಬಂಧವನ್ನು ಹೊಂದಿದ್ದಾರೆ. ನೀವು ಯಾವುದೇ ಕಾರ್ಯಕ್ರಮ ಮತ್ತು ಸಂದರ್ಶನಗಳನ್ನು ಗಮನಿಸಿ ಕುಟುಂಬದ ವಿಚಾರ ಬಂದಾಗ  ಹೆಚ್ಚು ಪ್ರೀತಿಯಿಂದ ಮಾತನಾಡುತ್ತಾರೆ ಮತ್ತು ಸಂತೋಷದಿಂದ ಕೂಡ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ನೀವು ಒಂದು ವಿಚಾರವನ್ನು ಗಮನಿಸಿದ್ದೀರಾ? ಪಡುಕೋಣೆ ಕುಟುಂಬದ ಎಲ್ಲ ಸದಸ್ಯರು ತಮ್ಮ ಹೆಸರಿನಲ್ಲಿ ಒಂದು ಸಾಮಾನ್ಯತೆಯನ್ನು ಹೊಂದಿದ್ದಾರೆ.

ದೀಪಿಕಾ ಪಡುಕೋಣೆ ಅವರ ಕುಟುಂಬ ಸದಸ್ಯರು ತಮ್ಮ ಹೆಸರಿನಲ್ಲಿಒಂದು ಸಾಮಾನ್ಯ ವಿಷಯವನ್ನು ಹೊಂದಿದ್ದಾರೆ. ನೀವು ಅದು ಯಾವುದು ಎಂದು ಗೆಸ್​ ಮಾಡ್ತೀರಾ?

ಇದನ್ನೂ ಓದಿ: ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಮ್ಮನೆ ಯುವರಾಣಿ ಧಾರಾವಾಹಿಯ ನಟ ರಘು..!

ಪಡುಕೋಣೆ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಸಾಮಾನ್ಯತೆಯು ಬೆಳಕು. ಹೌದು, ನೀವೇ ಗಮನಿಸಿ ನೋಡಿ, ದೀಪಿಕಾ ಎಂಬ ಹೆಸರು ಬೆಳಕನ್ನು ಸೂಚಿಸುತ್ತದೆ, ಮತ್ತು ಆಕೆಯ ತಂದೆಯ ಹೆಸರು 'ಪ್ರಕಾಶ್' ಎಂದರೆ 'ಪ್ರಕಾಶಮಾನವಾದ ಬೆಳಕು' ಮತ್ತು ಇದು ಸಂಸ್ಕೃತ ಪದವಾದ 'ಪ್ರಕಾಶ' ದಿಂದ ಬಂದಿದೆ. ದೀಪಿಕಾ ಅವರ ತಾಯಿಯ ಹೆಸರು, 'ಉಜ್ಜಲ'  ಅದು ಸಹ ಬೆಳಕನ್ನು ಸೂಚಿಸುತ್ತದೆ. ಕೊನೆಯದಾಗಿ, ಅನಿಶಾ ದೀಪಿಕಾರ ತಂಗಿಯ ಹೆಸರು . ಆ ಹೆಸರಿನ ಅರ್ಥ ಕೂಡ ಕತ್ತಲೆಯನ್ನು ಕರಗಿಸುವಂಥಹದ್ದು ಎಂದು.

ದೀಪಿಕಾ ಪಡುಕೋಣೆಯ ಮುಂದಿನ ಚಿತ್ರಗಳ ಬಗ್ಗೆ ಮಾತನಾಡುವುದಾದರೇ, ಸಾಲು ಸಾಲು ಚಿತ್ರಗಳು ಅವರ ಕೈನಲ್ಲಿದೆ.  ಬಹಳ ಹಿಂದೆಯೇ, ನಟಿ ಶಕುನ್ ಬಾತ್ರಾ ಅವರ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ.  ಆ ಚಿತ್ರದಲ್ಲಿ  ಅವರು ಸಿದ್ಧಾಂತ್ ಚತುರ್ವೇದಿ ಮತ್ತು ಅನನ್ಯ ಪಾಂಡೆಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದರ ಹೊರತಾಗಿ, ಅವರು  ಪಠಾಣ್ ಚಿತ್ರ ಒಪ್ಪಿಕೊಂಡಿದ್ದು,  ಆ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಜೊತೆ  ಪರದೆ ಹಂಚಿಕೊಳ್ಳಲಿದ್ದಾರೆ.  ಜೊತೆಗೆ ದೀಪಿಕಾ ಹೃತಿಕ್ ರೋಷನ್  ಎದುರಾಗಿ  ಫೈಟರ್ ಚಿತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯದ ಜೊತೆಗೆ ದೀಪಿಕಾ ಪಡುಕೋಣೆ ಚಿತ್ರಗಳ ನಿರ್ಮಾಣದಲ್ಲೂ ಬ್ಯುಸಿಯಾಗಿದ್ದಾರೆ. ಸದ್ಯ ತಾವೇ ಹಣ ಹೂಡಿ ನಿರ್ಮಿಸುತ್ತಿರುವ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಲಿವುಡ್​ ಸಿನಿಮಾ ದ ಇಂಟರ್ನ್​ ಚಿತ್ರದಲ್ಲಿ ಅಮಿತಾಭ್​ ಜತೆ ದೀಪಿಕಾ ನಟನೆ ಮಾಡುತ್ತಿದ್ದಾರೆ.

ಇನ್ನು ದೀಪಿಕಾ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ , ಕಾಸ್ಟ್ಲಿ ಮನೆ ಖರೀದಿ ಮಾಡುವ ಮೂಲಕ ಸುದ್ದಿಯಲ್ಲಿದ್ದರು.  . ಹೌದು, ಕೋಟ್ಯಂತರ ರೂಪಾಯಿ ಹಣ ಕೊಟ್ಟು  ಮನೆ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಗಂಗಾನಗರದ ಎಂಬಸಿ ಅಪಾರ್ಟ್​ಮೆಂಟ್​ನಲ್ಲಿ ದೀಪಿಕಾ ಒಂದು ಫ್ಲ್ಯಾಟ್​ ಖರೀದಿಸಿದ್ದಾರೆ. 26 ಅಂತಸ್ತಿನ ಕಟ್ಟಡದಲ್ಲಿ 22ನೇ ಅಂತಸ್ತಿನಲ್ಲಿ ದೀಪಿಕಾ ಖರೀದಿಸಿರುವ ಮನೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹುಚ್ಚು ಅಭಿಮಾನಿಯಿಂದ Jennifer Lopezರನ್ನು ರಕ್ಷಿಸಿದ Ben Affleck: ವಿಡಿಯೋ ವೈರಲ್

ದೀಪಿಕಾ ಪಡುಕೋಣೆ ಖರೀದಿಸಿರುವ ಈ ಹೊಸ ಮನೆಗೆ 6 ಕೋಟಿ 79 ಲಕ್ಷ ಹಣ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು,  ಇದಕ್ಕೆ 34.64 ಲಕ್ಷ ಸ್ಟ್ಯಾಂಪ್​ ಡ್ಯುಟಿ ಸಹ ಕಟ್ಟಲಾಗಿದೆಯಂತೆ. ಈ ಮನೆಯನ್ನು ದೀಪಿಕಾ ಅವರು ತಮ್ಮ ತಂದೆ ಜೊತೆ ಸೇರಿ ಖರೀದಿಸಿದ್ದಾರಂತೆ.
Published by:Sandhya M
First published: