Deepika Padukone; ಅಮ್ಮನಾಗುತ್ತಿರುವ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು?

ನಂತರ ಮಾತು ಮುಂದುವರಿಸಿದ ದೀಪಿಕಾ ಪಡುಕೋಣೆ, ನನಗೂ  ತಾಯಿಯಾಗುವ ಆಸೆಯಿದೆ, ರಣವೀರ್​ಗೂ ಮಕ್ಕಳೆಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ

news18-kannada
Updated:October 12, 2019, 5:52 PM IST
Deepika Padukone; ಅಮ್ಮನಾಗುತ್ತಿರುವ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು?
ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್​ ಸಿಂಗ್
  • Share this:
ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಮದುವೆಯಾಗಿ ಒಂದು ವರ್ಷವೂ ಕಳೆದಿಲ್ಲ. 2018 ನವೆಂಬರ್​ ತಿಂಗಳಿನಲ್ಲಿ ದೀಪಿಕಾ ನಟ ರಣವೀರ್​ ಸಿಂಗ್​ ಜೊತೆ ಹಸೆಮಣೆ ಏರಿದ್ದರು. ಆದರೀಗ ದೀಪಿಕಾ ಪಡುಕೋಣೆ ಗರ್ಭಿಣಿ ಎಂಬ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದೆ.

ಈ ವಿಚಾರ ಕುರಿತಂತೆ ನಟಿ ದೀಪಿಕಾ ಪಡುಕೋಣೆ ಸ್ಪಷ್ಟತೆ ನೀಡಿದ್ದು, ‘ನಾನು ತಾಯಿಯಾಗಿಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ತಾಯಿಯಾಗುವ ಬಗ್ಗೆ ಚಿಂತಿಸಿಲ್ಲ. ನಾನು ಮತ್ತು ರಣವೀರ್​ ವೃತ್ತಿ ಬಗೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ‘ ಎಂದಿದ್ದಾರೆ.

‘ನನಗೂ  ತಾಯಿಯಾಗುವ ಆಸೆಯಿದೆ, ರಣವೀರ್​ಗೂ ಮಕ್ಕಳೆಂದರೆ ತುಂಬಾ ಇಷ್ಟ. ಆದರೆ ಸದ್ಯಕ್ಕೆ ನಾವಿಬ್ಬರು ತಂದೆ-ತಾಯಿಯಾಗಲು​ ತಯಾರಿಲ್ಲ‘ ಎಂದು ದೀಪಿಕಾ ಪಡುಕೋಣೆ ಸ್ಪಷ್ಟತೆ ನೀಡಿದ್ದಾರೆ.

ಇದನ್ನೂ ಓದಿ: ಪರಮೇಶ್ವರ್ ಮೇಲೆ ಐಟಿ ದಾಳಿ ಖಂಡಿಸಿ ದೆಹಲಿಯಲ್ಲಿ ವಿತ್ತ ಸಚಿವೆ ನಿವಾಸದ ಮುಂದೆ ಯೂತ್ ಕಾಂಗ್ರೆಸ್ ಪ್ರತಿಭಟನೆ

ಈ ಹಿಂದೊಮ್ಮೆ ಕೂಡ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಜೊತೆಯಾಗಿರುವ ಫೋಟೋವನ್ನು ಟ್ವೀಟ್​ ಮಾಡಿದ್ದರು. ಫೋಟೋದಲ್ಲಿ ದೀಪಿಕಾ ತುಸು ಸಡಿಲವಾದ ಬಟ್ಟೆಯನ್ನು ಧರಿಸಿದ್ದರು. ಇವರಿಬ್ಬರ ಫೋಟೋವನ್ನು ನೋಡಿದ ಅಭಿಮಾನಿಯೊಬ್ಬ ಸಾಮಾಜಿಕ ತಾಣದಲ್ಲಿ ದೀಪಿಕಾ ಗರ್ಭಿಣಿಯೇ? ಎಂದೆಲ್ಲಾ ಕಾಮೆಂಟ್​ ಮಾಡಿದ್ದರು.

ಇನ್ನು ಕಳೆದ ವಾರ ದೀಪಿಕಾ ಪತಿ ರಣವೀರ್​ ಸಿಂಗ್​ ಅವರ ಇನ್​​​ಸ್ಟಾ ಸೆಷನ್​ನಲ್ಲಿ ಹಾಯ್​ ಡ್ಯಾಡಿ ಎಂದು ಕಾಮೆಂಟ್​ ಮಾಡಿದ್ದರು ಮತ್ತು ಇಮೋಜಿಗಳನ್ನು ಹಾಕಿದ್ದರು. ಅದಕ್ಕೆ ನಟ ಅರ್ಜುನ್​ ಕಪೂರ್​ ಅವರು ರಣವೀರ್​ ಸಿಂಗ್​ಗೆ ‘ಭಾಬಿ ಗಿವ್​ ಯು ಒನ್‘ ಎಂದು ಕಾಮೆಂಟ್​ ಮಾಡಿದ್ದಾರೆ. ಇವೆಲ್ಲವು ದೀಪಿಕಾ ಪಡುಕೋಣೆ ತಾಯಿಯಾಗುತ್ತಿದ್ದಾರೆಂಬ ಗಾಳಿ ಸುದ್ದಿಗೆ ಮತ್ತಷ್ಟು ಉತ್ತೇಜನ ನೀಡುವಂತಾಯಿತು.

ಸದ್ಯಕ್ಕೆ ನಟಿ ದೀಪಿಕಾ ಆ್ಯಸಿಡ್​​ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್​ ಜೀವ ಕಥೆಯಾಗಿರುವ ‘ಚಪಾಕ್‘​ ಸಿನಿಮಾದಲ್ಲಿ ನಡಿಸುತ್ತಿದ್ದಾರೆ. ಇನ್ನೊಂದಡೆ ಭಾರತ ಕ್ರಿಕೆಟರ್​ ಕಪಿಲ್​ ದೇವ್​ ಬಯೋಪಿಕ್​ 83 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಪೀಲ್​ದೇವ್​​ ಹೆಂಡತಿ ರೋಮಿ ಭಾಟಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
First published: October 12, 2019, 5:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading