HOME » NEWS » Entertainment » DEEPIKA MAY GET THE CHANCE TO ACT WITH PRABHAS IN ADIPURUSH RMD

ಪ್ರಭಾಸ್​ ಜೊತೆ ಬ್ಯಾಕ್​ ಟು ಬ್ಯಾಕ್​​ ಸಿನಿಮಾಗಳಲ್ಲಿ ನಟಿಸಲಿದ್ದಾರೆ ದೀಪಿಕಾ ಪಡುಕೋಣೆ

ಬಾಲಿವುಡ್​ ಹಾಗೂ ತೆಲುಗು ಚಿತ್ರರಂಗದಲ್ಲಿ ನಟಿಸುತ್ತಿರುವ ಕಿಯಾರಾ ಆಡ್ವಾಣಿ, ರಾಕುಲ್​ ಪ್ರೀತ್​ ಸಿಂಗ್​ ಹಾಗೂ ಪೂಜಾ ಹೆಗ್ಡೆಯಂಥ ನಾಯಕಿಯರು ಈ ಪಾತ್ರಕ್ಕೆ ಅಷ್ಟಾಗಿ ಸ್ಯೂಟ್​ ಆಗುವುದಿಲ್ಲ ಅನ್ನೋದು ಚಿತ್ರತಂಡದ ಅಭಿಪ್ರಾಯ.

news18-kannada
Updated:November 6, 2020, 1:01 PM IST
ಪ್ರಭಾಸ್​ ಜೊತೆ ಬ್ಯಾಕ್​ ಟು ಬ್ಯಾಕ್​​ ಸಿನಿಮಾಗಳಲ್ಲಿ ನಟಿಸಲಿದ್ದಾರೆ ದೀಪಿಕಾ ಪಡುಕೋಣೆ
ದೀಪಿಕಾ-ಪ್ರಭಾಸ್​
  • Share this:
ಬಾಹುಬಲಿ ನಂತರದಲ್ಲಿ ನಟ ಪ್ರಭಾಸ್​ ನ್ಯಾಷನಲ್​ ಸ್ಟಾರ್​ ಆಗಿ ಬಿಟ್ಟಿದ್ದಾರೆ. ಅವರ ಚಿತ್ರಗಳಿಗೆ ಬಾಲಿವುಡ್​ನಲ್ಲೂ ಬೇಡಿಕೆ ಇರುವುದರಿಂದ ಹಿಂದಿ ನಾಯಕಿಯರನ್ನೇ ಅವರ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಸಾಹೋ ಚಿತ್ರಕ್ಕೆ ಶ್ರದ್ಧಾ ಕಪೂರ್​ ನಾಯಕಿಯಾಗಿ ಮಿಂಚಿದ್ದರು. ಅಶ್ವಿನ್​ ನಾಗ್​ ನಿರ್ದೇಶನದ ಚಿತ್ರಕ್ಕೆ ಪ್ರಭಾಸ್​ಗೆ ಜೊತೆಯಾಗಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಪ್ರಭಾಸ್​ ಮತ್ತೊಂದು ಚಿತ್ರಕ್ಕೆ ಯಾರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ನಿರ್ದೇಶಕರನ್ನು ಕಾಡುತ್ತಿದೆ.

ಆದಿಪುರುಷ್​ ಸಿನಿಮಾಗೆ ನಾಯಕಿಯ ಆಯ್ಕೆ ಪ್ರಗತಿಯಲ್ಲಿದೆ. ಆರಂಭದಲ್ಲಿ ದೀಪಿಕಾ ಅವರನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದ ಚಿತ್ರತಂಡದ ಆಲೋಚನೆ ಆಗಿತ್ತು. ಆದರೆ, ಈಗಾಗಲೇ ನಾಗ್​ ಅಶ್ವಿನ್​ ಚಿತ್ರದಲ್ಲಿ ಪ್ರಭಾಸ್​ಗೆ ಜೊತೆಯಾಗಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಎರಡೂ ಚಿತ್ರಕ್ಕೆ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳೋದು ಬೇಡ ಅನ್ನೋದು ಚಿತ್ರ ತಂಡದ ಅಭಿಪ್ರಾಯ.


ಬಾಲಿವುಡ್​ ಹಾಗೂ ತೆಲುಗು ಸಿನಿ ರಂಗದಲ್ಲಿ ನಟಿಸುತ್ತಿರುವ ಕಿಯಾರಾ ಆಡ್ವಾಣಿ, ರಾಕುಲ್​ ಪ್ರೀತ್​ ಸಿಂಗ್​ ಹಾಗೂ ಪೂಜಾ ಹೆಗ್ಡೆಯಂಥ ನಾಯಕಿಯರು ಈ ಪಾತ್ರಕ್ಕೆ ಅಷ್ಟಾಗಿ ಸ್ಯೂಟ್​ ಆಗುವುದಿಲ್ಲ ಅನ್ನೋದು ಚಿತ್ರತಂಡದ ಅಭಿಪ್ರಾಯ. ಹೀಗಾಗಿ, ದೀಪಿಕಾ ಈ ಪಾತ್ರಕ್ಕೆ ಸರಿಯಾಗಿ ಒಪ್ಪುತ್ತಿದ್ದರು ಎನ್ನುವ ಲೆಕ್ಕಾಚಾರ ಚಿತ್ರತಂಡದ್ದು. ಹೀಗಾಗಿ, ಯಾರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಬೇಕು ಎನ್ನುವ ಗೊಂದಲ ಚಿತ್ರತಂಡದಿಂದ ಮುಂದುವರಿದಿದೆ.
Published by: Rajesh Duggumane
First published: November 6, 2020, 1:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading