ಇದೇ ನವೆಂಬರ್​ನಲ್ಲಿ ನಡೆಯಲಿದೆ ಸ್ಟಾರ್​ ಜೋಡಿ ದೀಪಿಕಾ-ರಣವೀರ್​ ಸಿಂಗ್​ ಮದುವೆ!

Anitha E | news18
Updated:June 21, 2018, 5:03 PM IST
ಇದೇ ನವೆಂಬರ್​ನಲ್ಲಿ ನಡೆಯಲಿದೆ ಸ್ಟಾರ್​ ಜೋಡಿ ದೀಪಿಕಾ-ರಣವೀರ್​ ಸಿಂಗ್​ ಮದುವೆ!
Anitha E | news18
Updated: June 21, 2018, 5:03 PM IST
ನ್ಯೂಸ್​ 18 ಕನ್ನಡ 

ತುಂಬಾ ಸುದ್ದಿಯಲ್ಲಿರುವ ಬಾಲಿವುಡ್​ ಸ್ಟಾರ್​ ಜೋಡಿ ಗುಳಿಕೆನ್ನೆ ಸುಂದರಿ ದೀಪಿಕಾ ಹಾಗೂ ರಣವೀರ್​ ಸಿಂಗ್​ ಅವರ ವಿವಾಹದ ವಿಷಯ ಕಳೆದ ಕೆಲ ತಿಂಗಳಿನಿಂದ ತುಂಬಾ ಸುದ್ದಿಯಲ್ಲಿದೆ. ಅದಕ್ಕೆ ಈಗ ಬ್ರೇಕ್ ಬಿದ್ದಿದ್ದು, ಅವರ ವಿವಾಹದ ದಿನಾಂಕ ಕೊನೆಗೂ ನಿಗದಿಯಾಗಿದೆ.

ಹೌದು, ರಣವೀರ್​-ದೀಪಿಕಾ ನವೆಂಬರ್​ 10ಕ್ಕೆ ವಿವಾಹವಾಗಲಿದ್ದಾರೆ ಎಂದು 'ಫಿಲ್ಮ್​ಫೇರ್​'ನ ವೆಬ್​ಸೈಟ್​ ಸುದ್ದಿ ಮಾಡಿದೆ. ಇಬ್ಬರ ಕುಟುಂಬದವರೂ ಈಗಾಗಲೇ ಮಾತುಕತೆ ನಡೆಸಿ, ರೋಕಾ (ನಿಶ್ಚಯ) ಮಾಡಿಕೊಂಡಿದ್ದರು. ಈಗ ಕೆಲ ದಿನಗಳ ಹಿಂದೆಯಷ್ಟೆ ಮದುವೆ ದಿನಾಂಕ ನಿಶ್ಚಯ ಮಾಡಲಾಗಿದೆಯಂತೆ.

ಈ ಜೋಡಿಯ ಮದುವೆ ಇಟಲಿ ಅಥವಾ ಬೆಂಗಳೂರಿನಲ್ಲಿ ನಡೆಯಲಿದೆಯಂತೆ. ಅಲ್ಲದೆ ಉದಯಪುರದ ಅರಮನೆಯಲ್ಲಿ ವಿವಾಹ ಮಾಡಲು ಪ್ರಯತ್ನಿಸಿದ್ದರಾದರೂ ಅದು ಆಗಲಿಲ್ಲ ಎನ್ನಲಾಗುತ್ತಿದೆ. ವಿವಾಹಕ್ಕಾಗಿ ಎರಡೂ ಕುಟುಂಬಗಳವರು ಜೋರಾಗಿ ತಯಾರಿ ನಡೆಸಿದ್ದಾರಂತೆ.

 
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...