ಜೈ ಭೀಮ್: ನವೆಂಬರ್ 2 -ಅಮೆಜಾನ್ ಪ್ರೈಮ್ ( ತಮಿಳು)
ಅಮೆಜಾನ್ ಪ್ರೈಮ್ನಲ್ಲಿ ಸೂರ್ಯ ನಾಯಕನಾಗಿ ನಟಿಸಿರುವ ಜೈ ಭೀಮ್ ಸಿನಿಮಾ ನವೆಂಬರ್ 2ರಂದು ಬಿಡುಗಡೆಯಾಗಲಿದೆ. ಟಿ ಜೆ ಜ್ಞಾನವೇಲ್ ನಿರ್ದೇಶನದ ಈ ತಮಿಳು ಚಿತ್ರದಲ್ಲಿ ರಜೀಶಾ ವಿಜಯನ್ , ಪ್ರಕಾಶ್ ರಾಜ್ , ರಾವ್ ರಮೇಶ್ ಮತ್ತು ಲಿಜೊಮೋಲ್ ಜೋಸ್ ನಟಿಸಿದ್ದಾರೆ. ಈ ಚಿತ್ರದ ಮೂಲಕ ಸೂರ್ಯ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾತಿ ಆಧಾರಿತ ತಾರತಮ್ಯ ಮತ್ತು ಪೋಲೀಸ್ ದೌರ್ಜನ್ಯದ ಕುರಿತ ಕಥಾ ವಸ್ತುವುಳ್ಳ ಸಿನಿಮಾ.
ಅಣ್ಣಾತೆ: ನವೆಂಬರ್ 4 - ಚಿತ್ರಮಂದಿರ (ತಮಿಳು)
ಎನಿಮಿ: ನೆವಂಬರ್ 4 - ಚಿತ್ರಮಂದಿರ ( ತಮಿಳು)
ಈ ಎನಿಮಿ ತಮಿಳು ಚಿತ್ರವು ಕೂಡ ನವೆಂಬರ್ 4ರಂದು ಬಿಡುಗಡೆ ಆಗಲಿದೆ. ವಿಶಾಲ್ ಮತ್ತು ಆರ್ಯ ಮುಖ್ಯ ಪಾತ್ರದಲ್ಲಿರುವ ಈ ಚಿತ್ರ ಸಾಹಸ ಪ್ರಧಾನ ಕಥೆಯುಳ್ಳದ್ದಾಗಿದೆ. ಆನಂದ್ ಶಂಕರ್ ನಿರ್ದೇಶನದ ಮಮತಾ ಮೋಹನ್ ದಾಸ್, ಪ್ರಕಾಶ್ ರಾಜ್ ಮತ್ತು ಮೃಣಾಲಿನಿ ರವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಎಂಜಿಆರ್ ಮಗನ್ : ನವೆಂಬರ್ 4 - ಡಿಸ್ನಿ ಪ್ಲಸ್ ಹಾಟ್ಸ್ಟಾರ್ (ತಮಿಳು)
ಶಶಿ ಕುಮಾರ್, ಸಮುದ್ರಕಣಿ, ಸತ್ಯರಾಜ್, ಮೃಣಾಲಿನಿ ರವಿ, ಸಿಂಗಮ್ ಪುಲಿ ಮತ್ತು ಶರಣ್ಯ ಪೊಣ್ವಣ್ಣಮ್ ಮುಂತಾದವರು ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ, ಹಳ್ಳಿಯ ಹಿನ್ನೆಲೆಯ ಕಥೆಯುಳ್ಳ ಈ ತಮಿಳು ಸಿನಿಮಾ ನವೆಂಬರ್ 4 ರಂದು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಲಿದೆ. ಪೊನ್ರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ವಾ: ನವೆಂಬರ್ 4- ಚಿತ್ರಮಂದಿರ (ತಮಿಳು)
ರತಿನ್ ಶಿವಾ ನಿರ್ದೇಶನದ ಈ ಚಿತ್ರದಲ್ಲಿ ಅರುಣ್ ವಿಜಯ್ ಮತ್ತು ಕಾರ್ತಿಕಾ ನಾಯರ್ ಮುಖ್ಯ ಪಾತ್ರದಲ್ಲಿ ಇದ್ದಾರೆ. ಚಿತ್ರಕ್ಕೆ ತಮನ್ ಸಂಗೀತವಿದೆ.
ಕುರುಪ್: ನವೆಂಬರ್ 12 - ಚಿತ್ರಮಂದಿರ (ಮಲಯಾಳಂ)
ದುಲ್ಖರ್ ಸಲ್ಮಾನ್ ಮತ್ತು ಸೊಬಿತಾ ಧುಲಿಪಾಲಾ ಪ್ರಧಾನ ಪಾತ್ರದಲ್ಲಿರುವ ಈ ಸಿನಿಮಾ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ ಸುಕುಮಾರ ಕುರುಪ್ ನಿಜ ಜೀವನವನ್ನು ಆಧರಿಸಿದ ಕಥೆಯನ್ನು ಹೊಂದಿದೆ. ಈ ಚಿತ್ರ ಮಲೆಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಕನ್ನಡದಲ್ಲಿ ಬಿಡುಗಡೆ ಆಗಲಿದೆ. ಕುರುಪ್ ನವೆಂಬರ್ 12ರಂದು ತೆರೆ ಕಾಣಲಿದೆ.
ಕನಕಮ್ ಕಾಮಿನಿ ಕಲಹಂ: ನವೆಂಬರ್ 12 - ಡಿಸ್ನಿ ಪ್ಲಸ್ ಹಾಟ್ಸ್ಟಾರ್ ( ಮಲಯಾಳಂ)
ನಿವಿನ್ ಪೌಲಿ ಮತ್ತು ಗ್ರೇಸಿ ಆ್ಯಂಟೋನಿ ನಾಯಕ, ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ನವೆಂಬರ್ 12 ರಂದು ಬಿಡುಗಡೆ ಆಗಲಿದೆ. ಈ ಚಿತ್ರವನ್ನು ರತೀಶ್ ಬಾಲಕೃಷ್ಣ ಪೊಡುವಲ್ ನಿರ್ದೇಶಿಸಿದ್ದಾರೆ.
ಪ್ರೇಮಂ ಪೂಜ್ಯಂ: ನವೆಂಬರ್ 14 - ಚಿತ್ರಮಂದಿರ (ಕನ್ನಡ)
ಲವ್ಲಿ ಸ್ಟಾರ್ ಪ್ರೇಂ ಕುಮಾರ್ , ಬೃಂದಾ ಆಚಾರ್ಯ ಮತ್ತು ಐಂದ್ರಿತಾ ರೇ ಮುಖ್ಯ ಪಾತ್ರದಲ್ಲಿರುವ ಈ ಚಿತ್ರ ನವೆಂಬರ್ 12 ರಂದು ಬಿಡುಗಡೆ ಆಗಲಿದೆ. ಡಾ. ರಾಘವೇಂದ್ರ ಬಿ ಎಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ರಾಘವೇಂದ್ರ ಅವರ ಸಂಗೀತವಿದೆ.
ಮುಗಿಲ್ ಪೇಟೆ: ನವೆಂಬರ್ 19 - ಚಿತ್ರಮಂದಿರ (ಕನ್ನಡ)
ಮನುರಂಜನ್ ರವಿಚಂದ್ರನ್, ಕಯಾದು ಲೋಹರ್, ತಾರಾ, ಅವಿನಾಶ್, ಸಾಧು ಕೋಕಿಲ, ರಂಗಾಯಣ ರಘು, ಅಪ್ಪಣ್ಣ ಮತ್ತು ಪ್ರಶಾಂತ್ ಸಿದ್ದಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ನವೆಂಬರ್ 19 ರಂದು ಬಿಡುಗಡೆ ಆಗಲಿದೆ. ಈ ಚಿತ್ರವನ್ನು ಭರತ್ ಎಸ್ ನಾವುಂದ ನಿರ್ದೇಶಿಸಿದ್ದಾರೆ.
ಮಂಚಿ ರೋಜುಲೊಚ್ಚಾಯಿ: ನವೆಂಬರ್ 4- ಚಿತ್ರಮಂದಿರ (ತೆಲುಗು)
ಮಾರುತಿ ನಿರ್ದೇಶನದ ಈ ಚಿತ್ರವನ್ನು ವಿ ಸೆಲ್ಯುಲೈಡ್ ಮತ್ತು ಎಸ್ಕೆಎನ್ ನಿರ್ಮಿಸಿದ್ದಾರೆ. ಸಂತೋಷ್ ಶೋಬನ್ ಮತ್ತು ಮೆಹರೀನ್ ಪಿರ್ಜಾದಾ ಮುಖ್ಯ ಪಾತ್ರದಲ್ಲಿರುವ ಈ ಸಿನಿಮಾ ನವೆಂಬರ್ 4 ರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ, ಅಜಯ್ ಘೋಷ್ , ವೆನ್ನೆಲಾ ಕಿಶೋರ್, ಹರ್ಷ ಚೇಮುಡು, ಸಪ್ತಗಿರಿ , ಸತ್ಯಂ ರಾಜೇಶ್, ಶ್ರೀನಿವಾಸ್ ರೆಡ್ಡಿ, ಸುದರ್ಶನ್ ಮತ್ತು ಪ್ರವೀಣ್ ತಾರಾಗಣವಿದೆ.
ರಾಜಾ ವಿಕ್ರಮಾರ್ಕ: ನವೆಂಬರ್ 14 - ಚಿತ್ರಮಂದಿರ ( ತೆಲುಗು)
ಕಾರ್ತಿಕೇಯ ಗುಮ್ಮಕೊಂಡ ಮುಖ್ಯ ಪಾತ್ರದಲ್ಲಿರುವ ಈ ಸಿನಿಮಾದಲ್ಲಿ, ತಾನ್ಯ ರವಿಚಂದ್ರನ್, ಸಾಯಿ ಕುಮಾರ್, ತನಿಕೆಲ್ಲ ಭರಣಿ, ಪಶುಪತಿ, ಹರ್ಷವರ್ಧನ್, ಸುಧಾಕರ್ ಕೊಮಕುಲ, ಸೂರ್ಯ, ಜೆಮಿನಿ ಸುರೇಶ್ ಮತ್ತು ಜಬರ್ದಸ್ತ್ ನವೀನ್ ತಾರಾಗಣವಿದೆ. ಶ್ರೀ ಸರಿಪಳ್ಳಿ ನಿರ್ದೇಶನದ ಈ ಚಿತ್ರ ನವೆಂಬರ್ 12ರಂದು ಬಿಡುಗಡೆ ಆಗಲಿದೆ.
ಪುಷ್ಪಕ ವಿಮಾನಂ: ನವೆಂಬರ್ 12 - ಚಿತ್ರಮಂದಿರ (ತೆಲುಗು)
ಆನಂದ್ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪುಷ್ಪಕ ವಿಮಾನಂ ನವೆಂಬರ್ 12ರಂದು ಬಿಡುಗಡೆ ಆಗಲಿದೆ. ದಾಮೋದರ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ವಿಜಯ ದೇವರ ಕೊಂಡ ಅವರ ಕಿಂಗ್ ಆಫ್ ದ ಹಿಲ್ ಪ್ರೊಡಕ್ಷನ್ಸ್ ಮತ್ತು ತಂಗ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ