ಒಂದೇ ದಿನ ಬಡವ ರಾಸ್ಕಲ್​, ರೈಡರ್​ ರಿಲೀಸ್​​: ಡಾಲಿಗೆ ಕರೆ ಮಾಡಿ ವಿಶ್ ಮಾಡಿದ ನಿಖಿಲ್ ಕುಮಾರಸ್ವಾಮಿ!

ಒಂದೇ ದಿನ ಡಿಸೆಂಬರ್​ 24ರಂದು ಕನ್ನಡದ ಬಡವ ರಾಸ್ಕಲ್​ ಹಾಗೂ ರೈಡರ್​ ಸಿನಮಾ ರಿಲೀಸ್​ ಆಗುತ್ತಿದೆ. ಡಾಲಿ ಧನಂಜಯ್​ ಅಭಿನಯದ ಬಡವ ರಾಸ್ಕಲ್​, ಟೀಸರ್​, ಟ್ರೈಲರ್​, ಸಾಂಗ್ಸ್​​ ಮೂಲಕ ಈಗಾಗಲೇ ಅಬ್ಬರದ ಪ್ರಚಾರ ಮಾಡಿದೆ. ಇನ್ನೂ ನಿಖಿಲ್​ ಕುಮಾರಸ್ವಾಮಿ ಔಟ್​ & ಔಟ್​ ಆ್ಯಕ್ಷನ್​ ಅವತಾರದಲ್ಲಿ ಕಾಣಿಸಿಕೊಂಡಿರುವ ರೈಡರ್​ ಸಿನಿಮಾ ಕೂಡ ರಿಲೀಸ್​ ಆಗುತ್ತಿದೆ.

ಬಡವ ರಾಸ್ಕಲ್​, ರೈಡರ್​ ಚಿತ್ರದ ಪೋಸ್ಟರ್​

ಬಡವ ರಾಸ್ಕಲ್​, ರೈಡರ್​ ಚಿತ್ರದ ಪೋಸ್ಟರ್​

  • Share this:
ಕನ್ನಡ (Kannada) ಸಿನಿಮಾಗಳ ಮಾರುಕಟ್ಟೆ ಈಗ ದೊಡ್ಡದಾಗಿದೆ. ಕೊರೋನಾ ಮುಗಿದ ಬಳಿಕ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ. ಧೂಳು ಹಿಡಿದಿದ್ದ ಚಿತ್ರಮಂದಿರಗಳಲ್ಲಿ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಸಿನಿರಸಿಕರಿಗೆ ಇದು ಸಂತಸದ ಸುದ್ದಿ, ಕಳೆದ ವಾರ ದೃಶ್ಯ 2 ಜೊತೆಗೆ 5 ಕನ್ನಡ ಹೊಸ ಸಿನಿಮಾಗಳು ಬಿಡುಗಡೆಯಾಗಿತ್ತು.ಇದೀಗ ಈ ವಾರವೂ ಇಬ್ಬರು ಹೆಸರಾಂತ ನಟರ ಸಿನಿಮಾಗಳು ಒಂದೇ ದಿನ ರಿಲೀಸ್​ಗೆ ರೆಡಿಯಾಗಿದೆ. ಬೇರೆ ಚಿತ್ರರಂಗದಲ್ಲಿ ಇರುವ ಸ್ಟಾರ್​​ವಾರ್ (Satrwar)​​ ಗಳು ಸ್ಯಾಂಡಲ್​ವುಡ್ ​(Sandalwood) ನಲ್ಲಿ ಕಡಿಮೆ. ಹೌದು, ಒಂದೇ ದಿನ ಡಿಸೆಂಬರ್​ 24ರಂದು ಕನ್ನಡದ ಬಡವ ರಾಸ್ಕಲ್ (Badava Rascal)​ ಹಾಗೂ ರೈಡರ್​(Rider) ಸಿನಮಾ ರಿಲೀಸ್​ ಆಗುತ್ತಿದೆ. ಡಾಲಿ ಧನಂಜಯ್​(Dhananjay) ಅಭಿನಯದ ಬಡವ ರಾಸ್ಕಲ್​, ಟೀಸರ್​, ಟ್ರೈಲರ್​, ಸಾಂಗ್ಸ್​​ ಮೂಲಕ ಈಗಾಗಲೇ ಅಬ್ಬರದ ಪ್ರಚಾರ ಮಾಡಿದೆ. ಇನ್ನೂ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಔಟ್​ & ಔಟ್​ ಆ್ಯಕ್ಷನ್​ ಅವತಾರದಲ್ಲಿ ಕಾಣಿಸಿಕೊಂಡಿರುವ ರೈಡರ್​ ಸಿನಿಮಾ ಕೂಡ ರಿಲೀಸ್​ ಆಗುತ್ತಿದೆ. ಹೀಗಾಗಿ ಡಾಲಿ ಧನಂಜಯ್​ ಅವರಿಗೆ ಕರೆ ಮಾಡಿ ನಿಖಿಲ್​ ಕುಮಾರಸ್ವಾಮಿ ವಿಶ್ (Wish)​ ಮಾಡಿದ್ದಾರೆ. ಈ ರೀತಿಯ ಬೆಳವಣಿಗೆ ಸ್ಯಾಂಡಲ್​ವುಡ್​ಗೆ ಒಳ್ಳೆಯದು ಎಂದು ಚಿತ್ರರಂಗದ ಪಂಡಿತರು ಸಂತಸ ವ್ಯಕ್ತಪಡಿಸಿದ್ದಾರೆ. 

‘ಬಡವ ರಾಸ್ಕಲ್’​ಗೆ ಒಳ್ಳೆಯದಾಗಲಿ ಎಂದ ನಿಖಿಲ್​!

'ರೈಡರ್' ಸಿನಿಮಾ ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಪ್ರಚಾರ ಕಾರ್ಯ ಮಾಡಿತು. ಈ ಸಂದರ್ಭದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ''ಡಾಲಿ ಧನಂಜಯ್ ಅವರ ಸಿನಿಮಾ ಸಹ ನಮ್ಮ ಸಿನಿಮಾ ಬಿಡುಗಡೆ ಆಗುತ್ತಿರುವ ದಿನವೇ ಬಿಡುಗಡೆ ಆಗಲಿದೆ. ಆ ಸಿನಿಮಾಕ್ಕೂ ಒಳ್ಳೆಯದಾಗಲಿ'' ಎಂದರು. 'ಬಡವ ರಾಸ್ಕಲ್' ಸಿನಿಮಾದ ಟ್ರೈಲರ್ ನೋಡಿದೆ ಖುಷಿಯಾಯಿತು. ಕೂಡಲೇ ಡಾಲಿ ಧನಂಜಯ್ ಅವರಿಗೆ ನಾನು ಕರೆ ಮಾಡಿ ಮಾತನಾಡಿ ಅವರಿಗೆ ಅಭಿನಂದನೆ ಸಲ್ಲಿಸಿದೆ. 'ಬಡವ ರಾಸ್ಕಲ್' ಹಾಗೂ 'ರೈಡರ್' ಎರಡೂ ಸಿನಿಮಾಗಳು ಹಿಟ್ ಆಗಬೇಕು, ಎರಡೂ ಸಿನಿಮಾಕ್ಕೂ ಒಳ್ಳೆಯಾಗಬೇಕು ಎಂಬ ಮಾತನ್ನು ಅವರ ಬಳಿಯೂ ಹೇಳಿದೆ. ಅವರೂ ಸಹ ಅದನ್ನೇ ಹೇಳಿದರು'' ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದರು.

ಇದನ್ನು ಓದಿ :

ಶಂಕರ್​ ಅಲಿಯಾಸ್​ ಬಡವ ರಾಸ್ಕಲ್​!

ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಈ ಚಿತ್ರದಲ್ಲಿ ಧನಂಜಯ್‌ ಆಟೋ ಡ್ರೈವರ್‌ ಆಗಿ ಕಾಣಿಸಿಕೊಳ್ಳುತ್ತಿದ್ದು, ಡಿಸೆಂಬರ್ 24 ಕ್ರಿಸ್‌ಮಸ್ ಹಬ್ಬದಂದು ಚಿತ್ರ ಬಿಡುಗಡೆಯಾಗಲಿದೆ. 'ಡಾಲಿ ಪಿಕ್ಚರ್'  ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್‌ ಅಭಿನಯಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು , ತಾರಾ, ಸ್ಪರ್ಶ ರೇಖಾ, ನಾಗಭೂಷಣ್‌, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನು ಓದಿ :

ಫುಲ್​ ಆ್ಯಕ್ಷನ್​ ಮೋಡ್​ನಲ್ಲಿ ನಿಖಿಲ್ ಕುಮರಸ್ವಾಮಿ!
ನಿಖಿಲ್ ಕುಮಾರ್, ಕಶ್ಮೀರ ಪರದೇಶಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ರೈಡರ್​ ಸಿನಿಮಾವನ್ನು ಲಹರಿ ಪ್ರೊಡಕ್ಷನ್ಸ್‌ ಹಾಗೂ ಶಿವನಂದಿ ಎಂಟ್ರೈನ್‌ಮೆಂಟ್ಸ್ ನಿರ್ಮಾಣ ಮಾಡಿದೆ. ಸ್ಪೋರ್ಟ್ಸ್‌ ಆ್ಯಕ್ಷನ್‌ ಡ್ರಾಮಾ ಕಥಾಹಂದರವನ್ನು ಚಿತ್ರವು ಹೊಂದಿದ್ದು, ತೆಲುಗಿನ ವಿಜಯ್‌ ಕುಮಾರ್‌ ಕೊಂಡ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದಲ್ಲಿ ನಿಖಿಲ್‌ ಅವರದ್ದು ಬ್ಯಾಸ್ಕೆಟ್‌ಬಾಲ್‌ ಆಟಗಾರನ ಪಾತ್ರದಲ್ಲಿ ಕಾಣಿಸಿಕೊಂಡದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಸಂಪದ, ದತ್ತಣ್ಣ, ಅಚ್ಯುತ್‌ಕುಮಾರ್‌, ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌. ಪೇಟೆ ತಾರಾಗಣದಲ್ಲಿದ್ದಾರೆ.Published by:Vasudeva M
First published: