Rajat Bedi ಕಾರು ಡಿಕ್ಕಿಯಿಂದ ಪಾದಚಾರಿ ಸಾವು: ಸಂಕಷ್ಟದಲ್ಲಿ ಬಾಲಿವುಡ್‌ ನಟ..!

ಹೃತಿಕ್ ರೋಷನ್ ಅಭಿನಯದ ಕೋಯಿ ಮಿಲ್ ಗಯಾ ಮತ್ತು ಸಲ್ಮಾನ್ ಖಾನ್ ನಟಿಸಿದ ಪಾರ್ಟ್‌ನರ್‌ ಸೇರಿದಂತೆ ಹಲವಾರು ಚಿತ್ರಗಳಲ್ಲಿ  ನಟಿಸಿರುವ ನಟ ರಜತ್‌ ಬೇಡಿ ಅವರಿಗೆ ಸಂಕಷ್ಟ ಹೆಚ್ಚಿದ್ದು, ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ರಜತ್ ಬೇಡಿ

ರಜತ್ ಬೇಡಿ

  • Share this:
ಮಹಾರಾಷ್ಟ್ರದ ಮುಂಬೈ ಉಪನಗರ ಅಂಧೇರಿಯಲ್ಲಿ ಬಾಲಿವುಡ್ ನಟ ರಜತ್ ಬೇಡಿ (Rajat Bedi ) ಅವರು ಕಾರು ಓಡಿಸುತ್ತಿದ್ದಾಗ  ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪಾದಚಾರಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಈ ಹಿನ್ನೆಲೆ ನಟನಿಗೆ ಸಂಕಷ್ಟ ಹೆಚ್ಚಾಗಿದ್ದು, ಮತ್ತೊಂದು ಕೇಸ್‌ ದಾಖಲಿಸಲಾಗಿದೆ. ಗಾಯಗೊಂಡ ಸಂತ್ರಸ್ತ ಮಂಗಳವಾರ ತಡರಾತ್ರಿ ಸಾವಿಗೀಡಾದ ನಂತರ, ಡಿಎನ್ ನಗರ ಪೊಲೀಸರು ನಟನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304-ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅನ್ನು ಸೇರಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ, ಈವರೆಗೆ ನಟ ರಜತ್‌ ಬೇಡಿಯನ್ನು ಬಂಧಿಸಲಾಗಿಲ್ಲ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಅಪಘಾತಕ್ಕೀಡಾದ ಕೂಲಿ ಕಾರ್ಮಿಕ ರಾಜೇಶ್ ಬೌದ್, ಕೂಪರ್ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಅಂಧೇರಿಯಲ್ಲಿರುವ ದೇವಾಲಯವೊಂದರ ಬಳಿ ಸೋಮವಾರ ಸಂಜೆ ನಟ ರಜತ್ ಬೇಡಿ ಮನೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಜತ್ ಬೇಡಿ


ಕುಡಿದ ಅಮಲಿನಲ್ಲಿದ್ದ ಪಾದಚಾರಿ, ಇದ್ದಕ್ಕಿದ್ದಂತೆ ರಸ್ತೆಯ ಮಧ್ಯಕ್ಕೆ ಬಂದು ನಟ ಬ್ರೇಕ್ ಹಾಕುವ ಮುನ್ನ ಅವರ ಕಾರಿಗೆ ಡಿಕ್ಕಿ ಹೊಡೆದರು ಎಂದು ಹೇಳಲಾಗಿದೆ.  ನಟ ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಕೂಪರ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಡಿಎನ್ ನಗರ ಪೊಲೀಸ್ ಠಾಣೆಗೆ ಹೋಗಿ, ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ ಘಟನೆಯ ಬಗ್ಗೆ ಮಾಹಿತಿ ಸಹ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Thalaivii Movie Review: ಜಯಲಲಿತಾ ಆಗಿ ಪರಕಾಯ ಪ್ರವೇಶ ಮಾಡಿದ ಕಂಗನಾ

ಕಾನೂನಿನ ಪ್ರಕಾರ ನಟನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 279 (ರ‍್ಯಾಶ್ ಡ್ರೈವಿಂಗ್) ಮತ್ತು 338 (ಜೀವ ಅಥವಾ ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವ ಕೃತ್ಯದಿಂದ ತೀವ್ರ ನೋವನ್ನು ಉಂಟುಮಾಡುತ್ತದೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈಗ ರಜತ್ ಬೇಡಿ ವಿರುದ್ಧ ಮತ್ತೊಂದು ಕೇಸ್‌ ದಾಖಲಿಸಲಾಗಿದೆ.

ಪೊಲೀಸರು ನೀರುವ ಮಾಹಿತಿ ಹೀಗಿದೆ:

ಇನ್ನು, ಇಂಗ್ಲಿಷ್ ಪತ್ರಿಕೆ ವರದಿಯ ಪ್ರಕಾರ, ರಜತ್ ಬೇಡಿ ಜುಹೂವಿನಲ್ಲಿರುವ ಮನೆಗೆ ಹೋಗುತ್ತಿದ್ದಾಗ ಪಾದಚಾರಿಗೆ ಡಿಕ್ಕಿ ಹೊಡೆದರು. ಸಂತ್ರಸ್ತನನ್ನು 39 ವರ್ಷದ ರಾಜೇಶ್ ಬೌದ್ಧ, ಕಾರ್ಮಿಕ ಎಂದು ಗುರುತಿಸಲಾಗಿದೆ. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿ ಇದ್ದಾರೆ.  ಪೊಲೀಸರ ಪ್ರಕಾರ, ಸೋಮವಾರ ಸಂಜೆ 6.30ರ ಸುಮಾರಿಗೆ ಅಂಧೇರಿ ಪಶ್ಚಿಮದ ಲಿಂಕ್ ರಸ್ತೆಯ ಶಿಟ್ಲಾದೇವಿ ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ಅಪಘಾತದ ನಂತರ, ಬೇಡಿಯು ಸಂತ್ರಸ್ತನನ್ನು ಕೂಪರ್ ಆಸ್ಪತ್ರೆಗೆ ಕರೆದೊಯ್ದು ನಂತರ ಪೊಲೀಸ್ ಠಾಣೆಗೆ ಬಂದು ವಿಷಯ ತಿಳಿಸಿದರು. ಪಾದಚಾರಿ ಕುಡಿದು ಇದ್ದಕ್ಕಿದ್ದಂತೆ ಕಾರಿನ ಮುಂದೆ ಬಂದು ರಸ್ತೆಯಲ್ಲಿ ವಾಹನ ಸಂಚಾರವನ್ನು ಗಮನಿಸದೆ ರಸ್ತೆ ದಾಟುತ್ತಿದ್ದರು ಎಂದು ನಟ ಹೇಳಿಕೆ ನೀಡಿದ್ದಾರೆ. ಯಾರು ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದನ್ನು ನಾವು ಪತ್ತೆ ಮಾಡುತ್ತೇವೆ ಆದರೆ ಪ್ರಾಥಮಿಕ ಸಾಕ್ಷಿಯ ಪ್ರಕಾರ ನಾವು ಬೇಡಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: 777 Charlie Torture Song: ರಕ್ಷಿತ್​ ಶೆಟ್ಟಿಗೆ ಟಾರ್ಚರ್ ಕೊಟ್ಟ ಈ ಚಾರ್ಲಿ: ಇದುವೆ ಬೌ ಬೌ ಡ್ರಾಮ..!

ರಜತ್‌ ಅವರ ಮ್ಯಾನೇಜರ್ ಶ್ರೀದೇವಿ ಶೆಟ್ಟಿ ಅಪಘಾತದ ಬಗ್ಗೆ ಮಾಹಿತಿ ನೀಡಿರುವ ಪ್ರಕಾರ "ಆ ವ್ಯಕ್ತಿ ಕುಡಿದಿದ್ದ, ಮತ್ತು ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಂದ. ರಜತ್​ ವೇಗವಾಗಿ ಕಾರು ಚಲಾಯಿಸುತ್ತಿರಲಿಲ್ಲ. ಅವರು ತಕ್ಷಣ ಆತನನ್ನು ಕೂಪರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಟ್ರೀಟ್‌ಮೆಂಟ್‌ ಕೊಡಿಸಿದ್ದಾರೆ. ನಿನ್ನೆ ರಾತ್ರಿ ಅವರಿಗೆ ರಕ್ತ ಸಿಗುತ್ತಿರಲಿಲ್ಲ, ಹಾಗಾಗಿ ರಜತ್ ಅದಕ್ಕೂ ವ್ಯವಸ್ಥೆ ಮಾಡಿದರು ಹಾಗೂ ಮಧ್ಯರಾತ್ರಿ 12:30 - 1 ಗಂಟೆಯವರೆಗೆ ಆಸ್ಪತ್ರೆಯಲ್ಲಿದ್ದರು. ರಜತ್ ಅವರ ಸ್ನೇಹಿತ ಆಸ್ಪತ್ರೆಯಲ್ಲಿದ್ದಾರೆ ಮತ್ತು ಅವರು ಔಷಧಿ ಮತ್ತು ಚಿಕಿತ್ಸೆಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರು ಸ್ವತಃ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ'' ಎಂದು ತಿಳಿಸಿದ್ದಾರೆ.

ಹೃತಿಕ್ ರೋಷನ್ ಅಭಿನಯದ ಕೋಯಿ ಮಿಲ್ ಗಯಾ ಮತ್ತು ಸಲ್ಮಾನ್ ಖಾನ್ ನಟಿಸಿದ ಪಾರ್ಟ್‌ನರ್‌ ಸೇರಿದಂತೆ ಹಲವಾರು ಚಿತ್ರಗಳಲ್ಲಿ  ರಜತ್‌ ಬೇಡಿ ನಟಿಸಿದ್ದಾರೆ.
Published by:Anitha E
First published: