Dear sathya: ಫುಡ್ ಡೆಲಿವರಿ ಹುಡುಗರಿಂದ ಟ್ರೈಲರ್ ರಿಲೀಸ್! ಇವನಿಗೆ ಸಿನಿಮಾ ಮಾಡಿದರೆ ಪೋಸ್ಟರ್ ದುಡ್ಡೂ ಬರಲ್ಲ ಅಂದಿದ್ದರು!

Santhosh Aryan: ಡಿಯರ್ ಸತ್ಯ ಚಿತ್ರಕ್ಕೆ ಶಿವ ಗಣೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೂಲಕ ಅರ್ಚನಾ ಕೊಟ್ಟಿಗೆ ಸ್ಯಾಂಡಲ್‍ವುಡ್‍ಗೆ ನಾಯಕಿಯಾಗಿ ಡೆಬ್ಯೂ ಮಾಡಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು ಪರ್ಪಲ್ ರಾಕ್ ಎಂಟರ್‍ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

ಡಿಯರ್ ಸತ್ಯ

ಡಿಯರ್ ಸತ್ಯ

  • Share this:
ಸಾಮಾನ್ಯವಾಗಿ ಸಿನಿಮಾಗಳ ಟ್ರೈಲರ್, ಟೀಸರ್, ಪೋಸ್ಟರ್, ಆಡಿಯೋ ಲಾಂಚ್ ಕಾರ್ಯಕ್ರಮಗಳಿಗೆ ಚಿತ್ರತಂಡಗಳು ಸ್ಟಾರ್‍ಗಳನ್ನೋ ಅಥವಾ ಸೂಪರ್​ಸ್ಟಾರ್​ಗಗಳನ್ನೋ ಅಥವಾ ವಿಐಪಿಗಳನ್ನೋ ಕರೆಸುತ್ತಾರೆ. ದೊಡ್ಡವರಿಂದ ಲಾಂಚ್ ಮಾಡಿಸಿದರೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತೆ ಎಂಬ ನಂಬಿಕೆ ಹಲವರದು. ಆದರೆ ಬಿಗ್ ಬಾಸ್ ಖ್ಯಾತಿಯ ಸಂತೋಷ್ ಆರ್ಯನ್ ನಾಯಕನಾಗಿರುವ ಡಿಯರ್ ಸತ್ಯ ಚಿತ್ರದ ಟ್ರೈಲರ್ ಹಾಗೂ ಹಾಡುಗಳನ್ನು ಲಾಂಚ್ ಮಾಡಿದ್ದು ಫುಡ್ ಡೆಲಿವರಿ ಮಾಡುವ ಹುಡುಗರು!.

ಹೌದು, ಕಲ್ಲರಳಿ ಹೂವಾಗಿ, ನೂರು ಜನ್ಮಕೂ, ಅಭಿರಾಮ್, ರಾಕಿ, ಭುಜಂಗ, ಇಷ್ಟ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿಯ ಬಿಗ್‍ಬಾಸ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲೂ ಮಿಂಚಿರುವ ಸಂತೋಷ್ ಆರ್ಯನ್ ಈಗ ಬಿಗ್ ಸ್ಕ್ರೀನ್‍ಗೆ ಆಕ್ಷನ್ ಹೀರೋ ಆಗಿ ಕಮ್ ಬ್ಯಾಕ್ ಮಾಡಿದ್ದಾರೆ. ಸಿನಿಮಾ ಹೆಸರು ಡಿಯರ್ ಸತ್ಯ. ಈ ಚಿತ್ರದಲ್ಲಿ ಅವರದು ಫುಡ್ ಡೆಲಿವರಿ ಬಾಯ್ ಪಾತ್ರ. ಕೊರೊನಾ ಸಮಯದಲ್ಲಿ ಊಟ, ತಿಂಡಿ ಮಾತ್ರವಲ್ಲ ಔಷಧಗಳನ್ನೂ ಸರಬರಾಜು ಮಾಡುವ ಮೂಲಕ ನೆರವಾದವರು ಈ ಡೆಲಿವರಿ ಹುಡುಗರು. ಹೀಗಾಗಿಯೇ ಅವರ ಸೇವೆಯನ್ನ ಮನಗಂಡು ಡೆಲಿವರಿ ಹುಡುಗರಿಂದಲೇ ಡಿಯರ್ ಸತ್ಯ ಚಿತ್ರದ ಟ್ರೈಲರ್ ರಿಲೀಸ್ ಮಾಡಿಸಿದರು.

ಡಿಯರ್ ಸತ್ಯ ಚಿತ್ರಕ್ಕೆ ಶಿವ ಗಣೇಶ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಮೂಲಕ ಅರ್ಚನಾ ಕೊಟ್ಟಿಗೆ ಸ್ಯಾಂಡಲ್‍ವುಡ್‍ಗೆ ನಾಯಕಿಯಾಗಿ ಡೆಬ್ಯೂ ಮಾಡಿದ್ದಾರೆ. ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು ಪರ್ಪಲ್ ರಾಕ್ ಎಂಟರ್‍ಟೈನರ್ಸ್ ಮತ್ತು ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಸಂತೋಷ್ ಆರ್ಯನ್ ಹಾಗೂ ಅರ್ಚನಾ ಕೊಟ್ಟಿಗೆ ಜೊತೆ ಅರುಣ ಬಾಲರಾಜ್, ಅಶ್ವಿನ್ ರಾವ್ ಪಲ್ಲಕ್ಕಿ, ಅರವಿಂದ್ ರಾವ್, ಅಪ್ಪಣ್ಣ, ಗುರುರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷ ಅಂದರೆ ಚಿತ್ರದ ಹಾಡೊಂದಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಧ್ವನಿಯಾಗಿದ್ದಾರೆ.ಸಿನಿಮಾ ಟ್ರೈಲರ್ ರಿಲೀಸ್ ಜತೆಗೆ ಭಾನುವಾರ ತಮ್ಮ ಹುಟ್ಟುಹಬ್ಬವನ್ನೂ ಆಚರಿಸಿಕೊಂಡ ಡಿಯರ್ ಸತ್ಯ ನಾಯಕ ನಟ ಸಂತೋಷ್ ಆರ್ಯನ್ ಚಿತ್ರದ ಜರ್ನಿಯ ಅನುಭವ ಹಂಚಿಕೊಂಡರು. ‘ಈ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನ ಪಾತ್ರದಲ್ಲಿ ನಟಿಸಿದ್ದೇನೆ. ಚಾಕ್‍ಲೇಟ್ ಬಾಯ್ ತರ ಇದೀಯಾ, ಮಾಸ್ ಲುಕ್ ಬೇಕು ಅಂದರು. ಹೀಗಾಗಿ ಮಾಸ್ ಲುಕ್‍ಗಾಗಿ ಗಡ್ಡ ಬಿಟ್ಟೆ, ಜತೆಗೆ ಬೇರೆ ಬಗೆಯ ಸಿದ್ಧತೆಗಳನ್ನೂ ಮಾಡಿಕೊಂಡೆ. ಡಿಯರ್ ಸತ್ಯ ಸಿನಿಮಾ ಮಾಡಲು ನಿರ್ಮಾಪಕರನ್ನು ಹುಡುಕಿಕೊಂಡು ತುಂಬಾ ಸುತ್ತಾಡಿದೆ. ದೊಡ್ಡ ದೊಡ್ಡ ಮನೆಗಳ ಬಾಗಿಲು ತಟ್ಟಿದೆ. ಆದರೆ ನನಗೆ ಮಾಸ್ ಸಿನಿಮಾ ಮಾಡಲು ಹೆಚ್ಚು ಜನ ಇಂಟರೆಸ್ಟ್ ತೋರಿಸಲಿಲ್ಲ. ಇವನಿಗೆ ಕಮರ್ಷಿಯಲ್ ಸಿನಿಮಾ ಮಾಡಿದರೆ ಪೋಸ್ಟರ್ ದುಡ್ಡೂ ಬರೋದಿಲ್ಲ ಅಂದಿದ್ದರು. ಆದರೆ ಬೇಸರವಿಲ್ಲ, ನಾನೂ ಪ್ರಯತ್ನವನ್ನು ಬಿಡಲಿಲ್ಲ. ಕೊನೆಗೆ ಪರ್ಪಲ್ ರಾಕ್ ಎಂಟರ್‍ಟೈನರ್ಸ್‍ನ ಗಣೇಶ್ ಪಾಪಣ್ಣ ಸಿಕ್ಕಿದರು. ಕಥೆ ಅವರಿಗೆ ತುಂಬಾ ಇಷ್ಟವಾಯಿತು. ಮೊದಲು ತಾನ್ಯಾ ಹೋಪ್ ಅವರನ್ನು ಈ ಚಿತ್ರದ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದೆವು. ಅವರೂ ಸಿನಿಮಾ ಒಪ್ಪಿದ್ದರು. ಆದರೆ ಹೊಸ ಮುಖವನ್ನು ಪರಿಚಯಿಸೋಣ ಅಂತ ನಿರ್ಧರಿಸಿ ಸುಮಾರು 150 ಹೊಸ ನಟಿಯರನ್ನು ಆಡಿಷನ್ಸ್ ಮಾಡಿ, ಅರ್ಚನಾ ಕೊಟ್ಟಿಗೆ ಅವರನ್ನು ಆಯ್ಕೆ ಮಾಡಿಕೊಂಡೆವು. ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾರದಾಂಬೆಯ ಆಶೀರ್ವಾದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ.' ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು ಸಂತೋಷ್ ಆರ್ಯನ್.


ಡಿಯರ್ ಸತ್ಯ ಸದ್ಯ ಕಂಪ್ಲೀಟ್ ಆಗಿದ್ದು, ರಿಲೀಸ್‍ಗೆ ರೆಡಿಯಿದೆ. ಇದೇ ಸೆಪ್ಟೆಂಬರ್‍ನಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧತೆ ನಡೆಸುತ್ತಿರುವ ಚಿತ್ರತಂಡ ಕೆಲವೇ ದಿನಗಳಲ್ಲಿ ರಿಲೀಸ್ ಡೇಟ್ ಅನೌನ್ಸ್ ಮಾಡಲಿದ್ದಾರೆ.
Published by:Harshith AS
First published: