• Home
  • »
  • News
  • »
  • entertainment
  • »
  • Dear Comrade: ವೈರಲ್​ ಆಯಿತು ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಲಿಪ್​ಲಾಕ್​ ವಿಡಿಯೋ..!

Dear Comrade: ವೈರಲ್​ ಆಯಿತು ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಲಿಪ್​ಲಾಕ್​ ವಿಡಿಯೋ..!

ಡಿಯರ್​ ಕಾಮ್ರೆಡ್​ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಜತೆ ಲಿಪ್​ ಲಾಕ್​ ದೃಶ್ಯದಲ್ಲಿ ರಶ್ಮಿಕಾ ಮಂದಣ್ಣ

ಡಿಯರ್​ ಕಾಮ್ರೆಡ್​ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಜತೆ ಲಿಪ್​ ಲಾಕ್​ ದೃಶ್ಯದಲ್ಲಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಸದ್ಯ ಸಾಮಾಜಿಕ ಜಾಲತಾಣಿಗರ ಹಾಟ್​ ಫೇವರಿಟ್​ ನಟಿ. ಹೀಗಾಗಿಯೇ ಅವರ ಪ್ರತಿಯೊಂದು ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಇದರಿಂದಾಗಿಯೇ ಅವರ ಕಿಸ್ಸಿಂಗ್​ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್​ ಆಗುತ್ತಿದೆ.

  • News18
  • 5-MIN READ
  • Last Updated :
  • Share this:

ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಕುರಿತಾದ ಸುದ್ದಿ ಎಂದರೆ ಸಾಕು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತದೆ. ಹೀಗಿರುವಾಗಲೇ ಈಗ ಈ ಜೋಡಿ ಕುರಿತಾದ ಒಂದು ವಿಡಿಯೋ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಡಿ ಬಾಸ್ ಅಭಿಮಾನಿಗಳಿಗಿದು ಹೆಮ್ಮೆಯ ವಿಷಯ: ರೋಹಿತ್ ಶೆಟ್ಟಿ ಬಾಯಲ್ಲಿ ಚಾಂಲೆಂಜಿಂಗ್​ ಸ್ಟಾರ್ ಹೆಸರು..!

ಈ ಜೋಡಿಯ ಹೊಸ ಕಿಸ್ಸಿಂಗ್​ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಹೌದು, ರಶ್ಮಿಕಾ ಅಭಿನಯದ ತೆಲುಗು ಸಿನಿಮಾ 'ಡಿಯರ್​ ಕಾಮ್ರೆಡ್​'ನ ಟೀಸರ್ ನಿನ್ನೆಯಷ್ಟೆ (ಮಾ.17) ಬಿಡುಗಡೆಯಾಗಿದೆ. ಅದರಲ್ಲಿ ರಶ್ಮಿಕಾ-ವಿಜಯ್​ ಕಿಸ್ಸಿಂಗ್​ ದೃಶ್ಯವೇ ಹೈಲೈಟ್​ ಆಗಿದೆ.ಈ ಟೀಸರ್​ ನೋಡಿದವರೆಲ್ಲ ಇದು 'ಅರ್ಜುನ್​ ರೆಡ್ಡಿ'ಯ ಸೀಕ್ವೆಲ್​ ಎನ್ನುತ್ತಿದ್ದಾರೆ. ಅಲ್ಲದೆ ಈ ಟೀಸರ್​ನಲ್ಲಿ ಕಿಸ್ಸಿಂಗ್​ ದೃಶ್ಯ ಹೊರತುಪಡಿಸಿ ಮತ್ತೇನು ಇಲ್ಲ ಎನ್ನುತ್ತಿದ್ದಾರೆ ಜಾಲತಾಣಿಗರು.

ರಶ್ಮಿಕಾ ಹಾಗೂ ವಿಜಯ್​ ದೇವರಕೊಂಡ ಅಭಿನಯದ 'ಡಿಯರ್​ ಕಾಮ್ರೆಡ್​' ಸಿನಿಮಾದಲ್ಲಿನ ಲಿಪ್​ ಲಾಕ್​ ದೃಶ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಸಿನಿಮಾಗಾಗಿ ಹೀಗೆಲ್ಲ ಮಾಡುತ್ತಿರುವುದು ಎಷ್ಟು ಸರಿ..? ಯೋಚಿಸಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದೆಲ್ಲ ರಶ್ಮಿಕಾಗೆ ಬುದ್ದಿ ಹೇಳುತ್ತಿದ್ದಾರೆ.

 ಇನ್ನು ಈ ಹಿಂದೆ ಸಹ ವಿಜಯ್​ ಜತೆ ತೆರೆ ಹಂಚಿಕೊಂಡಿದ್ದ ರಶ್ಮಿಕಾ 'ಗೀತಗೋವಿಂದಂ' ಸಿನಿಮಾದಲ್ಲೂ ಒಂದು ಕಿಸ್ಸಿಂಗ್​ ದೃಶ್ಯದಲ್ಲಿ ಅಭಿನಯಿಸಿದ್ದರು. ಅದಕ್ಕೂ ಆಗ ಸಾಕಷ್ಟು ವಿರೋಧ ಕೇಳಿ ಬಂದಿತ್ತು.

ಇದನ್ನೂ ಓದಿ: Video: ಲೀಕ್​ ಆಯಿತು ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಕಿಸ್ಸಿಂಗ್​ ವಿಡಿಯೋ..!

'ಗೀತ ಗೋವಿಂದಂ' ಚಿತ್ರ ಬಿಡುಗಡೆಯಾಗುವ ಸಮಯಕ್ಕೆ ಸರಿಯಾಗಿ ರಕ್ಷಿತ್​ ಶೆಟ್ಟಿ ಹಾಗೂ ರಶ್ಮಿಕಾರ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಇದರಿಂದಾಗಿ ಆಗಲೂ ರಶ್ಮಿಕಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಇನ್ನು ವಿಜಯ್​ ದೇವರಕೊಂಡ ಅವರನ್ನು ಟಾಲಿವುಡ್​ನ ಇಮ್ರಾನ್​ ಹಾಶ್ಮಿ ಎಂದೇ ಗುರುತಿಸಲಾಗುತ್ತಿದೆ. ಇವರು ಮಾಡಿರುವ ಪ್ರತಿ ಸಿನಿಮಾದಲ್ಲೂ ಒಂದಾದರೂ ಕಿಸ್ಸಿಂಗ್​ ದೃಶ್ಯ ಇದ್ದೇ ಇರುತ್ತದೆ. 'ಅರ್ಜುನ್​ ರೆಡ್ಡಿ', 'ನೋಟಾ', 'ಗೀತ ಗೋವಿಂದಂ' ಸಿನಿಮಾಗಳಲ್ಲೂ ವಿಜಯ್​ ನಾಯಕಿಯರೊಂದಿಗೆ ಲಿಪ್​ಲಾಕ್​ ಮಾಡಿದ್ದಾರೆ. ರಶ್ಮಕಾ-ವಿಜಯ್​ ದೇವರಕೊಂಡ ಅಭಿನಯದ 'ಡಿಯರ್​ ಕಾಮ್ರೆಡ್​' ಮೇ.31ಕ್ಕೆ ತೆರೆ ಕಾಣಲಿದೆ.

- ಅನಿತಾ ಈ, 

PHOTOS: ವೈರಲ್​ ಆಯಿತು ಕಿರುತೆರೆ ನಟಿ ಮಗನೊಂದಿಗೆ ಪೋಸ್​ ನೀಡಿದ ಫೋಟೋಗಳು

First published: