ಆ ರೀತಿಯ ಪಾತ್ರಗಳಲ್ಲಿ ಏಕೆ ಅಭಿನಯಿಸುತ್ತಿಲ್ಲ ಎಂಬ ಗುಟ್ಟು ರಟ್ಟು ಮಾಡಿದ ರಶ್ಮಿಕಾ ಮಂದಣ್ಣ

Rashmika Mandanna : ಗೀತಾ ಗೋವಿಂದಂ ಚಿತ್ರದಲ್ಲಿ ಲಿಪ್​ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಏಕಾಏಕಿ ಫೇಮಸ್ ಆಗಿದ್ದರು. ಇದರ ಬೆನ್ನಲ್ಲೇ ಡಿಯರ್ ಕಾಮ್ರೇಡ್ ಚಿತ್ರದಲ್ಲೂ ಅಂತಹದ್ದೇ ಹಸಿಬಿಸಿ ಪಾತ್ರದಲ್ಲಿ ಬಣ್ಣ ಹಚ್ಚಿದ ಕಿರಿಕ್ ಹುಡುಗಿಯನ್ನು ಟಾಲಿವುಡ್ ಇಂಡಸ್ಟ್ರಿ ಗ್ಲಾಮರಸ್ ಪಾತ್ರಕ್ಕೆ ಸೀಮಿತವಾಗಿಸಲು ಹೊರಟಿತ್ತು.

zahir | news18-kannada
Updated:August 5, 2019, 9:16 AM IST
ಆ ರೀತಿಯ ಪಾತ್ರಗಳಲ್ಲಿ ಏಕೆ ಅಭಿನಯಿಸುತ್ತಿಲ್ಲ ಎಂಬ ಗುಟ್ಟು ರಟ್ಟು ಮಾಡಿದ ರಶ್ಮಿಕಾ ಮಂದಣ್ಣ
ಕಿರಿಕ್​ ಪಾರ್ಟಿ ಚಿತ್ರ ಸೂಪರ್ ಡೂಪರ್ ಹಿಟ್ ಆಗಿದ್ದೇ ತಡ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಅದೃಷ್ಟದ ಬಾಗಿಲು ತೆರೆದುಕೊಂಡಿತು.
  • Share this:
ಸಾಲು ಸಾಲು ಹಿಟ್​ ಚಿತ್ರಗಳ ನಾಯಕಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಈಗ ಎಲ್ಲಿಲ್ಲದ ಬೇಡಿಕೆ. ಒಂದೆಡೆ ಟಾಲಿವುಡ್​ನಲ್ಲಿ ಸಾಕಷ್ಟು ಬ್ಯುಸಿಯಾಗಿರುವ ಕಿರಿಕ್ ಸಾನ್ವಿ ಇತ್ತ ಕಾಲಿವುಡ್ ಮತ್ತು ಸ್ಯಾಂಡಲ್​ವುಡ್​ನಲ್ಲೂ ಬಣ್ಣ ಹಚ್ಚುತ್ತಿದ್ದಾರೆ.

ಇತ್ತೀಚಿಗೆ ಬಿಡುಗಡೆಯಾದ 'ಡಿಯರ್ ಕಾಮ್ರೇಡ್'​ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮತ್ತಷ್ಟು ನಿರ್ಮಾಪಕರು ಸಹ ರಶ್ಮಿಕಾ ಕಾಲ್​ಶೀಟ್​ಗಾಗಿ ಕ್ಯೂ ನಿಂತಿದ್ದಾರಂತೆ. ಆದರೆ ಇಂತಹ ಅನೇಕ ಆಫರ್​ಗಳನ್ನು 'ಯಜಮಾನ'ನ ಕಾವೇರಿ ನಿರಾಕರಿಸಿದ್ದಾರೆ. ಇದಕ್ಕೆ ಕಾರಣ ಅವರ ಮುಂದಿಡಲಾಗುತ್ತಿರುವ ಕಥೆ.

ಹೌದು, 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್'​ ಚಿತ್ರಗಳಲ್ಲಿ ಬೌಲ್ಡ್ ಆಗಿ ಕಾಣಿಸಿಕೊಂಡಿದ್ದ ರಶ್ಮಿಕಾ ಮುಂದೆ ಅಂತಹದ್ದೇ ಪಾತ್ರಗಳು ಬರುತ್ತಿವೆಯಂತೆ. ಹೀಗಾಗಿ ಚಿತ್ರಗಳ ಆಯ್ಕೆಯಲ್ಲಿ ತುಸು ಹೆಚ್ಚಿನ ಕಾಳಜಿವಹಿಸಲು ರಶ್ಮಿಕಾ ನಿರ್ಧರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಸ್ಯಾಂಡಲ್​ವುಡ್ ಸಾನ್ವಿ, ನನಗೆ ಸಾಕಷ್ಟು ಕಮರ್ಷಿಯಲ್ ಚಿತ್ರಗಳಿಂದ ಆಫರ್​ಗಳು ಬರುತ್ತಿವೆ. ಆದರೆ ನನ್ನ ಪಾತ್ರಕ್ಕೂ ಒಂದು ತೂಕವಿರಬೇಕು. ಇಲ್ಲಿ ಬರೀ ನಾಯಕಿಯಾಗಿ ಕಾಣಿಸಿಕೊಂಡರೆ ಅರ್ಥವಿಲ್ಲ. ಹೀಗಾಗಿ ಅನೇಕ ನಿರ್ದೇಶಕ ಕಥೆಗಳಿಗೆ ನೋ ಅಂದಿರುವೆ.

ನಾನು ಮಾಡುವ ಕೆಟ್ಟ ಪಾತ್ರಗಳನ್ನೆಲ್ಲ ಪ್ರೇಕ್ಷಕರು ಒಪ್ಪುವುದಿಲ್ಲ. ನನಗಾಗಿ ಪ್ರೇಕ್ಷಕರು ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ. ಅವರಿಗೂ ಮನರಂಜನೆ ಸಿಗಬೇಕು. ಹೀಗಾಗಿ ಮಸಾಲ ಅಂಶಗಳೇ ಹೆಚ್ಚಾಗಿರುವ ಚಿತ್ರಗಳಿಗೆ ಅಭಿನಯಿಸಲು ನಾನು ಹಿಂದೇಟು ಹಾಕುತ್ತಿದ್ದೇನೆ ಎಂದು ಕೊಡಗಿನ ಬೆಡಗಿ ಹೇಳಿದ್ದಾರೆ.

ನನ್ನ ಈ ನಿರ್ಧಾರ ಕೆಲ ನಿರ್ದೇಶಕರು ತಪ್ಪಾದ ರೀತಿಯಲ್ಲಿ ವಿಮರ್ಶಿಸಬಹುದು. ಆದರೆ ನಾನು ಕೇವಲ ಗೊಂಬೆ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಬರೀ ಕಮರ್ಷಿಯಲ್ ಚಿತ್ರಗಳಲ್ಲಿ ಅಭಿನಯಿಸಿದರೆ ಇಂಡಸ್ಟ್ರಿಯಲ್ಲಿ 15 ವರ್ಷಗಳು ಉಳಿಯಬಹುದು. ಆದರೆ ಇಲ್ಲಿ ವರ್ಷಗಳಿಗಿಂತ ನಾನು ಮಾಡುವ ಪಾತ್ರಗಳು ಮಾತನಾಡಬೇಕು. ಅದರಿಂದ ನಾನು ಸಂತೋಷವಾಗಿರಲು ಬಯಸುತ್ತೇನೆ ಎಂದು ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.

'ಗೀತಾ ಗೋವಿಂದಂ' ಚಿತ್ರದಲ್ಲಿ ಲಿಪ್​ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಏಕಾಏಕಿ ಫೇಮಸ್ ಆಗಿದ್ದರು. ಇದರ ಬೆನ್ನಲ್ಲೇ 'ಡಿಯರ್ ಕಾಮ್ರೇಡ್' ಚಿತ್ರದಲ್ಲೂ ಅಂತಹದ್ದೇ ಹಸಿಬಿಸಿ ಪಾತ್ರದಲ್ಲಿ ಬಣ್ಣ ಹಚ್ಚಿದ ಕಿರಿಕ್ ಹುಡುಗಿಯನ್ನು ಟಾಲಿವುಡ್ ಇಂಡಸ್ಟ್ರಿ ಗ್ಲಾಮರಸ್ ಪಾತ್ರಕ್ಕೆ ಸೀಮಿತವಾಗಿಸಲು ಹೊರಟಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಮುಂದಿನ ಸಿನಿಮಾಗಳ ಆಯ್ಕೆಯಲ್ಲಿ ಹೆಚ್ಚಿನ ಗಮನ ಕೇಂದ್ರಿಕರಿಸಲು ನಿರ್ಧರಿಸಿದ್ದಾರೆ. ಹಾಗಾಗಿ ಮುಂಬರುವ ಸಿನಿಮಾಗಳಲ್ಲಿ ರಶ್ಮಿಕಾ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸುವುದಿಲ್ಲ ಎಂದು ಹೇಳಲಾಗಿದೆ.ಸದ್ಯ ತೆಲುಗಿನಲ್ಲಿ ಮಹೇಶ್ ಬಾಬು ಹಾಗೂ ಅಲ್ಲು ಅರ್ಜುನ್ ಚಿತ್ರಗಳಿಗೆ ರಶ್ಮಿಕಾ ನಾಯಕಿಯಾಗಿದ್ದು, ಅದರೊಂದಿಗೆ ತಮಿಳಿನಲ್ಲಿ ನಟ ಕಾರ್ತಿ ಹಾಗೂ ಇಳಯ ದಳಪತಿ ಚಿತ್ರಗಳಲ್ಲೂ ಕೊಡಗಿನ ಸುಂದರಿ ಬಣ್ಣ ಹಚ್ಚುತ್ತಿದ್ದಾರೆ. ಅದೇ ರೀತಿ ರಶ್ಮಿಕಾ ಮಂದಣ್ಣ-ಧ್ರುವ ಸರ್ಜಾ ಅಭಿನಯದ  'ಪೊಗರು' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
First published: August 4, 2019, 10:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading