VIDEO: ಪ್ರಳಯವೇ ಆದರೂ ರಶ್ಮಿಕಾ ಮಂದಣ್ಣ ಬ್ಯಾಗ್​ನಲ್ಲಿ ಈ ವಸ್ತು ಇದ್ದೇ ಇರುತ್ತಂತೆ!

Rashmika Mandanna: ಸಂದರ್ಶನದ ವೇಳೆ ರಶ್ಮಿಕಾ ಬ್ಯಾಗ್​ನಿಂದ ಅಚ್ಚರಿ ಅಚ್ಚರಿ ಐಟಂಗಳು ಹೊರ ಬಂದಿವೆ. ಈ ವೇಳೆ ರಶ್ಮಿಕಾ ತಮ್ಮ ಬಳಿ ಯಾವಾಗಲೂ ಇಟ್ಟುಕೊಳ್ಳುವ ಒಂದು ವಸ್ತುವಿನ ಬಗ್ಗೆ ಹೇಳಿಕೊಂಡಿದ್ದಾರೆ!

Rajesh Duggumane | news18
Updated:August 2, 2019, 12:42 PM IST
VIDEO: ಪ್ರಳಯವೇ ಆದರೂ ರಶ್ಮಿಕಾ ಮಂದಣ್ಣ ಬ್ಯಾಗ್​ನಲ್ಲಿ ಈ ವಸ್ತು ಇದ್ದೇ ಇರುತ್ತಂತೆ!
ರಶ್ಮಿಕಾ ಮಂದಣ್ಣ
  • News18
  • Last Updated: August 2, 2019, 12:42 PM IST
  • Share this:
ನಟ-ನಟಿಯರು ಯಾವುದೇ ಕಾರ್ಯಕ್ರಮಕ್ಕೆ​ ತೆರಳಿದರೂ ಅವರ ಬಳಿ ಒಂದು ಚಿಕ್ಕ ಬ್ಯಾಗ್ ಇದ್ದೇ ಇರುತ್ತದೆ. ಆ ಬ್ಯಾಗ್​ನಲ್ಲಿ ಅವರು ಮೇಕಪ್​ ವಸ್ತುಗಳಲ್ಲದೆ ಬೇರೆ ಬೇರೆ ಐಟಂಗಳನ್ನು ಇಟ್ಟುಕೊಂಡಿರುತ್ತಾರೆ. ಅದೇನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಸಾಕಷ್ಟು ಅಭಿಮಾನಿಗಳದ್ದು. ಈಗ ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಬ್ಯಾಗ್​ನಲ್ಲಿ ಏನೇನಿರುತ್ತವೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

98.3 ಎಫ್​ಎಂನ ಸಂದರ್ಶನದಲ್ಲಿ ರಶ್ಮಿಕಾ ಪಾಲ್ಗೊಂಡಿದ್ದರು. ಈ ವೇಳೆ ಸಂದರ್ಶಕಿ ‘ವಾಟ್​ ಈಸ್​ ​ ಇನ್​ ಯುವರ್​ ಬ್ಯಾಗ್​’ ಟಾಸ್ಕ್​ ನೀಡಿದ್ದಾರೆ. ಈ ಟಾಸ್ಕ್​​ನ ಅನ್ವಯ ಬ್ಯಾಗ್​ನಲ್ಲಿ ಏನಿದೆ ಎನ್ನುವುದನ್ನು ತೋರಿಸಬೇಕು. ರಶ್ಮಿಕಾ ಕೂಡ ತಮ್ಮ ಬ್ಯಾಗ್​ನಲ್ಲಿ ಏನೆನು ಇಟ್ಟುಕೊಳ್ಳುತ್ತೇನೆ ಎನ್ನುವುದನ್ನು ಕ್ಯಾಮರಾ ಮುಂದೆ ತೆಗೆದಿಟ್ಟಿದ್ದಾರೆ.

ರಶ್ಮಿಕಾ ಬ್ಯಾಗ್​ನಿಂದ ಅಚ್ಚರಿ ಅಚ್ಚರಿ ಐಟಂಗಳು ಹೊರ ಬಂದಿವೆ. ಅವರ ಬ್ಯಾಗ್​ನಲ್ಲಿ ಐ ಪ್ಯಾಡ್​, ಸ್ಕ್ರಿಪ್ಟ್​, ನಾಲ್ಕೈದು ರೀತಿಯ ಕನ್ನಡಕ, ಹೆಡ್​ಫೋನ್​, ಪರ್ಫ್ಯೂಮ್​, ಮಾಯಿಶ್ಚರೈಸರ್ ಸೇರಿ ಸಾಕಷ್ಟು ವಸ್ತುಗಳು ಅವರ ಬ್ಯಾಗ್​ನಲ್ಲಿದ್ದವು.

ಇದನ್ನೂ ಓದಿ: ದೇವರಕೊಂಡ ಜತೆ ನಟಿಸಬೇಡ ಎಂದಿದ್ದ ರಶ್ಮಿಕಾರ ಅಮ್ಮ ಡಿಯರ್ ಕಾಮ್ರೆಡ್​ ನೋಡಿ ಏನಂದ್ರು ಗೊತ್ತಾ..?

ಈ ವೇಳೆ ರಶ್ಮಿಕಾ ತಮ್ಮ ಬಳಿ ಯಾವಾಗಲೂ ಇಟ್ಟುಕೊಳ್ಳುವ ಒಂದು ವಸ್ತುವಿನ ಬಗ್ಗೆ ಹೇಳಿಕೊಂಡಿದ್ದಾರೆ! ಅದು ಚಾಕೋಲೇಟ್​! ಹೌದು, ರಶ್ಮಿಕಾಗೆ ಚಾಕೋಲೇಟ್​ ಅಂದರೆ ತುಂಬಾನೇ ಪ್ರೀತಿಯಂತೆ. ಹಾಗಾಗಿ, ಒಂದು ಚಾಕೋಲೇಟ್​ ಅನ್ನು ಅವರು ಸದಾ ಬ್ಯಾಗ್​ನಲ್ಲಿ ಇಟ್ಟುಕೊಳ್ಳುತ್ತಾರಂತೆ.“ನಾನು ಬ್ಯಾಗ್​ನಲ್ಲಿ ಸದಾ ಚಾಕೋಲೆಟ್​ ಇಟ್ಟುಕೊಂಡಿರುತ್ತೇನೆ. ಬ್ಯಾಗ್​ನಲ್ಲಿರುವ ಉಳಿದ ವಿಚಾರಗಳಿಗೆ ನಾನು ಪ್ರಾಮುಖ್ಯತೆ ಕೊಡುವುದೇ ಇಲ್ಲ. ನಾನು ಏನನ್ನಾದರೂ ಹಂಚಿಕೊಂಡು ತಿನ್ನುತ್ತೇನೆ, ಆದರೆ ಚಾಕೋಲೇಟ್​ ವಿಚಾರದಲ್ಲಿ ಮಾತ್ರ ನಾನು ಸ್ವಾರ್ಥಿ,” ಎಂದಿದ್ದಾರೆ ರಶ್ಮಿಕಾ.

First published: August 2, 2019, 12:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading