HOME » NEWS » Entertainment » DEADLY ADITYA STARRER MUNDUVAREDA ADHYAYA TO RELEASE ON MARCH 18TH HTV ZP

ಎರಡು ಘಟನೆಗಳ ಸುತ್ತ ಮುಂದುವರೆದ ಅಧ್ಯಾಯ: ಸೂಪರ್ ಕಾಪ್ ಪಾತ್ರದಲ್ಲಿ ಡೆಡ್ಲಿ ಆದಿತ್ಯ..!

ಬೆಂಗಳೂರಿನ ರಾಕ್‍ಲೈನ್ ಸ್ಟುಡಿಯೋ, ಯೂನಿವರ್ಸಿಟಿ ಕ್ಯಾಂಪಸ್, ರಾಮನಗರ, ದೇವರಾಯನ ದುರ್ಗ, ಮಂಡ್ಯ, ಮಳವಳ್ಳಿ, ತುಮಕೂರು ಸುತ್ತಮತ್ತ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಮುಂದುವರೆದ ಅಧ್ಯಾಯ ಚಿತ್ರದಲ್ಲಿ ಮೂರು ಹಾಡುಗಳಿದ್ದು ಜಾನಿ - ನಿತಿನ್ ಜೋಡಿ ಸಂಗೀತ ಸಂಯೋಜಿಸಿದ್ದಾರೆ.

news18-kannada
Updated:March 11, 2021, 9:35 PM IST
ಎರಡು ಘಟನೆಗಳ ಸುತ್ತ ಮುಂದುವರೆದ ಅಧ್ಯಾಯ: ಸೂಪರ್ ಕಾಪ್ ಪಾತ್ರದಲ್ಲಿ ಡೆಡ್ಲಿ ಆದಿತ್ಯ..!
aditya
  • Share this:
ನಟ ಆದಿತ್ಯ ಡೆಡ್ಲಿ ಸೋಮ, ಡೆಡ್ಲಿ 2, ಎದೆಗಾರಿಕೆ, ಬೆಂಗಳೂರು ಅಂಡರ್​ವಲ್ಡ್​, ಹೀಗೆ ಅಂಡರ್​ವಲ್ಡ್​ ಹಾಗೂ ರೌಡಿಸಂ ಕುರಿತ ನೈಜ ಘಟನೆ ಪ್ರೇರಿತ ಸಿನಿಮಾಗಳ ಮೂಲಕ ಹೆಚ್ಚು ಸದ್ದು ಮಾಡಿದ್ದರು. ಆದರೆ ಈಗ ಯಾವುದೇ ಕಾರಣಕ್ಕೂ ಇನ್ನು ಅಂಡರ್​ವಲ್ಡ್​ ಸಿನಿಮಾ ಮಾಡುವುದಿಲ್ಲ ಅಂತಿದ್ದಾರೆ. ಮಾತ್ರವಲ್ಲ ಲಾಂಗ್ ಬಿಟ್ಟು ಖಾಕಿ ಧರಿಸಿ ಗನ್ ಹಿಡಿದು ಪೊಲೀಸ್ ಅಧಿಕಾರಿಯಾಗಿ ಮಿಂಚಲು ರೆಡಿಯಾಗಿದ್ದಾರೆ.

ಹೌದು, ಡೆಡ್ಲಿ ಆದಿತ್ಯ ಈಗ ಸೂಪರ್ ಕಾಪ್ ಅವತಾರವೆತ್ತಿದ್ದಾರೆ. ಮುಂದುವರೆದ ಅಧ್ಯಾಯ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ ಆದಿ. ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಬಾಲು ಚಂದ್ರಶೇಖರ್ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದಾರೆ. ಸಮಾಜದಲ್ಲಿ ಭೂಗತ ಚಟುವಟಿಕೆ, ರೌಡಿಸಂಗಳಿಗೆ ಕೊನೆ ಎಂಬುದೇ ಇಲ್ಲ. ಆದರೆ ಜನ ಬದಲಾಗಬೇಕಿದೆ. ನಾವೆಲ್ಲ ಬದಲಾದರೆ ಸಮಾಜದಲ್ಲಿ ಖಂಡಿತ ಬದಲಾವಣೆ ಸಾಧ್ಯ ಎಂಬ ವಿಷಯವನ್ನು ನಿರ್ದೇಶಕ ಬಾಲು ಚಂದ್ರಶೇಖರ್ ಮುಂದುವರೆದ ಅಧ್ಯಾಯ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ.

ಅವರೇ ಖುದ್ದು ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ ನಿರ್ದೇಶಕ ಬಾಲು ಚಂದ್ರಶೇಖರ್. ಮಾತ್ರವಲ್ಲ ಸಮಾನ ಮನಸ್ಕ ಗೆಳೆಯರ ಬಳಗವನ್ನು ಸೇರಿಸಿ ಕಣಜ ಎಂಟರ್‍ಪ್ರೈಸಸ್ ಬ್ಯಾನರ್ ಮೂಲಕ ಚಿತ್ರಕ್ಕೆ ಬಂಡವಾಳ ಹೂಡಿಸಿದ್ದಾರೆ.

ಡೆಡ್ಲಿ ಆದಿತ್ಯ ಜೊತೆಗೆ ಎಂಎಲ್‍ಎ ಪಾತ್ರದಲ್ಲಿ ವಿನಯ್ ಕೃಷ್ಣಸ್ವಾಮಿ, ಪೊಲೀಸ್ ಪಾತ್ರದಲ್ಲಿ ವಿನೋದ್, ಪತ್ರಕರ್ತೆಯ ಪಾತ್ರದಲ್ಲಿ ಆಶಿಕಾ ಸೋಮಶೇಖರ್, ಡಾಕ್ಟರ್ ಆಗಿ ಚಂದನಾ ಗೌಡ, ರೆಸ್ಟೋರೆಂಟ್ ಮಾಲೀಕನ ಪಾತ್ರದಲ್ಲಿ ಸಂದೀಪ್ ಕುಮಾರ್, ಆನ್‍ಸ್ಕ್ರೀನ್ ಕೂಡ ನಟನಾಗಿಯೇ ಕಾಣಿಸಿಕೊಂಡಿರುವ ಅಜಯ್ ರಾಜ್... ಹೀಗೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದುವರೆಗೂ ಆದಿತ್ಯ ಪಾತ್ರ ಹೊರತುಪಡಿಸಿದರೆ ಬೇರೆ ಪಾತ್ರಗಳನ್ನು ಪರಿಚಯ ಮಾಡಿಸಿರಲಿಲ್ಲ. ಆದರೆ ಇತ್ತೀಚೆಗಷ್ಟೇ ಚಿತ್ರತಂಡ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರನ್ನೂ ಕರೆದು ಮಾಧ್ಯಮಗಳಿಗೆ ಪರಿಚಯಿಸಿದರು. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಹಾಗೂ ಜೈ ಜಗದೀಶ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಆದಿತ್ಯ ಅವರಿಗೆ ನಾಯಕಿಯಿಲ್ಲ.

ಶಿವರಾತ್ರಿ ಹಬ್ಬದಂದು ಒಬ್ಬರ ಕೊಲೆಯಾಗುತ್ತಾರೆ ಮತ್ತೊಬ್ಬರು ಕಾಣೆಯಾಗುತ್ತಾರೆ. ಆ ಘಟನೆ ಹೇಗೆ ಸಂಭವಿಸುತ್ತದೆ ಎಂಬುದೇ ಚಿತ್ರದ ಕಥೆ. ಕ್ಲೈಮ್ಯಾಕ್ಸ್ ಯಾರಿಗೂ ಗೊತ್ತಿರಲ್ಲ. ಯಾರೂ ಊಹಿಸದ ರೀತಿಯಲ್ಲಿರುವ ಕ್ಲೈಮ್ಯಾಕ್ಸ್ ಮುಂದುವರೆದ ಅಧ್ಯಾಯ ಚಿತ್ರದಲ್ಲಿದೆ ಎಂಬುದು ಚಿತ್ರತಂಡ ಹೇಳುವ ಮಾತು.
Youtube Video
ಬೆಂಗಳೂರಿನ ರಾಕ್‍ಲೈನ್ ಸ್ಟುಡಿಯೋ, ಯೂನಿವರ್ಸಿಟಿ ಕ್ಯಾಂಪಸ್, ರಾಮನಗರ, ದೇವರಾಯನ ದುರ್ಗ, ಮಂಡ್ಯ, ಮಳವಳ್ಳಿ, ತುಮಕೂರು ಸುತ್ತಮತ್ತ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಮುಂದುವರೆದ ಅಧ್ಯಾಯ ಚಿತ್ರದಲ್ಲಿ ಮೂರು ಹಾಡುಗಳಿದ್ದು ಜಾನಿ - ನಿತಿನ್ ಜೋಡಿ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ದಿಲೀಪ್ ಚಕ್ರವರ್ತಿ ಛಾಯಾಗ್ರಹಣವಿದ್ದು, ವಿನೋದ್ ಸಾಹಸ ನಿರ್ದೇಶನ, ಶ್ರೀಕಾಂತ್ ಅವರ ಸಂಕಲನವಿದೆ. ಈಗಾಗಲೇ ಮುಂದುವರೆದ ಅಧ್ಯಾಯ ಸೆನ್ಸಾರ್ ಮುಗಿದಿದ್ದು, ಇದೇ ಮಾರ್ಚ್ 18ರಂದು ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ.
Published by: zahir
First published: March 11, 2021, 9:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories