ಸೆಲೆಬ್ರಿಟಿಗಳ ಹುಟ್ಟುಹಬ್ಬ ಅಂದರೆ ಸಾಕು ಅಭಿಮಾನಿಗಳಿಗೆ ಒಂದು ಹಬ್ಬವಿದ್ದಂತೆ. ಅದರಲ್ಲೂ ಸ್ಯಾಂಡಲ್ವುಡ್ ಸುಲ್ತಾನ.... ಅಭಿಮಾನಿಗಳ ದಾಸ... ಬಾಸ್ಗಳ ಬಾಸ್ ಡಿಬಾಸ್ ದರ್ಶನ್ ಅವರ ಹುಟ್ಟುಹಬ್ಬ ಅಂದ್ರೆ ಅದನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿ ಸಂಭ್ರಮಿಸುತ್ತಾರೆ.
ದರ್ಶನ್ ಹುಟ್ಟುಹಬ್ಬಕ್ಕಾಗಿ ಒಂದು ವರ್ಷದಿಂದ ಅಭಿಮಾನಿಗಳು ತಯಾರಿಯಲ್ಲಿ ತೊಡಗುತ್ತಾರೆ. ಈಗ ದರ್ಶನ್ ಹುಟ್ಟುಹಬ್ಬಕ್ಕೆ ಈಗ ದಿನಗಣನೆ ಆರಂಭವಾಗಿದೆ. ಇದೇ ಫೆಬ್ರವರಿ 16ರಂದು ಡಿಬಾಸ್ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಹುಟ್ಟುಹಬ್ಬಕ್ಕೆ ಎರಡು ವಾರ ಇರುವಾಗಲೇ ಡಿಬಾಸ್ ಫ್ಯಾನ್ಸ್ ಟ್ವಿಟರ್ನಲ್ಲಿ 'ಬಾಸ್ ಪರ್ವ ಸುಲ್ತಾನ್ ಸಂಭ್ರಮ' ಹೆಸರಿನಲ್ಲಿ ಅವರ ಹುಟ್ಟುಹಬ್ಬವನ್ನು ಟ್ರೆಂಡ್ ಮಾಡಿದ್ದಾರೆ. ಅದಕ್ಕಾಗಿ 'ರಾಬರ್ಟ್' ಚಿತ್ರದ ಹೊಸ ಪೋಸ್ಟರನ್ನು ಕಾಮನ್ ಡಿಪಿ ಮಾಡಿಕೊಂಡಿದ್ದಾರೆ.
It's 1.3M🔥🔥#BossBirthdayCDP pic.twitter.com/vb4KfqXX9I
— Thoogudeepa 'D' Team - R (@DTEAM7999) February 2, 2020
ಅಭಿಮಾನಿಗಳು ಬಿಡುಗಡೆ ಮಾಡಿರುವ ಈ ಕಾಮನ್ ಡಿಸ್ಪ್ಲೇ ಪಿಕ್ಚರ್ ಕೇವಲ ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಟ್ವೀಟ್ ಮತ್ತು ರೀಟ್ವೀಟ್ ಆಗಿದೆ. ಈ ಮೂಲಕ 'ಬಾಸ್ ಪರ್ವ' ಬರೋಬ್ಬರಿ 13 ಕೋಟಿಗೂ ಹೆಚ್ಚು ಜನರನ್ನು ಮುಟ್ಟಿದೆ. ಆ ಮೂಲಕ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದೆ.
ಜೇಮ್ಸ್ ಸಿನಿಮಾದಲ್ಲಿ ಪುನೀತ್ ನಾಯಕಿಯಾಗಲಿದ್ದಾರಂತೆ ಈ ಕನ್ನಡತಿ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ