DBossbirthdayCDP: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹುಟ್ಟುಹಬ್ಬಕ್ಕೆ ಕಾಮನ್​ ಡಿಪಿ ಬಿಡುಗಡೆ ಮಾಡಿದ ಫ್ಯಾನ್ಸ್​

ಇನ್ನು ನಟಿ , ಸಂಸದೆ ಸುಮಲತಾ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹಂಚಿಕೊಂಡು ತಮ್ಮ ಮಗನಂತಿರುವ ದರ್ಶನ್​ಗೆ ಶುಭಕೋರಿದ್ದಾರೆ. 

ದರ್ಶನ್​ ಕಾಮನ್​ ಡಿಪಿ

ದರ್ಶನ್​ ಕಾಮನ್​ ಡಿಪಿ

  • Share this:
ಇದೇ ಫೆ. 16ರಂದು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಹುಟ್ಟುಹಬ್ಬ. ಅವರ ಅಭಿಮಾನಿಗಳು ಈ ಸಂಭ್ರಮದ ದಿನಕ್ಕಾಗಿ ಕಾಯುತ್ತಿದ್ದಾರೆ. ದರ್ಶನ್​ ಹುಟ್ಟುಹಬ್ಬಕ್ಕೂ ಮುನ್ನವೇ ಅವರ ಅಭಿಮಾನಿಗಳಲ್ಲಿ ಸಡಗರ ಮನೆ ಮಾಡಿದೆ. ಇನ್ನು ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ದರ್ಶನ್​ ಹುಟ್ಟುಹಬ್ಬಕ್ಕೆ ಪ್ರತಿಬಾರಿ ಅವರ ಪ್ರೀತಿಯ ಅಭಿಮಾನಿಗಳಿ ವಿಶೇಷ ಉಡುಗೊರೆ ನೀಡುತ್ತಾರೆ. ಅಂದು ದರ್ಶನ್​ ಅವರ ಪೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಸೇರಿದಂತೆ ವಾಟ್ಸಾಪ್​ ಡಿಪಿಗಳಲ್ಲಿ ಹಾಕಿಕೊಳ್ಳುವ ಮೂಲಕ ಅಭಿಮಾನ ಮೆರೆಯುತ್ತಾರೆ. ಈ ಬಾರಿ ಕೂಡ ಅದೇ ರೀತಿ ಕಾಮನ್​ ಡಿಪಿಯೊಂದನ್ನು ಅವರ ಅಭಿಮಾನಿಗಳು ಬಿಡುಗಡೆ ಮಾಡಿದ್ದಾರೆ. ಈ ಫೋಟೋವನ್ನು ಕಾಮನ್​ ಡಿಪಿಯಾಗಿ ಹಾಕಿಕೊಳ್ಳುವ ಮೂಲಕ ಅವರ ಅಭಿಮಾನ ವ್ಯಕ್ತಪಡಿಸಲಿದ್ದಾರೆ.

ನಟನೆಯಲ್ಲಿ ಮಾತ್ರವಲ್ಲದೇ, ಪ್ರಾಣಿ ಸಂಕುಲ, ಫೋಟೋಗ್ರಾಫಿಯಲ್ಲಿ ಹೆಚ್ಚಿನ ಒಲವು ನಟ ದರ್ಶನ್​ ಅವರಿಗಿದೆ. ಇದೇ ಕಾರಣಕ್ಕೆ ಅವರು ಆಗಾಗ ವನ್ಯಜೀವಿಗಳ ಛಾಯಚಿತ್ರಣ ತೆಗೆಯುತ್ತಾರೆ. ಇದೇ ಹಿನ್ನಲೆ ಹಲವು ಬಾರಿ ಅವರು ಸಫಾರಿಗೆ ತೆರಳಿ ವನ್ಯ ಜೀವಿಗಳ ಫೋಟೋವನ್ನು ಸೆರೆ ಹಿಡಿದಿದ್ದಾರೆ. ಅವರ ಈ ಹವ್ಯಾಸವನ್ನೇ ಆಧಾರಿಸಿ ಈ ಬಾರಿ ಡಿಪಿ ತಯಾರಿಸಲಾಗಿದೆ.ವನ್ಯ ಜೀವಿಗಳ ನಡುವೆ ದರ್ಶನ್​ ಕ್ಯಾಮೆರಾ ಹೆಗಲೇರಿಸಿಕೊಂಡಿರುವ ಈ ಚಿತ್ರ ಈ ಬಾರಿ ದರ್ಶನ್​ ಹುಟ್ಟುಹಬ್ಬದ ಕಾಮನ್​ ಡಿಪಿಯಾಗಿದೆ. ಈಗಾಗಲೇ ಈ ಚಿತ್ರವನ್ನು ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕಾಮನ್​ ಡಿಪಿಯಾಗಿ ಬಳಸುತ್ತಿದ್ದಾರೆ.
ಇನ್ನು ನಟಿ , ಸಂಸದೆ ಸುಮಲತಾ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋವನ್ನು ಹಂಚಿಕೊಂಡು ತಮ್ಮ ಮಗನಂತಿರುವ ದರ್ಶನ್​ಗೆ ಶುಭಕೋರಿದ್ದಾರೆ. ಕಲೆಯ ಹೊರತಾಗಿ ನೀನು ತೊಡಗಿಸಿಕೊಳ್ಳುವ ಕೆಲಸಗಳು ಕೂಡ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದೆ. ಇನ್ನೂ ಕೋಟಿ ಕೋಟಿ ಜನರ ಪ್ರೀತಿ ಎಂಬ ಆಸ್ತಿ ಸಂಪಾದಿಸು ಎಂದು ಹಾರೈಸಿದ್ದಾರೆ.

ನಟ, ನಿರ್ದೇಶಕ  ರಿಷಭ್​ ಶೆಟ್ಟಿ ಕೂಡ ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿ ಅವರಿಗೆ ಮುಂಚಿತವಾಗಿ ಹುಟ್ಟುಹಬ್ಬದ ಶುಭಕೋರಿದ್ದಾರೆ.
Published by:Seema R
First published: