DBoss Darshan: ಟ್ವಿಟರ್​ನಲ್ಲಿ ಗಂಡ ದರ್ಶನ್​ರನ್ನೇ ಅನ್​ಫಾಲೋ ಮಾಡಿದ ಹೆಂಡತಿ ವಿಜಯಲಕ್ಷ್ಮಿ​..!

DBoss Darshan: ಈಗ ಎದ್ದಿರುವ ಗಾಳಿ ಸುದ್ದಿಗೆ ಬ್ರೇಕ್​ ಹಾಕಿರುವ ವಿಜಯಲಕ್ಷ್ಮಿ ಅವರೇ ದರ್ಶನ್​ ಅವರನ್ನು ಅನ್​ ಫಾಲೋ ಮಾಡುವ ಮೂಲಕ ಮತ್ತೊಂದು ಚರ್ಚೆಗೆ ಎಡೆ ಮಾಡಿಕೊಟ್ಟಿದ್ದಾರೆ. 

Anitha E | news18
Updated:August 13, 2019, 2:38 PM IST
DBoss Darshan: ಟ್ವಿಟರ್​ನಲ್ಲಿ ಗಂಡ ದರ್ಶನ್​ರನ್ನೇ ಅನ್​ಫಾಲೋ ಮಾಡಿದ ಹೆಂಡತಿ ವಿಜಯಲಕ್ಷ್ಮಿ​..!
ಮಗ ವಿನೀಶ್​ ಜತೆ ವಿಜಯಲಕ್ಷ್ಮಿ ಹಾಗೂ ದರ್ಶನ್​
  • News18
  • Last Updated: August 13, 2019, 2:38 PM IST
  • Share this:
ಇತ್ತೀಚೆಗೆ 'ಕುರುಕ್ಷೇತ್ರ' ಸಿನಿಮಾದಿಂದ ಸದ್ದು ಮಾಡುತ್ತಿದ್ದ ದರ್ಶನ್​ ಈಗ ಕೌಟುಂಬಿಕ ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಡಿಬಾಸ್​ ಕುಟುಂಬದಲ್ಲಿ ನಡೆಯುತ್ತಿದೆ 'ಕುರುಕ್ಷೇತ್ರ' ಕದನ. ದರ್ಶನ್​ ಹಾಗೂ ಅವರ ಹೆಂಡತಿ ವಿಜಯಲಕ್ಷ್ಮಿ ನಡುವೆ ಜಗಳ ನಡೆದಿದೆ ಎಂಬ ಸುದ್ದಿ ಸ್ಯಾಂಡಲ್​ವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.

ಆದರೆ ಈ ಕುರಿತಂತೆ ದರ್ಶನ್​ ಅವರ ಹೆಂಡತಿ ವಿಜಯಲಕ್ಷ್ಮಿ ತಮ್ಮ ಟ್ವಿಟರ್​ ಖಾತೆಯಲ್ಲಿ ಟ್ವೀಟ್​ ಮೂಲಕ ಗಾಳಿ ಸುದ್ದಿಗೆ ಬ್ರೇಕ್​ ಹಾಕಿದ್ದರು. ಅದು ಹರಿದಾಡುತ್ತಿರುವ ಸುದ್ದಿ ಆಧಾರರಹಿತ ಎಂದು ಅವರು ಟ್ವೀಟ್​ ಮಾಡಿದ್ದರು.

All the rumours doing rounds are baseless...
ಆದರೆ ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್​ ಟ್ವಿಟರ್​ನಲ್ಲಿ ತಮ್ಮ ಖಾತೆಯ ಹೆಸರಿನಲ್ಲಿದ್ದ ದರ್ಶನ್​ ಅವರ ಹೆಸರನ್ನು ತೆಗೆದು ಹಾಕಿದ್ದಾರೆ. ಅಷ್ಟೆ ಅಲ್ಲ ಅವರು ಟ್ವಿಟರ್​ನಲ್ಲಿ ದರ್ಶನ್​ ಅವರನ್ನು ಹಿಂಬಾಲಿಸುತ್ತಿದ್ದರು. ಈಗ ಅಲ್ಲೂ ಅನ್​ಫಾಲೋ ಮಾಡಿದ್ದಾರೆ.

Vijayalakshmi Darshan
ನಟಿ ವಿಜಯಲಕ್ಷ್ಮಿ ದರ್ಶನ್​ ಅವರ ಟ್ವಿಟರ್ ಖಾತೆ
ಈ ಹಿಂದೆ ದರ್ಶನ್​ ಅವರ ಟ್ವೀಟ್​ಗಳನ್ನು ರೀಟ್ವೀಟ್​ ಮಾಡುತ್ತಿದ್ದ ಅವರು, ಈಗ ಅವರನ್ನು ಟ್ವಿಟರ್​ನಲ್ಲಿ ಹಿಂಬಾಲಿಸುತ್ತಿಲ್ಲ. 'ಕುರುಕ್ಷೇತ್ರ' ಸಿನಿಮಾ ಬಿಡುಗಡೆಯಾಗುವವರೆಗೂ ಎಲ್ಲವೂ ಸರಿಯಾಗಿತ್ತು. ಆಗಸ್ಟ್​ 7ಕ್ಕೆ ವಿಜಯಲಕ್ಷ್ಮಿ ಅವರು ದರ್ಶನ್​ರ ಟ್ವೀಟ್​ ಅನ್ನು ರಿಟ್ವೀಟ್​ ಮಾಡಿದ್ದಾರೆ.

 ಆದರೆ ಈಗ ಎದ್ದಿರುವ ಗಾಳಿ ಸುದ್ದಿಗೆ ಬ್ರೇಕ್​ ಹಾಕಿರುವ ವಿಜಯಲಕ್ಷ್ಮಿ ಅವರೇ ದರ್ಶನ್​ ಅವರನ್ನು ಅನ್​ ಫಾಲೋ ಮಾಡುವ ಮೂಲಕ ಮತ್ತೊಂದು ಚರ್ಚೆಗೆ ಎಡೆ ಮಾಡಿಕೊಟ್ಟಿದ್ದಾರೆ.

 

ಇದನ್ನೂ ಓದಿ: ಸುದೀಪ್​ ಖಾರವಾಗಿ ಬರೆದ ಟ್ವೀಟ್​ ಯಾವ ಸ್ಟಾರ್​ ನಟನಿಗೆ ಗೊತ್ತಾ..?

 

Kim Kardashian: ಪಡ್ಡೆಗಳ ನಿದ್ದೆಗೆಡಿಸಿದೆ ಅಮೆರಿಕದ ಟಾಪ್​ ರಿಯಾಲಿಟಿ ಸ್ಟಾರ್​ ಕಿಮ್​ ಕರ್ದಾಷಿಯನ್​ರ ಹಾಟ್​ ಚಿತ್ರಗಳು..!


 
First published:August 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ